ಪ್ರಯಾಣಿಕ ಕಾರಾಗಿ ಬಿಂಬಿಸುವುದೇ ಅಂಬಿ ಮುಂದಿರುವ ಸವಾಲು?

Written By:

ದೇಶದ ರಸ್ತೆಗಳ ರಾಜ 'ಅಂಬಾಸಿಡರ್' ಯಾಕೋ ಕಳೆದ ಕೆಲವು ವರ್ಷಗಳಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈ ನಡುವೆ ಅಮೃತಧಾರೆಯಾಗಿದ್ದ ಹಿಂದೂಸ್ತಾನ್ ಮೋಟಾರ್ಸ್, ಎಲ್ಲ ಹೊಸತನದಿಂದ ಕೂಡಿದ ಅಂಬಾಸಿಡರ್ ಲಾಂಚ್ ಮಾಡುವುದಾಗಿ ಘೋಷಿಸಿತ್ತು. ಇದು ಗುಜರಿ ಅಂಗಡಿ ಸೇರಿಕೊಳ್ಳಬೇಕಿದ್ದ ಅಂಬಾಸಿಡರ್ ಮತ್ತೆ ರಸ್ತೆ ಪ್ರವೇಶಿಸಲು ಸಹಕಾರಿಯಾಗಿತ್ತು.

ಅಂಬಿ ಕಥೆ ಏನು ಗೊತ್ತೇ..?

ಈ ನಡುವೆ ಕುಸಿತ ಮಾರುಕಟ್ಟೆಗೆ ಉತ್ತೇಜನ ನೀಡಲು ಎನ್‌ಕೋರ್ ಬಿಎಸ್ IV ಎಂಜಿನ್ ಪಡೆದಿದ್ದ ಅಂಬಾಸಿಡರ್ ಟ್ಯಾಕ್ಸಿ ಸೆಗ್ಮೆಂಟ್‌ಗೆ ಪರಿಚಯವಾಗಿತ್ತು. ಇದರಲ್ಲಿ 1.5 ಲೀಟರ್ ಎಂಜಿನ್ ಆಳವಡಿಸಲಾಗಿತ್ತು. ಇದು 49 ಅಶ್ವಶಕ್ತಿ (112.5 ಎನ್‌ಎಂ ಟಾರ್ಕ್) ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂದೆ ಓದಿ...

To Follow DriveSpark On Facebook, Click The Like Button
ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ಈ ಹೊಸ ಎಂಜಿನ್ ಬಂದ ಮೇಲೂ ನಿರೀಕ್ಷಿಸದಷ್ಟು ಯಶ ಸಾಧಿಸುವಲ್ಲಿ ಅಂಬಾಸಿಡರ್ ವಿಫಲವಾಗಿತ್ತು. ಇವೆಲ್ಲಕ್ಕೂ ಮಾರ್ಗೋಪಾಯವೆಂಬಂತೆ ಆಧುನಕೆತೆಗೆ ಹೊಂದಿಕೊಂಡು ಹೊಸ ತಂತ್ರಜ್ಞಾನ ಅವಿಷ್ಕರಿಸುವುದೊಂದೇ ಅಂಬಿ ಮುಂದಿರುವ ಮಾರ್ಗವಾಗಿತ್ತು.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ಆದರೆ ಇಲ್ಲಿ ಪಶ್ಚಿಮ ಬಂಗಾಳ ಮೂಲದ ಈ ಕಂಪನಿಗೆ ಎದುರಾಗಿದ್ದ ಪ್ರಮುಖ ಸಮಸ್ಯೆ ಏನೆಂದರೆ ಹೊಸ ಎಂಜಿನ್ ನಿರ್ಮಿಸುವಷ್ಟು ಹೂಡಿಕೆ ಮಾಡಲು ಆರ್ಥಿಕವಾಗಿ ಶಕ್ತವಾಗಿಲ್ಲ. ಇದು ಇತರ ಕಾರು ಕಂಪನಿಗಳಿಂದ ಎಂಜಿನ್ ಆಮದುಕೊಳ್ಳಲು ಅಂಬಿಯನ್ನು ಪ್ರೇರಿಪಿಸಿದೆ.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ಇದರ ಫಲವೆಂಬಂತೆ ಫಿಯೆಟ್ ಮಲ್ಟಿಜೆಟ್ ಎಂಜಿನ್ ಆಮದು ಮಾಡಿಕೊಳ್ಳಲು ಅಂಬಿ ಯೋಚನೆ ನಡೆಸುತ್ತಿದೆ. ಈ ಬಗ್ಗೆ ಸರಿಯಾದ ಸಂದರ್ಭದಲ್ಲಿ ಮಾಹಿತಿ ಹೊರಗೆಡಲಿದ್ದೇವೆ ಎಂದು ಅಂಬಿ ಅಧ್ಯಕ್ಷ ಉತ್ತಮ್ ಬೋಸ್ ತಿಳಿಸಿದ್ದಾರೆ.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ಮುಂದಿನ ವರ್ಷ ಲಾಂಚ್ ಆಗಲಿರುವ ನಾಲ್ಕು ಮೀಟರ್ ಪರಿಧಿಯೊಳಗಿನ ಅಂಬಾಸಿಡರ್, ಸಾಮಾನ್ಯ ಅಂಬಾಸಿಡರ್‌ಗಿಂತಲೂ ಭಿನ್ನವಾಗಿ ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ನಿರೀಕ್ಷೆಯಲ್ಲಿದೆ.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

2012-13 ಆರ್ಥಿಕ ವರ್ಷದಲ್ಲಿ ಹಿಂದೂಸ್ತಾನ್ ಮೋಟಾರ್ಸ್, 4000 ಅಂಬಾಸಿಡರ್ ಯುನಿಟ್‌ಗಳನ್ನಷ್ಟೇ ಮಾರಾಟಗೈಯುವಲ್ಲಿ ಯಶಸ್ವಿಯಾಗಿತ್ತು. ಹೊಸತಾದ ಬಿಎಸ್4 ಎಂಜಿನ್ ಆಗಮನದೊಂದಿಗೆ ಈ ಸಂಖ್ಯೆಯು ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ 6000 ಸಂಖ್ಯೆಗೆ ಏರಿಕೆಯಾಗುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ನೈಜ ಪರಿಸ್ಥಿತಿಯಲ್ಲಿ ಶೇಕಡಾ 70ಕ್ಕಿಂತಲೂ ಅಂಬಾಸಿಡರ್ ಮಾರಾಟ ಟ್ಯಾಕ್ಸಿ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಪ್ರಸ್ತುತ ಈ ಕಳಂಕವನ್ನು ದೂರ ಮಾಡಿ 'ಪ್ರಯಾಣಿಕ ಕಾರೆಂದು' ಬಿಂಬಿಸುವುದು ಅಂಬಿ ಮುಂದಿರುವ ದೊಡ್ಡ ಸವಾಲಾಗಿದೆ.

ಫಿಯೆಟ್ ಮಲ್ಟಿಜೆಟ್ ಎಂಜಿನ್ ಪಡೆಯಲಿರುವ ಅಂಬಾಸಿಡರ್

ಅಂದ ಹಾಗೆ ಮುಂಬರುವ ದಿನಗಳಲ್ಲಿ ಆಗಮನವಾಗಲಿರುವ ಫಿಯೆಟ್ ಎಂಜಿನ್ ಪಡೆದ ನಾಲ್ಕು ಮೀಟರ್ ಪರಿಧಿಯೊಳಗಿನ ಅಂಬಿ ಕಾರು, ಮಹಾನಗರಗಳ ಹೊರತಾಗಿ ಉಪನಗರ ಹಾಗೂ ಗ್ರಾಮೀಣ ಮಾರುಕಟ್ಟೆಯನ್ನು ಹೆಚ್ಚೆಚ್ಚು ಟಾರ್ಗೆಟ್ ಮಾಡಲಿದೆ.

English summary
If there is one aspect of Hindustan Motors which we admire is its resilience. One of India's oldest automaker has been selling just one model, the iconic Ambassador, for a really long time and despite a whole host of challenges HM has managed to hold on to a small pocket of loyal customers.
Story first published: Tuesday, December 3, 2013, 16:17 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark