ಹೊಸ ಬೈಕ್ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ಅಂಶಗಳಿವು..
ಕೆಲವರಿಗೆ ಬೈಕ್ ಕೊಳ್ಳುವ ಆಲೋಚನೆಯಿರುತ್ತದೆ. ಆದರೆ ಯಾವ ಬೈಕ್ ಖರೀದಿ ಮಾಡಬೇಕು.? ಎಷ್ಟು ಫರ್ಫಾರ್ಮೆನ್ಸ್ ನೀಡುವ ಬೈಕ್ ಕೊಂಡರೆ ಅನುಕೂಲವಾಗುತ್ತದೆ ಎಂಬ ಗೊಂದಲಗಳು ಇರುತ್ತದೆ.
ಕೆಲವರಿಗೆ ಬೈಕ್ ಕೊಳ್ಳುವ ಆಲೋಚನೆಯಿರುತ್ತದೆ. ಆದರೆ ಯಾವ ಬೈಕ್ ಖರೀದಿ ಮಾಡಬೇಕು.? ಎಷ್ಟು ಫರ್ಫಾರ್ಮೆನ್ಸ್ ನೀಡುವ ಬೈಕ್ ಕೊಂಡರೆ ಅನುಕೂಲವಾಗುತ್ತದೆ ಎಂಬ ಗೊಂದಲಗಳು ಇರುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಬೈಕ್ ಅನ್ನು ಖರೀದಿಸುವ ಮುನ್ನ ಪರಿಗಣಕ್ಕೆ ತೆಗೆದುಕೊಳ್ಳಬೇಕಾದ ಅಂಶಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಉಪಯೋಗ
ತಮ್ಮ ದಿನನಿತ್ಯದ ಜೀವನದಲ್ಲಿ ಬೈಕ್ ಖರೀದಿಸುವುದು ಕಡ್ಡಾಯ ಎಂದೆನಿಸಿದಾಗ, ಬೈಕ್ ಅನ್ನು ಖರೀದಿಸಲೇಬೇಕೆಂಬ ಸಂದರ್ಭವು ಎದುರಾಗುತ್ತದೆ. ಆದರೇ ಇಲ್ಲಿ ಯಾವ ಅವಸರಕ್ಕೆ ಬೈಕ್ ಖರೀದಿ ಮಾಡುತ್ತಿದ್ದೇವೆ ಎಂಬ ಅಂಶವು ಮುಖ್ಯವಾಗಿರುತ್ತದೆ. ಫುಡ್ ಡೆಲಿವರಿ, ಕೊರಿಯರ್ ಡಿಲಿವರಿ, ಮನೆಯಿಂದ ಆಫೀಸ್‍ಗೆ, ಲಾಂಗ್ ರೈಡಿಂಗ್‍ಗಾಗಿ. ಹೀಗೆ ಅವಸರಕ್ಕೆ ತಕ್ಕಂತೆ ಬೈಕನ್ನು ಆಯ್ಕೆ ಮಾಡಿಕೊಳ್ಳಬೇಕು.

250ಸಿಸಿ ಗಿಂತಾ ಅಧಿಕ ಮೈಲೇಜ್ ಇರುವ ಬೈಕ್‍ಗಳು ಕ್ರೂಸರ್, ಸ್ಪೋರ್ಟ್ ಮತ್ತು ಕೇಫ್ ರೇಸರ್ ಸೆಗ್ಮೆಂಟ್‍ನಲ್ಲಿವೆ. ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಯುಳ್ಳ ಬೈಕ್‍ಗಳಲ್ಲಿ ಗರಿಷ್ಠವಾಗಿ 2000ಸಿಸಿ ಸಾಮರ್ಥ್ಯದ ನಾಲ್ಕು ಸಿಲೆಂಡರ್ ಒದಗಿಸಿದ ಎಂಜಿನ್‍ಗಳಿವೆ.

ಹಣದ ವಿಚಾರ ಅಲ್ಲವೇ ಅಲ್ಲ, ಐಷಾರಾಮಿ ಮತ್ತು ಅತ್ಯಂತ ದುಬಾರಿಯಾದ ಬೈಕ್ ಅನ್ನು ಖರೀದಿಸಲು ಇಚ್ಛಿಸುವ ರಿಚ್ ಕಿಡ್ಸ್ ಗಳಿಗೆ, ಲಕ್ಷಕ್ಕೆ ಮಾರಾಟವಾಗುತ್ತಿರುವ ಬೈಕ್‍ಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬಿಎಮ್‍ಡಬ್ಲ್ಯೂ ಮೊಟರ್ರಾಡ್ ಪ್ರಸ್ಥುತ ಮಾರಾಟ ವಾಗುತ್ತಿರುವ ರೂ.85 ಲಕ್ಷಕ್ಕೆ ಬೆಲೆಬಾಳುವ ಹೆಚ್‍ಪಿ 4 ಬೈಕ್ ಅದಕ್ಕೊಂದು ನಿದರ್ಶನ.

ಮೈಲೇಜ್
ಭಾರತೀಯರು ಮೈಲೇಜ್ ಪ್ರಿಯರು ಇದರಲ್ಲಿ ಯಾವ ಸಂದೇಹವು ಇಲ್ಲ. ಕೋಟಿ ಖರ್ಚು ಮಾಡಿ ಕಾರು ಖರೀದಿ ಮಾದಿದರೂ ಕೂಡಾ ಮೈಲೇಜ್ ಎಷ್ಟು ಎಂದು ಕೇಳುತ್ತಾರೆ. ಆದ್ದರಿಂದ, ಆಯ್ಕೆ ಮಾಡಿಕೊಳ್ಳುವ ಬೈಕ್ ಯಾವುದಾದರೂ ಮೈಲೇಜ್ ಅಂಶವು ಮುಖ್ಯವಾದದ್ದು.

ಮಾರುಕಟ್ಟೆಯಲಿ ಲೀಟರ್‍ಗೆ 10 ರಿಂದ 100 ಕಿಲೋಮೀಟರ್ ಮೈಲೇಜ್ ನೀಡುವ ಬೈಕ್‍ಗಳಿವೆ. ಬಜಾಜ್ ಪ್ಲಾತಿನ್ಸ್ಸ್, ಸಿಟಿ100 ಮತ್ತು ಹೀರೋ ಪ್ಯಾಶನ್ ಐಸ್ಟಾರ್ ಅಂತಹ ಬೈಕ್‍ಗಳು ಅತ್ಯಧಿಕ ಮೈಲೇಜ್ ನೀಡುವ ಬೈಕ್‍ಗಳ ಪಟ್ಟಿಯಲ್ಲಿದೆ. ಸ್ವಲ್ಪ ಶಕ್ತಿಯ್ಯುತವಾದ ಎಂಜಿನ್ ಹೊಂದಿರುವ ಬೈಕ್‍ಗಳು ಲೀಟರ್‍ಗೆ 40 ತಿಂದ 50 ಕಿಲೋಮೀಟರ್ ಮೈಲೇಜ್ ನೀಡುತ್ತದೆ. (ಉದಾ : 125ಸಿಸಿ ಎಂದ 160ಸಿಸಿ ಎಂಜಿನ್ ಕೆಪಾಸಿಟಿಯುಳ್ಳ ಬೈಕ್‍ಗಳು)

ಕೊನೆಯದಾಗಿ ಪರ್ಫಾರ್ಮೆನ್ಸ್
ಮೈಲೇಜ್, ಸ್ಟೈಲ್, ಎಂಜಿನ್‍ನೊಂದಿಗೆ ಮತ್ತುಂದಿ ಮುಖ್ಯ ಅಂಶವೆಂದರೇ ಪರ್ಫಾರ್ಮೆನ್ಸ್. ಬೈಕ್ ಪರ್ಫಾರ್ಮೆನ್ಸ್ ನಿಜಕ್ಕೆ ಬೈಕ್‍ನಲ್ಲಿರುವ ಎಂಜಿನ್‍ನ ಮೇಲೆ ಆಧಾರವಾಗಿರುತ್ತದೆ. ಏಂಜಿನ್ ಸಿಸಿ ಹೆಚ್ಚಾದಷ್ಟು ಪರ್ಫಾರ್ಮೆನ್ಸ್ ಹೆಚ್ಚಾಗುತ್ತದೆ. 100ಸಿಸಿ ಬೈಕ್‍ಗಳಲ್ಲಿ ಸಾಧಾರಣಾವಾಗಿ 8ಬಿಹೆಚ್‍ಪಿ ಹಾರ್ಸ್ ಪವರ್ ಅನ್ನು ಉತ್ಪಾದಿಸಿದ್ದಲ್ಲಿ, 200ಸಿಸಿ ಬೈಕ್‍ಗಳು 20ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸದಾಗಿ ಬೈಕ್ ಖರೀದಿಸುವಾಗ ನೇಡಬೇಕಾದ ಅಂಶಗಳಿವು. ಹೊಸ ಬೈಕ್ ಅನ್ನು ಖರೀದಿಸುವಾಗ ನಿಮ್ಮ ತಲೆಯಲ್ಲಿ ಸಂದೇಹವು ಅಥವಾ ಗೊಂದಲಗಳಿದ್ದರೇ, ಡ್ರೈವ್‍ಸ್ಪಾರ್ಕ್ ಕನ್ನಡ ನಿಮ್ಮೊಂದಿಗೆ ಸದಾ ಇರುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??
ಮಳೆಗಾಲದಲ್ಲಿ ಕಾರಿನ ಕಾಯಿಲೆ ತಪ್ಪಿಸಲು ಅಮೂಲ್ಯ ಟಿಪ್ಸ್..
'ಒಬ್ಬ ವ್ಯಕ್ತಿಗೆ ಒಂದೇ ವಾಹನ' - ಟ್ರಾಫಿಕ್ ನಿರ್ವಹಣೆಗಾಗಿ ಹೊಸ ರೂಲ್ಸ್


Click it and Unblock the Notifications








