ಕಾರಿನ ಎಸಿ ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..?

ಕಾರಿನ ಎಂಜಿನ್ ಸ್ಟಾರ್ಟ್ ಅಥವಾ ಸ್ಟಾಪ್ ಮಾಡುತ್ತಿರುವಾಗ ಎಸಿ ಸಿಸ್ಟಮ್ ಆನ್ ಮಾಡಿರಬಾರದ? ಆನ್‍‍ನಲ್ಲಿದ್ದರೆ ಏನಾಗುತ್ತದೆ? ಅಸಲಿಗೆ ಕಾರಿನಲ್ಲಿರುವ ಎಸಿ ಮತ್ತು ಎಂಜಿನ್‍‍‍ಗೆ ಸಂಬಂಧವೇನು? ಎಂಬ ಪ್ರಶ್ನೆಯು ಹಲವರಿಗೆ ಸಾಧಾರಣವಾಗಿ ಬಂದೇ ಬರುತ್ತ

ಕಾರಿನ ಎಂಜಿನ್ ಸ್ಟಾರ್ಟ್ ಅಥವಾ ಸ್ಟಾಪ್ ಮಾಡುತ್ತಿರುವಾಗ ಎಸಿ ಸಿಸ್ಟಮ್ ಆನ್ ಮಾಡಿರಬಾರದೇ? ಆನ್‍‍ನಲ್ಲಿದ್ದರೆ ಏನಾಗುತ್ತದೆ? ಅಸಲಿಗೆ ಕಾರಿನಲ್ಲಿರುವ ಎಸಿ ಮತ್ತು ಎಂಜಿನ್‍‍‍ಗೆ ಸಂಬಂಧವೇನು? ಎಂಬ ಪ್ರಶ್ನೆಯು ಹಲವರಿಗೆ ಸಾಧಾರಣವಾಗಿ ಬಂದೇ ಬರುತ್ತದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಡ್ರೈವ್‍‍ಸ್ಪಾರ್ಕ್ ಕನ್ನಡದ ಮುಖಾಂತರ ಈ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರವನ್ನು ನೀಡುತ್ತಿದ್ದೇವೆ. ಕಾರಿನಲ್ಲಿರುವ ಎಸಿಯ ಕಾರ್ಯ ಮತ್ತು ಎಂಜಿನ್ ಆನ್ ಆಂಡ್ ಆಫ್ ಮಾಡುವುದರ ಬಗ್ಗೆ ನಿಮಗಿರುವ ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಎಂಜಿನ್‍‍ನಿಂದ ಎಸಿ ಸಿಸ್ಟಮ್‍‍ಗೆ ಪವರ್ ಹೇಗೆ ತಲುಪುತ್ತದೆ..?

ಕಾರಿನಲ್ಲಿರುವ ಎಸಿ ಸಿಸ್ಟಮ್‍‍ನಲ್ಲಿರುವ ಕಂಪ್ರೆಷರ್ ಮ್ಯಾಗ್ನೆಟಿಕ್ ಕ್ಲಚ್ ಅನು ಸಂಧಾನದಲ್ಲಿ ಪುಲ್ಲಿ-ಬೆಲ್ಟ್ ಡ್ರೈವ್ ಮುಖಾಂತರ ಕ್ರಾಂಕ್‍ ಷಾಪ್ಟ್ ಗೆ ಕನೆಕ್ಟ್ ಆಗಿರುತ್ತದೆ. ಆಗ ಎಂಜಿನ್ ಕ್ರಾಂಕ್‍ಷಾಪ್ಟ್ ಗೆ ಕನೆಕ್ಟ್ ಆಗುವ ಮೂಲಕ ಪುಲ್ಲಿ ಇಂದ ಕಂಪ್ರೆಷರ್‍‍ಗೆ ಪವರ್ ಒದಗಿಸುತ್ತದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಅಂದರೇ, ಎಂಜಿನ್ ರನ್ ಆಗುತ್ತಿರುವ ವೇಳೆ ಕಂಪ್ರೆಷರ್ ಆನ್ ಆಗಿರುವುದಿಲ್ಲ. ಇದು ಕಾರಿನ ಕ್ಯಾಬಿನ್‍‍ನಲ್ಲಿ ನಾವು ಸೆಟ್ ಮಾಡಿದ ಟೆಂಪ್ರೆಚರ್‌ಗೆ ಅನುಗುಣವಾಗಿ ಆನ್ ಎಂಡ್ ಆಫ್ ಆಗುತ್ತಿರಬೇಕು. ಆದರೆ ಎಂಜಿನ್‍‍ನಿಂದ ಬರುವ ಪವರ್ ಯಾವಾಗಲೂ ರನ್ ಆಗುತ್ತಲೆ ಇರುತ್ತದೆ. ಈ ನಿಟ್ಟಿನಲ್ಲಿ ಇದನ್ನು ನಿಯಂತ್ರಿಸಲು ಮ್ಯಾಗ್ನೆಟಿಕ್‍ ಕ್ಲಚ್ ಸಹಕರಿಸುತ್ತದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಈ ಮ್ಯಾಗ್ನೆಟಿಕ್ ಕ್ಲಚ್ ಕಂಪ್ರೆಷರ್‍‍ನಿಂದ ವಿಭಜಿತಗೊಳಿಸುವುದು ಮತ್ತು ಜೋಡಿಸುವ ಕಾರ್ಯವನ್ನು ಮಾಡುತ್ತದೆ. ಕಾರಿನಲ್ಲಿರುವ ವಾತಾವರಣಕ್ಕೆ ತಕ್ಕ ಹಾಗೆ ನಾವು ಟೆಂಪ್ಲೆಚೆರ್ ಆನ್ ಆಂಡ್ ಆಫ್ ಮಾಡುವುದರಿಂದ ಮ್ಯಾಗ್ನೆಟಿಕ್ ಕ್ಲಚ್ ಕಂಪ್ರೆಷರ್‍‍ಗೆ ಪುಲ್ಲಿಯನ್ನು ಜೋಡಿಸುವುದು ಅಥವಾ ವಿಭಿಜನೆ ಮಾಡುವ ಕಾರ್ಯವನ್ನು ಮಾಡುತ್ತದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಎಸಿ ಆನ್‍‍ನಲ್ಲಿರುವಾಗ ಎಂಜಿನ್ ಅನ್ನು ಸ್ಟಾರ್ಟ್ ಮಾಡಬಹುದಾ..?

ಬೆಲ್ಟ್ ಡ್ರೈವ್ ಮುಖಾಂತರ ಎಂಜಿನ್‍‍ನಿಂದ ಸ್ವಲ್ಪ ಶಕ್ತಿಯು ಎಸಿ ಸಿಸ್ಟಮ್‍‍ಗೆ ವರ್ಗಾವಣೆಯಾಗುತ್ತದೆ. ಅಂದರೆ ಕಾರು ಚಲಿಸುವುದಕ್ಕೆ ಮಾತ್ರವಲ್ಲದೆ ಎಸಿ, ರೇಡಿಯೇಟರ್, ಡೈನಾಮೊ ಎಂಬ ಉತ್ಪನ್ನಗಳಿಗೆ ಎಂಜಿನ್‍‍ನಿಂದಲೇ ಶಕ್ತಿಯು ವರ್ಗಾವಣೆಯಾಗುತ್ತದೆ. ವೆಹಿಕಲ್ ರನ್ನಿಂಗ್‍‍ನಲ್ಲಿರುವಾಗ ಎಲ್ಲದಕ್ಕೂ ಶಕ್ತಿಯನ್ನು ವರ್ಗಾಯಿಸುವುದು ಕಷ್ಟಕರವಾದ ಕೆಲಸವೇನಲ್ಲ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಇಗ್ನಿಷನ್ ಕೀ ಆನ್ ಆದ ತಕ್ಷಣವೇ ಎಲೆಕ್ಟ್ರಿಕ್ ಮೋಟಾರ್ ಎಂಜಿನ್ ಅನ್ ಆಗುತ್ತದೆ. ಅಷ್ಟರಲ್ಲೇ ಡೈನಾಮೊ, ಫ್ಯಾನ್‍‍ಗೆ ಕನೆಕ್ಟ್ ಆಗಿರುವುದರಿಂದ ಎಂಜಿನ್ ಸ್ಟಾರ್ಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಜೊತೆಯಾಗಿ ಎಸಿ ಕಂಪ್ರೆಷರ್ ಬೆಲ್ಟ್ ಡ್ರೈವ್ ಕೂಡಾ ಕನೆಕ್ಟ್ ಆದರೆ ಎಂಜಿನ್ ಸ್ಟಾರ್ಟ್ ಮಾಡಲು ಬ್ಯಾಟರಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಎಂಜಿನ್ ಸ್ಟಾರ್ಟ್ ಮಾಡುವ ಮೊದಲೇ ಎಸಿ ಆನ್‍‍ನಲ್ಲಿರುವುದರಿಂದ ಬ್ಯಾಟರಿಯಿಂದ ಇತ್ತ ಎಸಿಗೆ ಅತ್ತ ಎಂಜಿನ್ ಸ್ಟಾರ್ಟ್ ಮಾಡುವ ಶಕ್ತಿಯಲ್ಲಿ ಕೊಂಚ ಏರಿಳಿತ ಕಾರ್ಯವಾಗುತ್ತದೆ. ಇದರಿಂದ ಒಂದೇ ಬಾರಿ ಬ್ಯಾಟರಿ ಮೇಲೆ ಲೋಡ್ ಅಧಿಕವಾಗುವ ಕಾರಣದಿಂದಾಗಿ ಎಂಜಿನ್ ಸ್ಟಾರ್ಟ್ ಆಗುವುದಕ್ಕೆ ತೊಂದರೆಯಾಗುತ್ತದೆ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಎಂಜಿನ್ ಸ್ಟಾರ್ಟ್ ಮಾಡುತ್ತಿರುವಾಗ ಎಲೆಕ್ಟ್ರಿಕ್ ಮೋಟರ್‍‍ಗೆ ಸಾಧ್ಯವಾದಷ್ಟು ಶಕ್ತಿಯು ಬೇಕಾಗುತ್ತದೆ. ಆದ್ದರಿಂದ ಕಾರಿನಲ್ಲಿರುವ ಮ್ಯೂಸಿಕ್ ಸಿಸ್ಟಮ್, ಹೆಡ್‍‍ಲೈಟ್ ಮತ್ತು ಎಸಿ ಆಫ್ ಮಾಡಿರಬೇಕೆಂದು ಸೂಚಿಸುತ್ತಾರೆ. ಆದರೆ ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದ್ದಲ್ಲಿ ಇದನ್ನು ಮಾಡಬೇಕಾದ ಅವಶ್ಯಕತೆಯು ಇರುವುದಿಲ್ಲ.

ಕಾರಿನ AC ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..??

ಎಸಿ ಆನ್‍‍ನಲ್ಲಿದ್ದಾಗ ಎಂಜಿನ್ ಸ್ಟಾಪ್ ಮಾಡಬಹುದಾ..?

ಕಾರಿನಲ್ಲಿ ಎಸಿ ಆನ್‍‍ನಲ್ಲಿರುವಾಗ ಎಂಜಿನ್ ಅನ್ನು ಆಫ್ ಮಾಡುವ ಮೂಲಕ ಎಂಜಿನ್ ಮತ್ತು ಕಂಪ್ರೆಷರ್‍‍ಗೆ ಯಾವುದೇ ಪ್ರಭಾವ ಬೀರುವುದಿಲ್ಲ ಎನ್ನಬಹುದು.

Most Read Articles

Kannada
Read more on auto tips tips car care
English summary
Do you have to turn off cars ac before turning on engine.?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X