ಸೈಕಲ್ ಸವಾರರೇ ಇನ್ನು ನೆಮ್ಮದಿಯಿಂದ ಚಲಿಸಿ

Written By:

ಇನ್ನು ಮುಂದೆ ಸೈಕಲ್ ಸವಾರರು ರಸ್ತೆಗಳಲ್ಲಿ ಆರಾಮವಾಗಿ ಸವಾರಿ ಮಾಡಬಹುದು. ಯಾಕೆಂದರೆ ವಿಶ್ವದ ಮುಂಚೂಣಿಯ ಕಾರು ತಯಾರಕ ಕಂಪನಿಗಳಲ್ಲಿ ಒಂದಾಗಿರುವ ವೋಲ್ವೋ ನೂತನ ಸೈಕಲಿಸ್ಟ್ ಡಿಟೆಕ್ಷನ್ (ಪತ್ತೆ ಹಚ್ಚುವುದು) ಸಿಸ್ಟಂ (cyclist detection system) ಅಭಿವೃದ್ಧಿಪಡಿಸಿದೆ.

ಯುರೋಪ್ ನಗರದಲ್ಲಿ ಬಹುತೇಕ ಅಪಘಾತಗಳು ಕಾರು ಹಾಗೂ ಸೈಕಲ್ ನಡುವೆ ಆಗುತ್ತಿರುತ್ತವೆ. ಇದರಂತೆ ಎಚ್ಚೆತ್ತುಕೊಂಡಿರುವ ವೋಲ್ವೋ ಕಂಪನಿಯು ಸಂಪೂರ್ಣ ಆಟೋ ಬ್ರೇಕ್ ಸಹಿತ ಸೈಕಲ್ ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಹಾಗೊಂದು ವೇಳೆ ಕಾರು ಸಂಚರಿಸುತ್ತಿರುವಾಗ ಸೈಕಲ್ ಸವಾರ ಅಚಾನಕ್ ಕಾರಿನ ಎದುರುಗಡೆ ಧುಮಕಿದರೆ ಪ್ರಸ್ತುತ ತಂತ್ರಜ್ಞಾನ ತ್ವರಿತ ಎಚ್ಚರಿಕೆ ನೀಡುವುದಲ್ಲದೆ ಬ್ರೇಕಿಂಗ್ ಪವರ್ ತಕ್ಷಣ ಆಳವಡಿಕೆಯಾಗಲಿದೆ. ಈ ಮೂಲಕ ಅಪಘಾತವನ್ನು ತಪ್ಪಿಸಬಹುದಾಗಿದೆ.

Volvo Cyclist Detection And Auto Braking System

ಸಮೀಕ್ಷಾ ವರದಿಗಳ ಪ್ರಕಾರ ಯುರೋಪ್ ಟ್ರಾಫಿಕ್‌ನಲ್ಲಿ ಕಾರು ಜತೆಗಿನ ಅಪಘಾತದಿಂದಾಗಿ ಶೇಕಡಾ 50ರಷ್ಟು ಸೈಕಲ್ ಸವಾರರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.

Volvo Cyclist Detection And Auto Braking System

ವೋಲ್ವೋ ಸೈಕಲಿಸ್ಟ್ ಡಿಟೆಕ್ಷನ್ ಸಿಸ್ಟಂನಲ್ಲಿ ಅಳವಡಿಸಲಾಗಿರುವ ಸೊನಾರ್‌ನಂತಹ ಸೆನ್ಸಾರ್ ಸಿಸ್ಟಂ ಕಾರಿನ ಹತ್ತಿರದಲ್ಲಿರುವ ಸೈಕಲ್‌ಗಳನ್ನು ಪತ್ತೆ ಹಚ್ಚಲಿದೆ. ಹಾಗೆಯೇ ಸೆಂಟ್ರಲ್ ಕಂಟ್ರೋಲ್ ಯುನಿಟ್ ನಿರಂತರವಾಗಿ ಟ್ರಾಫಿಕ್ ಸಿಗ್ನಲ್‌ಗಳ ಬಗ್ಗೆ ಮಾಪನ ಮಾಡಲಿದೆ.

Volvo Cyclist Detection And Auto Braking System

ಇದರ ಜತೆ ಜೋಡಣೆ ಮಾಡಲಾದ ರಿಯರ್ ವ್ಯೂ ಕ್ಯಾಮೆರಾ ಸೈಕಲ್ ಸವಾರ ಸೇರಿದಂತೆ ಪಾದಚಾರಿ ಹಾಗೂ ಇತರ ವಾಹನಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ. ಅಂದ ಹಾಗೆ ನಿಮ್ಮ ಮುಂದೆ ಪಾದಚಾರಿಯಂತೆ ನಡೆದುಕೊಳ್ಳುವ ಯಾವುದಾದರೂ ಒಂದು ಕಾರು ಇದ್ದಲ್ಲಿ ಅದು ವೋಲ್ವೋ ಮಾತ್ರವಾಗಿರಲಿದೆ.

Volvo Cyclist Detection And Auto Braking System

2013ರ ಮಧ್ಯಂತರ ಅವಧಿಯಲ್ಲಿ ಈ ಎಲ್ಲ ನೂತನ ಫೀಚರ್‌ಗಳು ವೋಲ್ವೋ ಕಾರಿಗೆ ಆಳವಡಿಕೆಯಾಗಲಿದೆ. ವೋಲ್ವೋ ವಿ40, ಎಸ್‌60, ವಿ60, ಎಕ್ಸ್‌ಸಿ60, ವಿ70, ಎಕ್ಸ್‌ಸಿ70 ಹಾಗೂ ಎಸ್80 ಮಾಡೆಲ್‌ಗಳಲ್ಲಿ ಇದು ಆಳವಡಿಕೆಯಾಗಲಿದೆ.

Volvo Cyclist Detection And Auto Braking System

ಆಟೋ ಜಗತ್ತಿನಲ್ಲೇ ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

Volvo Cyclist Detection And Auto Braking System

ಇದೇ ಸಂದರ್ಭದಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಡಿಟೆಕ್ಷನ್ ಸಿಸ್ಟಂ ಅಭಿವೃದ್ಧಿಪಡಿಸಲು ವೋಲ್ವೋ ಯೋಜನೆ ಹೊಂದಿದೆ. ಕುದುರೆ ಹಾಗೂ ಜಿಂಕೆಗಳಂತಹ ವನ್ಯ ಜೀವಿಗಳನ್ನು ಸಂರಕ್ಷಿಸುವುದು ಇದರ ಉದ್ದೇಶವಾಗಿದೆ.

Volvo Cyclist Detection And Auto Braking System

ಈ ಎಲ್ಲ ವಿಚಾರಗಳು ಪಾದಚಾರಿಗಳ ಬಗ್ಗೆಯಿದ್ದ ವೋಲ್ವೋ ಕಾಳಜಿಯನ್ನು ಎತ್ತಿ ತೋರಿಸುತ್ತಿದೆ.

English summary
Volvo continues its innovation in the field of automobile safety with yet another safety feature that it has announced. This new technology is basically an extension of the existing Pedestrian Detection system, which now includes cyclists as well.
Story first published: Monday, April 1, 2013, 9:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark