ಆಲ್ಟೊ ಹಿಂದಿಕ್ಕಿದ ಡಿಜೈರ್ ನಂ.1; ಟಾಪ್ 10 ಪಟ್ಟಿ ಯಾವುದು?
ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಸಣ್ಣ ಕಾರಿನ ಅಧಿಪತ್ಯ ಕೊನೆಗೊಳಿಸಿರುವ ಮಾರುತಿಯದ್ದೇ ಆಗಿರುವ ಮಗದೊಂದು ಜನಪ್ರಿಯ ಮಾದರಿಯಾಗಿರುವ ಸ್ವಿಫ್ಟ್ ಡಿಜೈರ್ ಅಗ್ರಸ್ಥಾನ ದಾಖಲಿಸಿಕೊಂಡಿದೆ.
ಇವನ್ನೂ ಓದಿ: ಅತಿದೊಡ್ಡ 10 ವಾಹನ ತಯಾರಕ ಸಂಸ್ಥೆಗಳು
2014 ಜುಲೈ ತಿಂಗಳ ಮಾರಾಟ ಅಂಕಿಅಂಶದಲ್ಲಿ ಇಂತಹದೊಂದು ಗಮನಾರ್ಹ ಸಾಧನೆ ದಾಖಲಾಗಿದೆ. ಮಾರುಕಟ್ಟೆಯಲ್ಲಿ ಹೋಂಡಾ ಅಮೇಜ್‌ನಂತಹ ತಾಜಾ ಮಾದರಿಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಿರುವ ಡಿಜೈರ್ ಕಾಂಪಾಕ್ಟ್ ವಿಭಾಗದಲ್ಲಿ ಉತ್ತಮ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸಾಂಪ್ರದಾಯಕವಾಗಿ ಸಣ್ಣ ಕಾರುಗಳನ್ನು ಖರೀದಿಸುತ್ತಿರುವವರು ನಿಧಾನವಾಗಿ ದೊಡ್ಡ ಕಾರುಗಳತ್ತ ವಾಲುತ್ತಿರುವ ದೃಶ್ಯ ಕಂಡುಬಂದಿದೆ. ಸ್ಮರ್ಧಾತ್ಮಕ ದರಗಳಲ್ಲಿ ಹೊಸ ಮಾದರಿಗಳು ದೊರಕುತ್ತಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ. ಇಂದಿನ ಈ ಲೇಖನದಲ್ಲಿ 2014 ಜುಲೈ ತಿಂಗಳ ಮಾರಾಟದ ಆಧಾರದಲ್ಲಿ ಟಾಪ್ 10 ಕಾರು ಮಾದರಿಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಮುಖ್ಯಾಂಶಗಳು
- ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಎರಡನೇ ಬಾರಿಗೆ ಡಿಜೈರ್‌ಗೆ ಅಗ್ರಪಟ್ಟ,
- ಎರಡನೇ ಸ್ಥಾನ ಕಾಯ್ದುಕೊಂಡ ಆಲ್ಟೊ,
- ಅಗ್ರ ಐದರ ಪಟ್ಟಿ ಭೇಧಿಸಿದ ಹೋಂಡಾ ಸಿಟಿ,
- ಮೂರು ಸ್ಥಾನ ಕುಸಿದು 10ನೇ ಸ್ಥಾನಕ್ಕಿಳಿದ ಅಮೇಜ್,
- 8ರಿಂದ ಏಳನೇ ಸ್ಥಾನಕ್ಕೇರಿದ ಹ್ಯುಂಡೈ ಎಕ್ಸ್‌ಸೆಂಟ್,
- ಅಗ್ರ ಐದರ ಪಟ್ಟಿಯಿಂದ ಹೊರದಬ್ಬಲ್ಪಟ್ಟ ಹ್ಯುಂಡೈ ಗ್ರಾಂಡ್ ಐ10,
- ಅಗ್ರ 10ರ ಪಟ್ಟಿಯಲ್ಲಿ 4 ಲಕ್ಷ ರು.ಗಳೊಳಗಿನ ಕಾರುಗಳ ಕಾರುಬಾರು,
- ಅಗ್ರ 10ರ ಪಟ್ಟಿಯಲ್ಲಿ ಮಾರುತಿಯ ಐದು ಮಾದರಿಗಳು

10. ಅಮೇಜ್
ಒಟ್ಟು ಮಾರಾಟ - 4,507 ಯುನಿಟ್ (2014 ಜುಲೈ)

09. ಇಯಾನ್
ಒಟ್ಟು ಮಾರಾಟ - 6,035 ಯುನಿಟ್ (2014 ಜುಲೈ)

08. ಸೆಲೆರಿಯೊ
ಒಟ್ಟು ಮಾರಾಟ - 6,394 ಯುನಿಟ್ (2014 ಜುಲೈ)

07. ಎಕ್ಸ್‌ಸೆಂಟ್
ಒಟ್ಟು ಮಾರಾಟ - 6,652 ಯುನಿಟ್ (2014 ಜುಲೈ)

06. ಹ್ಯುಂಡೈ ಗ್ರಾಂಡ್ ಐ10
ಒಟ್ಟು ಮಾರಾಟ - 7,023 ಯುನಿಟ್ (2014 ಜುಲೈ)

05. ಹೋಂಡಾ ಸಿಟಿ
ಒಟ್ಟು ಮಾರಾಟ - 7,705 ಯುನಿಟ್ (2014 ಜುಲೈ)

04. ಮಾರುತಿ ವ್ಯಾಗನಾರ್
ಒಟ್ಟು ಮಾರಾಟ - 11,762 ಯುನಿಟ್ (2014 ಜುಲೈ)

03. ಮಾರುತಿ ಸ್ವಿಫ್ಟ್
ಒಟ್ಟು ಮಾರಾಟ - 15,703 ಯುನಿಟ್ (2014 ಜುಲೈ)

02. ಆಲ್ಟೊ
ಒಟ್ಟು ಮಾರಾಟ - 16,997 ಯುನಿಟ್ (2014 ಜುಲೈ)

01. ಮಾರುತಿ ಸ್ವಿಫ್ಟ್ ಡಿಜೈರ್
ಒಟ್ಟು ಮಾರಾಟ - 18,634 ಯುನಿಟ್ (2014 ಜುಲೈ)


Click it and Unblock the Notifications








