ಸೆಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಇತ್ತೀಚೆಗೆ ಹೊಸ ವಾಹನಗಳ ಪ್ರಮಾಣದಷ್ಟೇ ಬಳಸಿದ ವಾಹನಗಳ ಮಾರಾಟ ಪ್ರಕ್ರಿಯೆ ಕೂಡಾ ಜೋರಾಗಿದ್ದು, ಈ ವೇಳೆ ಸೇಕೇಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಸಾಕಷ್ಟು ಮಹತ್ವದ ಪಡೆದಿದೆ.

By Manoj B.k

ಇತ್ತೀಚೆಗೆ ಹೊಸ ವಾಹನಗಳ ಪ್ರಮಾಣದಷ್ಟೇ ಬಳಸಿದ ವಾಹನಗಳ ಮಾರಾಟ ಪ್ರಕ್ರಿಯೆ ಕೂಡಾ ಜೋರಾಗಿದ್ದು, ಈ ವೇಳೆ ಸೇಕೇಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಸಾಕಷ್ಟು ಮಹತ್ವದ ಪಡೆದಿದೆ.

ಕಳೆದ ಒಂದು ದಶಕದ ಅವಧಿಯಲ್ಲಿ ವಾಹನ ಉದ್ಯಮ ಹತ್ತಾರು ಬದಲಾವಣೆ ಹೊಂದುವ ಮೂಲಕ ತನ್ನ ಸ್ವರೂಪ ಬದಲಿಸಿಕೊಂಡಿದೆ. ಹೊಸ ನಮೂನೆ ಕಾರುಗಳ ಅಭಿವೃದ್ಧಿ ಮತ್ತು ಮಾರಾಟದ ನಡುವೆಯೂ ಸೆಕೆಂಡ್ ಹ್ಯಾಂಡ್ ಕಾರು ಮತ್ತು ಬೈಕ್ ಮಾರಾಟ ಪ್ರಮಾಣವು ಕೂಡಾ ಹೆಚ್ಚುತ್ತಲೇ ಇದೆ.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಹೊಸ ವಾಹನಗಳ ಪ್ರಮಾಣದಷ್ಟೇ ಬಳಸಿದ ವಾಹನಗಳ ಮಾರಾಟ ಪ್ರಕ್ರಿಯೆ ಕೂಡಾ ಜೋರಾಗಿದ್ದು, ಈ ವೇಳೆ ಸೆಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಸಾಕಷ್ಟು ಮಹತ್ವದ ಪಡೆದಿದೆ. ಇದು ವಾಹನ ಮಾರಾಟ ಮಾಡುವ ಮತ್ತು ವಾಹನ ಖರೀದಿಸುವ ಗ್ರಾಹಕರಿಗೂ ಅನ್ವಯವಾಗುತ್ತದೆ.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಈ ಹಿನ್ನೆಲೆ ಬಳಸಿದ ವಾಹನಗಳ ವಿಮೆ ವರ್ಗಾವಣೆ ಕುರಿತು ಇಲ್ಲಿ ಚರ್ಚಿಸಲಾಗುತ್ತಿದ್ದು, ಬಳಸಿದ ವಾಹನಗಳನ್ನು ಮಾರಾಟ ಮಾಡುವ ಮತ್ತು ಖರೀದಿ ಮಾಡುವ ಗ್ರಾಹಕರು ವಿಮೆ ವರ್ಗಾವಣೆ ಪ್ರಕ್ರಿಯೆ ವೇಳೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆಯಿದೆ.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ವರ್ಗಾವಣೆ ಅಗತ್ಯ

ಯಾರೇ ಆಗಲಿ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಾಡಿದ ನಿಗದಿತ ಅವಧಿಯಲ್ಲಿ ಕಾರು ಖರೀದಿಸಿ ಗ್ರಾಹಕರ ಹೆಸರಿಗೆ ಕಾರಿನ ಮಾಲೀಕತ್ವವನ್ನು ವರ್ಗಾವಣೆ ಮಾಡಬೇಕು. ಜೊತೆಗೆ ಕಾರಿನ ಮಾಡಿಸಲಾದ ವಿಮೆಯನ್ನು ಸಹ ವರ್ಗಾವಣೆ ಮಾಡಿಸಿಕೊಳ್ಳಬೇಕು.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಯಾಕೆಂದ್ರೆ ವಿಮಾ ಪಾಲಿಸಿಯು ಪಾಲಿಸಿದಾರ ಮತ್ತು ವಿಮಾದಾರರ ನಡುವಿನ ಒಪ್ಪಂದವಾಗಿದ್ದು, ಹಾನಿ ಸಂದರ್ಭದಲ್ಲಿ ಇದು ಪರಿಹಾರ ಪಡೆಯಲು ಉಪಯುಕ್ತವಾಗಿದೆ. ಜೊತೆಗೆ ಬಳಸಿದ ವಾಹನವನ್ನು ಮಾರಾಟ ಮಾಡುವ ವ್ಯಕ್ತಿಯು ಎನ್‌ಸಿಬಿ ಪಡೆದಿದ್ದರೆ ಇನ್ನು ಉತ್ತಮ.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ನೊ ಕ್ಲೈಂ ಬೋನಸ್ (ಎನ್‌ಸಿಬಿ) ಎಂದರೇನು?

ಸುಲಭವಾಗಿ ಹೇಳಬೇಕೆಂದರೆ ಅಪಘಾತ ನಡೆಸದ ಚಾಲಕರು ನೋ ಕ್ಲೈಂ ಬೋನಸ್(ಎನ್‌ಸಿಬಿ)ಗೆ ಅರ್ಹರಾಗುತ್ತಾರೆ. ಅಂದರೆ ಮೊದಲ ವಿಮಾ ಅವಧಿಯಲ್ಲಿ ಕ್ಲೈಮ್ ಮಾಡದಿದ್ದಲ್ಲಿ ಮುಂದಿನ ಪಾಲಿಸಿಯಲ್ಲಿ ಡಿಸ್ಕೌಂಟ್ ದೊರಕಲಿದೆ.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಹಾಗೆಯೇ ಒಂದು ವಿಮಾ ಕಂಪನಿಯಿಂದ ಇನ್ನೊಂದು ವಿಮಾ ಕಂಪನಿಗೆ ಬದಲಾದಲೂ ಎನ್‌ಸಿಬಿ ಸೌಲಭ್ಯ ಮುಂದುವರಿಸಿಕೊಂಡು ಹೋಗಬಹುದು. ಇದರಲ್ಲಿ ಐದು ವರ್ಷದ ವರೆಗೂ ಯಾವುದೇ ಕ್ಲೈಮ್ ಮಾಡದಿದ್ದಲ್ಲಿ ಪ್ರೀಮಿಯಂನಲ್ಲಿ ಶೇ. 50ರಷ್ಟು ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಅಗತ್ಯ ದಾಖಲೆಗಳು

ವಿಮಾ ವರ್ಗಾವಣೆಯೊಂದಿಗೆ ಮುಂದುವರಿಯುವ ಮೊದಲು ನೋಂದಣಿ ಪ್ರಮಾಣ ಪತ್ರಗಳನ್ನು ಮೊದಲ ಹಂತವಾಗಿ ವರ್ಗಾಯಿಸಲು ಸೂಕ್ತವಾಗಿದೆ. ನಂತರ ವರ್ಗಾವಣೆ ಪ್ರಕ್ರಿಯನ್ನು ಪ್ರಾರಂಭಿಸಲು ಕೆಲವು ಅವಶ್ಯಕವಾದ ದಾಖಲೆಗಳು ಸಲ್ಲಿಸಬೇಕಾಗುತ್ತದೆ.

MOST READ: ವಾಹನ ಮಾಲೀಕರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ, ದಾಖಲೆಗಳ ಮಾನ್ಯತಾ ಅವಧಿ ವಿಸ್ತರಿಸಿದ ಸಾರಿಗೆ ಇಲಾಖೆ

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಬೇಕಾದ ದಾಖಲೆಗಳು:

01.ಓಲ್ಡ್ ಪಾಲಿಸಿ ಡಾಕ್ಯುಮೆಂಟ್

02.ಹೊಸ ಅರ್ಜಿ ನಮೂನೆ

03.ಮೂಲ ನೋಂದಣಿ ಪ್ರಮಾಣ ಪತ್ರ

04.ಹಿಂದಿನ ಮಾಲೀಕರಿಂದ ಎನ್‌ಒಸಿ

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಈ ಮೇಲಿನ ದಾಖಲೆಗಳೊಂದಿಗೆ ಫಾರ್ಮ್ 29 ಮತ್ತು ಫಾರ್ಮ್ 30 ಅರ್ಜಿಗಳನ್ನು ತುಂಬುವ ಮೂಲಕ ಮಾಲೀಕತ್ವ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಜೊತೆಗೆ ಈ ಎಲ್ಲಾ ಪ್ರಕ್ರಿಯೆಗಳು ಕೇವಲ 14 ದಿನಗಳೊಗಾಗಿ ಪೂರ್ಣಗೊಳ್ಳಬೇಕು.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಸೇಕೆಂಡ್ ಹ್ಯಾಂಡ್ ವಾಹನಗಳ ವಿಮೆ ವರ್ಗಾವಣೆ ಮಾಡುವುದು ಹೇಗೆ ಗೊತ್ತಾ?

ಒಂದು ವೇಳೆ 14 ದಿನಗೊಳಗಾಗಿ ಈ ಪ್ರಕ್ರಿಯೆಗಳು ಪೂರ್ಣಗೊಳ್ಳದ ಪಕ್ಷದಲ್ಲಿ ಕಾರಿಗೆ ಆಗುವ ನಷ್ಟಕ್ಕೆ ವಿಮಾ ಸಂಸ್ಥೆಗಳು ಯಾವುದೇ ಹೊಣೆಗಾರಿಕೆ ವಹಿಸಿಕೊಳ್ಳುವುದಿಲ್ಲ. ಈ ಹಿನ್ನೆಲೆ ಸೆಕೆಂಡ್ ವಾಹನ ಖರೀದಿದ ನಿಗದಿತ ಅವಧಿಯಲ್ಲಿ ವಿಮಾ ವರ್ಗಾವಣೆ ಬಹುಮುಖ್ಯ ವಿಚಾರವಾಗಿದೆ.

More from DriveSpark

Article Published On: Thursday, March 22, 2018, 13:46 [IST]
English summary
How to transfer motor insurance of used vehicles.
Read more on auto insurance auto tips
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+