ಕಾರ್ಪ್ ಬ್ಯಾಂಕ್ ನಲ್ಲಿ ವಾಹನ ಸಾಲ ಪಡೆಯುವ ಮುನ್ನ ಓದಿ

ಸದ್ಯ ವಾಹನ ಖರೀದಿಸಬೇಕೆಂದು ಬಯಸುವರಿಗೆ ಕಾರ್ಪೊರೇಷನ್ ಬ್ಯಾಂಕಿನಲ್ಲಿ ವಿಶೇಷ ಆಫರ್ ಇದೆ. ವಾಹನ ಸಾಲ ಪಡೆಯುವರಿಗೆ ಮುಂದಿನ ಸೆಪ್ಟಂಬರ್ ತಿಂಗಳವರೆಗೆ ಯಾವುದೇ "ಪ್ರೊಸೆಸಿಂಗ್ ಚಾರ್ಜ್" ವಿಧಿಸುವುದಿಲ್ಲವಂತೆ!
ಎಲ್ಲಾ ಬ್ಯಾಂಕುಗಳೂ ಸಾಲ ನೀಡುತ್ತವೆ. ಆದರೆ ಅಲ್ಲಿ ಅವರು ವಿಧಿಸುವ ಬಡ್ಡಿದರಗಳನ್ನು ಸಾಲಗಾರ ಪ್ರಮುಖವಾಗಿ ಗಮನಕ್ಕೆ ತೆಗೆದುಕೊಳ್ಳಬೇಕು. ಬಡ್ಡಿ ವಿಷ್ಯದಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ಹೋಲಿಸಿದರೆ ಕಾರ್ಪ್ ಬ್ಯಾಂಕ್ ಪರವಾಗಿಲ್ಲ ಅನಿಸುತ್ತದೆ.
ಕಾರ್ಪೊರೇಷನ್ ಬ್ಯಾಂಕಿನಲ್ಲಿ 3 ಲಕ್ಷ ರು.ವರೆಗಿನ ಸಾಲಗಳಿಗೆ ಶೇ. 11.85 ಬಡ್ಡಿದರವಿದೆ. ಉಳಿದಂತೆ 3ರಿಂದ5 ಲಕ್ಷ ರು. ಸಾಲಕ್ಕೆ ಶೇ. 12.35ರಷ್ಟು ಮತ್ತು 5-7 ಲಕ್ಷ ರು.ವರೆಗಿನ ಸಾಲಕ್ಕೆ ಶೇಕಡಾ 12.85ರಷ್ಟು ಬಡ್ಡಿದರ ವಿಧಿಸಲಾಗುತ್ತಿದೆ. ಮತ್ತೊಂದು ಆಫರ್ ಎಂದರೆ ಈ ವರ್ಷ ಆಸ್ತಿ ದಂಡ ಅಥವಾ ಪ್ರಾಪರ್ಟಿ ಪೆನಾಲ್ಟಿ ವಿಧಿಸುವುದಿಲ್ಲವಂತೆ!
ಡೌನ್ ಪೇಮೆಂಟ್ ಎಷ್ಟು ಎಂಬ ಪ್ರಶ್ನೆಗೆ ಉತ್ತರವೂ ಆಶಾದಾಯಕವಾಗಿದೆ. ಜಯನಗರದ ಕಾರ್ಪ್ ಬ್ಯಾಂಕಿನಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ಮಾರ್ಜಿನ್ ನ ಶೇಕಡಾ 15ರಷ್ಟನ್ನು ಮೊದಲು ಪಾವತಿಸಬೇಕು. ದ್ವಿಚಕ್ರ ವಾಹನ ಸಾಲಕ್ಕಾದರೆ ಶೇಕಡ 20ರಷ್ಟು ಡೌನ್ ಪೇಮೆಂಟ್ ಮಾಡಬೇಕು.
ಆಫ್ ದಿ ರೆಕಾರ್ಡ್: ವಾಹನ ಸಾಲ ಖರೀದಿಸುವಾಗ ಭದ್ರತೆಯ ವಿಷಯ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಭು ಹೇಳುವ ಪ್ರಕಾರ ಈ ಬ್ಯಾಂಕಿನಲ್ಲಿ ಕೇಸ್ ಮೇಲೆ ಭದ್ರತೆಯ ವಿಷಯ ಅವಲಂಬಿಸಿರುತ್ತದೆ. ಅಂದ್ರೆ ಕೆಲವರು ಇವತ್ತು ಕಂಪನಿಯೊಂದಕ್ಕೆ ನೇಮಕವಾಗುತ್ತಾರೆ. ನಾಳೆ ಸಾಲ ಪಡೆಯುತ್ತಾರೆ. ನಾಡಿದ್ದು ಕಂಪನಿ ಬಿಡುತ್ತಾರೆ.
ಇಂತವರಿಗೆ ಸಾಲ ನೀಡಿದರೆ ಮತ್ತೆ ಅವರನ್ನು ಹುಡುಕಿಕೊಂಡು ಹೋಗುವುದು, ಅವರು ತಿಳಿಸಿರುವ ಅಡ್ರೆಸ್ ನಲ್ಲಿ ಸಾಲಗಾರ ಇಲ್ಲದಿರುವುದು.. ಇವೆಲ್ಲ ಬ್ಯಾಂಕಿಗೆ ಕಿರಿಕಿರಿ ವಿಷಯಗಳು. ಕಂತು ಪಾವತಿಸದವರ ಬೈಕ್ ಜಪ್ತಿ ಮಾಡುವ ವೇಳೆಗೆ ಬೈಕಿಗೂ ಸಾಕಷ್ಟು ಹಾನಿಯಾಗಿರುತ್ತದೆ.
ಈ ಕಾರಣಕ್ಕಾಗಿ ಜಯನಗರದ ಕಾರ್ಪ್ ಬ್ಯಾಂಕಿನ ಜನರಲ್ ಮ್ಯಾನೆಜರ್ ದ್ವಿಚಕ್ರ ವಾಹನ ಸಾಲದ ಕುರಿತು ಹೆಚ್ಚು ಆಸಕ್ತಿ ತೋರಿಸಿಲ್ಲ. ಅವರಿಗೆ ಬೈಕ್ ಸಾಲದ ಕುರಿತು "ನೋ ಇಂಟ್ರೆಸ್ಟ್". ಹೀಗಾಗಿ ಕಾರು, ಜೀಪು ಖರೀದಿಗೆ ಸಾಲ ಬಯಸುವರು ಜಯನಗರ ಕಾರ್ಪ್ ಬ್ಯಾಂಕಿಗೆ ಹೋದರೆ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ಖಂಡಿತಾ ಸಿಗಲಿದೆ.


Click it and Unblock the Notifications








