ಟಾಟಾ ನ್ಯಾನೋ ಸಿಎನ್‌ಜಿ ಆವೃತ್ತಿ ಲಾಂಚ್; ದರ ಎಷ್ಟು?

By Nagaraja

ಒಂದರ ಬಳಿಕ ಒಂದರಂತೆ ಸಿಹಿ ಸುದ್ದಿಯನ್ನು ಬಿತ್ತರಿಸುತ್ತಿರುವ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಇದೀಗ ತನ್ನ ಜನಪ್ರಿಯ ಟಾಟಾ ನ್ಯಾನೋ ಸಿಎನ್‌ಜಿ ವರ್ಷನ್ ಆದ ಇಮ್ಯಾಕ್ಸ್ ಬಿಡುಗಡೆಗೊಳಿಸಿದೆ.

ಈ ಬಾರಿಯ ಹಬ್ಬದ ಆವೃತ್ತಿಯನ್ನು ಇನ್ನಷ್ಟು ಮಧುರವಾಗಿಸಲು ಟಾಟಾ ತಂದಿರುವ ವಿನೂತನ ಉಡುಗೊರೆ ಇದಾಗಿದೆ. ನಾವು ಈ ಹಿಂದೆಯೇ ತಿಳಿಸಿರುವಂತೆಯೇ ನೂತನ ನ್ಯಾನೋ ಸಿಎನ್‌ಜಿ ವರ್ಷನ್ 'ಇಮ್ಯಾಕ್ಸ್' ಎಂದರಿಯಲ್ಪಡಲಿದೆ.

ಅಹಮಾದಾಬಾದ್ ವೈಎಂಸಿಎನಲ್ಲಿ ಲಾಂಚ್ ಆಗಿರುವ ನ್ಯಾನೋ ಸಿಎನ್‌ಜಿ ವರ್ಷನ್ ಎಕ್ಸ್ ಶೋ ರೂಂ ದರ 2.45 ಲಕ್ಷ ರು.ಗಳಾಗಿವೆ. ಇದು ಸಿಎಕ್ಸ್ ಹಾಗೂ ಎಲ್‌ಎಕ್ಸ್‌ಗಳೆಂಬ ಎರಡು ವರ್ಷನ್‌ಗಳಲ್ಲಿ ಲಭ್ಯವಾಗಿರಲಿದೆ. ನೂತನ ಸಿಎನ್‌ಜಿ ವರ್ಷನ್ ನ್ಯಾನೋದ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 624 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ಇದರಲ್ಲಿರುವ ಎರಡು ಸಿಎನ್‌ಜಿ ಸಿಲಿಂಡರುಗಳು ಡ್ರೈವರ್ ಸೀಟಿನ ಕೆಳಗಡೆ ಲಗತ್ತಿಸಲಾಗಿದೆ. ಇದು ಕಾರು ಓಡಾಡುವ ವೆಚ್ಚ ಕಡಿತಗೊಳಿಸಲು ನೆರವಾಗಲಿದೆ. ಅಂದರೆ ಪ್ರತಿ ಕೀ.ಮೀ. ರು. 1.32 ಮಾತ್ರ ತಗುಲಲಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ನ್ಯಾನೋ ಇಮ್ಯಾಕ್ಸ್ ಸಿಎನ್‌ಜಿ ವರ್ಷನ್, ಆಂತರಿಕ ಭಾಗಗಳಲ್ಲೂ ಹೆಚ್ಚು ಆಕರ್ಷಕ ಲುಕ್ ಪಡೆದುಕೊಂಡಿದೆ. ಇದು ದೊಡ್ಡದಾದ ಸ್ಟೀರಿಂಗ್ ವೀಲ್ ಹಾಗೆಯೇ ಎತ್ತರವಾದ ಸಿಟ್ಟಿಂಗ್ ವ್ಯವಸ್ಥೆ ಪಡೆದುಕೊಂಡಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ನ್ಯಾನೋ ಇಮ್ಯಾಕ್ಸ್ ಸಿಎನ್‌ಜಿ ಸಿಎಕ್ಸ್ ವರ್ಷನ್ ಪ್ರಾರಂಭಿಕ ದರ 2.45 ಲಕ್ಷ ರು.ಗಳಾಗಿವೆ. ಹಾಗೆಯೇ ಎಲ್‌ಎಕ್ಸ್ ವೆರಿಯಂಟ್ ದರ 2.72 ಲಕ್ಷ ರು.ಗಳ ವರೆಗಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ನೂತನ ಸಿಎನ್‌ಜಿ ಆವೃತ್ತಿಯಲ್ಲಿ ಆಗ್ನಿ ಶಾಮಕ ಆಳವಡಿಸಲಾಗಿದ್ದರೂ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಕೊರತೆ ಕಾಡುತ್ತಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ಇನ್ನು ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಮಹತ್ವ ಕೊಡಲಾಗಿದ್ದು, ಇಂಟೆಲಿಜೆಟ್ ಆಕ್ಟಿವ್ ಸೇಫ್ಟಿ ವೈಶಿಷ್ಟ್ಯ ಆಳವಡಿಸಲಾಗಿದೆ. ಇದು ನಿರಂತರವಾಗಿ ಇಂಧನ ಲೀಕ್ ಆಗುತ್ತಿದೆಯೇ ಎಂಬುದನ್ನು ನಿಗಾವಹಿಸಲಿದೆ.

ಟಾಟಾ ನ್ಯಾನೋ 'ಇಮ್ಯಾಕ್ಸ್' ಸಿಎನ್‌ಜಿ ಆವೃತ್ತಿ ಲಾಂಚ್

ಅಂದ ಹಾಗೆ ನ್ಯಾನೋ ಸಿಎನ್‌ಜಿ ವರ್ಷನ್ ನಾಲ್ಕು ವರ್ಷ ಅಥವಾ 60,000 ಕೀ.ಮೀ.ಗಳ ವರೆಗೆ ವಾರಂಟಿ ಸೌಲಭ್ಯವಿರುತ್ತದೆ.

ಎಂಜಿನ್

ಎಂಜಿನ್

ಇಂಧನ ವಿಧ: ಬೈ ಫ್ಯೂಯಲ್ (ಗ್ಯಾಸೋಲೇನ್/ಸಿಎನ್‌ಜಿ)

ವಿಧ: 4 ಸ್ಟ್ರೋಕ್, ವಾಟರ್ ಕೂಲ್ಡ್, ಮಲ್ಟಿಪಾಯಿಂಟ್ ಇಂಜೆಕ್ಷನ್ ಸಿಸ್ಟಂ, 2 ಸಿಲಿಂಡರ್, ಇನ್-ಲೈನ್

ಕ್ಯೂಬಿಕ್ ಸಾಮರ್ಥ್ಯ: 624 ಸಿಸಿ

ಮ್ಯಾಕ್ಸಿಮಮ್ ಪವರ್: 38 ಪಿಎಸ್ @ 5500 ಆರ್‌ಪಿಎಂ (ಗ್ಯಾಸೋಲೇನ್)

33 ಪಿಎಸ್ @ 5500 ಆರ್‌ಪಿಎಂ (ಸಿಎನ್‌ಜಿ)

ಮ್ಯಾಕ್ಸಿಮಮ್ ಟಾರ್ಕ್: 51 ಎನ್‌ಎಂ @ 4000 ಆರ್‌ಪಿಎಂ (ಗ್ಯಾಸೋಲೇನ್)

45 ಎನ್‌ಎಂ @ 3500 ಆರ್‌ಪಿಎಂ (ಸಿಎನ್‌ಜಿ)

ಇಂಧನ ಟ್ಯಾಂಕ್ ಸಾಮರ್ಥ್ಯ: ಗ್ಯಾಸೋಲೇನ್ 15 ಲೀಟರ್, ಸಿಎನ್‌ಜಿ (2 ಸಿಲಿಂಡರ್)- 32 ಲೀಟರ್ ನೀರು ಸಾಮರ್ಥ್ಯ

ಚಾಸೀಸ್ ಮತ್ತು ಬಾಡಿ

ಚಾಸೀಸ್ ಮತ್ತು ಬಾಡಿ

ಕರ್ಬ್ ಭಾರ: 735 ಕೆ.ಜಿ (ಎಲ್‌ಎಕ್ಸ್)

ಉತ್ಪನ್ನ: ಮಾನೋಕಾಕ್, ನಾಲ್ಕು ಡೋರಿನ ಕಾರು

ವೀಲ್: ಫ್ರಂಟ್- ಆರ್12, ರಿಯರ್- ಆರ್12

ತಯಾರಿ: ಸ್ಟೀಲ್

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ವಿಧ: ರಿಯರ್ ವೀಲ್ ಡ್ರೈವ್

ಗೇರ್ ಬಾಕ್ಸ್: ಫೋರ್ ಫಾರ್ವಡ್ ಪ್ಲಸ್ ಒನ್ ರಿವರ್ಸ್ ಸ್ಪೀಡ್

Most Read Articles

Kannada
English summary
Tata Motors new Nano emax CNG is being launched at YMCA in Ahmedabad currently. The press release has revealed it’s price, which start from Rs 2.45 lakh, ex-showroom Ahmedabad.
Story first published: Tuesday, October 8, 2013, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X