ರಸ್ತೆಯಲ್ಲಿ ನೀವು ಪಾಲಿಸಬೇಕಾದ ಮೂಲಭೂತ ಅಂಶಗಳು

By Nagaraja

ವಾಹನ ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ಪಾಲನೆಯು ಬಹುದೊಡ್ಡ ಪಾತ್ರ ವಹಿಸುತ್ತದೆ. 'ಅವಸರವೇ ಅಪಘಾತಕ್ಕೆ ಕಾರಣ' ಎಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದರೂ ಯಾವುದೋ ಜೋಶಲ್ಲಿ ಇಂದಿನ ಯುವ ಸಮಾಜ ಎಡವಟ್ಟು ಮಾಡಿಬಿಡುತ್ತಾರೆ.

ಸಂಚಾರ ರಸ್ತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಚಾಲಕರ ಕರ್ತವ್ಯವಾಗಿರುತ್ತದೆ. ಇನ್ನೊಬ್ಬರ ತಪ್ಪುಗಳನ್ನು ಬೊಟ್ಟು ಮಾಡುವ ಕೆಟ್ಟ ಚಾಳಿಯನ್ನು ಬಿಟ್ಟುಬಿಟ್ಟು ಹೇಗೆ ಸುರಕ್ಷಿತ ಚಾಲನೆ ಮಾಡಬಹುದು ಎಂಬುದರ ಕುರಿತು ಒಂದೆರಡು ಬಾರಿ ಯೋಚಿಸಿದರೆ ಒಳಿತು.

ಹಲವಾರು ಬಾರಿ ಸಣ್ಣಪುಟ್ಟ ತಪ್ಪುಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತದೆ. ಹಾಗಾಗಿ ಡ್ರೈವ್‌ಸ್ಪಾರ್ಕ್ ಓದುಗರು ಅರಿತುಕೊಳ್ಳಬೇಕಾಗಿರುವ ಮೂಲಭೂತ ರಸ್ತೆ ನಿಯಮಗಳ ಬಗ್ಗೆ ನಾವಿಂದು ಪಟ್ಟಿ ಪಡಿಮಾಡಿಕೊಡಲಿದ್ದೇವೆ. ಇದು ನಿಮ್ಮ ನೆರವಿಗೆ ಹಾಗೂ ಭವಿಷ್ಯದಲ್ಲಿ ನಿಮ್ಮ ಚಾಲನಾ ಕೌಶಲ್ಯ ವೃದ್ಧಿಸುವಲ್ಲಿ ನೆರವಾಗಲಿದೆಯೆಂಬ ಭರವಸೆ ನಮ್ಮಲ್ಲಿದೆ.

ರಸ್ತೆಯಲ್ಲಿ ನೀವು ಪಾಲಿಸಬೇಕಾದ ಮೂಲಭೂತ ಅಂಶಗಳು

ಮುಂದಿನ ಸ್ಲೈಡರ್ ಕ್ಲಿಕ್ಕಿಸುತ್ತಾ ನೀವು ಅನುಸರಿಬೇಕಾದ ಮೂಲಭೂತ ರಸ್ತೆ ನಿಯಮಗಳ ಬಗ್ಗೆ ತಿಳಿದುಕೊಳ್ಳಿರಿ...

ಸರಿಯಾದ ಮಾರ್ಗ ಅನುಸರಿಸಿ

ಸರಿಯಾದ ಮಾರ್ಗ ಅನುಸರಿಸಿ

ರಸ್ತೆಯಲ್ಲಿ ಸಂಚರಿಸುವಾಗ ಎಡ ದಿಶೆಯನ್ನು ಪಾಲಿಸಿರಿ. ಇನ್ನು ವಾಹನಗಳು ಎರಡು ಬದಿಗಳಿಂದ ಸಂಚರಿಸುವ ರಸ್ತೆಗಳಲ್ಲಿ ಎದುರುಗಡೆಯಿಂದ ಬರುವ ವಾಹನಗಳಿಗೆ ಜಾಗ ಅನುವು ಮಾಡಿಕೊಡಿ. ಸಾಕಷ್ಟು ಸ್ಥಳಾವಕಾಶವಿದ್ದಲ್ಲಿ ಮಾತ್ರ ಓವರ್‌ಟೇಕ್ ಗೋಜಿಗೆ ಹೋಗಿರಿ.

ಇಂಡಿಕೇಟರ್ ಬಳಕೆ

ಇಂಡಿಕೇಟರ್ ಬಳಕೆ

ಇನ್ನು ತಿರುವಿನ ಸಂದರ್ಭದಲ್ಲಿ ಬಲ ಅಥವಾ ಎಡ ಇಂಡಿಕೇಟರುಗಳನ್ನು ಸಂದರ್ಭಕ್ಕಾನುಸಾರವಾಗಿ ಬಳಕೆ ಮಾಡಿರಿ. ಇದರಿಂದ ಹಿಂದಿನಿಂದ ಬರುವ ವಾಹನಗಳು ನೀವು ಪಡೆದುಕೊಳ್ಳುವ ತಿರುವಿನ ಬಗ್ಗೆ ಎಚ್ಚರವಾಗಲಿದೆ.

ಸೂಚನಾ ಫಲಕ

ಸೂಚನಾ ಫಲಕ

ರಸ್ತೆ ಚಿಹ್ನೆಗಳಲ್ಲಿ ಮೂರು ವಿಧ. ಅವುಗಳೆಂದರೆ ಕಡ್ಡಾಯ, ಎಚ್ಚರಿಕಾ ಮತ್ತು ಮಾಹಿತಿ ಚಿಹ್ನೆ. ರಸ್ತೆಯ ಎಡಭಾಗಗಳಲ್ಲಿ ಲಗತ್ತಿಸಲಾಗಿರುವ ಈ ಎಲ್ಲ ಚಿಹ್ನೆಗಳನ್ನು ಗಮನವಿಟ್ಟು ಪಾಲಿಸಿರಿ...

ಅನಾವಶ್ಯಕ ಹಾರ್ನ್ ಬಳಕೆ ಬೇಡ

ಅನಾವಶ್ಯಕ ಹಾರ್ನ್ ಬಳಕೆ ಬೇಡ

ಪಾರ್ಕಿಂಗ್, ಸಿಗ್ನಲ್‌ಗಳಲ್ಲಿ ಅಥವಾ ವಾಹನ ಸಂಚರಿಸುತ್ತಿರುವ ಅನಾವಶ್ಯಕ ಹಾರ್ನ್ ಬಳಕೆ ಬೇಡ. ಇದರಿಂದ ಶಬ್ದ ಮಾಲಿನ್ಯವನ್ನು ತಪ್ಪಿಸಬಹುದು.

ಹೆಲ್ಮೆಟ್ ಧರಿಸಿ

ಹೆಲ್ಮೆಟ್ ಧರಿಸಿ

ಇನ್ನು ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದು ನಿಯಮ ಮಾತ್ರವಲ್ಲ ನಿಮ್ಮ ಜೀವರಕ್ಷಕ ಎಂಬುದನ್ನು ನೆನಪಿನ್ನಲ್ಲಿಟ್ಟುಕೊಳ್ಳಿ.

ಘನ ವಾಹನಗಳಿಂದ ಅಂತರ ಪಾಲಿಸಿ...

ಘನ ವಾಹನಗಳಿಂದ ಅಂತರ ಪಾಲಿಸಿ...

ಇನ್ನು 'ಗೀವ್ ರೆಸ್ಪೆಕ್ಟ್ ಟೇಕ್ ರೆಸ್ಪೆಕ್ಟ್' ಎಂಬ ಆಂಗ್ಲ ಭಾಷೆಯ ಸಿದ್ಧಾಂತದ ಪ್ರಕಾರ, ಘನ ವಾಹನಗಳಿಗೆ ಗೌರವ ಕೊಟ್ಟು ಮುಂದೆ ಸಾಗಿರಿ..

ಜಿಬ್ರಾ ಕ್ರಾಸಿಂಗ್

ಜಿಬ್ರಾ ಕ್ರಾಸಿಂಗ್

ಯಾವುದೇ ಕಾರಣಕ್ಕೂ ಜಿಬ್ರಾ ಕ್ರಾಸಿಂಗ್ ಮೇಲೆ ನಿಮ್ಮ ವಾಹನಗಳನ್ನು ನಿಲ್ಲಿಸದಿರಿ. ಇದು ಪಾದಚಾರಿಗಳಿಗೆ ರಸ್ತೆ ದಾಟಲಿರುವ ವ್ಯವಸ್ಥೆಯಾಗಿರುತ್ತದೆ.

ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಬೇಡ

ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಬೇಡ

ತರಾತುರಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುವ ಕೆಟ್ಟ ಚಟವನ್ನು ಬಿಟ್ಟುಬಿಡಿ. ಇದರಿಂದ ಪೊಲೀಸರಿಗೆ ಕೆಲಸವಾದಿತು.

ಗ್ರೀನ್ ಸಿಗ್ನಲ್

ಗ್ರೀನ್ ಸಿಗ್ನಲ್

ರಸ್ತೆಗಳಲ್ಲಿ ಗ್ರೀನ್ ಸಿಗ್ನಲ್ ಲಭಿಸಿದ ಬಳಿಕವಷ್ಟೇ ಮುಂದುವರಿಯಿರಿ. ಸಿಗ್ನಲ್‌ಗಳಲ್ಲಿ ವಾಹನಗಳನ್ನು ನಿಲ್ಲಿಸಿಡಿ. ಇದರಿಂದ ಇಂಧನ ಉಳಿಸುವುದರ ಜತೆ ವಾಯು ಹಾಗೂ ಶಬ್ದ ಮಾಲಿನ್ಯವನ್ನು ತಡೆಗಟ್ಟಬಹುದು.

ಸರ್ಕಸ್ ಬೇಡ

ಸರ್ಕಸ್ ಬೇಡ

ರಸ್ತೆಗಳೇನು ರೇಸಿಂಗ್ ಟ್ರ್ಯಾಕ್‌ಗಳಲ್ಲ. ಹಾಗಾಗಿ ಅತಿ ವೇಗ ಪ್ರದರ್ಶನ ಅಥವಾ ಸ್ಟಂಟ್‌ ಪ್ರದರ್ಶನ ಬೇಡ. ಇನ್ನೊಂದು ದಿಕ್ಕಿನಲ್ಲಿ ನಿಮ್ಮನ್ನು ಕಾದು ನಿಂತಿರುವ ಕುಟುಂಬವೊಂದಿದೆ ಎಂಬುದನ್ನು ಮರೆಯದಿರಿ.

Most Read Articles

Kannada
English summary
Basic on-road ethics everyone must follow to avoid accidents. Following on-road rules keeps you & others safe, away from harm's way.Show good road sense by following traffic rules and on-road ethics.
Story first published: Saturday, October 12, 2013, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X