ಬುಗಾಟಿ ಸ್ಪೀಡಲ್ಲಿ HDFC ವಾಹನ ಸಾಲ ಪಡೆಯಬಹುದಂತೆ!

ಇಲ್ಲಿ ಹಲವು ಆಯ್ಕೆಗಳಲ್ಲಿ ವಾಹನ ಸಾಲ ದೊರಕುತ್ತಿದೆ. ಬ್ಯಾಂಕ್ ಹಳೆಯ ಮತ್ತು ಹೊಸ ಕಾರು ಖರೀದಿಗೆ ಸಾಲ ನೀಡುತ್ತದೆ. ಬ್ಯಾಂಕಿನ ವಾಹನ ಸಾಲದ ವಿಭಾಗದ ಎಕ್ಸಿಕ್ಯೂಟಿವ್ ಒಬ್ಬರ ಪ್ರಕಾರ ಹೊಸ ಕಾರಿಗೆ ಶೇಕಡಾ 11 ರಷ್ಟು ಮತ್ತು ಹಳೆಯ ಕಾರಿಗೆ ಶೇಕಡಾ 15 ರಷ್ಟು ಬಡ್ಡಿದರ ಇದೆಯಂತೆ. ಶೇಕಡಾ ನೂರರಷ್ಟು ಫಂಡ್ ನೀಡುವ ಸಾಲ ಕೂಡ ಇದೆಯಂತೆ. ಅದಕ್ಕೆ ಅದರದ್ದೇ ಆದ ಷರತ್ತುಗಳಿವೆ. ಹೀಗಾಗಿ ಈ ಕುರಿತು ಹತ್ತಿರದ ಬ್ಯಾಂಕನ್ನು ಸಂಪರ್ಕಿಸಿ ಎನ್ನುತ್ತಾರೆ.
ನಿಮ್ಮ ವಾರ್ಷಿಕ ವೇತನದ ಮೂರು ಪಟ್ಟು ಮತ್ತು ವಾರ್ಷಿಕ ಆದಾಯದ 6 ಪಟ್ಟು ಸಾಲ ದೊರಕುತ್ತದಂತೆ! ಹಳೆಯ ಕಾರಿಗೂ ಇದೇ ನೀತಿ ಎಂದು ಎಚ್ ಡಿಎಫ್ಸಿ ಬ್ಯಾಂಕಿನ ಉದ್ಯೋಗಿಯೊಬ್ಬರು ಹೇಳುತ್ತಾರೆ.
ಲಾಲ್ ಬಾಗ್ ಸಮೀಪದ ಎಚ್ ಡಿಎಫ್ ಸಿ ಬ್ಯಾಂಕಿನ ಜನರಲ್ ಮ್ಯಾನೆಜರ್ "ಬ್ಯಾಂಕಿನ ವಾಹನ ಸಾಲ"ದ ವಿಶೇಷತೆಯ ಕುರಿತು ಹೆಚ್ಚು ಕೊರೆದರು. ವಾಹನ ಎಕ್ಸ್ ಚೇಂಜ್ ಮತ್ತು ಕಾರು ಚೆಕಪ್ ಸೌಲಭ್ಯವನ್ನು ಬ್ಯಾಂಕ್ ಆಗಾಗ ನೀಡುತ್ತದಂತೆ. ಜೊತೆಗೆ ಎಚ್ ಡಿಎಫ್ಸಿ ಎರ್ಗೊ ಲಿಮಿಟೆಡ್ ನಿಮ್ಮ ಕಾರು ಬೈಕುಗಳಿಗೆ ವಿಮಾ ಸೌಲಭ್ಯವನ್ನು ನೀಡುತ್ತದಂತೆ. ನಮ್ಮಲ್ಲಿ ವಾಹನ ಸಾಲ ಪಡೆಯುವುದು ತುಂಬಾ ಸುಲಭ ಅಂತ ಅವರು ಹೇಳುತ್ತಾರೆ.
ವಾಹನ ಸಾಲ ಪಡೆಯುವರಿಗೆ ಕನಿಷ್ಟ 21 ಗರಿಷ್ಠ 58 ವರ್ಷ ವಯಸ್ಸಾಗಿರಬೇಕು. 2 ವರ್ಷಗಳ ಕಾಲದ ಉದ್ಯೋಗದ ಅನುಭವ, ಪಾನ್ ಕಾರ್ಡ್, ಪಾಸ್ ಪೊರ್ಟ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ಹಲವು ದಾಖಲೆಗಳನ್ನು ನಿಮ್ಮಿಂದ ಬ್ಯಾಂಕ್ ಬಯಸುತ್ತದಂತೆ. ಆನ್ ಲೈನ್ ನಲ್ಲಿ "ನ್ಯೂ ಕಾರ್ ಬಜಾರ್" ಮೂಲಕವೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನಿಮ್ಮ ಟೆಲಿಫೋನ್ ನಂಬರ್ ಅಲ್ಲಿ ಎಂಟರ್ ಮಾಡಿದರೆ ಸಾಕು ಅವರೇ ನಿಮಗೆ ಕರೆ ಮಾಡಿ ಸಾಲ ತೆಗೆದುಕೊಳ್ಳಿ ಸಾರ್/ ಮೇಡಂ ಅಂತ ಕಾಡಿಸಬಹುದು.
ಎಚ್ ಡಿಎಫ್ ಸಿ ಬ್ಯಾಂಕಿನಲ್ಲಿ ಬೈಕ್ ಸಾಲ ಪಡೆದ ಸುದರ್ಶನ ಹೇಳುವ ಪ್ರಕಾರ ಅಲ್ಲಿ ಬೇಗ ಸಾಲ ಸಿಗುತ್ತದಂತೆ. ಬುಗಾಟಿ ಸ್ಪೀಡಲ್ಲಿ ವಾಹನ ಸಾಲ ಬೇಕಾದರೆ ಎಚ್ ಡಿಎಫ್ಸಿಗೆ ಹೋಗಬಹುದು. ಷರತ್ತುಗಳು ಅನ್ವಯಿಸಬಹುದು!


Click it and Unblock the Notifications








