ಕಾರು ಗೊಂದಲ: ಪೆಟ್ರೋಲ್? ಡೀಸೆಲಾ? ಎಲ್ ಪಿಜಿಯಾ?

ಆದರೂ ಪೆಟ್ರೋಲ್ ಆವೃತ್ತಿ ಕಾರುಗಳಲ್ಲಿ ಎಲ್ ಪಿಜಿ ಅಥವಾ ಸಿಎನ್ ಜಿ ಕಿಟ್ ದೊರಕಬಹುದು. ಇದರಿಂದ ಕಾರಿನ ದರ ಕೊಂಚ ದುಬಾರಿಯಾಗಬಹುದು. ಎಲ್ ಪಿಜಿ ಕಿಟ್ ದರ ಸುಮಾರು 15 ಸಾವಿರ ರುಪಾಯಿ ಮತ್ತು ಸಿಎನ್ ಜಿ ಕಿಟ್ ದರ ಸುಮಾರು 30 ಸಾವಿರ ರು. ಇದೆ. ಇದು ಕಾರು ಖರೀದಿದಾರನಿಗೆ ಹೆಚ್ಚುವರಿ ಹೊರೆ.
ಸಿಎನ್ ಜಿ ಕಾರುಗಳು ಎಲ್ಲಾ ನಗರಗಳಲ್ಲಿ ದೊರಕುತ್ತಿಲ್ಲ ಎನ್ನುವ ವಿಷಯವನ್ನು ಗಮನಿಸಬೇಕು. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರು ಹೆಚ್ಚು ದುಬಾರಿ. ಡೀಸೆಲ್ ಕಾರು ದುಬಾರಿಯಾದರೂ ಈ ನಷ್ಟವನ್ನು ಪೆಟ್ರೋಲ್ ಗೆ ಸುರಿಯುವ ಹಣದಿಂದ ಸರಿಪಡಿಸಿಕೊಳ್ಳಬಹುದು ಎಂದು ನೀವು ಲೆಕ್ಕ ಹಾಕಿಕೊಳ್ಳಬಹುದು. ಅಥವಾ ಪೆಟ್ರೋಲ್ ಕಾರಿಗಿಂತ ಈ ಕಾರುಗಳು ದುಬಾರಿ ಎಂದು ನೀವು ಅಪ್ ಸೆಟ್ ಆಗಬಹುದು.
ಮತ್ತೊಂದು ವಿಷಯ. ಸಿಎನ್ ಜಿ ಅಥವಾ ಎಲ್ ಪಿಜಿ ಕಿಟ್ ಕಾರು ಸಾಲದಂತಹ ವ್ಯಾಪ್ತಿಗೆ ಸೇರುವುದಿಲ್ಲ. ಮೈಲೇಜ್ ವಿಷಯದಲ್ಲಿ ಡೀಸೆಲ್ ಕಾರು ಮುಂದಿದೆ. ನಂತರ ಸಿಎನ್ ಜಿ, ಎಲ್ ಪಿಜಿ ಮತ್ತು ಪೆಟ್ರೋಲ್ ಕಾರುಗಳ ಮೈಲೇಜಿದೆ.
ಆದರೆ ಸಿಎನ್ ಜಿ ದರ ಡೀಸೆಲ್ ಗಿಂತ ಅಗ್ಗ. ಇದರಿಂದ ರನ್ನಿಂಗ್ ವೆಚ್ಚ ಗಣನೆಗೆ ತೆಗೆದುಕೊಳ್ಳಬಹುದು. ಇಂಧನ ದರವನ್ನು ನೀವು ಪ್ರಯಾಣಿಸುವ ಕಿಲೋಮೀಟರಿಗೆ ಹೋಲಿಸಿದರೆ ಯಾವ ಇಂಧನ ಬೆಸ್ಟ್? ಪೆಟ್ರೋಲ್ ಕಾರು ಸರಾಸರಿ 15 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ. ಸಿಎನ್ಜಿ ಕಾರು 16 ಕಿ.ಮಿ. ಎಲ್ ಪಿಜಿ ಕಾರು 13 ಕಿ.ಮೀ. ಮತ್ತು ಡೀಸೆಲ್ ಕಾರು ಸುಮಾರು 21 ಕಿ.ಮೀ. ಮೈಲೇಜ್ ನೀಡುತ್ತದೆ.
ಕಾರಿನ ದರ ಮಾತ್ರ ಹೆಚ್ಚಿದೆಯೆಂದು ಲೆಕ್ಕ ಹಾಕಬೇಕಿಲ್ಲ. ಅದಕ್ಕೆ ಪಾವತಿಸುವ ವಿಮಾ ಪಾವತಿ ಕೂಡ ವಿಭಿನ್ನವಾಗಿರುತ್ತದೆ. ಅಂದರೆ ಡೀಸೆಲ್ ಕಾರಿಗೆ ಹೆಚ್ಚು ವಿಮಾ ಪಾವತಿ ಮಾಡಬೇಕಾಗುತ್ತದೆ. ನಂತರ ಸಿಎನ್ ಜಿ ಮತ್ತು ಪೆಟ್ರೋಲ್ ಕಾರುಗಳ ವಿಮೆಯೂ ಹೆಚ್ಚಿದೆ. ಆದರೆ ವಿಮಾ ವೆಚ್ಚವನ್ನು ಪ್ರಮುಖವಾಗಿ ಪರಿಗಣಿಸಬೇಕಿಲ್ಲ.
ಪೆಟ್ರೋಲ್ ಕಾರಿಗೆ ಹೋಲಿಸಿದರೆ ಡೀಸೆಲ್ ಕಾರುಗಳ ನಿರ್ವಹಣೆ ವೆಚ್ಚ ಹೆಚ್ಚು. ಈಗ ಈ ಸಮಸ್ಯೆ ಕಡಿಮೆಯಾಗಿದೆ. ಈಗ ಎಲ್ ಪಿಜಿ ಕಾರಿನ ನಿರ್ವಹಣೆಯು ಪೆಟ್ರೋಲ್ ಕಾರಿನಂತೆಯೇ ಇದೆ. ಡೀಸೆಲ್ ಕಾರಿನ ನಿರ್ವಹಣೆ ವೆಚ್ಚವೂ ಹಿಂದಿನದಕ್ಕಿಂತ ಕಡಿಮೆಯಾಗಿದೆ.


Click it and Unblock the Notifications








