2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಭರ್ಜರಿ ಲಾಂಚ್

Written By:

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಎಲ್ಲ ಹೊಸತನದ 2014 ಕರೊಲ್ಲಾ ಆಲ್ಟೀಸ್ ಕಾರನ್ನು ದೇಶದ ಮಾರುಕಟ್ಟೆಗೆ ಭರ್ಜರಿ ಲಾಂಚ್ ಮಾಡಿದೆ.

ಟೊಯೊಟಾ ಇನ್ನೋವಾ ಹಾಗೂ ಫಾರ್ಚ್ಯೂನರ್‌ಗಳಂತಹ ಮಾದರಿಗಳನ್ನೇ ಹೆಚ್ಚು ನೆಚ್ಚಿಕೊಂಡಿರುವ ಟೊಯೊಟಾ ಕಿರ್ಲ್ಕೊಸರ್ ಮೋಟಾರು ಸಂಸ್ಥೆಯ ಪಾಲಿಗಿದು ಮಹತ್ವದ ಮಾದರಿ ಎನಿಸಿಕೊಳ್ಳಲಿದೆ. ಯಾಕೆಂದರೆ ಕರೊಲ್ಲಾ ಆಲ್ಟೀಸ್ ದೇಶದಲ್ಲಿ ಜನಪ್ರಿಯ ಆವೃತ್ತಿಯಾಗಿದ್ದರೂ ಸಹ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಆಲ್ಟೀಸ್ ಪ್ರಮುಖ ಪಾತ್ರ ವಹಿಸಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಪೂರ್ವ ನಿಗದಿಯಂತೆ ದೇಶದ ಮಾರುಕಟ್ಟೆಗೆ ಪ್ರವೇಶಿಸಿರುವ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಪ್ರಾರಂಭಿಕ ದರ 11.99 ಲಕ್ಷ ರು.ಗಳಾಗಿವೆ. ಹಾಗೆಯೇ ಡೀಸೆಲ್ ವೆರಿಯಂಟ್ ಪ್ರಾರಂಭಿಕ ದರ 13.07 ಲಕ್ಷ ರು.ಗಳಾಗಿರಲಿದೆ.

2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಭರ್ಜರಿ ಲಾಂಚ್

11ನೇ ತಲೆಮಾರಿನ ಟೊಯೊಟಾ ಕರೊಲ್ಲಾ ಆಲ್ಟೀಸ್ ಈ ಹಿಂದಿನ 2014 ದೆಹಲಿ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದೀಗ ಆಸಕ್ತ ಗ್ರಾಹಕರು 50,000 ರು. ಮುಗಂಡವಾಗಿ ಪಾವತಿಸಿ ತಮ್ಮ ನೆಚ್ಚಿನ ಕಾರನ್ನು ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.

ಎಂಜಿನ್

ಎಂಜಿನ್

ನಾಲ್ಕು ಡೀಸೆಲ್ ಹಾಗೂ ಐದು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ನೂತನ 2014 ಟೊಯೊಟಾ ಕರೊಲ್ಲಾ ಆಗಮನವಾಗಲಿದೆ. ಅಲ್ಲದೆ ವಿಶೇಷವಾದ ಬೆಂಚ್‌ಮಾರ್ಕ್ ಕಲೆಕ್ಷನ್ ಪ್ಯಾಕೇಜ್‌ನಲ್ಲೂ ಸಿಗಲಿದೆ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಇದು 1.4 ಲೀಟರ್ ಡೀಸೆಲ್ ಡಿ4-ಡಿ ಡೀಸೆಲ್ ಹಾಗೂ 1.8 ಲೀಟರ್ ವಿವಿಟಿಐ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಅನುಕ್ರಮವಾಗಿ 7 ಸ್ಪೀಡ್ ಸಿವಿಟಿ-ಐ ಸಿಕ್ವಾನ್ಸಿಯಲ್ ಶಿಫ್ಟ್‌ಮ್ಯಾಟಿಕ್ ಹಾಗೂ 6 ಸ್ಪೀಡ್ ಮ್ಯಾನುವಲ್ ಗೇರ್‌ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಹೊಸ ನೋಟ

ಹೊಸ ನೋಟ

ಟೊಯೊಟಾ ಸಂಸ್ಥೆಯ ಹೊಸ ವಿನ್ಯಾಸ ತತ್ವಶಾಸ್ತ್ರವನ್ನು ಅನುಸರಿಸಿರುವ 2014 ಕರೊಲ್ಲಾ ಆಲ್ಟೀಸ್, ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕರ್ಷಕ ನೋಟ ಪಡೆದುಕೊಂಡಿದೆ. ಇದರ ಕ್ರೋಮ್, ಎಲ್‌ಇಡಿ ಹಾಗೂ ಫ್ರಂಟ್ ಗ್ರಿಲ್ ಹೆಚ್ಚು ಆಕರ್ಷಣೀಯವಾಗಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಸಿಲ್ವರ್ ಮೈಕಾ ಮೆಟ್ಯಾಲಿಕ್, ಚಾಂಪೈನ್ ಮೈಕಾ ಮೆಟ್ಯಾಲಿಕ್, ಗ್ರೇ ಮೆಟ್ಯಾಲಿಕ್, ಬ್ಲೂ ಮೆಟ್ಯಾಲಿಕ್, ಸೆಲೆಸ್ಟಿಯಲ್ ಬ್ಲ್ಯಾಕ್, ವೈಟ್ ಪಿಯರ್ಲ್ ಕ್ರೈಸ್ಟರ್ ಶೈನ್ ಮತ್ತು ಸೂಪರ್ ವೈಟ್ II

ಸುರಕ್ಷತೆ

ಸುರಕ್ಷತೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ಡ್ಯುಯಲ್ ಎಸ್‌ಆರ್‌ಎಸ್ ಏರ್‌ಬ್ಯಾಕ್, ಇಮೊಬಿಲೈಜರ್ ಮತ್ತು ಜಿಐಎ ದೇಹ ವಿನ್ಯಾಸವನ್ನು ಪಡೆದುಕೂಳ್ಳಲಿದೆ. ಹಾಗೆಯೇ 7 ಇಂಚಿನ ಎಲ್‌ಸಿಡಿ ಸ್ಕ್ರೀನ್ ಜತೆ ರಿಯರ್ ಕ್ಯಾಮೆರಾ ಪಡೆದುಕೊಳ್ಳಲಿದೆ.

ವೆರಿಯಂಟ್, ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ವೆರಿಯಂಟ್, ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ಪೆಟ್ರೋಲ್ (ಲಕ್ಷ ರು.ಗಳಲ್ಲಿ)

ವಿಎಲ್ (ಸಿವಿಟಿ) - 16.89

ಜಿಎಲ್ - 15.38

ಜಿ-ಸಿವಿಟಿ - 15.04

ಜಿ - 13.74

ಜೆ(ಎಸ್) - 11.99

ವೆರಿಯಂಟ್, ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ವೆರಿಯಂಟ್, ದರ ಮಾಹಿತಿ (ಎಕ್ಸ್‌ ಶೋ ರೂಂ ದೆಹಲಿ)

ಡೀಸೆಲ್ (ಲಕ್ಷ ರು.ಗಳಲ್ಲಿ)

ಡಿಜಿಎಲ್ - 16.68

ಡಿಜಿ - 15.04

ಡಿಜೆ (ಎಸ್) - 13.64

ಡಿಜೆ - 13.07

2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಭರ್ಜರಿ ಲಾಂಚ್

ಇದೀಗ 2014 ಕರೊಲ್ಲಾ ಆಲ್ಟೀಸ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

English summary
Toyota India had revealed their Corolla Altis 11th generation model at the 2014 Auto Expo held in New Delhi.
Story first published: Wednesday, May 28, 2014, 7:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark