ಸೂಪರ್ ಬೈಕ್ ಭಾರತದ ರಸ್ತೆಗೆ ಸೂಕ್ತವೇ? ಒಂದು ಚರ್ಚೆ

ಹೈದರಾಬಾದಿನಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಪುತ್ರ ರೇಸ್ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂದಹಾಗೇ ಅಜರುದ್ದೀನ್ ಪುತ್ರ ಅಯಾಜುದ್ದೀನ್ ಬಳಸುತ್ತಿದ್ದದ್ದು ಸುಜುಕಿ ಜಿಎಸ್ಎಕ್ಸ್-ಆರ್1000 ಸೂಪರ್ ಬೈಕ್.

ಈ ಅಪಘಾತ ಭಾರತದ ರಸ್ತೆಗೆ ಸೂಪರ್ ಬೈಕುಗಳು ಎಷ್ಟು ಸೂಕ್ತ ಎಂಬ ಚರ್ಚೆಯನ್ನೇ ಹುಟ್ಟುಹಾಕಿದೆ. ಹೆಸರೇ ಹೇಳುವಂತೆ ಈ ಬೈಕುಗಳು ರಾಕ್ಷಸ ಸಿಸಿ ಹೊಂದಿವೆ. ಸಹಜವಾಗಿಯೇ ಯಮವೇಗ ಇದರ ಪ್ರಮುಖ ಫೀಚರ್. ಭಾರತದ ರಸ್ತೆಯಲ್ಲಿ ಯಮವೇಗವೇ ಯಮಲೋಕಕ್ಕೆ ದಾರಿ ಅನ್ನೋದನ್ನು ಮರೆಯುವಂತ್ತಿಲ್ಲ.

ಸೂಪರ್ ಬೈಕ್ ಅಂದರೆ 500ಸಿಸಿಗಿಂತ ಜಾಸ್ತಿ ಶಕ್ತಿಶಾಲಿ ಬೈಕುಗಳಾಗಿವೆ. ವಾಹನ ಲೋಕದಲ್ಲಿ ಇವು ಭಿನ್ನ ದರ್ಜೆಯ ಮೆಷಿನ್ ಗಳಾಗಿವೆ. ಅಂದ್ರೆ ಟಾಪ್ ಎಂಡ್ ಕಾರುಗಳಂತೆ ಇದರ ದಾರಿಯೇ ಬೇರೆ. ಸೂಪರ್ ಬೈಕ್ ಸವಾರಿಗೆ ವಿಶೇಷ ಪರಿಣತಿ, ಕೌಶಲ ಅಗತ್ಯ ಅನ್ನೋದನ್ನು ವಾಹನ ವಿಶ್ಲೇಷಕರು ಒತ್ತಿ ಹೇಳುತ್ತಾರೆ.

ಬೆಂಗಳೂರಿನಲ್ಲೂ ಕೆಲವು ಸೂಪರ್ ಬೈಕ್ ಅಪಘಾತವಾಗಿವೆ. ಇಲ್ಲಿನವರು ಸೂಪರ್ ಬೈಕ್ ಶೋಕಿ ಹತ್ತಿಸಿಕೊಂಡು ಕೆಲವು ವರ್ಷಗಳು ಕಳೆದಿವೆ. ದರ್ಶನ್, ಸುದೀಪ್, ಲೂಸ್ ಮಾದ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಕನ್ನಡ ಸಿನಿಮಾ ತಾರೆಯರಿಗೂ ಸೂಪರ್ ಬೈಕೆಂದರೆ ಅಚ್ಚುಮೆಚ್ಚು.

ಕಾರುರಾಲಿಗಳಲ್ಲಿ ಏಷ್ಯಾದಲ್ಲೇ ಹೆಸರು ವಾಸಿಯಾದ ಅಂತರ್ ರಾಷ್ಟ್ರೀಯ ಕಾರು ರಾಲಿ ಡ್ರೈವರ್ ಗೌರವ್ ಗ್ರಿಲ್ ಸೂಪರ್ ಬೈಕ್ ಅನುಭವ ಇದೆ. ಅಂತಹ ಶಕ್ತಿಶಾಲಿ ಮೆಷಿನ್ ರೈಡ್ ಮಾಡುವಾಗಿನ ಅಪಾಯ ಅವರಿಗೆ ಚೆನ್ನಾಗಿಯೇ ಗೊತ್ತಿದೆ.

"ಸೂಪರ್ ಬೈಕೆಂದರೆ ಸುಮಾರು ಗಂಟೆಗೆ 300 ಕಿ.ಮೀ. ವೇಗದಲ್ಲಿ ಹೋಗಬಹುದಾದ ಬೈಕ್. ಹೆಚ್ಚಿನ ರೈಡರಿಗೂ ಆ ವೇಗದಲ್ಲಿ ಹೋಗುವ ಆವೇಗ ಇರುತ್ತದೆ. ಅಷ್ಟು ವೇಗದಲ್ಲಿ ಹೋಗುವುದು ಕಷ್ಟವೂ ಅಲ್ಲ. ಆದರೆ ಅಷ್ಟು ವೇಗದಲ್ಲಿರುವ ಬೈಕನ್ನು ತಕ್ಷಣ ನಿಲ್ಲಿಸುವುದು ಹೇಗೆ? ಅನ್ನೋದೇ ನಿಜವಾದ ಸಮಸ್ಯೆ" ಎಂದು ಗ್ರಿಲ್ ಹೇಳುತ್ತಾರೆ.

ಉದಾಹರಣೆಗೆ ನೈಸ್ ರಸ್ತೆಯಲ್ಲಿ ಸೂಪರ್ ಬೈಕಿನಲ್ಲಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ರೈಡ್ ಮಾಡಿದಾಗ ತಕ್ಷಣ ಎದುರಿಗೆ ಯಾರಾದರೂ ಅಡ್ಡಬಂದರೆ, ತಕ್ಷಣ ನಿಲ್ಲಿಸಬೇಕಾದ ಸಂದರ್ಭ ಬಂದರೆ, ಗಕ್ಕನೆ ಬ್ರೇಕ್ ಹಾಕುವುದು ಸಹಜ. ಆದರೆ ಅಷ್ಟು ವೇಗದಲ್ಲಿರುವಾಗ ಬ್ರೇಕ್ ಹಾಕಿದರೆ ಬೈಕ್ ಸ್ಕಿಡ್ ಆಗುತ್ತದೆ. ಇದು ಸೂಪರ್ ಬೈಕ್ ಗಳ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.

"ಸೂಪರ್ ಬೈಕ್ ಅಂದ್ರೆ ಪಾಕೆಟ್ ರಾಕೆಟ್. ಆ ಬೈಕ್ ವೇಗದಲ್ಲಿ ಇದ್ದಾಗ ಹೇಗೆ ನಿಲ್ಲಿಸುವುದು ಅನ್ನೋದು ಗೊತ್ತಿಲ್ಲದಿದ್ದರೆ ಎಲ್ಲವೂ ಮಬ್ಬು ಕಣ್ಣಲ್ಲಿ ಅಂತ್ಯವಾಗುತ್ತದೆ" ಎಂದು ಗಿಲ್ ಹೇಳುತ್ತಾರೆ.

ಸೂಪರ್ ಬೈಕ್ ಖರೀದಿಸಲು ಬೇಕಾಬಿಟ್ಟಿ ಪರವಾನಿಗೆ ನೀಡಲಾಗುತ್ತದೆ. ಅದು ತಪ್ಪಬೇಕು. ಯಾಕೆಂದರೆ ಈಗ 1,200 ಸಿಸಿ ಬೈಕ್ ಖರೀದಿಸುವುದು ತುಂಬಾ ಸುಲಭ. ಇದಕ್ಕೆ ಕಠಿಣ ಪರವಾನಿಗೆ ನಿಯಮ ಬರಬೇಕಿದೆ ಎಂಬ ಅಭಿಪ್ರಾಯವೂ ಸಾರ್ವತಿಕವಾಗಿ ಕೇಳಿಬರುತ್ತಿದೆ.

"ಇಂತಹ ಬೈಕುಗಳು ಪ್ರತಿಗಂಟೆಗೆ 300 ಕಿ.ಮೀ. ವೇಗದಲ್ಲಿ ಸಾಗಲು ಸೂಕ್ತವಾಗುವಂತೆ ವಿನ್ಯಾಸ ಮಾಡಿರುವುದರಿಂದ ಭಾರತದ ರಸ್ತೆಗೆ ಸೂಕ್ತವಲ್ಲ. ಸೂಪರ್ ಬೈಕನ್ನು ಹ್ಯಾಂಡಲ್ ಮಾಡಲು ವಿಶೇಷ ಪರಿಣತಿ ಅಗತ್ಯ. ಅದಕ್ಕಾಗಿ ಪರವಾನಿಗೆ ನೀಡುವಾಗ ಪ್ರಾಧಿಕಾರಗಳು ಈ ಕುರಿತು ಗಂಭೀರವಾಗಿ ಚಿಂತಿಸುವುದು ಒಳಿತು" ಎಂದು ಆಟೋಒನ್ಇಂಡಿಯಾದ ಚೇತನ್ ಹೇಳುತ್ತಾರೆ.

More from DriveSpark

Article Published On: Monday, September 12, 2011, 13:17 [IST]
English summary
The recent accident involving former cricketer Azzaruddin's son highlights the need to understand the necessity of super bikes on Indian roads. These Super bikes are designed to reach speeds of over 300 kilometers per hour but the Indian roads do not support such speeds. Further one needs to have sufficient skills and experience to handle super bikes. It is essential that authorities enforce licensing for drivers of super bikes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+