ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ವಾಹನದಲ್ಲಿನ ಸ್ಟೀರಿಂಗ್‍‍ನ ಪ್ರಾಮುಖ್ಯತೆಯ ಬಗ್ಗೆ ಎಲ್ಲರಿಗು ತಿಳಿದಿದೆ. ಸಾಧಾರಣವಾಗಿ ವಾಹನಗಳಲ್ಲಿನ ಸ್ಟೀರಿಂಗ್ ವ್ಹೀಲ್ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಇರುತ್ತದೆ.

By Rahul Ts

ವಾಹನದಲ್ಲಿನ ಸ್ಟೀರಿಂಗ್‍‍ನ ಪ್ರಾಮುಖ್ಯತೆಯ ಬಗ್ಗೆ ಎಲ್ಲರಿಗು ತಿಳಿದಿದೆ. ಸಾಧಾರಣವಾಗಿ ವಾಹನಗಳಲ್ಲಿನ ಸ್ಟೀರಿಂಗ್ ವ್ಹೀಲ್ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ಇರುತ್ತದೆ. ಆದರೆ ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ ಏಕೆ ಇರುವುದಿಲ್ಲವೆಂದು ಎಂದಾದರು ಯೋಚಿಸಿದೀರಾ.?

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ವಾಹನದ ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ ಏಕೆ ಇರುವುದಿಲ್ಲ ಮತ್ತು ಅದು ಎಡ ಅಥವಾ ಬಲ ಭಾಗದಲ್ಲಿ ಇರುವುದು ಏಕೆ.? ಮತ್ತು ವಾಹನದ ಮಧ್ಯಭಾಗದಲ್ಲಿದ್ದರೆ ಆಗುವ ಅನಾನುಕೂಲತೆಗಳೇನು.? ಎಂಬ ನಿಮ್ಮ ಸಂಶಯಕ್ಕೆ ಡ್ರೈವ್‍‍‍ಸ್ಪಾರ್ಕ್ ಕನ್ನಡ ಇಂದಿನ ಲೇಖನದಲ್ಲಿ ಉತ್ತರಿಸಲಿದೆ..

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಸೀಟಿಂಗ್ ಸಮಸ್ಯೆ

ಕಾರಿನ ಹಿಂಭಾಗದಲ್ಲಿ ಮೂರು ಮಂದಿ ಕೂರಬಹುದು, ಆದರೆ ಕಾರಿನ ಮುಂಭಾಗದಲ್ಲಿನ ಮಧ್ಯಭಾಗದಲ್ಲಿ ಗೇರ್‍‍ಬಾಕ್ಸ್ ಇರುವ ಕಾರಣ ಡ್ರೈವರ್ ಮತ್ತು ಪ್ಯಾಸೆಂಜರ್ ಮಾತ್ರ ಕೂರಬಹುದಾಗಿದೆ. ಒಂದು ವೇಳೆ ಸ್ಟೀರಿಂಗ್ ವ್ಹೀಲ್ ಮಧ್ಯಭಾಗದಲ್ಲಿ ಇದ್ದಿದ್ದರೆ ಒಬ್ಬರು ಮಾತ್ರ ಮುಂಭಾಗದಲ್ಲಿ ಕೂರಬಹುದಾಗಿತ್ತು. ಅಷ್ಟೆ ಅಲ್ಲದೆ ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ ಇರುವುದರಿಂದ ಡ್ರೈವರ್ ಸೀಟಿನ ಮಧ್ಯದಲ್ಲಿ ಹೋಗಲು ತೊಂದರೆಯಾಗುತ್ತದೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಸ್ಟೀರಿಂಗ್ ಸಿಸ್ಟಮ್

ಸ್ಟೀರಿಂಗ್‍ನಿಂದ ಮುಂದಿರುವ ಚಕ್ರದ ವರೆಗು ಸ್ಟೀರಿಂಗ್ ಫೋರ್ಸ್ ಹೋಗಲು ಮಧ್ಯ ಎಷ್ಟೊ ಸ್ಟೀರಿಂಗ್ ಬಿಡಿಭಾಗಗಳನ್ನು ಜೋಡಿಸಲಾಗಿರುತ್ತದೆ. ಅವೆಲ್ಲವನ್ನು ಜೋಡಿಸಲು ಸ್ವಲ್ಪ ಜಾಗ ಬೇಕಾಗುತ್ತದೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಪ್ರತ್ಯೇಕವಾಗಿ ಎಂಜಿನ್ ಮತ್ತು ಡ್ರೈವ್ ಮುಂಭಾಗಲ್ಲಿರುವಾಗ ಸ್ಟೀರಿಂಗ್ ಸಿಸ್ಟಮ್ ವ್ಯವಸ್ಥೆಯು ತುಂಬಾ ಕಷ್ಟವಾಗುರುತ್ತದೆ. ಆದ್ದರಿಂದ ಸ್ಟೀರಿಂಗ್ ವ್ಹೀಲ್ ಪಕ್ಕದಲ್ಲಿರುವುದರಿಂದ ಸ್ಟೀರಿಂಗ್ ಸಿಸ್ಟಮ್ ಮೊತ್ತವನ್ನು ಒಂದೇ ಭಾಗದಲ್ಲಿ ಜೋಡಿಸಲು ಸಹಕರಿಸುತ್ತವೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಸುಲಭವಾಗಿ ಪ್ರವೇಶ ಮತ್ತು ಹೋರಗೆ ಹೋಗಬಹುದು

ಸ್ಟೀರಿಂಗ್ ವ್ಹೀಲ್ ಮಧ್ಯದಲ್ಲಿ ಇದ್ದರೆ ಡ್ರೈವರ್ ಸೀಟ್ ಕೂಡ ಮಧ್ಯದಲ್ಲೆ ಇರಬೇಕಾಗುತ್ತದೆ. ಆದ್ದರಿಂದ ಡ್ರೈವರ್ ಸುಲಭವಾಗಿ ಒಳಗೆ ಹೋಗಲು ಮತ್ತು ಹೊರಗೆ ಹೋಗಲು ತೊಂದರೆಯಾಗುತ್ತದೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಆದಕ್ಕೆ ಸುಮಾರು ಎಲ್ಲಾ ವಾಹನಗಳಲ್ಲಿ ಡ್ರೈವರ್ ಸುಲಭವಾಗಿ ಒಳಗೆ ಹೋಗಲು ಮತ್ತು ಹೊರಗೆ ಹೋಗಲು ಸ್ಟೀರಿಂಗ್ ವ್ಹೀಲ್ ಅನ್ನು ಎಡ ಅಥವಾ ಬಲ ಭಾಗದಲ್ಲಿ ಅಳವಡಿಸಲಾಗುತ್ತದೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಇನ್ನಿತರೆ ಕಾರಣಗಳು

ಮೇಲೆ ಹೇಳಿರುವ ಅಂಶಗಳಲ್ಲದೆ ಸ್ಟೀರಿಂಗ್ ವ್ಹೀಲ್ ಅನ್ನು ಮಧ್ಯಭಾಗದಲ್ಲಿ ಅಳವಡಿಸಿದ್ದೇ ಆದರೆ ಡ್ರೈವರ್ ಕೆಲ ತರಹದ ಸಮಸ್ಯೆಯನ್ನು ತಪ್ಪದೇ ಎದುರಿಸಬೇಕಾಗುತ್ತದೆ. ಅದರಲ್ಲಿಯೂ ಡ್ರೈವರ್ ಮಧ್ಯದಲ್ಲಿ ಕೂತರೆ ಆತನಿಗೆ ಎಡ ಅಥವಾ ಬಲಭಾಗದ ರಿಯರ್ ವ್ಯೂ ಮಿರರ್‍‍ನಿಂದ ನೋಡಿ ಹಿಂದೆ ಬರುತ್ತಿರುವ ವಾಹನಗಳ ಬಗ್ಗೆ ಗಮನಹರಿಸಲು ಕಷ್ಟವಾಗಬಹುದು.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಅಷ್ಟೆ ಅಲ್ಲದೆ, ಕ್ಯಾಬಿನ್ ಒಳಗಿರುವ ರಿಯರ್ ವ್ಯೂ ಕ್ಯಾಮೆರಾ ಮಿರರ್‍ ಅನ್ನು ಗಮನಿಸಬೇಕಾದರೆ ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಬೇಕಾಗುತ್ತದೆ ಮತ್ತು ತಕ್ಷಣವೇ ಸ್ಪಂದಿಸಲು ಕಷ್ಟವಾಗುತ್ತದೆ.

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರಿನ ಎಸಿ ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..?

ಮಳೆಗಾಲದಲ್ಲಿ ಘಾಟ್ ರಸ್ತೆಯಲ್ಲಿ ಸುರಕ್ಷಿತ ಚಾಲನೆಗಾಗಿ ಅಮೂಲ್ಯ ಟಿಪ್ಸ್..

ಮ್ಯಾನುವಲ್ ಕಾರು ಓಡಿಸುವಾಗ ಮಾಡಬಾರದ 5 ಕೆಲಸಗಳಿವು..

ಟ್ರಾಫಿಕ್ ಪೋಲಿಸ್‍ ಕಣ್ಣು ತಪ್ಪಿಸಲು ಮಾಡುವ 13 ಪ್ರವೃತ್ತಿಗಳು!

ಬೈಕ್‌ಗಳಲ್ಲಿ ಡ್ರಮ್ ಬ್ರೇಕ್‍‍ಗಳಿಗಿಂತ ಡಿಸ್ಕ್ ಬ್ರೇಕ್‍ ಏಕೆ ಉತ್ತಮ ಗೊತ್ತಾ..?

Most Read Articles

Kannada
Read more on auto tips tips driver
English summary
Why is the steering wheel not in the middle.
Story first published: Saturday, July 21, 2018, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X