ಕಾರು ಆಯ್ಕೆಗೂ ಹೆಂಡತಿ ಆಯ್ಕೆಗೂ ಇರುವ ವ್ಯತ್ಯಾಸ?

ಕಾರು ಖರೀದಿಯೂ ಹಾಗೆಯೇ. ಮೊದಲ ನೋಟಕ್ಕೆ ಇಷ್ಟವಾದ ಕಾರನ್ನು ಖರೀದಿಸಬಹುದು. ಯಾರೋ ಸೂಚಿಸಿದ ಕಾರನ್ನು ಖರೀದಿಸಬಹುದು. ಅಥವಾ ಎಲ್ಲಾ ಕಾರನ್ನು ಪರಿಶೀಲಿಸಿ ಒಂದು ಉತ್ತಮ ಕಾರು ಖರೀದಿಸಬಹುದು. ಅಥವಾ ಆ ಕಾರು ಬೇಡ, ಈ ಕಾರು ಬೇಡ ಅಂತ ಹೇಳಿ ಕೊನೆಗೆ ಯಾವುದೋ ಡಬ್ಬಾ ಕಾರು ಖರೀದಿಸಬಹುದು.
ಭಾವಿಪತಿ/ಪತ್ನಿ ಆಯ್ಕೆಯಂತೆ ಕಾರು ಆಯ್ಕೆಯಲ್ಲೂ ಅಂತಿಮವಾಗಿ ನೀವೇ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಆಮೇಲೆ ವ್ಯಥೆಯಾದೀತು. ಹಣಕಾಸು ವಿಷಯದಲ್ಲೂ ಅಷ್ಟೇ. ಯಾರೋ ಶ್ರೀಮಂತ ಸ್ನೇಹಿತ ಹೇಳಿದನೆಂದು ಭಾರಿ ಮೊತ್ತ ನೀಡಿ ಕಾರು ಖರೀದಿಸದಿರಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ.
ಒಂದೇ ಕಾರನ್ನು ಮನಸ್ಸಿನಲ್ಲಿಟ್ಟುಕೊಳ್ಳದಿರಿ. ಕನಿಷ್ಠ ಎರಡು ಮೂರು ಕಾರನ್ನು ಗಮನದಲ್ಲಿಟ್ಟುಕೊಳ್ಳಿ. ಆ ಮೂರು ಕಾರುಗಳನ್ನು ಟೆಸ್ಟ್ ಡ್ರೈವ್ ಮಾಡಿನೋಡಿ. ಚಾಲನೆಯಲ್ಲಿ ಅವಸರವೇ ಅಪಘಾತಕ್ಕೆ ಕಾರಣ. ಖರೀದಿಯಲ್ಲಿ ಅವಸರವೇ ಅನಾಹುತಕ್ಕೆ ಕಾರಣವಾಗಬಹುದು.


Click it and Unblock the Notifications








