ಕಾರ್ ಪೂಲಿಂಗ್: ಜೊತೆಗಾರರು ಬೇಕಾಗಿದ್ದಾರೆಯೇ?

Posted By:
ಪೆಟ್ರೋಲ್ ದರ ದುಬಾರಿಯಾಗಿಬಿಟ್ಟಿದೆ. ಹೆಚ್ಚಿನವರು ಕಾರು ಖರೀದಿಸುವ ಯೋಚನೆ ಕೈಬಿಟ್ಟಿರಬಹುದು. ಕಾರು ಮಾಲಿಕರುಗಳಿಗೆ ಕಾರೀಗ ಹೊರೆಯಾಗಿರಬಹುದು. ಇಂತಹ ಸಮಯದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ ಪೂಲಿಂಗ್ ಅಥವಾ ಕಾರು ಹಂಚಿಕೊಳ್ಳುವ ಟ್ರೆಂಡ್ ಹೆಚ್ಚಾಗುತ್ತಿದೆ.

ಏನಿದು ಪೂಲಿಂಗ್: ನಿಮ್ಮಲ್ಲಿ ಕಾರು ಅಥವಾ ಬೈಕ್ ಇರಬಹುದು. ಆದರೆ ಅದರಲ್ಲಿ ದಿನನಿತ್ಯ ಒಬ್ಬರೇ ಪ್ರಯಾಣಿಸುತ್ತಿರಬಹುದು. ಬೈಕಿನ ಹಿಂಬದಿ ಸೀಟು ಖಾಲಿ ಇರುತ್ತದೆ. ಕಾರಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಸೀಟುಗಳು ಖಾಲಿ ಇರಬಹುದು. ಆ ಸೀಟುಗಳಲ್ಲಿ ಅದೇ ದಾರಿಯಲ್ಲಿ ನಿತ್ಯ ಸಾಗುವರನ್ನು ನೀವು ಕರೆದುಕೊಂಡು ಹೋಗಬಹುದು.

ದಿನನಿತ್ಯ ಈ ರೀತಿ ಕರೆದುಕೊಂಡು ಹೋಗಲು ಅಥವಾ ನೀವು ಬೇರೆ ಯಾವುದಾದರೂ ಕಾರಲ್ಲಿ ಹೋಗಬಹುದು. ಎಲ್ಲರಲ್ಲೂ ಕಾರಿದ್ದರೆ ಒಂದಿನ ಒಬ್ಬರ ಕಾರಲ್ಲಿ, ಮತ್ತೊಂದಿನ ಇನ್ನೊಬ್ಬರ ಕಾರಲ್ಲಿ ಹೋಗಬಹುದು. ಇದರಿಂದ ಇಂಧನವೂ ಉಳಿತಾಯವಾಗುತ್ತದೆ. ಪೆಟ್ರೋಲ್ ದುಡ್ಡೂ ಉಳಿತಾಯವಾಗುತ್ತದೆ.

ಇದರಲ್ಲಿ ಉಳಿತಾಯ ಹೇಗೆ ಎಂದು ಕೇಳಬಹುದು. ಈ ಕುರಿತು ನೀವು ನಿಮ್ಮ ಸಹ ಪ್ರಯಾಣಿಕರಲ್ಲಿ ಆರಂಭದಲ್ಲಿಯೇ ಮಾತುಕತೆ ನಡೆಸಬೇಕು. ತಿಂಗಳಿಗೆ ಇಂತಿಷ್ಟು ಪಾವತಿಸಬೇಕೆಂದು ಹೇಳಿಬಿಟ್ಟರೆ ಸಾಕು. ನಿಮ್ಮ ಕಾರು ನಿಮಗೆ ಆದಾಯವನ್ನೂ ತಂದುಕೊಡುತ್ತದೆ. ಪೆಟ್ರೋಲ್ ಹಣವೂ ಉಳಿತಾಯವಾಗುತ್ತದೆ.

ಅದೆಲ್ಲ ಸರಿ, ಜೊತೆಗಾರರು ಎಲ್ಲಿ ಸಿಗುತ್ತಾರೆ ಎಂದು ನೀವು ಕೇಳಬಹುದು. ಈ ಕುರಿತು ನಿಮ್ಮ ಸ್ನೇಹಿತರು, ವಾರಗೆಯವರು, ಪರಿಚಿತರಲ್ಲಿ ವಿಚಾರಿಸಬಹುದು. ಇವರಲ್ಲಿ ವ್ಯವಹಾರ ಕಷ್ಟವೆಂದು ಅನಿಸುವುದೇ? ಅಥವಾ ಯಾರೂ ಸಹ ಪ್ರಯಾಣಿಕರು ಸಿಗುತ್ತಿಲ್ಲವೆಂಬುದಕ್ಕೆ ನೀವು ಕೊರಗುವ ಅವಶ್ಯಕತೆಯಿಲ್ಲ.

ನಿಮ್ಮ ಕಾರಿನ ಅಥವಾ ಬೈಕಿನ ಖಾಲಿ ಸೀಟು ತುಂಬಿಸಿಕೊಳ್ಳಲು ಜೊತೆಗಾರರನ್ನು ಹುಡುಕುತ್ತಿದ್ದರೆ ಕನ್ನಡ ಡ್ರೈವ್‌ಸ್ಪಾರ್ಕ್ ನಿಮಗೆ ನೆರವು ನೀಡುತ್ತದೆ. ನಮ್ಮ ಸಹೋದರ ಸಂಸ್ಥೆ ಕ್ಲಿಕ್ ಇನ್ ನಲ್ಲಿ ಉಚಿತವಾಗಿ ಜಾಹೀರಾತು ನೀಡಲು ಅವಕಾಶವಿದೆ. ಉಚಿತವಾಗಿ ಜಾಹೀರಾತು ನೀಡಲು ಅಥವಾ ಜಾಹೀರಾತು ನೋಡಲು ಈ ಕ್ಲಿಕ್ ಇನ್ ಲಿಂಕ್ ಕ್ಲಿಕ್ ಮಾಡಿ. ಕ್ಲಿಕ್ ಇನ್ ದೂರವಾಣಿ ಸಂಖ್ಯೆ: 080 - 67150880

ಈಗಾಗಲೇ ಇಲ್ಲಿ ನೂರಾರು ಜನರು ಕಾರು ಪೂಲಿಂಗ್ ಜಾಹೀರಾತು ನೀಡಿದ್ದಾರೆ. ಸೇವೆ ಪಡೆದವರ ಮೆಚ್ಚುಗೆ ಪತ್ರಗಳೂ ನಮಗೆ ಬಂದಿವೆ. ಉದಾಹರಣೆಗೆ ನಿಮಗೆ ಹೆಬ್ಬಾಳದಿಂದ ಬಸವನಗುಡಿಗೆ, ಕಲ್ಯಾಣ ನಗರದಿಂದ ಇನ್ನೊಂದೆಡೆಗೆ, ಜಯನಗರಕ್ಕೆ, ಬೊಮ್ಮನಹಳ್ಳಿಗೆ, ಮಾರತ್ ಹಳ್ಳಿಗೆ ಹೀಗೆ ಹಲವು ಕಾರುಗಳು ಲಭ್ಯವಿದೆ. ಕ್ಲಿಕ್ ಇನ್ ತಾಣದಲ್ಲಿ ಜಾಹೀರಾತು ನೀಡುವರು ಕಾರಿನ ಹೆಸರು, ನಿಮ್ಮ ವಯಸ್ಸು, ಎಲ್ಲಂದ ಎಲ್ಲಿಗೆ, ಎಷ್ಟು ಗಂಟೆಗೆ ಇತ್ಯಾದಿ ಮಾಹಿತಿಗಳನ್ನು ಬರೆದರೆ ಸಾಕು.

ನಿಮಗೂ ಕಾರ್ ಪೂಲಿಂಗ್ ಕುರಿತು ಆಸಕ್ತಿಯಿದ್ದರೆ ಇಲ್ಲಿ ಜಾಹೀರಾತು ನೀಡಿ. ಅಥವಾ ಇಲ್ಲಿರುವ ಜಾಹೀರಾತುಗಳು ನಿಮಗೆ ಅನುಕೂಲವಾಗಿದ್ದರೆ ಅವರನ್ನು ಸಂಪರ್ಕಿಸಿರಿ. ಒಟ್ಟಾರೆ ಜಾಹೀರಾತು ನೀಡಿದ ವ್ಯಕ್ತಿಯನ್ನು ಭೇಟಿಯಾಗಿ ನಿತ್ಯಪ್ರಯಾಣಕ್ಕೆ ಸೂಕ್ತ ವ್ಯಕ್ತಿಯೆಂದು ಅರಿವಾದರೆ ಜೊತೆಯಾಗಿ ಪ್ರಯಾಣಿಸಿ. ಕಾರ್ ಪೂಲಿಂಗ್ ಬಯಸಿದ ವ್ಯಕ್ತಿ ನಂಬಿಕಸ್ಥ ಅಂತ ಅನಿಸಿದರೆ ಮಾತ್ರ ನಿಮ್ಮ ಕಾರಲ್ಲಿ ಜಾಗ ನೀಡಿ. ತಿಂಗ್ಳಿಗೆ, ವಾರಕ್ಕೆ ಎಷ್ಟು ದುಡ್ಡು ಕೊಡಬೇಕೆಂದು ಮೊದಲೇ ಮಾತನಾಡಿ.

ಕಾರ್ ಪೂಲಿಂಗ್ ಮಾಡಿ, ಇಂಧನ ಉಳಿಸಿ.

English summary
At a time when fuel costs are sky high, many are be looking for alternatives to cut costs on traveling. Carpooling is one such option where you can share your car/bike ride with other commuters traveling in the same route on a cost sharing basis. Click.in (Classifieds by Oneindia.in) is offering such car pooling and bike sharing service, where users can post their classifieds for free of cost.
Story first published: Friday, May 25, 2012, 13:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark