ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

ದಟ್ಟವಾದ ಮಂಜಿನಲ್ಲಿ ವಾಹನ ಸವಾರಿ ಮಾಡುವುದರಿಂದ ಹಲವಾರು ಅಪಘಾತಗಳು ಆಗುತ್ತಿವೆ. ವಾತಾವರಣದಲ್ಲಿ ಬದಲಾವಣೆಗಳಿಂದ ಸೀಜನ್‍‍ಗೆ ತಕ್ಕ ಹಾಗೆ ದಟ್ಟವಾಗಿ ಅಧಿಕಗೊಳ್ಳುವ ಅವಕಾಶವು ಇರುತ್ತದೆ. ಇಂತಹ ಸಂಧರ್ಭಗಳಲ್ಲಿ ವಾಹನ ಪ್ರಯಾಣವು ಬಹಳ ಆಪತ್ತುಗಳಿಂದ ಕೂಡಿರುತ್ತದೆ. ಈಗಲೂ ಸುಮಾರು 99ಕ್ಕು ಹೆಚ್ಚು ಮಂದಿ ಡ್ರೈವರ್‍‍ಗಳು ದಟ್ಟವಾದ ಮಂಜಿನಲ್ಲಿ ಡ್ರೈವ್ ಮಾಡಲು ಮುಂದಾಗುವುದಿಲ್ಲ.

ಇಂದಿನ ಈ ಲೇಖನದಲ್ಲಿ ದಟ್ಟವಾದ ಮಂಜಿನಲ್ಲಿ ಸುರಕ್ಷಿತವಾಗಿ ಪ್ರಯಾಣಕ್ಕೊಸ್ಕರ ಅನುಸರಿಸಬೇಕಾದ 10 ಮುಖ್ಯವಾದ ಲೈಫ್ ಸೆವಿಂಗ್  ಟಿಪ್ಸ್ ನಿಮಗಾಗಿ..

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

1. ಲೋ ಬೀಮ್ ಲೈಟ್‍‍ಗಳನ್ನು ಮಾತ್ರ ಬಳಸಿರಿ.

ಸಾಧಾರಣವಾಗಿ ಇಂಡಿಯನ್ ಡ್ರೈವರ್‍‍ಗಳ ಪ್ರಕಾರ, ಲೋ ಬೀಮ್ ಕಡಿಮೆ ಬೆಳಕನ್ನು ಮತ್ತು ಹೈ ಬೀಮ್ ಲೈಟ್ ಹೆಚ್ಚು ಬೆಳಕನ್ನು ನೀಡುತ್ತದೆ ಎಂಬ ಅರಿವಿನಲಿದ್ದಾರೆ. ಆದ್ದರಿಂದ ಮಂಜಿನಲ್ಲಿ ಹೈ ಬೀಮ್ ಲೈಟ್‍‍ಗಳನ್ನು ಬಳಸುತ್ತಾರೆ. ಇದರಿಂದ ಲೈಟ್‍‍ನ ಗರಿಷ್ಠ ಕಾಂತಿಯು ಹೊಗೆಯ ಹಾಗೆ ಕಾಣಿಸಿತ್ತುದ್ದೆ. ಅದೇ ಲೋ ಬೀಮ್ ಲೈಟ್ ಅನ್ನು ಬಳಸುವುದರ ಮುಖಾಂತರ ಬರುತ್ತಿರುವ ವ್ಯಕ್ತಿಗಳನ್ನಾಗಲಿ ಅಥವಾ ಡ್ರೈವರ್‍‍ಗಳು ನಿಮಗೆ ಕಾಣಿಸಿಕೊಳ್ಳುತ್ತಾರೆ. ಇದರ ಜೊತೆಗೆ ಫಾಗ್ ಲೈಟ್‍‍ಗಳನ್ನು ಕೂಡಾ ಆನ್ ಮಾಡಿಕೊಳ್ಳಬೇಕಾಗುತ್ತದೆ.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

2. ಕಾರಿನಲ್ಲಿನ ಅಪಘಾತ ಸೂಚಕ ಲೈಟ್‍‍ಗಳನ್ನು ಆನ್ ಮಾಡಿರಿ

ಯಾವುದಾದರೂ ಲೋಪವಿದ್ದಲ್ಲಿ, ಪ್ರಮಾದದಲ್ಲಿದ್ದರೂ ಅಥವಾ ಸಮಸ್ಯೆಯು ಇದ್ದಾಗ ಈ ಅಪಘಾತ ಸೂಚಕ ಲೈಟ್‍‍ಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಆದರೇ ದಟ್ಟವಾದ ಮಂಜಿನಲ್ಲಿ ಪ್ರಯಾಣಿಸುವಾಗ ಈ ಲೈಟ್‍‍ಗಳು ಆನ್ ಮಾಡಿಕೊಂಡು ಹೋಗುವುದು ಒಳ್ಳೆಯದು. ಹೀಗೆ ಮಾಡಿದಲ್ಲಿ ರಸ್ತೆಯಲ್ಲಿ ಆ ಬೆಳಕಿನಿಂದ ಇನ್ನಿತರೆ ವಾಹನಗಳು ಗುರುತಿಸುವ ಅವಕಾಶವಿರುತ್ತದೆ.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

3. ನಿಧಾನವಾಗಿ ಚಲಿಸಿ

ಬೆಳಕಿರುವಾಗ ಚಲಿಸುವ ಸ್ಪೀಡ್‍‍ನಲ್ಲಿ ಮಂಜಿನ ವಾತವರಣದಲ್ಲಿ ಚಲಿಸಿದರೆ ಅದು ನಿಮ್ಮ ಜೀವಕ್ಕೆ ಪ್ರಮಾದಕರ. ಎದುರಿಗೆ ಬರುವ ವಾಹನಗಳಾ ಮೇಲೆ ದೃಷ್ಟಿಯನಿಟ್ಟು ಸ್ಟೀರಿಂಗ್ ಮೇಲೆಯೆ ಸದಾ ಕಣ್ಣಿಟ್ಟು ತಿರುವುಗಳಲ್ಲಿ ತಟ್ಟನೆ ಸ್ಪಂದಿಸಿ ಸ್ಟೀರಿಂಗ್ ಮಾಡುವ ವಿಧವಾಗಿರಬೇಕು. ಇದು ಆಗಬೇಕಾದರೆ ಕಡಿಮೆ ಸ್ಪೀಡ್‍‍ನಲ್ಲಿ ವಾಹನ ಚಲಾಯಿಸಬೇಕು.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

4. ಹೆದ್ದರಿಗಳ ಮೇಲಿನ ಗುರುತುಗಳನ್ನು ಅನುಸರಿಸಿ

ಪ್ರಸ್ಥುತ ಬಹಳಷ್ಟು ಜಾತೀಯ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ರೇಡಿಯಮ್ ಲೈಟಿಂಗ್ ಅನ್ನು ನೀಡಲಾಗಿದೆ. ಇದು ರೋಡನ್ನು ಎರಡು ಭಾಗಗಳಾಗಿ ಮತ್ತು ಡಿವೈಡರ್, ರೇಡಿಯಮ್ ಲೈಟಿಂಗ್ಸ್ ಮತ್ತು ಬಿಳಿ, ಹಳದಿ ಬಣ್ಣಗಳಲ್ಲಿ ರಸ್ತೆಯ ಮೇಲೆ ಗುರುತುಗಳಿರುತ್ತವೆ. ಇವುಗಳನ್ನು ಅನುಸರಿಸುವುದರಿಂದ ಪ್ರಮಾದವನ್ನು ಕಡಿಮೆ ಮಾಡಬಹುದು.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

5. ಡೀ ಫಾಗರ್

ಡೀ ಫಾಗರ್ : ವಾಹನದ ಕನ್ನಡಿಯ ಮೇಲಿರುವ ಮಂಜನ್ನು ಕರಗಿಸಲು ಬಳಸಲು ಉಪಯೋಗಿಸುತ್ತಾರೆ. ಚಳಿಗಾಲದಲ್ಲಿ ಹೆಚ್ಚಾಗಿ ಮಂಜಿರುವ ಕಾರಣ ಕಾರಿನಲ್ಲಿನ ಮುಂಭಾಗದ ಮತ್ತು ಹಿಂಭಾಗದಲ್ಲಿ ಮಿರರ್‍‍ಗಳ ಮೇಲೆ ಬಿಳಿ ಬಣ್ಣದ ಮಂಜು ಕೂರುವುದರಿಂದ, ನಂತರ ರಸ್ತೆಯನ್ನು ನೋಡಲಾಗುವುದಿಲ್ಲ. ಆದರೇ ಮಂಜನ್ನು ಆಟೋಮ್ಯಾಟಿಕ್ ಆಗಿ ಕರಗಿಸಲು ಹೆಚ್ಚು ಕಾರಿನ ಸಂಸ್ಥೆಗಳು ಡೀ ಫಾಗರ್‍ ಅನ್ನು ಅಳವಡಿಸುತ್ತಿದ್ದಾರೆ. ಇದರಿಂದ ಕನ್ನಡಿಗಳ ಮೇಲಿರುವ ಮಂಜು ಬಿಸಿಗೆ ಕರಗುತ್ತಾ ಹೋಗುತ್ತದೆ.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

6. ಮ್ಯೂಸಿಕ್ ಸೌಂಡ್ ಅನ್ನು ಕಡಿಮೆ ಇಡಿ

ದಟ್ಟವಾದ ಮಂಜಿನಲ್ಲಿ ಪ್ರಯಾಣವೆಂದರೆ ಕತ್ತಿಯ ಮೇಲೆ ನಡೆದ ಹಾಗೆ. ರಸ್ತೆಯು ಸ್ಪಷ್ಟವಾಗಿ ಕಾಣಿಸುವ ಅವಕಾಶವು ಬಹಳ ಕಡಿಮೆ. ಆದ್ದರಿಂದ ಡ್ರೈವಿಂಗ್ ಸಮಯದಲ್ಲಿ ಹೆಚ್ಚಾಗಿ ನಿಮ್ಮ ಮನಸ್ಸನ್ನು ಒಂದೆ ಕಡಿ ಇರಿಸಿಕೊಳ್ಳಬೇಕು. ಹೊರಗಿನಿಂದ ಬರುವ ಶಬ್ದವನ್ನು ಗ್ರಹಿಸುತ್ತಾ ಇರಬೇಕು. ನಂತರ ದೊಡ್ಡ ದೊಡ್ಡ ವಾಹನಗಳ ಬರುಹೋಗುವಿಕೆಯನ್ನು ಗ್ರಹಿಸಬಹುದು. ಆದ್ದರಿಂದ ಮ್ಯೂಸಿಕ್ ಸೌಂಡ್ ಅನ್ನು ಕಡಿಮೆ ಇಟ್ಟುಕೊಳ್ಳಿರಿ. ಸಾಧ್ಯವಾದರೇ ಆಫ್ ಮಾಡಿದರೆ ಇನ್ನು ಒಳ್ಳೆಯದು.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

7. ಮಧ್ಯ ಸೇವಿಸಿ ಡ್ರೈವ್ ಮಾಡಬೇಡಿ

ಸಾಧಾರಣ ಪರಿಸ್ಥಿತಿಯಲ್ಲಿ ಮಧ್ಯದ ಮತ್ತಿನಲ್ಲಿ ಡ್ರೈವ್ ಮಾಡಲು ಸಾಧ್ಯವಾಗುವುದಿಲ್ಲ, ಹೀಗಿದ್ದರೆ ಇನ್ನು ದಟ್ಟವಾದ ಮಂಜಿನಲ್ಲಿ ಕುಡಿದು ಡ್ರೈವಿಂಗ್ ಮಾಡುವುದು ಇನ್ನು ಡೇಂಜರ್. ಅಂತಹ ಸಂದರ್ಭದಲ್ಲಿ ಡ್ರೈವಿಂಗ್‍‍ಗೆ ದೂರವಿದ್ದರೆ ಇನ್ನು ಒಳ್ಳೆಯದು.

MOST READ: ಹೆಲ್ಮೆಟ್ ಹಾಕಿಲ್ಲವೆಂದು ಕಾರು ಚಾಲಕನಿಗೆ ದಂಡ ಜಡಿದ ಟ್ರಾಫಿಕ್ ಪೊಲೀಸರು

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

8. ಪಕ್ಕದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸುವಾಗ ಹೀಗೆ ಮಾಡಿ

ದಟ್ಟವಾದ ಮಂಜು ಇರುವ ಸಮಯದಲ್ಲಿ ಹೆದ್ದಾರಿಗಳಲ್ಲಿ ಅಥವಾ ಹೆಚ್ಚು ವಾಹನಗಳಿರುವ ರಸ್ಥೆಯಲ್ಲಿ ಹೋಗುತಿರುವಾಗ ನಿಮ್ಮ ವಾಹನವನ್ನು ಪಕ್ಕಕ್ಕೆ ನಿಲ್ಲಿಸುವಾಗ ಟರ್ನ್ ಇಂಡೀಕೇಟರ್‍‍ಗಳನ್ನು ಆನ್ ಮಾಡಿರಿ. ಇದರಿಂದಾ ನಿಮ್ಮ ಹಿಂದೆ ಬರುವ ವಾಹನಗಳು ಡ್ರೈವರ್ ನಿಮ್ಮನು ಗಮನಿಸುತ್ತಾ ಪಕ್ಕಕ್ಕೆ ಹೋಗುತ್ತಾನೆ.

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

9. ವಾಹನಗಳ ನಡುವೆ ಅಂತರವಿರಲಿ

ಬೆಳಕಿನ ಸಮಯದಲ್ಲಿ ವಾಹನ ಚಲಾಯಿಸುವ ಹಾಗೆ ಅಲ್ಲದೇ, ಮಂಜಿನಲ್ಲಿ ಪ್ರಯಾಣಿಸುವಾಗ ನಿಮ್ಮ ಮುಂದಿರುವ ವಾಹನದಿಂದ ಸಾಧ್ಯವಾದಷ್ಟು ಅಂತರವನ್ನು ಅನುಸರಿಸಿ. ಇದರಿಂದ ಆ ವಾಹನವು ತಟ್ಟನೆ ಪ್ರಮಾದಕ್ಕೆ ಗುರುಯಾದಲ್ಲಿ ಬೇಗನೇ ಸ್ಪಂದಿಸಿ ಪಕ್ಕಕ್ಕೆ ತಪ್ಪಿಕೊಳ್ಳುವ ಆವಕಾಶವು ಇರುತ್ತದೆ. ಹೊಗೆ ಮಂಜಿನಲ್ಲಿ ಎದುರಲ್ಲಿರುವ ವಾಹನಗಳನ್ನು ಹೇಗೆ ಗುರುತಿಸಬೇಕು ಎಂಬುದು ನಿಮ್ಮ ಸಂದೇಹವಿರಬಹುದು. ಎದುರಿರುವ ವಾಹನಗಳ ಟೈಲ್ ಲೈಟ್ ಮತ್ತು ಬ್ರೇಕ್ ಲೈಟ್‍‍ನ ಮುಕಾಂತರ ಅವುಗಳನ್ನು ಗುರುತಿಸಬಹುದು.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಅತಿಯಾದ ಮಂಜಿನಲ್ಲಿ ಡ್ರೈವ್ ಮಾಡುವಾಗ ಅನುಸರಿಸಬೇಕಾದ ಲೈಫ್ ಸೇವಿಂಗ್ ಟಿಪ್ಸ್ ಇವು..

10. ಪ್ರಯಾಣಕ್ಕೆ ಮುಂಚೆ ನಿಮ್ಮ ಎರಡೂ ಹೆಡ್‍‍ಲೈಟ್‍‍ಗಳನ್ನು ಪರಿಶೀಲಿಸಿಕೊಳ್ಳಿ.

ಮಂಜಿನಲ್ಲಿ ಪ್ರಯಾಣಿಸುವ ಮುನ್ನ ಮಾತ್ರವಲ್ಲದೇ, ರಾತ್ರಿ ಸಮಯದಲ್ಲಿ ಜರ್ನಿ ಪ್ರಾರಂಭಿಸುವ ಮುನ್ನ ಕೂಡಾ ಹೆಡ್‍‍ಲೈಟ್‍‍ಗಳನ್ನು ತಪ್ಪದೇ ಚೆಕ್ ಮಾಡಿಕೊಳ್ಳಿ. ಒಂದು ಲೈಟ್ ಮಾತ್ರವೇ ಕೆಲಸ ಮಾಡುತ್ತಿರುವಾಗ ನಿಮ್ಮ ಪ್ರಯಾಣವನ್ನು ಸ್ಥಗಿತಗೊಳಿಸುವುದು ಉತ್ತಮ. ಹಾಗೆಯೆ ಹೊದರೆ ಎದುರುನಲ್ಲಿ ಬರುತ್ತಿರುವ ವಾಹನವು ನಿಮ್ಮ ವಾಹನವನನ್ನು ಟೂ ವ್ಹೀಲರ್ ಏಂದು ತಿಳಿದುಕೊಳ್ಳುವ ಅವಕಾಶವಿರುತ್ತದೆ.

ಹ್ಯಾಪಿ ಜರ್ನಿ..

Most Read Articles

Kannada
English summary
Essential tips to drive through fog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more