ಬರುತ್ತಿದೆ ರೆನೊ ಕೊಲಿಯೊಸ್ ದುಬಾರಿ ಎಸ್‌ಯುವಿ

Written By:

ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ರೆನೊ ಸಂಸ್ಥೆಯು ದುಬಾರಿ ಕೊಲಿಯೊಸ್ ಆವೃತ್ತಿಯನ್ನು ಪರಿಚಯಿಸುತ್ತಿದೆ. ದೇಶದಲ್ಲಿ ಕೊಲಿಯೊಸ್ ಅಷ್ಟೊಂದು ಜನಪ್ರಿಯವಿಲ್ಲದಿದ್ದರೂ ಫೇಸ್‌ಲಿಫ್ಟ್ ಮಾಡೆಲ್ ಗಮನ ಸೆಳೆಯುವ ನಿರೀಕ್ಷೆಯಲ್ಲಿದೆ.

ಅಂತರ್ಜಾಲದಲ್ಲಿ ಈಗಾಗಲೇ ದರ ಹಾಗೂ ವೈಶಿಷ್ಟ್ಯಗಳ ವಿವರಗಳು ಹೊರಬಂದಿವೆ. ಈ ದುಬಾರಿ ಎಸ್‌ಯುವಿಗೆ 22.36 ಲಕ್ಷ ರು.ಗಳಷ್ಟು ವೆಚ್ಚ ತಗುಲಲಿದೆ. ಇಂಡಿಯನ್ ವರ್ಷನ್ 4x4 ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ. ಇದರ ಜತೆಗೆ 4x2 ಹಾಗೂ 4x4 ಮ್ಯಾನುವಲ್ ಗೇರ್ ಬಾಕ್ಸ್ ಸೇವೆಯನ್ನು ಪಡೆದುಕೊಳ್ಳಲಿದೆ.

ಬರುತ್ತಿದೆ ರೆನೊ ಕೊಲಿಯೊಸ್ ದುಬಾರಿ ಎಸ್‌ಯುವಿ

ಇದು 2.0 ಲೀಟರ್ ಡೀಸೆಲ್ ಎಂಜಿನ್ ಪೆಡೆದುಕೊಳ್ಳಲಿದೆ. ಇನ್ನು ವಿಶೇಷತೆ ಏನೆಂದರೆ ಚೆನ್ನೈನ ಓರಗಾಡಂ ಘಟಕದಲ್ಲಿ ಇದನ್ನು ಜೋಡಣೆ ಮಾಡಲಾಗುತ್ತದೆ.

ಬರುತ್ತಿದೆ ರೆನೊ ಕೊಲಿಯೊಸ್ ದುಬಾರಿ ಎಸ್‌ಯುವಿ

ಈ ಪೈಕಿ 4x4 ಎಂಜಿನ್ 173 (360 ಎನ್‌ಎಂ ಟಾರ್ಕ್) ಹಾಗೂ 4x2 ವೆರಿಯಂಟ್ 150 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬರುತ್ತಿದೆ ರೆನೊ ಕೊಲಿಯೊಸ್ ದುಬಾರಿ ಎಸ್‌ಯುವಿ

ಅಂದ ಹಾಗೆ ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಕೊಲಿಯೊಸ್ 4x2, 4x4 ಮ್ಯಾನುವಲ್ ಮತ್ತು 4x4 ಆಟೋಮ್ಯಾಟಿಕ್ ವೆರಿಯಂಟ್‌ಗಳು ಪ್ರತಿ ಲೀಟರ್‌ಗೆ ಅನುಕ್ರಮವಾಗಿ 17.15, 16.26 ಮತ್ತು 14.56 ಕೀ. ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಬರುತ್ತಿದೆ ರೆನೊ ಕೊಲಿಯೊಸ್ ದುಬಾರಿ ಎಸ್‌ಯುವಿ

ಇನ್ನುಳಿದಂತೆ ಹೊಸತಾದ ಫ್ರಂಟ್ ಗ್ರಿಲ್, ಆರ್ ಲಿಂಕ್ ಮಲ್ಟಿಮೀಡಿಯಾ ಸಿಸ್ಟಂ, 7 ಇಂಚು ಟಚ್ ಸ್ಕ್ರೀನ್, ಕನ್ಸೋಲ್ ಮೌಂಟೆಡ್ ಜಾಯ್ ಸ್ಟಿಕ್, ರಿವರ್ಸ್ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ವಾರ್ನಿಂಗ್ ಸಿಸ್ಟಂ ಮತ್ತು ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಕೊಲಿಯೊಸ್ ಆವೃತ್ತಿಯನ್ನು ವಿಶೇಷವಾಗಿಸಲಿದೆ.

ನಿರೀಕ್ಷಿತ ದರ:

ನಿರೀಕ್ಷಿತ ದರ:

  • ರೆನೊ ಕೊಲಿಯೊಸ್ 4x2 ಮ್ಯಾನುವಲ್: 22.36 ಲಕ್ಷ ರು.
  • ರೆನೊ ಕೊಲಿಯೊಸ್ 4x4 ಮ್ಯಾನುವಲ್: 25.19 ಲಕ್ಷ ರು.
  • ರೆನೊ ಕೊಲಿಯೊಸ್ 4x4 ಆಟೋಮ್ಯಾಟಿಕ್: ರು. 26.25 ಲಕ್ಷ ರು.
English summary
Renault will be unveiling the Koleos at the 2014 Auto Expo. The SUV from the French manufacturer has not been overly popular with the Indian market, none the less a facelift could change its fortunes.
Story first published: Friday, January 31, 2014, 16:12 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark