Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರುಗಳಲ್ಲಿ ನೀರಿನ ಬಾಟಲ್‌ಗಳನ್ನು ಬಿಟ್ಟು ಪಾರ್ಕ್ ಮಾಡುವ ಮುನ್ನ ಎಚ್ಚರವಿರಲಿ..
ಬೇಸಿಗೆಯ ಸಂದರ್ಭದಲ್ಲಿ ವಾಹನ ಚಾಲನೆಯ ವೇಳೆ ಬಹುತೇಕರು ಆಗಾಗ ನೀರು ಕುಡಿಯುತ್ತಲೇ ಇರುತ್ತಾರೆ. ಇದು ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದರೂ ನೀರು ಕುಡಿಯಲು ಬಳಸಿದ ಪ್ಲಾಸ್ಟಿಕ್ ಬಾಟಲ್‌ಗಳು ಕೆಲವೊಮ್ಮೆ ಅನಾಹುತಗಳಿಗೆ ಕಾರಣವಾಗಬಹುದು.

ಹೌದು, ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ನೀರು ಅವಶ್ಯಕತೆಯಿರುವುದರಿಂದ ಕಾರುಗಳಲ್ಲಿ ನೀರಿನ ಬಾಟಲ್‌ಗಳ ಸಂಗ್ರಹಿಸುವುದನ್ನು ನಾವೆಲ್ಲಾ ನೋಡಿರುತ್ತವೆ. ಆದರೆ ಕಾರುಗಳಲ್ಲಿ ಸಂಗ್ರಹಿಸಿ ಈಡಲಾದ ನೀರಿನ ಬಾಟಲ್‌ಗಳು ಕೆಲವೊಮ್ಮೆ ಬೆಂಕಿ ಅವಘಡಗಳಿಗೆ ಕಾರಣವಾಗುತ್ತವೆ ಎನ್ನುವುದನ್ನು ನಾವು ಈ ಲೇಖನದಲ್ಲಿ ಚರ್ಚಿಸಿದ್ದೇವೆ.

ಕಾರುಗಳಲ್ಲಿ ಈಡಲಾದ ನೀರಿನ ಬಾಟಲ್‌ಗಳಿಂದ ಅಗ್ನಿ ಅವಘಡಗಳು ಸಂಭವಿಸಲು ಸಾಧ್ಯವೆ? ಅದು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಗಳು ಈಗ ನಿಮ್ಮ ಮನಸ್ಸಿನಲ್ಲೂ ಇದೀಗ ಬಂದಿರಬಹುದು. ಆದರೆ ಇದು ನಿಜ.. ಅದಕ್ಕೆ ಹಲವಾರು ಕಾರಣಗಳಿವೆ.

ಕಾರುಗಳಲ್ಲಿ ಈಡಲಾಗುವ ನೀರಿನ ಬಾಟಲ್‌ಗಳಿಂದ ಬೆಂಕಿ ಅವಘಡ ಸಂಭವಿಸಲು ಪ್ರಮುಖ ಕಾರಣವೆಂದರೆ ಅದು ನೀರಿನಿಂದಾಗಿ ಅಲ್ಲ..ಬದಲಾಗಿ ಪ್ಲಾಸ್ಟಿಕ್ ನಿಂದಾಗಿ ಉಂಟಾಗುವ ಹಾನಿ ಎನ್ನಬಹುದು.

ಕಾರುಗಳಲ್ಲಿ ಚಾಲನೆ ಮಾಡುವಾಗ ಕುಡಿದ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ಅನೇಕರು ಕಪ್ ಹೋಲ್ಡರ್‌ಗಳಲ್ಲಿ ಇಲ್ಲವೇ ಡ್ಯಾಶ್‌ಬೋರ್ಡ್‌ಗಳಲ್ಲಿ ಈಡುವುದನ್ನು ಸಾಮಾನ್ಯವಾಗಿ ನೋಡಿರುತ್ತವೆ. ಒಂದೇ ವೇಳೆ ಕಾರನ್ನು ಹೊರಗೆ ಪಾರ್ಕ್ ಮಾಡಿದ ಸಂದರ್ಭದಲ್ಲಿ ಸೂರ್ಯನ ಬೆಳಕು ಕಿಟಕಿ ಮೂಲಕ ನೀರಿನ ಬಾಟಲಿಗೆ ಬಿದ್ದಾಗ ಅದು ಹಾನಿಉಂಟು ಮಾಡಬಹುದಾಗಿದೆ.

ಅದು ಹೇಗೆಂದರೆ ಅರ್ಧ ನೀರು ತುಂಬಿರುವ ಪ್ಲಾಸ್ಟಿಕ್ ಬಾಟಲ್ ಮೇಲೆ ಕಿಟಕಿ ಮೂಲಕ ಬರುವ ಸೂರ್ಯನ ಕಿರಣಗಳು ಭೂತಗನ್ನಡಿಯಂತೆ ಶಾಖ ಉತ್ಪತ್ತಿ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸೂರ್ಯನ ಕಿರಣಗಳು ಕೇಂದ್ರೀಕೃತಗೊಂಡು ಬೀಳುವ ಸ್ಥಳದಲ್ಲಿ ಪ್ಲಾಸ್ಟಿಕ್ ಸಹಜವಾಗಿಯೇ ಸುಡಬಹುದಾಗಿದೆ.

ಕಾರಿನಲ್ಲಿ ಬೆಂಕಿ ಅವಘಡ ಪ್ರಕರಣವೊಂದರ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದ್ದು, ಹೆಚ್ಚು ಬಿಸಿಲಿನ ತಾಪದಲ್ಲಿ ಕಾರನ್ನು ಪಾರ್ಕಿಂಗ್ ಮಾಡಿದ್ದ ಸಂದರ್ಭದಲ್ಲಿ ನೀರಿನ ಬಾಟಲ್‌ಗಳಿಂದ ಇಂತಹ ಅವಘಡಗಳು ಸಂಭವಿಸಬಹುದಾಗಿದೆ.

ತಜ್ಞರು ಏನು ಹೇಳುವುದೇನು?
ತಜ್ಞರ ಪ್ರಕಾರ, ವಿಪರೀತ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಪ್ಲಾಸ್ಟಿಕ್‌ನಿಂದ ನೀರಿನಲ್ಲಿ ಬಿಡುಗಡೆಯಾಗುವ ಬಿಸ್ಫೆನಾಲ್ ಎ(ಇಂಗಾಲದ ಆಧಾರಿತ ಸಂಶ್ಲೇಷಿತ ಸಂಯುಕ್ತ) ಎಂಬ ಹಾನಿಕಾರಕ ರಾಸಾಯನಿಕದ ಪ್ರಮಾಣವು ಹೆಚ್ಚಳವಾಗಬಹುದು.

ಇದು ನೀರಿನ ಬಾಟಲಿಯು ತೀವ್ರವಾದ ಶಾಖಕ್ಕೆ ಒಡ್ಡಿಕೊಂಡಾಗ, ಹಾನಿಕಾರಕ ರಾಸಾಯನಿಕವು ಬೆಂಕಿಯಾಗಿ ಪರಿವರ್ತನೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಬಿಸಿಲಿನಲ್ಲಿ ಪಾರ್ಕ್ ಮಾಡುವ ಕಾರುಗಳಲ್ಲಿನ ನೀರಿನ ಬಾಟಲ್‌ಗಳು ಇಂತಹ ಅನಾಹುತಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.

ಜೊತೆಗೆ ಕೆಲವು ಸಂಶೋಧನೆಗಳು ಕೂಡಾ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ನೀರು ಸೂರ್ಯ ಶಾಖದಿಂದ ಹೇಗೆ ರಾಸಾಯನಿಕವಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ಮಾಹಿತಿ ಹಂಚಿಕೊಂಡಿದ್ದು, ಕೆಲವು ದಿನಗಳ ಕಾಲಗಳ ನೀರಿನ ಬಾಟಲಿಗಳನ್ನು ನೇರವಾಗಿ ಬಿಸಿಲಿನ ತಾಪದಲ್ಲಿ ಇಟ್ಟಾಗ ಅದರಲ್ಲಿ ನಾಲ್ಕು ವಾರಗಳಲ್ಲಿ ಆ ನೀರಿನ ಬಾಟಲ್‌ಗಳಲ್ಲಿನ ಬಿಸ್ಫೆನಾಲ್ ಎ ಇಂಗಾಲವು ಹತ್ತು ಪಟ್ಟು ಹೆಚ್ಚಾಗಿತ್ತು.

ಅಗ್ನಿ ಅವಘಡಗಳನ್ನು ತಪ್ಪಿಸುವುದು ಹೇಗೆ?
ನೀರಿನ ಬಾಟಲ್‌ಗಳನ್ನು ಕಾರಿನಲ್ಲೇ ಇಡುವುದು ತುಂಬಾ ಅಪಾಯಕಾರಿಯಾಗಿರುವುದರಿಂದ ನೀರಿನ ಬಾಟಲ್‌ಗಳನ್ನು ಕಾರಿನಲ್ಲಿಯೇ ಬಿಡದೆ ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು ಇದರಿಂದ ನೀವು ಕಾರಿನಲ್ಲಿ ಬೆಂಕಿಯ ಅಪಾಯವನ್ನು ತಪ್ಪಿಸಬಹುದು.

ಒಂದು ವೇಳೆ ನಿಮಗೆ ನೀರಿನ ಬಾಟಲ್‌ಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಅದನ್ನು ಡೋರ್‌ಗಳಲ್ಲಿರುವ ಬಾಟಲ್ ಹೋಲ್ಡರ್‌ಗಳಲ್ಲಿ ಇಲ್ಲವೇ ಆಸನದ ಕೆಳಗೆ ಇರಿಸಿ ಇದರಿಂದ ಅದು ಸೂರ್ಯ ಕಿರಣಗಳಿಗೆ ನೇರವಾಗಿ ಒಡ್ಡಿಕೊಳ್ಳುವುದಿಲ್ಲ.

ಕಾರಿನಲ್ಲಿಯೇ ಈಡಲಾಗುವ ಬಾಟಲ್ ನೀರನ್ನು ಹೆಚ್ಚು ದಿನ ಬಳಸಬೇಡಿ!
ಅನೇಕ ಜನರು ತಮ್ಮ ಕಾರುಗಳಲ್ಲಿ ಒಂದು ಅಥವಾ ಎರಡು ನೀರಿನ ಬಾಟಲ್‌ಗಳಲ್ಲೂ ಯಾವಾಗಲೂ ಸಂಗ್ರಹಿಸಿ ಇಟ್ಟಿರುತ್ತಾರೆ. ಆದರೆ ಈ ನೀರನ್ನು ನಿಯಮಿತವಾಗಿ ಬದಲಿಸದೆ ಪದೇ ಪದೇ ಅದೇ ನೀರನ್ನು ಕುಡಿಯುತ್ತಿರುತ್ತಿರುತ್ತಾರೆ. ಇದು ಕೂಡಾ ಹಾನಿಕಾರಕವಾಗಿದ್ದು, ಕಾರಿನ ಒಳಭಾಗದ ಉಷ್ಣಾಂಶದಿಂದ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿನ ಬಿಸ್ಫೆನಾಲ್ ಎ ಇಂಗಾಲವು ಹೆಚ್ಚು ಸೇರುವುದರಿಂದ ಇದು ಆರೋಗ್ಯ ಮೇಲೂ ಪರಿಣಾಮ ಬೀರಬಹುದು.

ಹೆಚ್ಚಿನ ಹೊತ್ತು ಬಿಸಿಲಿನಲ್ಲಿ ನಿಲುಗಡೆ ಮಾಡಿದ ಕಾರುಗಳಲ್ಲಿನ ಉಳಿದಿರುವ ಬಾಟಲ್ ನೀರನ್ನು ಕುಡಿಯಲು ಯೋಗ್ಯ ಅಲ್ಲ ಎನ್ನುವ ಬಗ್ಗೆ ಅನೇಕ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ಬಿಸ್ಫೆನಾಲ್ ಎ ಇಂಗಾಲವು ಹಾರ್ಮೋನುಗಳಿಗೆ ಅಡ್ಡಿಪಡಿಸಿ ದೇಹದಲ್ಲಿ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ.

ನೀರಿನ ಬಾಟಲಿಯನ್ನು 70 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಿದಾಗ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ ಎಂಬುದನ್ನು ಹಲವಾರು ಸಂಶೋಧನೆಗಳು ದೃಡಪಡಿಸಿದ್ದು, ಕಾರನ್ನು ಹೆಚ್ಚು ಬಿಸಿಲಿನ ತಾಪದಲ್ಲಿ ನಿಲ್ಲಿಸಿದಾಗ ಅದರ ಒಳಗಿನ ತಾಪಮಾನವೇ 78 ಡಿಗ್ರಿ ಸೆಲ್ಸಿಯಸ್ ತನಕ ಹೆಚ್ಚಾಗುತ್ತದೆ.

ಇದರಿಂದ ಕಾರುಗಳಲ್ಲಿ ನೀರಿನ ಬಾಟಲ್ ಬೆಂಕಿ ಅವಘಡಗಳ ಜೊತೆಗೆ ಆರೋಗ್ಯದ ಮೇಲೂ ಹೆಚ್ಚು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದಾಗಿದ್ದು, ಜೀವಜಲ ಬಳಸುವ ರೀತಿ ನಮ್ಮ ಆರೋಗ್ಯದಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎನ್ನಬಹುದು.