ಕಳವಾದ ಕಾರು ಪತ್ತೆಹಚ್ಚಲು ಒಂದು ಮೊಬೈಲ್ ಇದ್ದರೆ ಸಾಕು!

Written By:

ಕಾರೊಂದನ್ನು ಖರೀದಿಸುವುದು ಹಲವರ ಕನಸಾಗಿರುತ್ತದೆ. ಹಾಗೊಂದು ವೇಳೆ ಎಷ್ಟೇ ಸುರಕ್ಷಾ ಮಾನದಂಡಗಳಿದ್ದರೂ ಕಳ್ಳರು ಕಾರನ್ನು ಕದಿಯುವಲ್ಲಿ ಸಫಲರಾಗುತ್ತಾರೆ. ಹಾಗಿರಬೇಕಾದರೆ ಕ್ಷಣಾರ್ಧದಲ್ಲಿ ನಿಮ್ಮ ಕನಸು ನುಚ್ಚು ನೂರಾಗುವ ಸಂಭವವಿದೆ.

ಆದರೆ ಇನ್ನು ಮುಂದೆ ಅಂಥ ಚಿಂತೆಗಳು ಬೇಡ ಬಿಡಿ. ಯಾಕೆಂದರೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನಿಮಗೊಂದು ಸುಲಭ ಉಪಾಯವನ್ನು ಹೇಳಿಕೊಡಲಿದ್ದು, ಅದನ್ನು ಸರಿಯಾಗಿ ಅನುಸರಿಸಿದ್ದಲ್ಲಿ ಎಷ್ಟೇ ದೊಡ್ಡ ಕಳ್ಳನಾದರೂ ಅಂತಹವರನ್ನು ಬಹುಬೇಗನೇ ಸೆರೆಹಿಡಿಯುವಲ್ಲಿ ಹಾಗೆಯೇ ಕಳವಾದ ಕಾರು ಮರಳಿ ಪಡೆಯುವಲ್ಲಿ ಸಾಧ್ಯವಾಗಲಿದೆ.

ಅಷ್ಟಕ್ಕೂ ನೀವೇನು ಮಾಡಬೇಕು?

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವ ಬುದ್ಧಿ ಚಾಲು ಮಾಡಬೇಕಾಗಿರುವುದು ಅಷ್ಟೇ ಮುಖ್ಯ. ನಿಮ್ಮ ಬಳಿ ಹಳೆಯ ಮೊಬೈಲ್ ಫೋನ್ (ಬೇಸಿಕ್ ಸೆಟ್) ಇದ್ದಿದ್ದರೆ ಸಾಕು. ಮುಂದೇನು ಮಾಡಬೇಕು? ಹೆಚ್ಚು ಸಸ್ಫೆನ್ಸ್ ಬೇಡ, ಸ್ಲೈಡರ್‌ನಲ್ಲಿ ಕೊಟ್ಟಿರುವ ಲೇಖನವನ್ನು ಓದಿ ನೋಡಿರಿ...

ಸುಲಭ ವಿಧಾನ

ಸುಲಭ ವಿಧಾನ

ಕೆಲವ ಐದು ನಿಮಿಷಗಳನ್ನು ಈ ಲೇಖನವನ್ನು ಓದಲು ಮೀಸಲಿಡಿರಿ. ಇದನ್ನು ಅನುಸರಿಸಿದ್ದಲ್ಲಿ ಕಾರು ಕಳವಾದರೂ ತಕ್ಷಣ ಮರಳಿ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಮೊಬೈಲ್ ಫೋನ್ ಖರೀದಿ

ಮೊಬೈಲ್ ಫೋನ್ ಖರೀದಿ

1. ತುಂಬಾ ಸಮಯ ಚಾರ್ಜ್ ನಿಲ್ಲಬಹುದಾದ ಯಾವುದಾದರೂ ಕಡಿಮೆ ಬೆಲೆಯ ಮೊಬೈಲ್ ಫೋನ್‌ವೊಂದನ್ನು ತಗ್ಗೊಳ್ಳಿರಿ.

ಸಿಮ್ ಕಾರ್ಡ್

ಸಿಮ್ ಕಾರ್ಡ್

2. ಈ ಮೊಬೈಲ್‌ಗೆ ದೇಶದಲ್ಲಿ ದೊರಕುವ ಅತ್ಯುತ್ತಮ ನೆಟ್‌ವರ್ಕ್ ಸೇವೆ ಇರುವ ಸಿಮ್ ಹಾಕಿಸಿಕೊಳ್ಳಿರಿ.

ಸೈಲೆಂಟ್ ಮೋಡ್

ಸೈಲೆಂಟ್ ಮೋಡ್

3. ಪ್ರಸ್ತುತ ಮೊಬೈಲನ್ನು ಸಂಪೂರ್ಣ ಸೈಲೆಂಟ್ ಮೋಡ್‌ನಲ್ಲಿಡಿರಿ. (ನೆನಪಿರಲಿ ಸೈಲೆಂಟ್ ಮೋಡ್ ಅಂದರೆ ಮೊಬೈಲ್ ವೈಬ್ರಷನ್ ಕೂಡಾ ಆಗಬಾರದು.)

ಪ್ಲಾಸ್ಟಿಕ್ ಕವರ್

ಪ್ಲಾಸ್ಟಿಕ್ ಕವರ್

4. ಇದಕ್ಕೆ ನೀರು ತಗಲದಿರಲು ಅಥವಾ ಧೂಳಿಕ ಕಣಗಳು ಸೇರದಿರಲು ಮೊಬೈಲನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಲಗತ್ತಿಸಿರಿ.

ಕರೆ ಮಾಡಿ ಖಚಿತಪಡಿಸಿ

ಕರೆ ಮಾಡಿ ಖಚಿತಪಡಿಸಿ

5. ಇವೆಲ್ಲದರ ಬಳಿಕ ಮೊಬೈಲ್‌ಗೆ ಕರೆ ಮಾಡಿದಾಗ ಪ್ರತಿಕ್ರಿಯಿಸುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿರಿ.

ಕಾರಿನ ಸುರಕ್ಷಿತ ಭಾಗದಲ್ಲಿ ಬಚ್ಚಿಡಿ.

ಕಾರಿನ ಸುರಕ್ಷಿತ ಭಾಗದಲ್ಲಿ ಬಚ್ಚಿಡಿ.

6. ಈ ಮೊಬೈಲನ್ನು ಕಾರಿನ ಅತ್ಯಂತ ಸುರಕ್ಷಿತ ಜಾಗದಲ್ಲಿ ಬಚ್ಚಿಡಿ. (ನೆನಪಿರಲಿ ಇದು ಕಳ್ಳರಿಗೆ ಸುಲಭದಲ್ಲಿ ಕಾಣಸಿಗಬಾರದು.)

ಚಾರ್ಜ್ ಮಾಡಲು ಮರೆಯದಿರಿ

ಚಾರ್ಜ್ ಮಾಡಲು ಮರೆಯದಿರಿ

7. ಕೊನೆಗೆ ಮೊಬೈಲ್ ಫೋನ್ ವಾರಕ್ಕೆ ಎರಡು ಬಾರಿಯಾದರೂ ಚಾರ್ಜ್ ಮಾಡಿಸಲು ಮರೆಯದಿರಿ. ಹಾಗೆಯೇ ಸಿಮ್ ಅವಧಿ ಸಮಾಪ್ತಿಯಾಗದಂತೆ ನೋಡಿಕೊಳ್ಳಿರಿ.

ಪೊಲೀಸ್ ಸಹಾಯ

ಪೊಲೀಸ್ ಸಹಾಯ

ಇಷ್ಟು ಮಾಡಿದರೆ ಸಾಕು. ಒಂದು ವೇಳೆ ನಿಮ್ಮ ಕಾರು ಕಳವಾದ್ದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿರಿ. ತನಿಖೆಗೆ ಪೂರಕವಾಗಿ ಕಾರಿನಲ್ಲಿ ಬಚ್ಚಿಡಲಾದ ನಿಮ್ಮ ಮೊಬೈಲ್ ಸಂಖ್ಯೆ ಪೊಲೀಸರಿಗೆ ಹಸ್ತಾಂತರಿಸಿರಿ. ಈ ಸ್ಥಳವನ್ನು ಪೊಲೀಸರು ಸುಲಭವಾಗಿ ಟ್ರ್ಯಾಕ್ ಮಾಡಬಲ್ಲರು. ಈ ಮೂಲಕ ಕಳವಾದ ನಿಮ್ಮ ಕಾರನ್ನು ಮರಳಿ ಪಡೆಯಬಹುದಾಗಿದೆ. ಇದರಿಂದ ಕಳ್ಳರಿಗೆ ಉತ್ತಮ ಶಾಸ್ತಿ ಕೂಡಾ ಸಿಗಲಿದೆ.

ಸುಲಭ ಉಪಾಯ

ಸುಲಭ ಉಪಾಯ

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ

English summary
It takes only 2 minutes for a car thief to runaway with your car. No matter you have a trekker and auto-alarming devices fitted in your car. The best safety for your car is a live and active Mobile Phone hidden in a safe place in your car
Story first published: Thursday, July 25, 2013, 9:36 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more