ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಸುಲಭವಾಗಿ ಪತ್ತೆಹಚ್ಚಿ

ನಿತ್ಯ ನೀವು ಓಡಾಡುವ ವಾಹನಗಳಲ್ಲಿ ಮೈಲೇಜ್ ಕಡಿಮೆಯಾಗಿದೆಯೇ ಅಥವಾ ವಾಹನದಲ್ಲಿ ಇತ್ತೀಚೆಗೆ ಹೊಗೆ ಹೆಚ್ಚಾಗಿ ಬರುತ್ತಿದೆಯೇ? ಹಾಗಾದರೆ ಇದು ಕೇವಲ ವಾಹನ ಸಮಸ್ಯೆ ಮಾತ್ರವಲ್ಲ, ಬದಲಿಗೆ ಪೆಟ್ರೋಲ್ ಕಲಬೆರಕೆಯಾದರೂ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ನಮ್ಮ ವಾಹನಗಳಲ್ಲಿ ಬಳಸುವ ಪೆಟ್ರೋಲ್ ಕಲಬೆರಕೆಯಾಗಿದೆಯೇ ಎಂಬ ಅನುಮಾನ ನಮ್ಮಲ್ಲಿನ ಹಲವರಿಗಿದೆ. ಈ ಪ್ರಶ್ನೆಯನ್ನು ಬಹುತೇಕರು ಹಲವು ಸಂದರ್ಭಗಳಲ್ಲಿ ತಮ್ಮಲ್ಲಿ ತಾವು ಅಂದುಕೊಂಡಿರಿತ್ತೀರ. ಇದು ಕೇವಲ ಪೆಟ್ರೋಲ್ ಮಾತ್ರವಲ್ಲ ಇಂದಿನ ಬಹುತೇಕ ಉತ್ಪನ್ನಗಳು ಕಲಬೆರಕೆಯಿಂದ ತುಂಬಿವೆ. ಲಾಭಕ್ಕಾಗಿ ಮಕ್ಕಳು ಕುಡಿಯುವ ಹಾಲಿನಿಂದ ಹಿಡಿದು ಎಲ್ಲವನ್ನು ಕಲಬೆರಕೆ ಮಾಡಲಾಗುತ್ತಿದೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಇದರಲ್ಲಿ ಭಾರೀ ಬೇಡಿಕೆಯಿರುವ ಪೆಟ್ರೋಲ್ ಕೂಡ ಕಲಬೆರಕೆಯಾಗಿದೆ. ಪೆಟ್ರೋಲ್‌ನಲ್ಲಿ ಮಾತ್ರವಲ್ಲದೆ ಡೀಸೆಲ್‌ನಂತಹ ಇತರ ಇಂಧನಗಳಲ್ಲಿ ನಿರ್ಬಂಧವಿಲ್ಲದೆ ಕಲಬೆರಕೆ ಮಾಡಲಾಗುತ್ತಿದೆ. ಈ ಕಲಬೆರಕೆ ಇಂಧನವು ವಾಹನಗಳ ಜೀವಿತಾವಧಿಯನ್ನು ಹಲವು ಪಟ್ಟು ವೇಗವಾಗಿ ಕಡಿಮೆ ಮಾಡುತ್ತದೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಇದರ ಜೊತೆಗೆ, ಕಲಬೆರಕೆ ಮಾಡಿದ ಇಂಧನವು ಹೆಚ್ಚು ವಾಯು ಮಾಲಿನ್ಯಕಾರಕ ಕಾರ್ಬನ್ ಅನ್ನು ಹೊರಸೂಸುತ್ತದೆ. ಪರಿಣಾಮವಾಗಿ, ವಾಹನದ ಮೌಲ್ಯವು ತ್ವರಿತವಾಗಿ ಕುಸಿಯಬಹುದು. ಇದಲ್ಲದೇ ಎಂಜಿನ್ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವುದು, ಮೈಲೇಜ್ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುತ್ತವೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಇಂತಹ ಅನಾಹುತಗಳನ್ನು ತಪ್ಪಿಸಲು ಕಲಬೆರಕೆ ಇಂಧನವನ್ನು ತಪ್ಪಿಸುವುದು ಉತ್ತಮ. ಆದರೆ ಇಂಧನ ಕಲಬೆರಕೆಯಾಗಿದೆ ಎಂದು ತಿಳಿಯಿವುದು ಹೇಗೆ ಎಂದು ಹಲವರು ಗೊಂದಲಕ್ಕೊಳಗಾಗಬಹುದು. ಅಂತವರಿಗಾಗಿಯೇ ಕಲಬೆರಕೆ ಇಂಧನವನ್ನು ಪತ್ತೆ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಸಿದ್ದೇವೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಇದಕ್ಕಾಗಿ ಉಪಕರಣವನ್ನು ಎಲ್ಲಿ ಖರೀದಿಸಬೇಕು, ಅದರ ಬೆಲೆ ಎಷ್ಟು, ಬೆಲೆ ತುಂಬಾ ಹೆಚ್ಚಿರಬಹುದೇನೋ ಎಂಬ ಗೊಂದಲ ನಿಮ್ಮಲ್ಲಿ ಇರಬಹುದು. ಆದರೆ ಪೆಟ್ರೋಲ್ ಗುಣಮಟ್ಟವನ್ನು ಪರೀಕ್ಷಿಸಲು ದೊಡ್ಡ ಸಲಕರಣೆಗಳ ಅಗತ್ಯವಿಲ್ಲ. ನಿರ್ದಿಷ್ಟವಾಗಿ ದೊಡ್ಡ ಲ್ಯಾಬ್ ಕೂಡ ಅಗತ್ಯವಿಲ್ಲ. ಪೆಟ್ರೋಲ್‌ನ ಶುದ್ಧತೆಯನ್ನು ನೀವು ಮನೆಯಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಪೆಟ್ರೋಲ್‌ನ ಶುದ್ಧತೆಯನ್ನು ನಿರ್ಧರಿಸಲು ಬಿಳಿ ಕಾಗದದ ಸಣ್ಣ ತುಂಡು (ಫಿಲ್ಟರ್ ಪೇಪರ್) ಮತ್ತು ಪೆಟ್ರೋಲ್ ಅನ್ನು ತೆಗೆದುಕೊಳ್ಳಲು ಒಂದು ನಳಿಕೆ ಸಾಕು. ಇವುಗಳಿಂದ ನೀವು ಈ ಪರೀಕ್ಷೆಯನ್ನು ಎಲ್ಲಿ ಬೇಕಾದರೂ ಮಾಡಬಹುದು. ಈ ಟ್ರಿಕ್‌ನಿಂದ ಪೆಟ್ರೋಲ್ ಕಲಬೆರಕೆಯನ್ನು ತುಂಬಾ ಸುಲಭವಾಗಿ ಪತ್ತೆಹಚ್ಚಬಹುದು.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ನಾಸಲ್ (ಅನಿಲ ಅಥವಾ ದ್ರವದ ಜೆಟ್ ಅನ್ನು ನಿಯಂತ್ರಿಸಲು ಬಳಸುವ ಪೈಪ್)

ಮೊದಲು ನಾಸಲ್ ಮೂಲಕ ಪೆಟ್ರೋಲ್ ತೆಗೆದುಕೊಳ್ಳುವ ಮುಂಚೆ ಅದನ್ನು ಸ್ವಚ್ಛಗೊಳಿಸಿ. ಅದರ ಮೂಲಕ ಪೆಟ್ರೋಲ್ ಟ್ಯಾಂಕ್‌ಗೆ ಧೂಳು ಪ್ರವೇಶಿಸದಂತೆ ಮಾಡಬೇಕು. ಒಂದು ವೇಳೆ ನೀವು ನಾಸಲ್ ಹೊಂದಿಲ್ಲದಿದ್ದರೆ, ನಿಮ್ಮ ವಾಹನದ ಇಂಧನ ಟ್ಯಾಂಕ್‌ನಿಂದ ಇಂಧನವನ್ನು ಹೊರಹಾಕಲು ನೀವು ಸಣ್ಣ ಟ್ಯೂಬ್ ಅಥವಾ ಇತರ ಸಾಧನವನ್ನು ಬಳಸಬಹುದು.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಫಿಲ್ಟರ್ ಪೇಪರ್:

ಹೊಸ ಫಿಲ್ಟರ್ ಪೇಪರ್ ಮೇಲೆ ಹೊರ ತೆಗೆದ ಪೆಟ್ರೋಲ್ ಡ್ರಾಪ್ ಅನ್ನು ಸುರಿಯಿರಿ. ಈ ಕಾಗದವನ್ನು ಸ್ವಲ್ಪ ಸಮಯದವರೆಗೆ ಗಾಳಿ ಪ್ರದೇಶದಲ್ಲಿ ಇಡಬೇಕು. ಫಿಲ್ಟರ್ ಪೇಪರ್ ಮೇಲೆ ಸುರಿದ ಪೆಟ್ರೋಲ್ ಶುದ್ಧವಾಗಿದ್ದರೆ, ಅದು ಯಾವುದೇ ಕುರುಹು ಇಲ್ಲದೆ ಗಾಳಿಯಲ್ಲಿ ಕರಗುತ್ತದೆ. ಕಲಬೆರಕೆ ಆಗಿದ್ದರೆ ಫಿಲ್ಟರ್ ಪೇಪರ್‌ನಲ್ಲಿ ಕಪ್ಪು ಚುಕ್ಕೆಯಾಗಿ ಬದಲಾಗುತ್ತದೆ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಈ ಮೂಲಕ ನೀವು ಕಲಬೆರಕೆ ಪೆಟ್ರೋಲ್ ಬಳಸುತ್ತಿದ್ದೀರೋ ಅಥವಾ ಶುದ್ಧ ಪೆಟ್ರೋಲ್ ಬಳಸುತ್ತಿದ್ದೀರಾ ಎಂಬುದನ್ನು ಕಂಡುಹಿಡಿಯಬಹುದು. ಈ ಪರೀಕ್ಷೆ ಮಾಡಲು ಹೆಚ್ಚು ವೆಚ್ಚವಾಗುವುದಿಲ್ಲ. ಪೆಟ್ರೋಲ್ ಕಲಬೆರಕೆ ಅಪರಾಧ. ಆದ್ದರಿಂದ, ನೀವು ಈ ವಂಚನೆಗೆ ಬಲಿಯಾಗಿದ್ದರೆ, ಆ ನಿರ್ದಿಷ್ಟ ಪೆಟ್ರೋಲ್ ಬಂಕ್ ಬಗ್ಗೆ ನೀವು ದೂರು ಸಲ್ಲಿಸಬಹುದು.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಪೆಟ್ರೋಲ್ ಬೆಲೆಯು ಈಗಾಗಲೇ ಗಗನಕ್ಕೇರುತ್ತಿದೆ. ಒಂದೆಡೆ ಬೆಲೆ ಹೀಗಿದ್ದರೆ ಅದರಲ್ಲೂ ಹಣ ಮಾಡಲು ಬಯಸುವವರು ಮನಬಂದಂತೆ ಇಂಧನದಲ್ಲಿ ಕಲಬೆರಕೆ ಮಾಡಿ ತಮ್ಮ ಲಾಭ ನೋಡಿಕೊಳ್ಳುತ್ತಿದ್ದಾರೆ. ನಿಮಗೆ ಪೆಟ್ರೋಲ್ ಕಲಬೆರೆಕೆಯಾಗಿದೆಯೆಂದು ಅನುಮಾನ ಬಂದರೆ ಮೇಲೆ ತಿಳಿಸಿದಂತಹ ಸುಲಭ ವಿಧಾನವನ್ನು ಅನುಸರಿಸಿ ಪತ್ತೆಹಚ್ಚಿ.

ನೀವು ಬಳಸುವ ಪೆಟ್ರೋಲ್ ಶುದ್ಧವಾಗಿದೆಯೇ? ಸಣ್ಣ ಫಿಲ್ಟರ್ ಪೇಪರ್ ಬಳಸಿ ಮನೆಯಲ್ಲೇ ಪತ್ತೆಹಚ್ಚಿ

ಒಂದು ವೇಳೆ ಕಲಬೆರಕೆಯಾಗಿದ್ದಲ್ಲಿ ಸೀದಾ ಠಾಣೆಗೆ ದೂರು ನೀಡಿ, ಇದರಿಂದ ನಿಮಗೆ ಮಾತ್ರವಲ್ಲ ನಿತ್ಯ ಅದೇ ಬಂಕ್‌ನಲ್ಲಿ ಇಂಧನ ತುಂಬಿಸುವ ಅದೆಷ್ಟೋ ಮಂದಿಗೆ ಸಹಾಯ ಮಾಡಿದಂತಾಗುತ್ತದೆ. ಒಂದು ವೇಳೆ ಫಿಲ್ಟರ್ ಪೇಪರ್‌ನಲ್ಲಿ ಯಾವುದೇ ಕಲೆ ಇಲ್ಲದಿದ್ದರೇ ನಿಸ್ಸಂಶಯವಾಗಿ ಇಂಧನವನ್ನು ಹಾಕಿಸಿಕೊಳ್ಳಬಹುದು.

Most Read Articles

Kannada
English summary
Is the petrol you use clean Trace at home using a small filter paper
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X