ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಕಾರುಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಅವುಗಳನ್ನು ಸ್ಟಾರ್ಟ್ ಮಾಡುವಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಕಾರುಗಳು ಹಳೆಯದಾದರೆ ಮಧ್ಯ ದಾರಿಯಲ್ಲಿ ನಿಲ್ಲುವುದು ಅಥವಾ ಸ್ಟಾರ್ಟ್ ಆಗದೇ ಇರುವಂತಹ ಸಮಸ್ಯೆಗಳು ಸಹಜ.

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಕಾರು ಹಳೆಯದಾದರೆ ಎಂಜಿನ್ ಕೆಟ್ಟಿರುತ್ತದೆ. ಈ ಕಾರಣಕ್ಕೆ ಕಾರ್ ಅನ್ನು ಸ್ಟಾರ್ಟ್ ಮಾಡಲು ಕಾರನ್ನು ತಳ್ಳಬೇಕಾಗುತ್ತದೆ. ಕಾರು ತುಂಬಾ ಹಳೆಯದಾದಾಗ ಅಥವಾ ಸರಿಯಾದ ಸಮಯದಲ್ಲಿ ಕಾರಿನ ಸರ್ವಿಸ್, ರಿಪೇರಿ ಮಾಡಿಸದಿದ್ದಲ್ಲಿ ಕಾರಿನಲ್ಲಿ ತೊಂದರೆಗಳು ಉಂಟಾಗುತ್ತವೆ. ಯಾವುದಾದರೂ ಮಹತ್ವದ ಕಾರ್ಯಕ್ಕೆ ಹೊರಟಿದ್ದಾಗ ಕಾರು ಮಧ್ಯ ದಾರಿಯಲ್ಲಿ ನಿಂತು ಹೋದರೆ, ಕಾರಿನ ರಿಪೇರಿಗಾಗಿ ಮೆಕ್ಯಾನಿಕ್ ಅನ್ನು ಕರೆಯಬೇಕಾಗುತ್ತದೆ.

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಕಾರನ್ನು ತಳ್ಳುವ ಮೂಲಕ ಅದನ್ನು ಹೇಗೆ ಸ್ಟಾರ್ಟ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಕಾರ್ ಅನ್ನು ಒಬ್ಬರಿಂದ ತಳ್ಳಲು ಸಾಧ್ಯವಿಲ್ಲ. ಕನಿಷ್ಠ ಇಬ್ಬರಿಂದ ಮೂವರು ಬೇಕಾಗುತ್ತಾರೆ. ಕಾರು ಸರಿಯಾದ ವೇಗಕ್ಕೆ ಬರುವವರೆಗೆ ಕಾರನ್ನು ತಳ್ಳುವುದು ಸೂಕ್ತ. ಆಗ ಮಾತ್ರ ಕಾರು ಸ್ಟಾರ್ಟ್ ಆಗುತ್ತದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಮೊದಲನೆಯದಾಗಿ ಕಾರ್ ಎಂಜಿನ್ ಅನ್ನು ಸ್ಟಾರ್ಟ್ ಮೋಡ್‌ನಲ್ಲಿಡಬೇಕು. ಕಾರಿನ ಬ್ಯಾಟರಿಗೆ ಕನೆಕ್ಟ್ ಆಗಿರುವ ಎಲ್ಲಾ ವೈರ್‌ಗಳು ಸರಿಯಾಗಿ ಕನೆಕ್ಟ್ ಆಗಿವೆಯೇ ಎಂಬುದನ್ನು ಪರೀಕ್ಷಿಸಿ. ಕೆಲವೊಮ್ಮೆ ಬ್ಯಾಟರಿ ವೈರ್ ಮೇಲೆ ಕಾರ್ಬನ್ ಅಥವಾ ಕೊಳೆ ಇದ್ದರೆ ಕಾರು ಸ್ಟಾರ್ಟ್ ಆಗುವುದಿಲ್ಲ.

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ವೈರ್ ಸರಿಯಾಗಿದ್ದರೆ, ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಿದ್ದರೆ, ಡ್ರೈವರ್ ಸೀಟಿನಲ್ಲಿ ಕುಳಿತು ಕಾರಿನ ಹ್ಯಾಂಡ್‌ಬ್ರೇಕ್ ಅನ್ನು ಬಿಡುಗಡೆ ಮಾಡಬೇಕು. ಇದರಿಂದ ಕಾರಿನ ಬ್ರೇಕ್‌ಗಳು ಮುಕ್ತವಾಗುತ್ತವೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಕಾರನ್ನು ತಳ್ಳುವಂತೆ ಇಬ್ಬರು ಮೂವರಿಗೆ ತಿಳಿಸಿ. ಕಾರನ್ನು ತಳ್ಳುವಾಗ ಕ್ಲಚ್ ಅನ್ನು ಸಂಪೂರ್ಣವಾಗಿ ಒತ್ತಿ ಕಾರನ್ನು ಎರಡನೇ ಗೇರ್‌ಗೆ ಹಾಕಿ. ಕಾರು ಮೊದಲ ಗೇರ್‌ನಲ್ಲಿದ್ದರೆ ಕ್ಲಚ್‌ನ ಮೇಲೆ ಹೆಚ್ಚಿನ ಪ್ರೆಷರ್ ಉಂಟಾಗುತ್ತದೆ.

ರಸ್ತೆ ಮಧ್ಯೆ ನಿಂತ ಕಾರು ಸ್ಟಾರ್ಟ್ ಆಗುತ್ತಿಲ್ಲವೇ? ಹೀಗೆ ಮಾಡಿ ನೋಡಿ

ಕಾರು ವೇಗವಾದ ತಕ್ಷಣ, ಕ್ಲಚ್ ಅನ್ನು ಬಿಡಿ. ಸ್ವಲ್ಪ ಜರ್ಕ್ ಹೊಡೆದಂತೆ ಆದರೂ ಕಾರು ಸ್ಟಾರ್ಟ್ ಆಗುತ್ತದೆ. ಕಾರು ವೇಗವಾಗುವವರೆಗೆ ಕ್ಲಚ್ ಅನ್ನು ಬಿಡಬೇಡಿ. ಕ್ಲಚ್ ಅನ್ನು ಬಿಟ್ಟರೆ ಕಾರು ಸ್ಟಾರ್ಟ್ ಆಗುವುದಿಲ್ಲ. ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ.

Most Read Articles

Kannada
English summary
How to push start a car. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X