ಸಿಂಡಿಕೇಟ್ ಬ್ಯಾಂಕ್ ನಲ್ಲಿ ವಾಹನ ಸಾಲ ಪಡೆಯಬಹುದೇ?

Bank Loan
ವಾಮನ ಕುಡ್ವ ಮತ್ತು ವೈದ್ಯ ಡಾ.ಟಿ.ಎಂ.ಎ.ಪೈ ಜೊತೆಯಾಗಿ 8000 ರೂಪಾಯಿಗಳ ಬಂಡವಾಳವನ್ನು ತೊಡಗಿಸಿ ಆರಂಭಿಸಿದ ಸಿಂಡಿಕೇಟ್ ಬ್ಯಾಂಕ್ ಇಂದು ಪ್ರತಿದಿನ 2 ಕೋಟಿ ರು. ಸಂಗ್ರಹಿಸುತ್ತಿದೆಯಂತೆ. ನನಗೊಂದು ಬೈಕ್ ಖರೀದಿಸುವ ಯೋಚನೆಯಿತ್ತು. ಸಾಲ ಪಡೆಯಲು ಸಿಂಡಿಕೇಟ್ ಬ್ಯಾಂಕನ್ನು ವಿಚಾರಿಸಿದರೆ ಹೇಗೆ ಎಂದು ಯೋಚಿಸಿದೆ.

ಜಯನಗರ ಮೂರನೇ ಬ್ಲಾಕ್ ನಲ್ಲಿ ಬಸ್ಸಿನಿಂದ ಇಳಿದವನೇ ಅಲ್ಲೇ ಎದುರಿಗೆ ಕಂಡ ಸಿಂಡಿಕೇಟ್ ಬ್ಯಾಂಕ್ ಪ್ರವೇಶಿಸಿದೆ. ಮ್ಯಾನೆಜರ್ ಯಾರಲ್ಲೋ ಮಾತನಾಡುವುದರಲ್ಲಿ ಬ್ಯುಸಿಯಾಗಿದ್ದರು. ಯಾವುದೋ ಕೋಟಿ ರು. ಸಾಲದ ವಹಿವಾಟು ಆಗಿರಬಹುದು.

ನನ್ನ ಬೈಕ್ ಗೆ ಜಾಸ್ತಿಯೆಂದರೆ 75 ಸಾವಿರ ರು. ಸಾಲ ಬೇಕಾದೀತು. ಸುಮ್ಮನೆ ಮ್ಯಾನೆಜರ್ ಗೆ ಯಾಕೆ ತೊಂದರೆ ಕೊಡೋದು ಅಂತ ಅಲ್ಲೇ ನಿಂತೆ. ಅಲ್ಲೇ ಪಕ್ಕದಲ್ಲಿ ವಾಹನ ಸಾಲ ಅನ್ನೋ ಕೌಂಟರ್ ನಲ್ಲಿ ಮಹಿಳೆಯೊಬ್ಬರು ಫೈಲುಗಳ ನಡುವೆ ಮಗ್ನರಾಗಿದ್ದರು.

ನಾನು ವಿನೀತನಾಗಿ ಅವರ ಮುಂದೆ ನಿಂತು ಮೇಡಂ ಬೈಕ್ ಸಾಲ ಬೇಕಿತ್ತು ಅಂದೆ. ಮೂಗಿಗೆ ಜಾರಿದ್ದ ಕನ್ನಡಕವನ್ನು ಸರಿಪಡಿಸಿ "ಕುಳಿತುಕೊಳ್ಳಿ" ಎಂದರು. ನಾನು ಕುಳಿತುಕೊಂಡೆ. ಯಾವ ಬೈಕ್? ಡೀಲರನ್ನು ಸಂಪರ್ಕಿಸಿದ್ದೀರಾ? ಕೇಳಿದರು. ಇಲ್ಲ ಎಂದೆ.

ನೀವು ಬೈಕ್ ಶೋರೂಂ ಮೂಲಕ ಇಲ್ಲಿಗೆ ಬಂದರೆ ಒಳ್ಳೆಯದು ಎಂದರು. ಇಲ್ಲ ನನಗೆ ಈ ಬ್ಯಾಂಕಿನ ವಾಹನ ಸಾಲದ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ ಅಂದೆ. ಅವರ ಕನ್ನಡಕ ಮತ್ತೆ ಮೂಗಿಗೆ ಜಾರೀತು. ಅದನ್ನು ಅವರು ಸರಿಪಡಿಸಿಕೊಳ್ಳುವ ಗೋಜಿಗೆ ಹೋಗದೆ ನನಗೆ ಬೇಕಿದ್ದ ಮಾಹಿತಿ ನೀಡಿದರು. ಇನ್ನಷ್ಟು ಮಾಹಿತಿಯನ್ನು ಸಿಂಡಿಕೇಟಿನ ಇತರ ಬ್ರಾಂಚ್ ಗಳಿಗೆ ಕರೆ ಮಾಡಿ ಪಡೆದುಕೊಂಡೆ.

ಸಿಂಡಿಕೇಟ್ ಬ್ಯಾಂಕಿನಲ್ಲಿ ದ್ವಿಚಕ್ರ ವಾಹನಕ್ಕೆ ಶೇಕಡಾ 13.5 ಬಡ್ಡಿದರದಲ್ಲಿ ಸಾಲ ನೀಡುತ್ತಾರೆ. ನಾಲ್ಕು ಚಕ್ರದ ವಾಹನಗಳಿಗಾದರೆ ಶೇ. 14 ಬಡ್ಡಿದರವಿದೆ. ಹಾಗಂತ ನೀವು ಖಾಲಿ ಕಿಸೆಯಲ್ಲಿ ಹೋಗಿ ವಾಹನ ಖರೀದಿಸಲು ಸಾಧ್ಯವಿಲ್ಲ. ವಾಹನದ ಆನ್ ರೋಡ್ ದರದ ಶೇಕಡಾ 25ರಷ್ಟನ್ನು ನೀವು ಪಾವತಿಸಬೇಕು. ಉಳಿದ ಶೇಕಡಾ 75ನ್ನು ಬ್ಯಾಂಕ್ ಸಾಲದ ಮೂಲಕ ಪಾವತಿಸಬಹುದು.

ನಾಲ್ಕು ಚಕ್ರದ ವಾಹನ ಖರೀದಿಸುವರ ವಾರ್ಷಿಕ ಆದಾಯ ಒಂದು ಲಕ್ಷ ರು. ಮತ್ತು ದ್ವಿಚಕ್ರ ವಾಹನ ಖರೀದಿಸುವರ ವಾರ್ಷಿಕ ಆದಾಯ 50 ಸಾವಿರ ರು. ಇರಬೇಕಂತೆ. ನಿಮ್ಮ ಆದಾಯ ಅಷ್ಟಿಲ್ಲವೆಂದರೆ ಚಿಂತೆ ಮಾಡಬೇಕಿಲ್ಲ. ಯಾಕೆಂದರೆ ನಿಮ್ಮ ಹೆಂಡತಿ/ ಮಕ್ಕಳ ಆದಾಯವನ್ನೂ ಸೇರಿಸುವ ಅವಕಾಶವಿದೆ.

ಹಳೆಯ ಅಥವಾ ಹೊಸ ಕಾರಿಗಾಗಿ ಸಾಲ ಪಡೆದರೆ ಅದನ್ನು 72 ಅಥವಾ 48 ತಿಂಗಳಲ್ಲಿ ಮರು ಪಾವತಿಸಲು ಅವಕಾಶವಿದೆ. ಆದರೆ ಬೈಕು, ಸ್ಕೂಟರ್ ಸಾಲಗಳನ್ನು 60 ತಿಂಗಳಲ್ಲಿ ಪಾವತಿಸಬೇಕಂತೆ. ಸಾಲ ಪಡೆಯುವರು ಸ್ಯಾಲರಿ ಸರ್ಟಿಫಿಕೇಟ್ ಅಥವಾ ಇನ್ನಿತರ ಆದಾಯ ದಾಖಲೆಗಳನ್ನು ನೀಡಬೇಕು. ಜೊತೆಗೆ ಥರ್ಡ್ ಪಾರ್ಟಿ ಗ್ಯಾರಂಟಿ ನೀಡಬೇಕಿದೆ.

ಇನ್ನಷ್ಟು ಬ್ಯಾಂಕನ್ನು ಸುತ್ತಾಡಬೇಕಿದೆ. ಹೀಗಾಗಿ ಸದ್ಯ ಸಿಂಡಿಕೇಟ್ ಬ್ಯಾಂಕಿನ ವಾಹನ ಸಾಲದ ಇಷ್ಟು ಮಾಹಿತಿ ಸಾಕು ಅನಿಸುತ್ತದೆ. ಉಳಿದ ಬ್ಯಾಂಕುಗಳ ಸಾಲದೊಂದಿಗೆ ಕಂಪೇರ್ ಮಾಡುವ ಸಂದರ್ಭದಲ್ಲಿ ಈ ಬ್ಯಾಂಕಿನ್ ವಾಹನ ಸಾಲದ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಬಹುದು.

More from DriveSpark

Article Published On: Tuesday, July 19, 2011, 11:27 [IST]
English summary
Vehicle loan from Banks. How Syndicate Bank offers financial assistance? Check, Rate of interest, repayment schedule, security requirements etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+