ಫೋರ್ಡ್ ಇಕೊಸ್ಪೋರ್ಟ್ ಎಷ್ಟು ವೆರಿಯಂಟ್ ಇದೆ ಗೊತ್ತಾ?

By Nagaraja

ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಎಸ್‌ಯುವಿ ಬಿಡುಗಡೆ ಮೊದಲೇ ವೆರಿಯಂಟ್‌ಗಳ ಬಗ್ಗೆ ವಿವರ ಹೊರಬಿದ್ದಿದೆ. ಮೂಲಗಳ ಪ್ರಕಾರ ಫೋರ್ಡ್ ಇಕೊಸ್ಪೋರ್ಟ್ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗಲಿದ್ದು, ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ನಾಲ್ಕು ವೆರಿಯಂಟ್‌ಗಳು ಇಂತಿದೆ...
Ambiente, Trend, Titanium and Titanium Optional

ಎಂಜಿನ್ ಆಯ್ಕೆಗಳು
1.5 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್, 1.0 ಲೀಟರ್ ಟರ್ಬೊಚಾರ್ಜ್ಡ್ ಫೋರ್ಡ್ ಇಕೊಸ್ಪೋರ್ಟ್ ಎಂಜಿನ್

ಗ್ರಾಹಕರಿಗೆ ಹೆಚ್ಚು ಪರಿಚಯವಾಗುವ ನಿಟ್ಟಿನಲ್ಲಿ ಬಿಡುಗಡೆ ಪೂರ್ವಭಾವಿಯಾಗಿ ಬೆಂಗಳೂರು ಸೇರಿದಂತೆ ದೇಶದ ಎಂಟು ಪ್ರಮುಖ ನಗರಗಳಿಗೆ ಇಕೊಸ್ಪೋರ್ಟ್ ಪಯಣ ಬೆಳಿಸಿತ್ತು. ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

Ambiente

Ambiente

ಫೋರ್ಡ್ ಬೇಸ್ ವರ್ಷನ್ Ambiente ಎಂದು ಅರಿಯಲ್ಪಡಲಿದೆ. ಇದರಲ್ಲಿ ಟೆಲಿಸ್ಕಾಪಿಕ್ ಸ್ಟೀರಿಂಗ್, ಮ್ಯೂಸಿಕ್ ಪ್ಲೇಯರ್, ಬ್ಲೂಟೂತ್, ಎಲೆಕ್ಟ್ರಿಕ್ ವಿಂಗ್ ಮಿರರ್, ರಿಮೋಟ್ ಲಾಕಿಂಗ್, ಮಲ್ಟಿ ಫಂಕ್ಷನ್ ಡಿಸ್‌ಪ್ಲೇ ಹಾಗೂ 15 ಇಂಚ್ ವೀಲ್‌ಗಳಂತಹ ಫೀಚರ್ಸ್ ಹೊಂದಿರಲಿದೆ. ಹಾಗಿದ್ದರೂ ಫ್ರಂಟ್ ಪವರ್ ವಿಂಡೋ ಸೌಲಭ್ಯವಿದ್ದರೂ ಪಾರ್ಸೆಲ್ ಟ್ರೇ ಇರುವುದಿಲ್ಲ.

Trend

Trend

Ambiente ಗಿಂತ ಸ್ಪಲ್ವ ಮೇಲ್ಗಡೆ ಗುರುತಿಸಿಕೊಳ್ಳಲಿರುವ ಫೋರ್ಡ್ ಟ್ರೆಂಡ್ ವೆರಿಯಂಟ್‌ನಲ್ಲಿ ಎಂಟಿ ಲಾಕ್ ಬ್ರೇಕ್, ರಿಯರ್ ಪವರ್ ವಿಂಡೋ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಡ್ರೈವರ್ ಸೀಟ್ ಹೊಂದಾಣಿಸುವ ಆಯ್ಕೆ ಲಭ್ಯವಿರುತ್ತದೆ. ಇವೆಲ್ಲ ಮ್ಯಾನುವಲ್ ಗೇರ್ ಬಾಕ್ಸ್ 1.5 ಲೀಟರ್ ಡೀಸೆಲ್ ಹಾಗೂ 1.5 ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿದೆ.

Titanium

Titanium

ಟೈಟಾನಿಯಂನಲ್ಲಿ ಮ್ಯಾನುವಲ್ ಗೇರ್ ಬಾಕ್ಸ್, ಲೆಥರ್ ವ್ರಾಪ್ ಸ್ಟೀರಿಂಗ್ ವೀಲ್, 16 ಇಂಚು ಅಲಾಯ್ ವೀಲ್, ಕ್ಲೈಮೇಟ್ ಕಂಟ್ರೋಲ್, ಕೂಲ್ಡ್ ಗ್ಲೋವ್ ಬಾಕ್ಸ್, ರೂಫ್ ರೈಲ್, ಫ್ರಂಟ್ ಫಾಗ್ ಲ್ಯಾಂಪ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯವಿರಲಿದೆ.

Titanium Optional

Titanium Optional

ಅಂತೆಯೇ ಟೈಟಾನಿಯಂ ಆಪ್ಷನಲ್‌ನಲ್ಲಿ ಇವೆಲ್ಲದಕ್ಕಿಂತ ಹೊರತಾಗಿ ಪುಶ್ ಬಟನ್ ಸ್ಟಾರ್ಟ್, ಲೆಥರ್ ಸೀಟ್, ಕೀಲೆಸ್ ಎಂಟ್ರಿ ಹಾಗೂ ಕರ್ಟೈನ್ ಏರ್ ಬ್ಯಾಗ್ ಸೌಲಭ್ಯ ಲಭ್ಯವಿರಲಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

1.5 ಪೆಟ್ರೋಲ್ ಎಂಜಿನ್ 107 ಬಿಎಚ್‌ಪಿ ಹಾಗೂ 1.5 ಡೀಸೆಲ್ ಎಂಜಿನ್ 88.8 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಇಕೊಬೂಸ್ಟ್ 95-100 ಬಿಎಚ್‌ಪಿ ಉತ್ಪಾದಿಸುವ ಸಾಧ್ಯತೆಯಿದೆ.

ದರ ಮಾಹಿತಿ

ದರ ಮಾಹಿತಿ

ಇಕೊಸ್ಪೋರ್ಟ್ ಬೇಸ್ ವೆರಿಯಂಟ್ ದರ 7.5 ಲಕ್ಷ ರು. ಅಂದಾಜಿಸಲಿದ್ದು, ಟಾಪ್ ವೆರಿಯಂಟ್ 12 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The EcoSport will be offered in four variants - Ambiente, Trend, Titanium and Titanium Optional. Engines provided will be three - a 1.5 liter petrol, a 1.5 liter diesel and the highly anticipated 1.0 liter turbocharged Ford EcoBoost engine.
Story first published: Monday, May 6, 2013, 9:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X