ಟಿಪ್ಸ್: ನೀವೇ ನಿಮ್ಮ ಕಾರಿನ ಟಿಂಟೆಡ್ ಫಿಲ್ಮ್ ಸುಲಿಯಿರಿ
ಈ ಎರಡು ಆಯ್ಕೆಗಳ ಹೊರತಾಗಿ ಟಿಂಟೆಡ್ ಗ್ಲಾಸ್ ತೆಗೆಯಲು ಇರುವ ಇನ್ನೊಂದು ಆಯ್ಕೆಯೆಂದರೆ ಸ್ವಯಂಕೃಷಿ!. ಅರ್ಥಾತ್ ನೀವೇ ನಿಮ್ಮ ಕಾರಿನ ಟಿಂಟೆಡ್ ಗ್ಲಾಸ್ ರಿಮೂವ್ ಮಾಡೋದು. ಹಾಗೆ ಮಾಡಬಹುದಾ? ಹಾಗಾದರೆ ನಮ್ಗೂ ಹೇಳಿಕೊಡಿ ಎಂದು ಕೇಳಿದ ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಿಗಾಗಿ ಇಲ್ಲಿದೆ ಸಲಹೆ.
ಇದು ಟಿಂಟೆಡ್ ಗ್ಲಾಸ್ ತೆಗೆಯಲು ಸುಲಭ, ಸರಳ ಸಲಹೆ. ನಿಮಗೆ ಇಷ್ಟವಾದರೆ ಅನುಷ್ಠಾನಗೊಳಿಸಬಹುದು. ಅಥವಾ ಟ್ರಾಫಿಕ್ ಪೊಲೀಸ್ ಕೇಂದ್ರಗಳಲ್ಲಿ, ಖಾಸಗಿ ವೆಂಡರುಗಳ ಬಳಿ ತೆರಳಬಹುದು. ಯಾವುದಕ್ಕೂ ಮೊದಲು ಈ ಸಲಹೆ ಮೇಲೋಮ್ಮೆ ಕಣ್ಣಾಡಿಸಿಬಿಡಿ.
ಟಿಂಟೆಡ್ ಗ್ಲಾಸ್ ತೆಗೆಯುವ ಹಂತಗಳು
* ಮೊದಲು ನಿಮ್ಮ ಕಾರನ್ನು ಹೆಚ್ಚು ಬಿಸಿಲಿರುವಲ್ಲಿ ಹತ್ತು ನಿಮಿಷ ಪಾರ್ಕ್ ಮಾಡಿ (ಅಥವಾ ಯಾವುದಾದರೂ ಸ್ಟ್ರೀಮರ್ ಬಳಸಿ ಎಚ್ಚರಿಕೆಯಿಂದ ಟಿಂಟೆಡ್ ಕಾಗದ ಬಿಸಿ ಮಾಡಿ)
* ಕಾರಿನ ಒಳಭಾಗದಿಂದ ಟಿಂಟೆಡ್ ಫಿಲ್ಮ್ ಇರುವಲ್ಲಿ ನೀರು ಚಿಮುಕಿಸಿ(ಅದಕ್ಕಾಗಿ ವಾಟರ್ ಸ್ಪ್ರೇ ಬಳಸುವುದು ಸೂಕ್ತ).
* ಸುಮಾರು ಐದು ನಿಮಿಷ ಕಾರನ್ನು ಕ್ಲೋಸ್ ಮಾಡಿಬಿಡಿ.(ಕಾರಿನ ಹೊರಗೆ ಬಿಸಿ, ಒಳಗೆ ತಣ್ಣಗೆ ಪ್ರಕ್ರಿಯೆ).
* ಮತ್ತೊಮ್ಮೆ ಕಾರಿನೊಳಗಿನ ಟಿಂಟೆಡ್ ಗ್ಲಾಸ್ ಮೇಲೆ ನೀರು ಸ್ಪ್ರೇ ಮಾಡಿಬಿಡಿ. ಮತ್ತೆ ಐದು ನಿಮಿಷ ಕಳೆಯಿರಿ.
* ಹರಿತವಾದ ಚಾಕು ಅಥವಾ ಬ್ಲೇಡ್ ಮೂಲಕ ಟಿಂಟೆಡ್ ಫಿಲ್ಮ್ ಮೇಲೆ ಗೀರು ಹಾಕಿ.
* ಎಚ್ಚರಿಕೆಯಿಂದ ಒಂದು ಭಾಗದಿಂದ ಟಿಂಟೆಡ್ ಫಿಲ್ಮ್ ಸುಲಿಯಲು ಆರಂಭಿಸಿ.
* ಗಾಜು ಮತ್ತು ಟಿಂಟೆಡ್ ಫಿಲ್ಮ್ ನಡುವೆ ನೀರು ಸ್ಪ್ರೇ ಮಾಡುತ್ತಾ ಇರಿ. ಡ್ರೈ ಆಗಲು ಬಿಡಬೇಡಿ.
* ಕೆಲವು ಕಡೆ ಫಿಲ್ಮ್ ಸುಲಿಯಲು ಕಷ್ಟವಾದರೆ ನೀರು ಸ್ಪ್ರೇ ಮಾಡಿ ಕೊಂಚ ಹೊತ್ತು ಬಿಟ್ಟು ಪ್ರಯತ್ನಿಸಿ.
* ಬಹುಶಃ ನೀವೀಗ ಕಾರಿನ ಎಲ್ಲಾ ಭಾಗದ ಟಿಂಟೆಡ್ ಗ್ಲಾಸ್ ತೆಗೆದಿರುವಿರಿ ಎಂದು ಭಾವಿಸಿರುತ್ತೇನೆ.
* ಅಯ್ಯೋಯ್ಯೋ... ಕೆಲವು ಕಡೆ ಗಮ್ ಬಾಕಿಯಾಗಿದೆ ಅನ್ನುವಿರಾ. ಅದನ್ನು ಕೊಂಚ ನೀರು ಹಾಕಿ ಮೃದುವಾದ ಬಟ್ಟೆಯಿಂದ ಉಜ್ಜಿ.
ಈಗ ನಿಮ್ಮ ಕಾರು ಟಿಂಟೆಡ್ ಮುಕ್ತ. ಖಾಸಗಿ ವೆಂಡರುಗಳಿಗೆ ದುಡ್ಡು ಕೊಡಬೇಕಿಲ್ಲ. ಟ್ರಾಫಿಕ್ ಪೊಲೀಸರ ಕ್ಯಾಂಪಿಗೆ ಹೋಗಬೇಕಾಗಿಲ್ಲ.


Click it and Unblock the Notifications









