ನೀವು ಕುಡಿದ್ರೆ ಟ್ರಾಫಿಕ್ ಪೊಲೀಸರಿಗೆ ಹೇಗೆ ಗೊತ್ತಾಗುತ್ತೆ?

How does a breath analyser work?
ಸಂಚಾರಿ ಪೊಲೀಸರು ಮದ್ಯಪಾನ ತಪಾಸಣೆಗೆಂದು ವಾಹನ ನಿಲ್ಲಿಸಿದರೆ ಹೆಚ್ಚಿನವರ ಉಸಿರೇ ನಿಂತು ಹೋಗುತ್ತದೆ. ಯಾಕೆಂದರೆ ಪೊಲೀಸರಲ್ಲಿ ಯಾವುದೇ ಸಬೂಬು ಹೇಳುವ ಆಗಿಲ್ಲ. ಉಸಿರಾಟದ ಮೂಲಕವೇ ಕುಡುಕರ ಗುಟ್ಟು ರಟ್ಟಾಗುತ್ತದೆ.

ರಕ್ತದಲ್ಲಿರುವ ಆಲ್ಟೋ ಹಾಲ್ ಪ್ರಮಾಣ ಎಷ್ಟಿದೆ ಎಂದು ತಿಳಿಯುವ ಆ ಬ್ರೀಥ್ ಅನಾಲೈಝರ್ ಹೇಗೆ ಕೆಲಸ ಮಾಡುತ್ತದೆ? ಹೇಗೆ ಆಲ್ಕೋಹಾಲ್ ಪ್ರಮಾಣ ಪತ್ತೆ ಮಾಡುತ್ತದೆ? ರಕ್ತದಲ್ಲಿರುವ ಆಲ್ಕೋಹಾಲ್ ಪ್ರಮಾಣ ಉಸಿರಾಟದಲ್ಲಿ ಹೇಗೆ ತಿಳಿಯುತ್ತದೆ? ಎನ್ನುವ ಸಂಶಯ ಹೆಚ್ಚಿನವರಿಗೆ ಇರಬಹುದು. Breath Analyser ಕುರಿತು ಕೊಂಚ ಮಾಹಿತಿ ಇಲ್ಲಿದೆ.

ಆಲ್ಕೋಹಾಲ್ ರಕ್ತದೊಂದಿಗೆ ಪ್ರವಾಹಿಸಿ ರಕ್ತದ ಮೂಲಕವೇ ಶ್ವಾಸಕೋಶ ತಲುಪುತ್ತದೆ. ಆಲ್ಕೋಹಾಲ್ ತಕ್ಷಣ ಆವಿಯಾಗುವ ಗುಣಹೊಂದಿದೆ. ಹೀಗಾಗಿ ಆಲ್ಕೋಹಾಲ್ ಪುಪ್ಪಸ ಸೇರಿ ಉಸಿರಾಟದೊಂದಿಗೆಯೂ ಹೊರಬರುತ್ತದೆ. ಉಸಿರಾಟದಲ್ಲಿ ಹೊರಬರುವ ಆಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಉಸಿರಾಟ ವಿಶ್ಲೇಷಕ ಸಾಧನವು ವಾಹನ ಚಾಲಕರ ರಕ್ತದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಕಂಡು ಹಿಡಿಯುತ್ತದೆ.

ಈ ಸಾಧನವನ್ನು ನಂಬಬಹುದೇ? ಉಸಿರಾಟದ ಮೂಲಕ ರಕ್ತದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಹೇಗೆ ಕಂಡುಹಿಡಿಯಬಹುದು? ಇತ್ಯಾದಿ ಗೊಂದಲದ ಪ್ರಶ್ನೆಗಳು ಕೂಡ ನಿಮ್ಮಲ್ಲಿರಬಹುದು. ಮೊದಲನೆಯದಾಗಿ ಈ ಸಾಧನವು ಖಚಿತ ಮತ್ತು ವಿಶ್ವಾಸನೀಯವಾಗಿದೆ. ಉಸಿರಾಟದಲ್ಲಿರುವ ಆಲ್ಕೊಹಾಲ್ ಪ್ರಮಾಣದ ಮೂಲಕ ರಕ್ತದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಕಂಡುಹಿಡಿಯಲಾಗುತ್ತದೆ.

ಹಾಗಾದರೆ ಮಿಂಟ್ ಅಥವಾ ಮೌತ್ ಪ್ರೆಶರ್ ಚಾಕೋಲೆಟ್ ತಿಂದು ಈ ಸಾಧನದ ದಾರಿ ತಪ್ಪಿಸಬಹುದೇ? ಹೂಂ, ಖಂಡಿತಾ ಸಾಧ್ಯವಿಲ್ಲವಂತೆ. ಯಾಕೆಂದರೆ ಈ ವಿಶ್ಲೇಷಕ ಯಂತ್ರಕ್ಕೆ ಜೋರಾಗಿ ಉಸಿರುಬಿಟ್ಟರೆ ಮಾತ್ರ ಆಲ್ಕೋಹಾಲ್ ಪ್ರಮಾಣ ತಿಳಿಯುತ್ತದೆ. ಹೀಗಾಗಿ ಬಾಯಲ್ಲಿ ಮಿಂಟ್ ಅಥವಾ ಬೂಮರ್ ಹಾಕಿಕೊಂಡು ಮನೆಯಲ್ಲಿರುವ ಹೆಂಡತಿಯನ್ನು ಬೇಕಾದ್ರೆ ಕುಡುಕರು ಮೋಸಮಾಡಬಹುದು. ಆದ್ರೆ ಈ ಉಸಿರಾಟ ಪರೀಕ್ಷಕ ಸಾಧನವನ್ನು ಮೋಸ ಮಾಡಲು ಸಾಧ್ಯವಿಲ್ಲವಂತೆ!

ಟ್ರಾಫಿಕ್ ಪೊಲೀಸರು ಆಲ್ಕೋಹಾಲ್ ಪರೀಕ್ಷೆಗೆ ನಿಮಗೆ ಹೊಸದಾದ ಸ್ಟ್ರಾ ನೀಡುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಮತ್ತೊಬ್ಬರು ಬಳಕೆ ಮಾಡಿದ್ದನ್ನು ಬಳಸಲು ನಿರಾಕರಿಸಿ.

ಕುಡಿದು ವಾಹನ ಚಾಲನೆ ಮಾಡಿದ್ರೆ ಎಷ್ಟು ದಂಡ ಮತ್ತು ಎಷ್ಟು ಶಿಕ್ಷೆ ತಿಳಿದುಕೊಳ್ಳಿ

Most Read Articles

Kannada
English summary
How does a breath analyser work? Alcohol is absorbed into the blood stream and reaches the lungs along with the blood. Since alcohol is volatile, it evaporates through alveoli, the tiny sacks in a lung where blood swaps carbon di-oxide with oxygen. A breath analyzer calculates this alcohol content and gives out a reading.
Story first published: Monday, May 7, 2012, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X