ಸೇವಾ ಸಿಂಧು ಆ್ಯಪ್ ಮೂಲಕ ಟ್ರಾವೆಲ್ ಪಾಸ್ ಪಡೆಯುವುದು ಹೇಗೆ?
ಮಾಹಾಮಾರಿ ಕರೋನಾದಿಂದಾಗಿ ಪ್ರತಿಯೊಬ್ಬರು ಒಂದಿಲ್ಲಾ ಒಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ವೈರಸ್ ತಡೆಯಲು ಲಾಕ್‌ಡೌನ್ ವಿಧಿಸಿದ್ದರಿಂದ ಕೋಟ್ಯಾಂತರ ಕಾರ್ಮಿಕರು ರಾಜ್ಯ ಮತ್ತು ಅಂತರ್‌ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ಇವರ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಹಲವಾರು ಕ್ರಮಕೈಗೊಂಡಿದ್ದರು ಸೂಕ್ತ ಮಾಹಿತಿ ಇಲ್ಲದೆ ಕಾರ್ಮಿಕರು ಪರದಾಡುವಂತಾಗಿದೆ.

ದೇಶಾದ್ಯಂತ ಸದ್ಯ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಸಾರಿಗೆ ಸೌಲಭ್ಯಗಳಿಗೆ ವಿನಾಯ್ತ ನೀಡಿದ್ದರೂ ಸೀಮಿತ ಪ್ರದೇಶ ಮತ್ತು ಸಂದರ್ಭಕ್ಕೆ ಅನುಸಾರವಾಗಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ರಾಜ್ಯ ಒಳಗೆ ಹೊರತುಪಡಿಸಿ ಅಂತರ್‌ರಾಜ್ಯಗಳಲ್ಲಿ ಯಾರಾದರೂ ಸಿಲುಕಿಕೊಂಡು ರಾಜ್ಯಕ್ಕೆ ಹಿಂದಿರುಗುವ ಪರಿಸ್ಥಿತಿಯಿದ್ದಲ್ಲಿ ಇ-ಪಾಸ್ ಮೂಲಕ ಪ್ರವೇಶ ಪಡೆಯಬಹುದಾಗಿದೆ.

ಇದಕ್ಕಾಗಿ ಸೇವಾ ಸಿಂಧು ಆ್ಯಪ್ ಮೂಲಕ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕಿದ್ದು, ರಾಜ್ಯ ಸರ್ಕಾರ ಇದಕ್ಕಾಗಿಯೇ ಆರಂಭಿಸಿರುವ ವಿಶೇಷ ಜಾಲತಾಣದಲ್ಲಿ ತ್ವರಿತಗತಿಯಲ್ಲಿ ಟ್ರಾವೆಲ್ ಪಾಸ್ ಪಡೆಯಬಹುದು.

ಇದಕ್ಕಾಗಿ ಸೇವಾ ಸಿಂಧು ಆ್ಯಪ್ ಮೂಲಕ ಕಡ್ಡಾಯವಾಗಿ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕಿದ್ದು, ರಾಜ್ಯ ಸರ್ಕಾರ ಇದಕ್ಕಾಗಿಯೇ ಆರಂಭಿಸಿರುವ ವಿಶೇಷ ಜಾಲತಾಣದಲ್ಲಿ ತ್ವರಿತಗತಿಯಲ್ಲಿ ಟ್ರಾವೆಲ್ ಪಾಸ್ ಪಡೆಯಬಹುದು.

ಹಾಗಾದರೆ ಸೇವಾ ಸಿಂಧು ಆ್ಯಪ್ ದಾಖಲಿಸಬೇಕಾದ ಅಗತ್ಯ ಮಾಹಿತಿಗಳೇನು? ಯಾರೆಲ್ಲಾ ಟ್ರಾವೆಲ್ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದು? ಎನ್ನುವ ಪ್ರಮುಖ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿಯೋಣ. ಅದಕ್ಕೂ ಮೊದಲು ಅರ್ಜಿ ಸಲ್ಲಿಸುವ ವಿಧಾನದಲ್ಲಿ ಎಚ್ಚರಿಕೆಯಿಂದ ಉತ್ತರಗಳನ್ನು ದಾಖಲಿಸಬೇಕಾಗುತ್ತದೆ.
MOST READ: ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಟ್ರಾವೆಲ್ ಪಾಸ್ ಅರ್ಜಿ ಸಲ್ಲಿಸುವ ವಿಧಾನ:
ಸೇವಾ ಸಿಂಧು(sevasindhu.karnataka.gov.in) ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಹೆಸರು ಮತ್ತು ವಿಳಾಸವನ್ನು ಭರ್ತಿ ಮಾಡಬೇಕು. ತದನಂತರ ನೀವು ಯಾವ ರಾಜ್ಯದಿಂದ ಕರ್ನಾಟಕ್ಕೆ ಆಗಮಿಸುತ್ತಿದ್ದೀರಿ ಎನ್ನುವ ಮಾಹಿತಿ ನೀಡಬೇಕು.

ತದನಂತರ ನಿಮ್ಮ ಮತ್ತು ನಿಮ್ಮ ಕುಟುಂಬದ ಸದಸ್ಯರ ಆರೋಗ್ಯ ಸ್ಥಿತಿಗತಿ ಬಗೆಗೆ ದಾಖಲಿಸಿದ ನಂತರ ನೀವು ಪ್ರಯಾಣ ಮಾಡುವ ವಿಧಾನ ಬಗೆಗೆ ಮಾಹಿತಿ ನೀಡಬೇಕು. ನೀವು ಸ್ವಂತ ವಾಹನ ಬಳಕೆ ಮಾಡುತ್ತೀರಾ? ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅವಶ್ಯಕತೆ ಇದೆಯಾ ಎನ್ನುವುದನ್ನು ಸ್ಪಷ್ಟಪಡಿಸಬೇಕು.
MOST READ: ಕರೋನಾ ವೈರಸ್ ಎಫೆಕ್ಟ್: ಕಾಂಟ್ಯಾಕ್ಟ್‌ಲೆಸ್ ವ್ಯವಸ್ಥೆಗೆ ಮುಂದಾದ ಪೊಲೀಸ್ ಇಲಾಖೆ

ಇದಾದ ಬಳಿಕ ರಾಜ್ಯಕ್ಕೆ ಮರಳಿದ ನಂತರ 15 ದಿನಗಳ ಕಾಲ ಕ್ವಾರಂಟೈನ್‌ಗೆ ಯಾವೆಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೀರಾ ಎನ್ನುವ ಮಾಹಿತಿ ನೀಡಬೇಕು. ಸರ್ಕಾರ ಸೂಚಿಸಿದ ಹೋಟೆಲ್‌ನಲ್ಲಿ ಉಳಿವಿರಾ ಅಥವಾ ನಿಮ್ಮ ಸ್ವಂತ ಮನೆಯಲ್ಲೇ ಪ್ರತ್ಯೇಕ ವಾಸಯೋಗ್ಯ ಸ್ಥಳಗಳನ್ನು ಸೂಚಿಸಬೇಕಾಗುತ್ತದೆ.

ಈ ಎಲ್ಲಾ ನಿಖರ ಮಾಹಿತಿ ನೀಡಿದ ನಂತರ ಅಂತಿಮವಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ನಿಮಗೆ ನೋಂದಣಿಯ ಐಡಿ ದೊರೆಯಲಿದೆ. ಅರ್ಜಿ ಸಲ್ಲಿಸಿದ ಎರಡು ದಿನಗೊಳಗಾಗಿ ನಿಮಗೆ ಸಾರಿಗೆ ವ್ಯವಸ್ಥೆಯ ಕುರಿತಾಗಿ ಆ್ಯಪ್ ಮೂಲಕವೇ ನಿಖರ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ನೀವು ಸ್ವಂತ ವಾಹನಗಳನ್ನು ಹೊಂದಿದ್ದಲ್ಲಿ ಊರಿಗೆ ಮರಳಿ ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಿದ್ದು, ಒಂದು ವೇಳೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದ್ದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೇ ನಿಮ್ಮ ಆರೋಗ್ಯ ವಿಚಾರಣೆ ಮಾಡಿಯೇ ಕ್ವಾರಂಟೈನ್ ಕೇಂದ್ರಗಳಿಗೆ ತಲುಪಿಸುತ್ತಾರೆ.

ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸುವುದಾರರೇ ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್ ಮೂಲಕ ಅನುಮತಿ ಪಡೆದುಕೊಂಡು ಪ್ರಯಾಣಿಸುವುದು ಉತ್ತಮ ಕ್ರಮವಾಗಿದ್ದು, ಆರೋಗ್ಯ ದೃಷ್ಠಿಯಿಂದಲೂ ನಿಮ್ಮ ಮೇಲೆ ಇಗಾ ಇಡಲು ಇದು ಸಹಕಾರಿಯಾಗಿದೆ.
MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಕೇವಲ ಕರ್ನಾಟಕಕ್ಕೆ ಬರುವ ಕಾರ್ಮಿಕರಿಗಾಗಿ ಮಾತ್ರವಲ್ಲದೆ ಕರ್ನಾಟಕದಿಂದ ಹೊರಹೋಗುವವರು ಮತ್ತು ವಿದೇಶಿಗಳಿಗಳಿಂದ ಆಗಮಿಸುವವರು ಕೂಡಾ ಕಡ್ಡಾಯವಾಗಿ ಸೇವಾ ಸಿಂಧು ಆ್ಯಪ್‌ನಲ್ಲಿ ಮಾಹಿತಿ ದಾಖಲಿಸಿ ಪರವಾನಿಗೆಪಡೆದುಕೊಳ್ಳತಕ್ಕದ್ದು.


Click it and Unblock the Notifications