2014ರಲ್ಲಿ ದೇಶ ಕಂಡ ಟಾಪ್ 10 ಕಾರುಗಳು

Written By:

2014ನೇ ವರ್ಷ ಕೊನೆಗೊಳ್ಳುತ್ತಿರುವಂತೆಯೇ ಎಲ್ಲ ವಿಭಾಗದ ಲೇಖಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಂಡುಬಂದಿರುವ ಆಗು ಹೋಗುಗಳ ಬಗ್ಗೆ ಮಗದೊಮ್ಮೆ ಮೆಲುಕು ಹಾಕುವಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಇವೆಲ್ಲವನ್ನು ಒಂದೇ ಸವನೇ ಓದುಗರಿಗೆ ನೀಡುವುದು ಕಷ್ಟವೆನಿಸುತ್ತದೆ.

ಈ ಹಿನ್ನಲೆಯಲ್ಲಿ ಪ್ರಮುಖ ಘಟನೆಗಳ ಬಗ್ಗೆ ಮೆಲುಕು ಹಾಕಲಾಗುತ್ತದೆ. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ವಾಹನ ಜಗತ್ತಿನಲ್ಲಿರುವ ಆಗಿರುವ ಪ್ರಮುಖ ಕಾರುಗಳ ಬಿಡುಗಡೆಗಳ ಬಗ್ಗೆ ಪಟ್ಟಿ ಮಾಡುವ ಪ್ರಯತ್ನವನ್ನು ನಾವು ಕೂಡಾ ಮಾಡಿರುತ್ತೇವೆ.

2014ರಲ್ಲಿ ದೇಶ ಕಂಡ ಟಾಪ್ 10 ಕಾರುಗಳು

ಅಂದ ಹಾಗೆ 2014ನೇ ಸಾಲು ವಾಹನ ಜಗತ್ತಿನ ಪಾಲಿಗೆ ಅತಿ ಮಹತ್ವದೆನಿಸಿತ್ತು. ಒಂದೆಡೆ ವಾಹನಗಳ ಮಾರಾಟದಲ್ಲಿ ಕುಸಿತ ಕಂಡುಬಂದಿದ್ದರೂ ಸಹ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಬದ್ಧತೆಯಿಂದ ಮಾತ್ರ ವಾಹನ ತಯಾರಕ ಸಂಸ್ಥೆಗಳು ಹಿಂಜರಿದಿಲ್ಲ. ಇದಕ್ಕಾಗಿ ನಾವು ಎಲ್ಲ ವಾಹನ ತಯಾರಿಕ ಸಂಸ್ಥೆಗಳನ್ನು ಮೆಚ್ಚಬೇಕಾಗುತ್ತದೆ. 2014ನೇ ಸಾಲಿನಲ್ಲಿ ಬಿಡುಗಡೆಯಾದ ಅಗ್ರ 10 ಮಾದರಿಗಳ ಮಾಹಿತಿಗಳಿಗಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ...

10. ಹೋಂಡಾ ಸಿಟಿ

10. ಹೋಂಡಾ ಸಿಟಿ

ಬಿಡುಗಡೆ: 2014 ಜನವರಿ

ಹೋಂಡಾ ಪಾಲಿಗೆ ಅತ್ಯಂತ ಯಶಸ್ಸು ತಂದುಕೊಂಡಿರುವ ಹೊಸ ಪೀಳಿಗೆಯ ಹೋಂಡಾ ಸಿಟಿ ಜನವರಿ 8ನೇ ದಿನಾಂಕದಂದು ಬಿಡುಗಡೆ ಕಂಡಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುವ ಈ ಕಾರು ಮೋಡಿ ಮಾಡಿತ್ತು. ಇದರ ಪೆಟ್ರೋಲ್ ಎಂಜಿನ್ 119 ಪಿಎಶ್ ಪವರ್ (145 ಎನ್‌ಎಂ ಟಾರ್ಕ್) ಹಾಗೆಯೇ ಡೀಸೆಲ್ ಎಂಜಿನ್ 100 ಪಿಎಸ್ ಪವರ್ (200 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

09. ಟೊಯೊಟಾ ಎಟಿಯೋಸ್ ಕ್ರಾಸ್

09. ಟೊಯೊಟಾ ಎಟಿಯೋಸ್ ಕ್ರಾಸ್

ಬಿಡುಗಡೆ: 2014 ಮೇ

ಕ್ರಾಸೋವರ್ ವಿಭಾಗದಲ್ಲಿ ಹೊಸ ತಲ್ಲಣ ಮೂಡಿಸಿರುವ ಎಟಿಯೋಸ್ ಕ್ರಾಸ್, ಫೋಕ್ಸ್‌ವ್ಯಾಗನ್ ಪೊಲೊ ಕ್ರಾಸ್ ಮಾದರಿಗೆ ನೇರ ಪ್ರತಿಸ್ಪರ್ಧಿ ಎನಿಸಿಕೊಂಡಿತ್ತು. ಇದು ಎರಡು ಪೆಟ್ರೋಲ್ ಹಾಗೂ ಏಕಮಾತ್ರ ಡೀಸೆಲ್ ಎಂಜಿನ್ ಪಡೆದುಕೊಂಡಿತ್ತು.

1.5 ಲೀಟರ್ ಪೆಟ್ರೋಲ್ ಎಂಜಿನ್: 90 ಅಶ್ವಶಕ್ತಿ (132 ಎನ್‌ಎಂ ಟಾರ್ಕ್)

1.2 ಲೀಟರ್ ಪೆಟ್ರೋಲ್ ಎಂಜಿನ್: 80 ಅಶ್ವಶಕ್ತಿ (104 ಎನ್‌ಎಂ ಟಾರ್ಕ್)

ಡೀಸೆಲ್ ಎಂಜಿನ್: 68 ಅಶ್ವಶಕ್ತಿ (170 ಎನ್‌ಎಂ ಟಾರ್ಕ್)

08. ಹೋಂಡಾ ಮೊಬಿಲಿಯೊ

08. ಹೋಂಡಾ ಮೊಬಿಲಿಯೊ

ಬಿಡುಗಡೆ: 2014 ಜುಲೈ

ಹೋಂಡಾದ ಬಹುನಿರೀಕ್ಷಿತ ಮಾದರಿಗಳಲ್ಲಿ ಏಳು ಸೀಟುಗಳ ಮೊಬಿಲಿಯೊ ಬಹು ಬಳಕೆಯ ವಾಹನ ಕೂಡಾ ಒಂದಾಗಿತ್ತು. ದೇಶದ ಅಗ್ರ ವಾಹನ ತಯಾರಿಕ ಸಂಸ್ಥೆ ಮಾರುತಿ ಸುಜುಕಿ ಎರ್ಟಿಗಾಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಮೊಬಿಲಿಯಾ ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಾಗಿದೆ.

07. ಫಿಯೆಟ್ ಪುಂಟೊ ಇವೊ

07. ಫಿಯೆಟ್ ಪುಂಟೊ ಇವೊ

ಬಿಡುಗಡೆ: 2014 ಆಗಸ್ಟ್

ಸ್ಟೈಲಿಷ್ ನೋಟ ಹೊಂದಿರುವ ಪುಂಟೊ ಇವೊ ಕಾರನ್ನು ಇಟಲಿಯ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಫಿಯೆಟ್ ಕಳೆದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದು ಎರಡು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್: 68 ಅಶ್ವಶಕ್ತಿ (132 ಎನ್‌ಎಂ ಟಾರ್ಕ್)

1.4 ಲೀಟರ್ ಪೆಟ್ರೋಲ್ ಎಂಜಿನ್: 90 ಅಶ್ವಶಕ್ತಿ (104 ಎನ್‌ಎಂ ಟಾರ್ಕ್)

1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್: 76 ಹಾಗೂ 93 ಪಿಎಸ್ ಪವರ್

 06. ಹ್ಯುಂಡೈ ಎಲೈಟ್ ಐ20

06. ಹ್ಯುಂಡೈ ಎಲೈಟ್ ಐ20

ಬಿಡುಗಡೆ: 2014 ಆಗಸ್ಟ್

2014ನೇ ಸಾಲಿನಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿರುವ ಹ್ಯುಂಡೈ ಎಲೈಟ್ ಐ20, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಹೊಸ ಅನುಭವಕ್ಕೆ ಕಾರಣವಾಗಿತ್ತು. ಈಗಲೂ ಅತ್ಯುತ್ತಮ ಬೇಡಿಕೆ ಕಾಯ್ದುಕೊಂಡಿರುವ ಎಲೈಟ್ ಐ20 '2015 ಭಾರತದ ವರ್ಷದ ಕಾರು' ಪ್ರಶಸ್ತಿಗೂ ಭಾಜನವಾಗಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್: 83 ಅಶ್ವಶಕ್ತಿ 1.4 ಲೀಟರ್ ಡೀಸೆಲ್ ಎಂಜಿನ್: 90 ಪಿಎಸ್ ಪವರ್

05. ಟಾಟಾ ಜೆಸ್ಟ್

05. ಟಾಟಾ ಜೆಸ್ಟ್

ಬಿಡುಗಡೆ: 2014 ಆಗಸ್ಟ್

ಟಾಟಾ ಮೋಟಾರ್ಸ್ ಸಂಸ್ಥೆಗೆ ಹೊಸ ಆಯಾಮ ನೀಡಿರುವ ಬಹುನಿರೀಕ್ಷಿತ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಕಾರು ನಿರೀಕ್ಷೆಗೂ ಮೀರಿ ಯಶ ಕಂಡಿರುವುದು ಸಂಸ್ಥೆಯ ಪಯಣವನ್ನು ಹೊಸ ದಿಕ್ಕಿನತ್ತ ಸಾಗಿಸಿದೆ.

1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್: 90 ಅಶ್ವಶಕ್ತಿ 1.3 ಲೀಟರ್ ಡೀಸೆಲ್ ಎಂಜಿನ್: 90 ಪಿಎಸ್ ಪವರ್

ವಿಶಿಷ್ಟತೆ: ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್

 04. ಮಹೀಂದ್ರ ಸ್ಕಾರ್ಪಿಯೊ

04. ಮಹೀಂದ್ರ ಸ್ಕಾರ್ಪಿಯೊ

ಬಿಡುಗಡೆ: 2014 ಸೆಪ್ಟೆಂಬರ್

ಮಹೀಂದ್ರ ಸ್ಕಾರ್ಪಿಯೊ ಮುಂದಿನ ಪೀಳಿಗೆಯ ಕ್ರೀಡಾ ಬಳಕೆಯ ವಾಹನ ಸಂಪೂರ್ಣ ಹೊಸ ರೂಪವನ್ನು ಪಡೆದುಕೊಂಡಿತ್ತು. ಇದರ 2.2 ಲೀಟರ್ ಎಂಹಾಕ್ ಎಂಜಿನ್ 120 ಅಶ್ವಶಕ್ತಿ (280 ಎನ್‌‍ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 2.5 ಲೀಟರ್ ಎಂ2ಡಿಐಸಿಆರ್ ಎಂಜಿನ್ 75ಪಿಎಸ್ (200 ತಿರುಗುಬಲ) ಪವರ್ ಉತ್ಪಾದಿಸುತ್ತದೆ.

03. ಮಾರುತಿ ಸುಜುಕಿ ಸಿಯಾಝ್

03. ಮಾರುತಿ ಸುಜುಕಿ ಸಿಯಾಝ್

ಬಿಡುಗಡೆ: 2014 ಅಕ್ಟೋಬರ್

ಹೋಂಡಾ ಸಿಟಿ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿರುವ ಮಾರುತಿ ಸುಜುಕಿ ಸಿಯಾಝ್ ಸೆಡಾನ್ ಕಾರು ದೇಶದ ಅತಿ ದೊಡ್ಡ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿತ್ತು. ಈ ಮಿಡ್ ಸೈಜ್ ಸೆಡಾನ್ ಕಾರು 10 ವೆರಿಯಂಟ್‌ಗಳಲ್ಲಿ ಲಭ್ಯವಿದೆ.

1373 ಸಿಸಿ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 92 ಪಿಎಸ್ ಪವರ್ (130 ಎನ್‌ಎಂ) ಹಾಗೆಯೇ 1248 ಸಿಸಿ ಡೀಸೆಲ್ ಎಂಜಿನ್ 90 ಪಿಎಸ್ ಪವರ್ (200 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

02. ಫಿಯೆಟ್ ಅವೆಂಚ್ಯುರಾ

02. ಫಿಯೆಟ್ ಅವೆಂಚ್ಯುರಾ

ಬಿಡುಗಡೆ: 2014 ಅಕ್ಟೋಬರ್

ಫಿಯೆಟ್‌ನ ಹೊಸ ಕ್ರಾಸೋವರ್ ಮಾದರಿಯಾಗಿರುವ ಅವೆಂಚ್ಯುರಾ ಆಫ್ ರೋಡ್ ಬೇಡಿಕೆಗಳನ್ನು ಸರಿದೂಗಿಸುತ್ತಿದೆ. ಇದು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ ಎಂಜಿನ್ 88.73 ಬಿಎಚ್‌ಪಿ (115 ಎನ್‌ಎಂ ಟಾರ್ಕ್) ಹಾಗೆಯೇ 1.3 ಲೀಟರ್ ಡೀಸೆಲ್ ಎಂಜಿನ್ 91.6 ಬಿಎಚ್‌ಪಿ (209 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

01. ಮಾರುತಿ ಸುಜುಕಿ ಆಲ್ಟೊ ಕೆ10

01. ಮಾರುತಿ ಸುಜುಕಿ ಆಲ್ಟೊ ಕೆ10

ಬಿಡುಗಡೆ: 2014 ನವೆಂಬರ್

ಮಾರುತಿ ಪಾಲಿಗೆ ಆಲ್ಟೊ ಕೆ10 ಅತಿ ಹೆಚ್ಚು ನಿರೀಕ್ಷೆಗೆ ಕಾರಣವಾಗಿತ್ತು. ಇದರ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ತಂತ್ರಗಾರಿಕೆ ಈಗಾಗಲೇ ಗ್ರಾಹಕರ ಪ್ರೀತಿ ಪಾತ್ರವಾಗಿದೆ. ಅಂತೆಯೇ ಇದರ 998 ಸಿಸಿ ತ್ರಿ ಸಿಲಿಂಡರ್ 67 ಬಿಎಚ್‌ಪಿ (90 ಎನ್‍‌‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಿಎನ್‌ಜಿ ವೆರಿಯಂಟ್‌ನಲ್ಲೂ ಲಭ್ಯವಿದೆ.

English summary
Lets take a look at the top 10 important launches in 2014 that aroused the interest of the market this past year.
Story first published: Saturday, December 27, 2014, 15:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark