ಫೋಕ್ಸ್‌ವ್ಯಾಗನ್ ಚೊಚ್ಚಲ ಎಲೆಕ್ಟ್ರಿಕ್ ಕಾರು ಭಾರತಕ್ಕೆ?

Written By:

ಕೆಲವು ದಿನಗಳ ಹಿಂದೆಯಷ್ಟೇ ದೇಶದಲ್ಲಿ ಮುಂದಿನ ಜನಾಂಗದ ಆಧುನಿಕ ವಿದ್ಯುತ್ ಚಾಲಿತ ಕಾರನ್ನು ಮಹೀಂದ್ರ ರೇವಾ ಪರಿಚಯಿಸಿತ್ತು. ಮತ್ತೊಂದೆಡೆ ಯುರೋಪ್‌ನಲ್ಲಿ ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಫೋಕ್ಯ್‌ವ್ಯಾಗನ್ ಕೂಡಾ ಚೊಚ್ಚಲ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರನ್ನು ಪರಿಚಯಿಸಿದೆ.

ಫೋಕ್ಸ್‌ವ್ಯಾಗನ್ 'ಇ-ಅಪ್' (E-Up) ಸಂಪೂರ್ಣ ವಿದ್ಯುತ್ ಚಾಲಿತ ಕಾರಾಗಿದ್ದು, ನಿಕಟ ಭವಿಷ್ಯದಲ್ಲಿ ಭಾರತಕ್ಕೂ ಕಾಲಿಡುವ ನಿರೀಕ್ಷೆಗಳಿವೆ. ವೂಲ್ಸ್‌ಬರ್ಗ್‌ನಲ್ಲಿ ನಡೆದ ವಾರ್ಷಿಕ ಪತ್ರಿಕಾ ಹಾಗೂ ಹೂಡಿಕೆದಾರರ ಸಮಾವೇಶದಲ್ಲಿ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ವಾಹನವನ್ನು ಅನಾವರಣಗೊಳಿಸಲಾಗಿದೆ.

ನಗರ ಪ್ರದೇಶವನ್ನು ಗುರಿಯಾಗರಿಸಿಕೊಂಡು ಫೋಕ್ಸ್‌ವ್ಯಾಗನ್ ಇ-ಅಪ್ ರೂಪಿಸಲಾಗಿದೆ. ಅಂದರೆ ಈಗಾಗಲೇ ಕಾರು ಹೊಂದಿರುವವರು ಎರಡನೇ ಆಯ್ಕೆಯಾಗಿ ಇದನ್ನು ಬಳಕೆ ಮಾಡಬಹುದು. ಇದು ನಾಲ್ಕು ಡೋರ್ ಹೊಂದಿರುವುದರಿಂದ ಸಹಜವಾಗಿಯೇ ಪ್ರಾಯಾಣಿಕ ಕಾರುಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ಹೆಚ್ಚಿನ ಸ್ಥಳಾವಕಾಶ ಪಡೆಯಲಿದೆ. ಕಳಗಡೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿರಿ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್ ಎಲೆಕ್ಟ್ರಿಕ್ ಕಾರಿನಲ್ಲೂ ಲಿಥಿಯಂ ಇಯಾನ್ ಬ್ಯಾಟರಿ ಬಳಕೆ ಮಾಡಲಾಗಿದೆ. ಅಂದರೆ ಮಹೀಂದ್ರಇ2ಒ ಕಾರಿನಲ್ಲಿ ಇದನ್ನೇ ಅಳವಡಿಸಲಾಗಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಪ್ರಸ್ತುತ ಬ್ಯಾಟರಿಯು 60ಕೆಡಬ್ಲ್ಯು/82 ಪಿಎಸ್ ಪೀಕ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಯೂನಿಕ್ ಎಲೆಕ್ಟ್ರಿಕ್ ಮೋಟಾರ್ ಎನಿಸಿಕೊಳ್ಳಲಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್ ಪ್ರತಿ ಗಂಟೆಗೆ ಗರಿಷ್ಠ 135 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದರಲಿದೆ. ಹಾಗೆಯೇ 14 ಸೆಕೆಂಡುಗಳಲ್ಲಿ 0ರಿಂದ 100 ಕೀ.ಮೀ. ತನಕ ವೇಗವರ್ಧಿಸಲಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಇನ್ನು ಮಹೀಂದ್ರ ರೇವಾಗೆ ಹೋಲಿಸಿದರೆ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ ಪ್ರಸ್ತುತ ಕಾರು 150 ಕೀ.ಮೀ. ತನಕ ಚಲಿಸುವ ಸಾಮರ್ಥ್ಯ ಹೊಂದಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಹಾಗೆಯೇ ಶಿಪ್ರಗತಿಯಲ್ಲಿ ಚಾರ್ಜ್ ಮಾಡಿಸುವ ಸೌಲಭ್ಯ ಕೂಡಾ ಫೋಕ್ಸ್‌ವ್ಯಾಗನ್ ಇ-ಅಪ್ ಹೊಂದಿದ್ದು, ಕೇವಲ ಅರ್ಧ ಗಂಟೆಯಲ್ಲಿ ಶೇಕಡಾ 80ರಷ್ಟು ಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್ ಎಲೆಕ್ಟ್ರಿಕ್ ಕಾರಿನಲ್ಲಿ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಂ (ಸಿಸಿಎಸ್) ಸಿದ್ಧಾಂತ ಆಳವಡಿಸಲಾಗಿದ್ದು, ಡಿಸಿ ಅಥವಾ ಎಸಿ ಪವರ್ (DC or AC) ಮೂಖಾಂತರ ಚಾರ್ಜ್ ಮಾಡಿಸಬಹುದಾಗಿದೆ.

ಫೋಕ್ಸ್‌ವ್ಯಾಗನ್ ಇ-ಅಪ್

ಫೋಕ್ಸ್‌ವ್ಯಾಗನ್ ಇ-ಅಪ್

ಅಂದ ಹಾಗೆ ಫ್ರಾಂಕ್‌ಫರ್ಟ್‌ನಲ್ಲಿ ಸಾಗಲಿರುವ ಅಂತರಾಷ್ಟ್ರೀಯ ಆಟೋ ಶೋದಲ್ಲಿ ಫೋಕ್ಸ್‌ವ್ಯಾಗನ್ ಇ-ಅಪ್ ಎಲೆಕ್ಟ್ರಿಕ್ ಕಾರು ಜಾಗತಿಕ ಪ್ರದರ್ಶನ ಕಾಣಲಿದೆ.

English summary
While India got its first modern, next generation electric car in the form of Mahindra Reva e2o, over in Europe, VW showcased its first ever fully electric hatchback, E-Up! The vehicle was showcased at the Annual Press and Investors Conference in Wolfsburg.
Story first published: Friday, March 22, 2013, 11:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark