ಇಕೊಸ್ಪೋರ್ಟ್ ಬೇಸ್ ವೆರಿಯಂಟ್‌ನಲ್ಲಿ ಸೇಫ್ಟಿ ಫೀಚರ್ ಇರಲ್ಲ

Posted By:

ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಬಿಡುಗಡೆಗೆ ಸಿದ್ಧವಾಗಿರುವಂತೆಯೇ ವಿವಿಧ ವೆರಿಯಂಟ್‌ಗಳಲ್ಲಿರುವ ಫೀಚರ್‌ಗಳ ಬಗ್ಗೆ ವಿವರ ಬಹಿರಂಗವಾಗಿದೆ. ಸದ್ಯ ಲಭಿಸಿರುವ ಮಾಹಿತಿಯಂತೆ ಪೋರ್ಡ್ ಇಕೊಸ್ಪೋರ್ಟ್ ಬೇಸ್ ವೆರಿಯಂಟ್‌ನಲ್ಲಿ ಯಾವುದೇ ಸುರಕ್ಷಾ ಮಾನದಂಡಗಳಿರಲ್ಲ. ಇದರಿಂದಾಗಿ ಹೆಚ್ಚಿನ ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲು ಕಂಪನಿಗೆ ಸಾಧ್ಯವಾಗಲಿದೆ.

ಫೋರ್ಡ್ ಇಕೊಸ್ಪೋರ್ಟ್ ಜೂನ್ 11ರಂದು ಲಾಂಚ್ ಆಗಲಿರುವುದು ಬಹುತೇಕ ಖಚಿತವಾಗಿದ್ದು, ಬುಕ್ಕಿಂಗ್ ಪ್ರಕ್ರಿಯೆ ಬಹುತೇಕ ಆರಂಭವಾಗಿದೆ.

ಇತ್ತೀಚೆಗಷ್ಟೇ ಫೋರ್ಡ್‌ನ ನೂತನ ಎಮರ್ಜನ್ಸಿ ಅಸಿಸ್ಟ್ ಸಿಸ್ಟಂ ಭಾರಿ ಚರ್ಚೆಗಳಿಗೆ ಕಾರಣವಾಗಿತ್ತು. ಗೋವಾ ಟೆಸ್ಟ್ ಡ್ರೈವಲ್ಲೇ ತುರ್ತು ಸಹಾಯ ವ್ಯವಸ್ಥೆಯು ನೆರವಿಗೆ ಬಂದಿರುವುದು ಆಟೋ ಜಗತ್ತಿನ ಬ್ರೇಕಿಂಗ್ ನ್ಯೂಸ್‌ಗೆ ಕಾರಣವಾಗಿತ್ತು.

To Follow DriveSpark On Facebook, Click The Like Button
ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಸದ್ಯ ಬಂದಿರುವ ಮಾಹಿತಿ ಪ್ರಕಾರ ಪೋರ್ಡ್ ಇಕೊಸ್ಪೋರ್ಟ್ ಬೇಸ್ ವೆರಿಯಂಟ್‌ಗಳಾದ Ambiente ಹಾಗೂ Trend ಆವೃತ್ತಿಗಳಲ್ಲಿ ಸೇಫ್ಟಿ ಫೀಚರ್‌ಗಳಿರಲ್ಲ. ಈ ಪೈಕಿ Trend ಬೇಸಿಕ್ ಸುರಕ್ಷಾ ಮಾನದಂಡಗಳನ್ನು ಹೊಂದಿರಲಿದ್ದು, ಆದರೆ Ambiente ಸೇಫ್ಟಿ ಫೀಚರ್ ಇಲ್ಲದೆಯೇ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ಎನಿಸಿಕೊಂಡಿರುವ Ambiente ಸ್ಪರ್ಧಾತ್ಮಕ 5ರಿಂದ 6 ಲಕ್ಷ ರು.ಗಳ ಅಸುಪಾಸಿನಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಅಂದರೆ ಎಬಿಎಸ್ ಹಾಗೂ ಇಬಿಎ, ಇಎಸ್‌ಸಿ, ಟಿಸಿಎಸ್, ಎಚ್‌ಎಲ್‌ಎ, ಡ್ರೈವರ್ ಏರ್ ಬ್ಯಾಗ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಆಂಡ್ ಕರ್ಟನ್ ಏರ್ ಬ್ಯಾಗ್, ಎಮರ್ಜನ್ಸಿ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಎಮರ್ಜನ್ಸಿ ಬ್ರೇಕ್ ಹಜಾರ್ಡ್ ವಾರ್ನಿಂಗ್‌ಗಳಂತಹ ಡ್ರೈವರ್ ಅಸಿಸ್ಟ್ ಫೀಚರ್‌ಗಳ ಅಭಾವವನ್ನು ಎದುರಿಸಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಹಾಗಿದ್ದರೂ ಫೋರ್ಡ್ ಇಕೊಸ್ಪೋರ್ಟ್ ಎರಡನೇ ವೆರಿಯಂಟ್ ಆಗಿರುವ ಟ್ರೆಂಡ್, ಎಬಿಎಸ್ ಹಾಗೂ ಎಮರ್ಜನ್ಸಿ ಬ್ರೇಕ್ ಹಜಾರ್ಡ್ ವಾರ್ನಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಇತ್ತೀಚೆಗಷ್ಟೇ ಗೋವಾದಲ್ಲಿ ಟೆಸ್ಟ್ ಡ್ರೈವ್ ವೇಳೆ ಅಪಘಾತ ಸಂಭವಿಸಿದಾಗ ಫೋರ್ಡ್ ಇಕೊಸ್ಪೋರ್ಟ್‌ನ ನೂತನ ಎಮರ್ಜನ್ಸಿ ಅಸಿಸ್ಟಂಟ್ ಸಿಸ್ಟಂ ನೆರವಿಗೆ ಬಂದಿತ್ತು.

English summary
Other than the expected low starting price and the introduction of EcoBoost engine, one celebrated distinguishing factor that has made a quite a few headlines is Emergency Assist, Ford's Sync based safety features, which proved its effectiveness last month.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark