ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

By Praveen Sannamani

ಹೊಸ ಕಾರು ಖರೀದಿಸುವುದಕ್ಕಿಂತಲೂ ಮಿಗಿಲಾಗಿ ಕಾರು ಖರೀದಿಸಿದ ನಂತರ ಕಾರಿನ ಎಂಜಿನ್ ಕಾರ್ಯಕ್ಷಮತೆಗಳನ್ನು ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲು. ಹೀಗಾಗಿ ಕಾರು ಮಾಲೀಕರು ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಕಾಯ್ದುಕೊಳ್ಳಲು ಯಾವೆಲ್ಲಾ ಟಿಪ್ಸ್‌ಗಳನ್ನು ಅನುಸರಿಸಬೇಕು ಎಂಬುವುದನ್ನು ಇಲ್ಲಿ ಚರ್ಚಿಸಲಾಗಿದೆ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಇತ್ತೀಚೆಗೆ ಹೊಸ ಕಾರು ಖರೀದಿಸುವುದಕ್ಕಿಂತ ಅದರ ರಿಪೇರಿ ಖರ್ಚುಗಳೇ ತುಂಬಾ ದುಬಾರಿಯಾಗುತ್ತಿದೆ. ಕಾರನ್ನು ಬೇಕಾಬಿಟ್ಟಿಯಾಗಿ ಚಲಾಯಿಸಿ, ಸರಿಯಾಗಿ ಕೇರ್ ತೆಗೆದುಕೊಳ್ಳದಿದ್ದರೆ ನಿತ್ಯ ಕಿಸೆಗೆ ಕತ್ತರಿ ಬೀಳೋದು ಗ್ಯಾರಂಟಿ. ಹೀಗಾಗಿ ಕಾರಿನ ಕಾರಿನ ಮೌಲ್ಯ ಹೆಚ್ಚಿಸಲು ಇಲ್ಲೊಂದಿಷ್ಟು ಸಲಹೆಗಳಿವೆ. ತಪ್ಪದೇ ಪಾಲಿಸಿ ಕಾರನ್ನು ಯಾವಾಗಲೂ ಹೊಸತರಂತೆ ಕಾಣುವಂತೆ ಮಾಡಿ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಬಹುತೇಕ ಖರೀದಿಗಾರರು ಹೊಸತೊಂದು ಕಾರು ಖರೀದಿಸಿದ ಬಳಿಕ ತಮ್ಮ ಕೆಲಸ ಮುಗಿಯಿತು ಎಂದು ಅಂದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಕಾರುಗಳ ಬಿಡಿಭಾಗಗಳು ಹೊಂದಿರುವ ವಾಯಿದೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನಿಮ್ಮ ಕಾರಿನ ಪ್ರಮುಖ ಘಟಕಗಳು ಕೆಲಸ ಮಾಡದಿರಲು ಕಾರಣವಾಗಬಹುದು ಎಂಬುದನ್ನು ಎಚ್ಚರ ವಹಿಸಿರಿ. ಹಾಗೆಯೇ ನಿಗದಿತ ಅವಧಿಯಲ್ಲಿ ಕಾರನ್ನು ಸರ್ವೀಸ್ ಮಾಡಲು ಮರೆಯದಿರಿ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಸರಿಯಾದ ಸಮಯಕ್ಕೆ ಸರ್ವಿಸ್ ಮಾಡಿಸಿ:

ಕಾರು ಉತ್ಪಾದಕರು ಸೂಚಿಸಿದ ಸಮಯಕ್ಕೆ ತಕ್ಕಂತೆ ಸರ್ವಿಸ್ ಮಾಡಿಸಿ. ಅಂದ್ರೆ ಕೂಲಿಂಗ್ ಸಿಸ್ಟಮ್, ಸಸ್ಪೆನ್ಷನ್ ಇತ್ಯಾದಿ ಬಿಡಿಭಾಗಕ್ಕೆ ಹಾನಿಯಾದರೆ ರಿಪೇರಿ ವೆಚ್ಚ ದುಬಾರಿಯಾಗಬಹುದು. ಕಂಪನಿ ತಿಳಿಸಿದಂತೆ ಸೂಕ್ತವಾಗಿ ಸಮರ್ಪಕವಾಗಿ ಕಾರನ್ನು ನಿರ್ವಹಣೆ ಮಾಡಿದರೆ ಕಾರಿನ ರೀ ಸೇಲ್ ಮೌಲ್ಯಕ್ಕೂ ಧಕ್ಕೆಯಾಗದು.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಅನವಶ್ಯಕ ಕಾರು ಚಾಲನೆ ಬೇಡ:

ಎಂಜಿನ್ ಸ್ಟಾರ್ಟ್ ಮಾಡಿದ್ಮೇಲೆ ಕೊಂಚ ದೂರವಾದರೂ ಪ್ರಯಾಣಿಸಲೇಬೇಕು. ಹೀಗಾಗಿ ಅವಶ್ಯಕ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲದಕ್ಕೂ ಕಾರು ಚಾಲನೆಯನ್ನೇ ಅವಲಂಬಿಸಬೇಡಿ. ಇದರಿಂದ ಟ್ರಾಫಿಕ್ ಕಿರಿಕಿರಿ ತಪ್ಪಿಸಬಹುದಲ್ಲದೇ ನಿಮ್ಮ ಆರೋಗ್ಯ ದೃಷ್ಠಿಯಿಂದಲೂ ಒಳ್ಳೆಯದು.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಏರ್ ಫಿಲ್ಟರ್ ಬದಲಾವಣೆ:

ಏರ್ ಫಿಲ್ಟರ್ ಬದಲಾಯಿಸುವುದು ಕಷ್ಟವಲ್ಲ. ಸುಮಾರು 12 ಸಾವಿರ ಮೈಲು ಪ್ರಯಾಣಕ್ಕೊಮ್ಮೆಯಾದರೂ ಏರ್ ಫಿಲ್ಟರ್ ಬದಲಾಯಿಸಬೇಕು. ನಿಮ್ಮ ಕಾರಿಗೆ ಸೂಕ್ತವಾದ ಏರ್ ಫಿಲ್ಟರ್ ಖರೀದಿಸಿ ನೀವೇ ಅಳವಡಿಸಬಹುದು. ಕೊಳಕು ತುಂಬಿದ ಏರ್ ಫಿಲ್ಟರಿನಿಂದ ಕಾರಿನ ಮೈಲೇಜ್ ಕಡಿಮೆಯಾಗುತ್ತದೆ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಕಾರಿನ ಘಟಕಗಳಿಗೂ ಕಾಲಮಿತಿ ಇರುತ್ತೇ:

ತಮ್ಮ ಕನಸಿನ ಕಾರನ್ನು ತಮ್ಮದಾಗಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಹಾಗಂತ ನೀವು ಕಾರೊಂದನ್ನು ಖರೀದಿಸಿದ ಮಾತ್ರಕ್ಕೆ ನಿಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಇದಕ್ಕೆ ಕಾರಣ, ಕಾರಿನಲ್ಲಿ ಅಡಕವಾಗಿರುವ ಬಿಡಿಭಾಗಗಳಿಗೂ ಒಂದು ಕಾಲಮಿತಿ ಅವಧಿ ನಿಗದಿಯಾಗಿರುತ್ತದೆ. ಇದನ್ನು ಕೂಲಂಕುಷವಾಗಿ ಪರಿಶೋಧಿಸಿ ಸೂಕ್ತ ಸಮಯಕ್ಕೆ ಬದಲಾವಣೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿರುತ್ತದೆ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಎಂಜಿನ್ ಆಯಿಲ್:

ಸಾಮಾನ್ಯವಾಗಿ ಪ್ರತಿ 12ರಿಂದ 18 ತಿಂಗಳಲ್ಲಿ ಅಥವಾ 10,000 ಕೀ.ಮೀ.ಗಳಲ್ಲಿ ಎಂಜಿನ್ ಒಯಿಲ್ ಬದಲಾಯಿಸಬೇಕಾಗುತ್ತದೆ. ಹಳೆಯ ಎಂಜಿನ್ ಆಯಿಲ್ ಬಳಕೆ ಮಾಡಿದ್ದಲ್ಲಿ ಲ್ಯೂಬ್ರಿಕಂಟ್ (ಚಾಲನೆಯನ್ನು ಸುಲಭಗೊಳಿಸುವ ಎಣ್ಣೆ) ವ್ಯಾಲೂ ಕಡಿಮೆಯಾಗಲಿದ್ದು, ಎಂಜಿನ್‌ಗೆ ಮಾರಕವಾಗಲಿದೆ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ವಾರಂಟಿ ಪ್ಯಾಕ್‌ಗಳನ್ನು ಮುಂದುವರಿಸಿ:

ನೀವು ಹೊಸ ಕಾರು ಖರೀದಿಸಿದ ನಂತರ ಕಾರುಗಳಿಗೆ ಇಂತಿಷ್ಟು ವರ್ಷಗಳ ಸರ್ವಿಸ್ ಪ್ಯಾಕ್ ಅಥವಾ ವಾರಂಟಿ ಪ್ಯಾಕ್‌ಳನ್ನು ನೀಡಲಾಗುತ್ತೆ. ಇದನ್ನು ನೀವು ಹೆಚ್ಚುವರಿ ಮೊತ್ತ ನೀಡಿ ಸರ್ವಿಸ್ ಪ್ಯಾಕ್ ಅವಧಿಯನ್ನು ಹೆಚ್ಚಿಸಬಹುದು. ಇದರಿಂದ ಕಾರಿನ ಬಿಡಿಭಾಗಗಳಿಗೆ ಹೆಚ್ಚಿನ ಕಾಳಜಿ ಸಿಗಲಿದೆ.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ:

ತಮ್ಮ ಪಯಣವನ್ನು ಆದಷ್ಟು ಸುರಕ್ಷಿತವಾಗಿಸಬೇಕಾಗಿರುವುದು ಪ್ರತಿಯೊಬ್ಬ ಕಾರು ಮಾಲಿಕನ ಕರ್ತವ್ಯವಾಗಿದೆ. ಜೊತೆಗೆ ಉತ್ತಮ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವುದು ಕೂಡಾ ಕಾರಿನ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು.

ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಹೇಗೆ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರು ಚಾಲನೆ ವೇಳೆ ಗಂಡ-ಹೆಂಡತಿ ಜಗಳದಿಂದಾಗಿ ನಾಲ್ವರು ದುರ್ಮರಣ

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ವಾಹನ ಮಾಲೀಕರೇ ಇತ್ತ ಗಮನಿಸಿ- ಫಾಸ್ಟ್ ಟ್ಯಾಗ್ ಬಳಸಿ ಸಮಯ ಉಳಿಸಿ....

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಹೈವೇಯಲ್ಲಿ ಡ್ರೈವಿಂಗ್ ಮಾಡಲು 11 ಬಹುಮೂಲ್ಯ ಟಿಪ್ಸ್

Kannada
Read more on auto tips
English summary
Increasing car engine life.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more