ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

By Rahul Ts

ಆಟೋಮೊಬೈಲ್ ಕ್ಷೇತ್ರದಲ್ಲಿ ಮಾನ್ಯುಯಲ್ ಗೇರ್‌ಬಾಕ್ಸ್ ಕಾರಿನ ಬಳಕೆಯು ಸದ್ಯ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ನೋಡಿದರೆ, ಮಾನ್ಯುಯಲ್ ಕಾರಿನ ಬಗ್ಗೆ ಗ್ರಾಹಕರ ಒಲವನ್ನು ತೋರಿಸುತ್ತದೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಸಾಕಷ್ಟು ಪ್ರಖ್ಯಾತಿ ಪಡೆದುಕೊಡಿರುವ ಮಾನ್ಯುಯಲ್ ಕಾರುಗಳಲ್ಲಿ ಗೇರ್‌ಬಾಕ್ಸ್‌ನ ಕಡೆ ಹೆಚ್ಚು ಗಮನಹರಿಸಬೇಕಾಗುತ್ತದೆ. ಕಾರಿನ ಜೊತೆ ಯಾವುದೇ ರೀತಿಯ ವಿವರಣೆ ನೀಡುವ ಗೈಡ್ ಓದಿದರೂ ಸಹ, ತಾವೇ ಕಾರನ್ನು ಚಲಾಯಿಸದ ಹೊರತು, ಅದರ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವುದು ಕಷ್ಟ ಸಾದ್ಯ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ದಿನವೂ ಸಹ ಮಾನ್ಯುಯಲ್ ಗೇರ್ ಬಾಕ್ಸ್ ಕಾರನ್ನು ಚಾಲನೆ ಮಾಡುವ ಚಾಲಕನಿಗೆ, ಕಾರಿನ ಮೇಲೆ ಹಿಡಿತವಿರುತ್ತದೆ ಮತ್ತು ಕಾರಿನ ಗೇರ್ ಹಾಕುವ ವಿಧಾನದ ಬಗ್ಗೆ ತಿಳುವಳಿಕೆ ಇರುತ್ತದೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಸಾಮಾನ್ಯವಾಗಿ ಮಾನ್ಯುಯಲ್ ಗೇರ್ ಬಾಕ್ಸ್‌ನಲ್ಲಿ ಐದರಿಂದ ಆರು ಗೇರ್‌‌ಗಳನ್ನು ಹೊಂದಿರುವ ಕಾರುಗಳನ್ನು ನಾವು ನೋಡುತ್ತೇವೆ. ಗೇರ್‌ಗಳನ್ನು ಕೆಲವೊಂದು ಬಾರಿ ಎರಡನೇ ಗೇರ್‌ನಿಂದ ಯೋಚನೆ ಮಾಡದೆ ನಾಲ್ಕನೇ ಗೇರ್ ಹಾಕಿಬಿಡುತ್ತೇವೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಹಾಗಾದ್ರೆ, ಈ ರೀತಿ ಗೇರ್‌ಗಳನ್ನು ಸ್ಕಿಪ್ ಮಾಡುವುದು ಸರಿಯೇ ? ಈ ರೀತಿ ಮಾಡಿದರೆ ಗೇರ್ ಬಾಕ್ಸ್‌ಗೆ ತೊಂದರೆ ಆಗುತ್ತದೆಯೇ ? ಈ ರೀತಿ ಮಾಡುವುದು ಸುರಕ್ಷಿತವಾಗಿದೆಯೇ? ಎಂಬೆಲ್ಲಾ ಪ್ರೆಶ್ನೆಗಳು ಎಲ್ಲಾ ಕಾರು ಚಾಲಕರನ್ನು ಕಾಡುವುದು ಸಹಜ ಎನ್ನಬಹುದು. ಈ ಬಗ್ಗೆ ಒಂದಿಷ್ಟು ಮಾಹಿತಿ ನಾವಿಂದು ಕೊಡಲು ಪ್ರಯತ್ನಿಸಿದ್ದೇವೆ, ಮುಂದೆ ಓದಿ...

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಈ ಬಗ್ಗೆ ಆಟೋಮೊಬೈಲ್ ಎಂಜಿನಿಯರ್‌ಗಳನ್ನು ಕೇಳಿದಾಗ, ಅವರು ನೀಡುವ ಉತ್ತರ ಹೌದು !! ಎಂದೇ ಆಗಿರುತ್ತದೆ. ಗೇರ್ ಸ್ಕಿಪ್ ಮಾಡುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ವಿವರ ನೀಡುತ್ತಾರೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಗೇರ್ ಅಪ್ ಶಿಫ್ಟಿಂಗ್ ಅಥವಾ ಡೌನ್ ಶಿಫ್ಟಿಂಗ್ ಮಾಡುವ ಸಂದರ್ಭದಲ್ಲಿ ನೀವು ಈ ಪದ್ದತಿಯನ್ನು ಅನುಸರಿಸಬಹುದು. ಆದಾಗ್ಯೂ, ಸಾಕಷ್ಟು ಅನುಭವ ಹೊಂದಿರುವ ಚಾಲಕರು ಮಾತ್ರ ಈ ಪ್ರಯೋಗಕ್ಕೆ ಕೈಹಾಕಬಹುದು ಎಂದು ಎಚ್ಚರಿಸುತ್ತಾರೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ನೀವು ಮೂರನೇ ಗೇರ್‌ನಿಂದ ಐದನೇ ಗೇರ್‌ಗೆ ಸ್ಥಳಾಂತರಿಸಿದರೆ ಮತ್ತು ಸಾಮಾನ್ಯ ರೀತಿಯಲ್ಲಿ ಮತ್ತು ಅದೇ ವೇಗದಲ್ಲಿ ಕ್ಲಚ್ ಹೊರಡಿಸಿದರೆ, ಅಸಮತೋಲನದಿಂದ ಕಾರು ಎಳೆದಂತೆ ಭಾಸವಾಗುತ್ತದೆ. ಈ ಕಾರಣಕ್ಕಾಗಿಯೇ ನಾವು ಕೊಂಚ ಮಟ್ಟಿಗೆ ಎಚ್ಚರದಿಂದ ಗೇರ್ ಶಿಫ್ಟ್ ಮಾಡುವುದನ್ನು ರೂಡಿಸಿಕೊಳ್ಳಬೇಕಾಗಿದೆ.

ಕಾರಿನ ಗೇರ್ ಸ್ಕಿಪ್ ಮಾಡುವುದರಿಂದ ಗೇರ್‌ಬಾಕ್ಸ್ ಹಾಳಾಗುತ್ತಾ.?

ಹೌದು, ಇಷ್ಟೆಲ್ಲಾ ವಿಚಾರ ನಮಗೆ ತಿಳಿಸಿದ್ದೀರಿ... ಮೊದಲನೇ ಗೇರ್ ಹೊರತುಪಡಿಸಿ ಬೇರೆ ಗೇರ್ ಸಹಾಯದೊಂದಿಗೆ ಕಾರನ್ನು ನಿಂತಿರುವ ಸ್ಥಳದಿಂದ ಮೂವ್ ಮಾಡಬಹುದೇ ? ಎಂಬ ಪ್ರೆಶ್ನೆ ಕೇಳಿದರೆ, ಅದಕ್ಕೂ ಸಹ 'ಹೌದು' ಎಂದೇ ಉತ್ತರವಾಗುತ್ತದೆ. ಸೊ, ಇನ್ಮೇಲೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಗೇರ್ ಸ್ಕಿಪ್ ಮಾಡಿ... ಖುಷಿಯಾಗಿರಿ...

Kannada
Read more on auto tips gear tips
English summary
Skip gears on a manual transmission.
Story first published: Sunday, September 2, 2018, 9:10 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more