6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ

Written By:

ಜಿನೆವಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಮೋಟಾರು ಶೋದಲ್ಲಿ ಭಾರತದ ಅಗ್ರಗಣ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಎಲ್ಲ ಹೊಸತನದಿಂದ ಕೂಡಿರುವ ಆರು ಸೀಟುಗಳ 'ಹೆಕ್ಸಾ' ಕಾನ್ಸೆಪ್ಟ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿದೆ.

ಟಾಟಾದ ನೂತನ ಎಸ್‌ಯುವಿ ಡಿಸೈನ್ ನೆಕ್ಸ್ಟ್, ಡ್ರೈವ್ ನೆಕ್ಸ್ಟ್ ಮತ್ತು ಕನೆಕ್ಟ್ ನೆಕ್ಸ್ಟ್ ಸಿದ್ಧಾಂತದ ಅಡಿಯಲ್ಲಿ ನಿರ್ಮಾಣವಾಗಲಿದೆ. ವರದಿಗಳ ಪ್ರಕಾರ ಇದು ಟಾಟಾದ ಜನಪ್ರಿಯ ಆರಿಯಾ ತಳಹದಿಯಲ್ಲಿ ರೂಪುಗೊಳ್ಳಲಿದೆ. (ಕೊನೆಯ ಸ್ಲೈಡ್‌ನಲ್ಲಿ ನೀಡಿರುವ ಆಕರ್ಷಕ ವೀಡಿಯೋ ನೋಡಲು ಮರೆಯದಿರಿ)

6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ

ಜಾಗತಿಕ ವಾಹನ ಪ್ರದರ್ಶನ ಮೇಳವೊಂದರಲ್ಲಿ ಹೆಕ್ಸಾ ಕಾನ್ಸೆಪ್ಟ್ ಎಸ್‌ಯುವಿ ಪರಿಚಯಿಸುವ ಮೂಲಕ ವಿಶ್ವಕ್ಕೆ ಟಾಟಾ ತನ್ನ ತಾಕತ್ತನ್ನು ತೋರ್ಪಡಿಸಿದೆ.

 ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • ನಿರ್ವಹಣೆ ಅನಿಯಮಿತ,
 • ಎಲ್ಲ ಭೂಪ್ರದೇಶ ಪ್ರತಿಕ್ರಿಯೆ,
 • ಆತ್ಮವಿಶ್ವಾಸ ಅನಿಯಮಿತ,
 • ಡೈ ಟೈಮ್ ರನ್ನಿಂಗ್ ಲ್ಯಾಂಪ್ಸ್,
 • ಸ್ಥಳಾವಕಾಶ ಅನಿಯಮಿತ,
ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

 • 19 ಇಂಚಿನ ಅಲಾಯ್ ವೀಲ್,
 • ಐಷಾರಾಮಿ ಅನಿಯಮಿತ,
 • ಆರು ಸೀಟು,
 • ಹಿಂದುಗಡೆ ಎಲ್‌ಇಡಿ ಲ್ಯಾಂಪ್,
 • ಜೀವನ ಅನಿಯಮಿತ
6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ

ಆರಿಯಾ ತಳಹದಿಯಲ್ಲಿ ನಿರ್ಮಾಣವಾದ್ದಲ್ಲಿ ಹೊಸ ಹೆಕ್ಸಾ ಕಾನ್ಸೆಪ್ಟ್ 2.2 ಲೀಟರ್ ಫೋರ್ ಸಿಲಿಂಡರ್ ವ್ಯಾರಿಕೋರ್ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು 154 ಅಶ್ವಶಕ್ತಿ (400 ತಿರುಗುಬಲ) ಉತ್ಪಾದಿಸಲಿದೆ.

6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ
 • ಹಾಗೆಯೇ 4764 ಎಂಎಂ ಉದ್ದ, 1895 ಎಂಎಂ ಅಗಲ, 1780 ಎಂಎಂ ಎತ್ತರ ಹಾಗೂ 2850 ಎಂಎಂ ಚಕ್ರಾಂತರ ಪಡೆಯಲಿದೆ.
6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ

ಹಿಂದಿನ ಟಾಟಾ ಮಾದರಿಗಳಿಗೆ ಹೋಲಿಸಿದಾಗ ಹೊಸ ಹೆಕ್ಸಾ ಕಾರಿನಲ್ಲಿ ಆಕ್ರಮಣಕಾರಿ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರ ಎಲ್‌ಇಡಿ ಟೈಲ್ ಲ್ಯಾಂಪ್, ಹೊಸ ಬಂಪರ್ ಹಾಗೂ ಡ್ಯುಯಲ್ ಟೋನ್ ಬಣ್ಣಗಳು ಆಧುನಿಕತೆಯ ಸಂಕೇತವಾಗಿರಲಿದೆ.

6 ಸೀಟುಗಳ ಟಾಟಾ 'ಹೆಕ್ಸಾ' ಎಸ್‌ಯುವಿ ಕಾನ್ಸೆಪ್ಟ್ ಅನಾವರಣ

ಹಿಂದುಗಡೆಯೂ ಟಾಟಾ ರಿಯರ್ ಎಲ್‌ಇಡಿ ಲ್ಯಾಂಪ್ ಸೌಲಭ್ಯವಿರಲಿದೆ. ಒಟ್ಟಿನಲ್ಲಿ ಟಾಟಾ ಹೊಸ ಮಾದರಿಯು ಯಾವಾಗ ನಿರ್ಮಾಣ ಹಂತವನ್ನು ತಲುಪಲಿದೆ ಎಂಬುದಕ್ಕೆ ನಿಕಟ ಭವಿಷ್ಯದಲ್ಲೇ ಉತ್ತರ ಲಭ್ಯವಾಗಲಿದೆ.

ಟಾಟಾ ಹೆಕ್ಸಾ ಎಸ್‌ಯುವಿ ಕಾನ್ಸೆಪ್ಟ್ ವೀಡಿಯೋ ವೀಕ್ಷಿಸಿ

 

English summary
Tata Hexa Concept showcased at Geneva Motor Show 2015
Story first published: Tuesday, March 3, 2015, 16:19 [IST]
Please Wait while comments are loading...

Latest Photos