YouTube

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

By Nagaraja

ಕಳೆದ ಹಲವಾರು ವರ್ಷಗಳಲ್ಲಿ ಭಾರತ ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡಿರುವ ಟೊಯೊಟಾ ಇನ್ನೋವಾ ಮಲ್ಟಿ ಪರ್ಪಸ್ ವಾಹನ (ಎಂಪಿವಿ) ಮಗದೊಮ್ಮೆ ಈ ಹಬ್ಬದ ಆವೃತ್ತಿಯಲ್ಲಿ ಹೊಸ ರೂಪ ಪಡೆದುಕೊಳ್ಳುತ್ತಿದೆ.

ಹೌದು, ಇತ್ತೀಚೆಗಷ್ಟೇ ಇಂಡೋನೇಷ್ಯಾ ಮಾರುಕಟ್ಟೆ ಪ್ರವೇಶಿಸಿದ್ದ ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ವರ್ಷನ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ದೆಹಲಿ ಎಕ್ಸ್ ಶೋ ರೂಂ ದರ 9.77 ಲಕ್ಷ ರು.

ನೂತನ ಇನ್ನೋವಾ ಕಾರು ಒಳಮೈ ಹಾಗೂ ಹೊರಮೈಗಳಲ್ಲಿ ತಾಜಾ ಲುಕ್ ಪಡೆದುಕೊಂಡಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 2.5 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 102 ಪಿಎಸ್ (205 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಒಟ್ಟು ಐದು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಇನ್ನೋವಾ ಫೇಸ್‌ಲಿಫ್ಟ್ 7 ಹಾಗೂ 8 ಸೀಟಿನ ಸಿಟ್ಟಿಂಗ್ ವ್ಯವಸ್ಥೆ ಹೊಂದಿರಲಿದೆ. ಅಂತೆಯೇ ಝಡ್‌ಎಕ್ಸ್ ವೆರಿಯಂಟ್ ಏಳು ಸೀಟುಗಳಲ್ಲಿ ಮಾತ್ರ ಲಭ್ಯವಿರಲಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಇದು 9.77 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ಝಡ್ ವೆರಿಯಂಟ್ ದರ 15.06 ಲಕ್ಷ ರು.ಗಳ ವರೆಗಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ನೂತನ ಫೇಸ್‌ಲಿಫ್ಟ್ ಇನ್ನೋವಾ ವರ್ಷನ್ ಹೊಸತಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದ್ದು, ಕ್ರೋಮ್ ಟಚ್ ನೀಡಲಾಗಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಜನಪ್ರಿಯ ಫಾರ್ಚುನರ್ ವಿನ್ಯಾಸದಿಂದ ಸ್ಪೂರ್ತಿ ಪಡೆದುಕೊಂಡು ಇದರ ವಿನ್ಯಾಸ ರೂಪಿಸಲಾಗಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಹಾಗೆಯೇ ಟಾಪ್ ಎಂಡ್ ಝಡ್ ವೆರಿಯಂಟ್ ಡ್ಯುಯಲ್ ಟೋನ್ ಲೆಥರ್ ಸೀಟು ಜತೆಗೆ ಡೋರ್‌ ಹಾಗೂ ಗೇರ್‌ಗಳಲ್ಲಿ ಮರದ ಹೋದಿಕೆ ಪಡೆದುಕೊಳ್ಳಲಿದೆ. ಇನ್ನು ಹಿಂದುಗಡೆಯು ಸಹ ಹೆಚ್ಚಿನ ಆಕರ್ಷಕ ವಿನ್ಯಾಸ ಪ್ರದಾನ ಮಾಡಲಾಗಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಬೇಸ್ ವೆರಿಯಂಟ್‌ಗಳಾದ ಜಿ ಹಾಗೂ ಇ ಹೊರತುಪಡಿಸಿ ಇತರೆಲ್ಲ ಡೀಸೆಲ್ ವರ್ಷನ್‌ಗಳು ಪರಿಷ್ಕೃತಗೊಂಡಿವೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಇನ್ನು ಕಾರಿನ ಹಿಂದುಗಡೆಯೂ ಅಂದತೆ ಹೆಚ್ಚಿಸಲು ಹೆಚ್ಚು ಗಮನ ವಹಿಸಲಾಗಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಅದೇ ರೀತಿ ಸೆಂಟ್ರಲ್ ಕನ್ಸೋಲ್ ಸಹ ವುಡನ್ ಟಚ್ ಜತೆ ಸಿಲ್ವರ್ ಫಿನಿಶಿಂಗ್ ಪಡೆದುಕೊಂಡಿದೆ.

ಟೊಯೊಟಾ ಇನ್ನೋವಾ ಫೇಸ್‌ಲಿಫ್ಟ್ ಲಾಂಚ್

ಪ್ರಸಕ್ತ ಹಬ್ಬದ ಆವೃತ್ತಿ ಚಾಲ್ತಿಯಲ್ಲಿರುವಂತೆಯೇ ಟೊಯೊಟಾ ಪಾಲಿಗೆ ನೂತನ ಇನ್ನೋವಾ ಯಾವ ರೀತಿ ಗೇಮ್ ಚೇಂಜರ್ ಎನಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Toyota has facelifted the Innova MPV for the Indian market and launched for Rs 9.77 lakh (ex-showroom Delhi). The new model is available only with a diesel engine and has few changes to both exteriors and interiors to distinguish it from the current Innova.
Story first published: Monday, October 7, 2013, 10:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X