ನಾಲ್ಕು ಇಂಧನಗಳಲ್ಲಿ ಯಾವ ಕಾರು ಉತ್ತಮ?

ಕಳೆದ ಮೂರು ವರ್ಷಗಳಿಂದ ಪೆಟ್ರೋಲ್ ದರ ಗಗನಕ್ಕೇರುತ್ತಿದೆ. ನಿಮಗೆ ನೆನಪಿರಬಹುದು. ಪೆಟ್ರೋಲ್ ದರ ಜೂನ್ 2010ರಲ್ಲಿ 18.49 ರು. ಹೆಚ್ಚಾಗಿತ್ತು. ಏಪ್ರಿಲ್ 2010ರಲ್ಲಿ ಪೆಟ್ರೋಲ್ ದರ 47.93 ರು.ಗೆ ತಲುಪಿತ್ತು. ಆದರೆ ಈಗ ಪೆಟ್ರೋಲ್ ದರ ಎರಡು ಪಟ್ಟು ಅಂದರೆ ಎಪತ್ತು ರು. ದಾಟಿದೆ.
ಸರಕಾರದ ನಿಯಂತ್ರಣದಲ್ಲಿರುವ ಡೀಸೆಲ್, ಸಿಎನ್ ಜಿ ಮತ್ತು ಎಲ್ ಪಿಜಿ ದರದಲ್ಲೂ ಹಲವು ವ್ಯತ್ಯಾಸಗಳಿವೆ. ಆದರೆ ಇವುಗಳ ದರ ಸದ್ಯಕ್ಕೆ ಕೈಗೆಟುಕುವ ಮಟ್ಟದಲ್ಲಿದೆ ಎಂದು ನೆಮ್ಮದಿ ಪಡುವ ವಿಷಯ.
ಈಗ ಡೀಸೆಲ್ ದರ ಲೀಟರಿಗೆ ಸುಮಾರು 40.91 ರು. ಇದ್ದರೆ, ಸಿಎನ್ಜಿ ದರ ಕೆಜಿಗೆ 32 ರು. ಇದೆ. ಎಲ್ ಪಿಜಿ ದರ ಸುಮಾರು 39.54 ರು. ಇದೆ (ಆಯಾ ಪ್ರದೇಶಗಳಲ್ಲಿ ಈ ದರದಲ್ಲಿ ತುಸು ವ್ಯತ್ಯಾಸಗಳಿರಬಹುದು). ಡೀಸೆಲ್ ಮತ್ತು ಎಲ್ ಪಿಜಿ ದರಗಳು ಕೊಂಚ ಜಿಗುಟಾಗಿವೆ. ಯಾಕೆಂದರೆ ಇದನ್ನು ರಾಜಕೀಯ ಕೆಸರಾಟಕ್ಕೆ ಸರಕಾರ ಬಳಸಿಕೊಳ್ಳುತ್ತಿದೆ.
ಏಪ್ರಿಲ್ 2010ರಿಂದ ಇಲ್ಲಿವರೆಗೆ ಡೀಸೆಲ್ ದರ 38.10 ರು.ನಿಂದ 40.91 ರು.ಗೆ ತಲುಪಿದೆ. ಅಂದರೆ ಶೇಕಡ 7.37ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಎಲ್ ಪಿಜಿ ದರ 29.96 ರು.ನಿಂದ 39.54 ರು.ಗೆ ನೆಗೆದಿದೆ. ಈ ಸಮಯದಲ್ಲಿ ಎಲ್ಪಿಜಿ ದರ ಶೇಕಡ 32ರಷ್ಟು ಏರಿಕೆ ಕಂಡಿದೆ.
ಸಿಎನ್ ಜಿ ದರ ತುಂಬಾ ಹೆಚ್ಚಾಗಿದೆ. ಆದರೆ ಈಗಲೂ ಕೈಗೆಟುಕುವ ಎತ್ತರದಲ್ಲೇ ಇದೆ. ಇದು 21 ರು. ಇದ್ದದ್ದು ಈಗ 32 ರು.ಗೆ ತಲುಪಿದೆ. ಅಂದರೆ ಶೇಕಡ 46.11ರಷ್ಟು ಏರಿಕೆ ಕಂಡಿದೆ.
ಕಡಿಮೆ ದರದ ಡೀಸೆಲ್, ಎಲ್ ಪಿಜಿ ಮತ್ತು ಸಿಎನ್ ಜಿ ನಿಮ್ಮನ್ನು ಆಕರ್ಷಿಸಬಹುದು. ಈಗ ಐಷಾರಾಮಿ ಕಾರುಗಳು ಕೂಡ ಡೀಸೆಲ್ ಮತ್ತು ಸಿಎನ್ ಜಿ ಆಯ್ಕೆಯಲ್ಲಿ ದೊರಕುತ್ತದೆ. ಆದರೆ ಇದರಿಂದ ನಿಜಕ್ಕೂ ಲಾಭವಿದೆಯೇ ಎಂಬುದನ್ನು ಗಮನಿಸಬೇಕು.


Click it and Unblock the Notifications








