Just In
- 3 hrs ago
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- 3 hrs ago
11,177 ಗ್ರ್ಯಾಂಡ್ ವಿಟಾರಾ ಕಾರುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ಮಾರುತಿ ಸುಜುಕಿ
- 6 hrs ago
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- 7 hrs ago
ಯುವಕರ ಹಾಟ್ ಫೇವರೆಟ್ ಕವಾಸಕಿ ನಿಂಜಾ 300 ಬೈಕಿನ ಮೇಲೆ ಭರ್ಜರಿ ಡಿಸ್ಕೌಂಟ್
Don't Miss!
- Finance
Union Budget 2023: ತೆರಿಗೆದಾರರಿಗೆ ದೀರ್ಘಾವಧಿ ತೆರಿಗೆ ವಿನಾಯಿತಿ ಘೋಷಿಸಿ: KPMG
- Sports
IND vs NZ: ಕಿವೀಸ್ ವಿರುದ್ಧ ಏಕದಿನ ಸರಣಿ ಕ್ಲೀನ್ಸ್ವೀಪ್; ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ ಭಾರತ
- Movies
Katheyondu Shuruvagide: ಯುವರಾಜನ ಸೇಡು.. ಸ್ಟೋರ್ ರೂಮಿನಲ್ಲಿಯೇ ಕೃತಿಯ ವಾಸ!
- News
ತಿ.ನರಸೀಪುರ: ಚಿರತೆ ಬಲಿ ಪಡೆದ ಸಿದ್ದಮ್ಮ ಕುಟುಂಬಕ್ಕೆ ಎಸ್.ಟಿ.ಸೋಮಶೇಖರ್ ಸಾಂತ್ವನ
- Lifestyle
ಆ್ಯಪಲ್ ಶೇಪ್ನ ದೇಹ ಹೊಂದಿರುವವರಿಗೆ ಹೆಚ್ಚಾಗಿ ಕಾಯಿಲೆ ಬೀಳುತ್ತಾರೆ, ಏಕೆ?
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಳ್ಳರಿಗೆ ಈ ಕಾರುಗಳೇ ಫೇವರೆಟ್: ಕದಿಯಲು ಅನುಕೂಲವಾಗುತ್ತಿವೆ ನಮಗರಿಯದ ಕೆಲ ವಿಷಯಗಳು
ವಾಹನ ತಯಾರಕರು ಕೈಗೆಟುಕವ ಬೆಲೆಗೆ ವಾಹನಗಳನ್ನು ಪರಿಚಯಿಸುತ್ತಿದ್ದು, ದೇಶದಲ್ಲಿ ವಾಹನ ಮಾರಾಟ ಹೆಚ್ಚಾಗಿದೆ. ಅಲ್ಲದೇ ಶ್ರೀಮಂತರು ಕೂಡ ಮನೆಗೆ 2-3 ಕಾರುಗಳನ್ನು ಖರೀದಿಸುತ್ತಿದ್ದಾರೆ. ಆರ್ಥಿಕತೆ ಸುಧಾರಿಸಿದಂತೆ ಹೆಚ್ಚು ಜನರು ಕಾರುಗಳನ್ನು ಖರೀದಿಸುತ್ತಿರುವುದರ ಜೊತೆಗೆ ಕಳ್ಳತನ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಹಾಗಾಗಿ ನಿಮ್ಮ ಕಾರನ್ನು ರಕ್ಷಿಸಿಕೊಳ್ಳಲು ಕೆಲ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಒಳಿತು.
ದೇಶದಲ್ಲಿ ಒಂದು ವರ್ಷದಲ್ಲಿ ಎಷ್ಟು ಕಾರುಗಳು ಕಳ್ಳತನವಾಗುತ್ತಿವೆ ಗೊತ್ತಾ? ಪ್ರತಿ ವರ್ಷ ಸುಮಾರು ಒಂದು ಲಕ್ಷ ಕಾರುಗಳು ಕಳ್ಳತನವಾಗುತ್ತಿವೆ ಎಂದು ಅಂದಾಜಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ತಯಾರಾದ ವಾಹನಗಳು ಇತರ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಏಕೆಂದರೆ ಭಾರತದಲ್ಲಿ ತಯಾರಾದ ಕಾರುಗಳು ಇತರ ದೇಶಗಳಲ್ಲಿ ತಯಾರಾಗುವ ಮಾದರಿಗಳಿಗಿಂತ ಅಗ್ಗವಾಗಿರುವುದು ಪ್ರಮುಖ ಕಾರಣ. ಅಲ್ಲದೇ ಭಾರತೀಯ ಕಾರುಗಳು ಹೆಚ್ಚು ವಿಶ್ವಾಸಾರ್ಹವಾಗಿರುವುದು ಕೂಡ ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ.
ವಿದೇಶಿ ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಭಾರತೀಯ ಕಾರು ಕಂಪನಿಗಳು ನೀಡುಗತ್ತಿವೆ. ಹಾಗಾಗಿ ಬೇಡಿಕೆ ಹೆಚ್ಚಳವಾಗುತ್ತಿರುವ ಪರಿಣಾಮ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಕಾರು ಮಾರುಕಟ್ಟೆಯು ಗಣನೀಯವಾಗಿ ಬೆಳೆಯುವ ನಿರೀಕ್ಷೆಯಿದೆ. ಕಳೆದ ಐದು ವರ್ಷಗಳಲ್ಲಿ ಶೇ.20ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿದೆ. ಆರ್ಥಿಕತೆಯು ಚೇತರಿಸಿಕೊಳ್ಳುತ್ತಿರುವುದರಿಂದ ಈ ಬೆಳವಣಿಗೆ ಮುಂದುವರಿಯುವ ನಿರೀಕ್ಷೆಯಿದೆ. 2023ರ ಅಂತ್ಯಂದ ವೇಳೆಗೆ ಭಾರತದಲ್ಲಿ 30 ಮಿಲಿಯನ್‌ಗಿಂತಲೂ ಹೆಚ್ಚು ಕಾರುಗಳು ರಸ್ತೆಗಿಳಿಯಲಿವೆ ಎಂದು ಅಂದಾಜಿಸಲಾಗಿದೆ.
ಇದು ಒಂದೆಡೆ ದೇಶದ ಅಭಿವೃದ್ಧಿಯನ್ನು ಸೂಚಿಸಿದರೆ, ಮತ್ತೊಂದೆಡೆ ಕಳ್ಳತನ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಕಾರು ಕಳ್ಳತನಗಳ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಕಳುವಾದ ವಾಹನಗಳು ಮತ್ತೆ ಪತ್ತೆಯಾಗುವುದೇ ಅಪರೂಪವಾಗಿಬಿಟ್ಟಿದೆ. ಅತಿ ಹೆಚ್ಚು ಕಾರು ಕಳ್ಳತನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ನಡೆದಿವೆ. ಮಹಾರಾಷ್ಟ್ರವು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿನ ಮುಂಬೈ ನಗರವು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಕಾರನ್ನು ಕದಿಯಲು ಮತ್ತು ತಪ್ಪಿಸಿಕೊಳ್ಳಲು ಸುಲಭವಾಗಿದೆ.
ಈ ಬ್ರಾಂಡ್‌ಗಳೇ ಕಳ್ಳರಿಗೆ ಟಾರ್ಗೆಟ್
ಭಾರತದಲ್ಲಿ ಜನಪ್ರಿಯ ಬ್ರಾಂಡ್‌ಗಳ ಕಾರುಗಳು ಹೆಚ್ಚು ಕಳ್ಳತನವಾಗುತ್ತವೆ. ಏಕೆಂದರೆ ಕಳ್ಳರು ಕಳ್ಳತನ ಮಾಡಿದ ನಂತರ ಅವುಗಳನ್ನು ಸುಲಭವಾಗಿ ಮಾರಾಟ ಮಾಡುತ್ತಾರೆ. ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಹುಂಡೈ ಐ20 ನಂತಹ ಕಡಿಮೆ ಬೆಲೆಯ ಕಾರುಗಳು ಸಹ ಹೆಚ್ಚು ಕದ್ದ ಕಾರುಗಳಾಗಿವೆ. ಈ ಮಾದರಿಗಳು ಕಳ್ಳರಲ್ಲಿ ಜನಪ್ರಿಯವಾಗಿದ್ದು, ಇವುಗಳನ್ನು ಬ್ಲ್ಯಾಕ್ ಮಾರ್ಕೆಟ್‌ನಲ್ಲಿ ಮಾರುವುದು ಸುಲಭವಾಗಿರುವುದರಿಂದ ಕಳ್ಳರು ಇವನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದ್ದಾರೆ.
ಹಳೆಯ ಕಾರುಗಳ ಮೇಲೂ ಕಳ್ಳರ ಕಣ್ಣು
ಭಾರತದಲ್ಲಿ ಸುಮಾರು 12 ವರ್ಷದ ಹಳೆಯ ಕಾರುಗಳು ಹೊಸ ಕಾರುಗಳಿಗಿತ ಹೆಚ್ಚಿವೆ. ಏಕೆಂದರೆ ಹೆಚ್ಚಿನ ಜನರು ಹೊಸ ಕಾರು ಖರೀದಿಸಲು ಸಾಧ್ಯವಾಗದ ಕಾರಣ ಹಲವು ವರ್ಷಗಳ ಕಾಲ ಹಳೆಯ ಕಾರನ್ನೇ ಓಡಿಸುತ್ತಿದ್ದಾರೆ. ಇಂತಹ ಕಾರುಗಳನ್ನು ಕಳ್ಳರು ಅತಿ ಸುಲಭವಾಗಿ ಕದಿಯುತ್ತಿದ್ದಾರೆ. ಹಳೆಯ ಕಾರುಗಳು ತಂತ್ರಜ್ಞಾನದಲ್ಲಿ ಹಿಂದುಳಿದ ಕಾರಣ ಭದ್ರತಾ ವೈಶಿಷ್ಟ್ಯಗಳು ಹೆಚ್ಚಾಗಿ ಇರುವುದುಲ್ಲ. ಹಾಗಾಗಿ ಕಳ್ಳರು ಹಳೆಯ ಕಾರಿನ ಲಾಕ್ ಅನ್ನು ಮುರಿದು ಕದಿಯುವುದು ಸುಲಭವಾಗಿದೆ.
ಹಾಗಾಗಿ ಹಳೆಯ ಕಾರುಗಳನ್ನು ಹೊಂದಿರುವವರು ತಮ್ಮ ಕಾರುಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಕಾರುಗಳನ್ನು ರಕ್ಷಿಸಿಕೊಳ್ಳಬಹುದು. ಇಂದಿನ ಆಫ್ಟರ್ ಮಾರ್ಕೆಟ್‌ನಲ್ಲಿ ಹೊಸ ಕಾರುಗಳಲ್ಲಿ ಸಿಗುವ ಹಾಗೂ ಹಳೆ ಕಾರುಗಳಿಗೆ ಹೊಂದಿಕೊಲ್ಳುವ ಎಲ್ಲಾ ಫೀಚರ್‌ಗಳನ್ನು ಪಡೆದುಕೊಳ್ಳಬಹದು. ಇವು ಕಳ್ಳರಿಂದ ನಮ್ಮ ವಾಹನಗಳನ್ನು ಕಾಪಾಡಿಕೊಳ್ಳಲು ಉತ್ತಮ ಸಲಹೆಯಾಗಿದೆ. ಇನ್ನು ಹೊಸ ಕಾರುಗಳನ್ನು ಹೊಂದಿರುವವರಿಗೆ ಯಾವುದೇ ಚಿಂತೆ ಬೇಕಿಲ್ಲ. ಏಕೆಂದರೆ ಹೊಸ ಕಾರುಗಳಲ್ಲಿ ಉತ್ತಮ ಸೇಫ್ಟಿ ಫೀಚರ್‌ಗಳನ್ನು ನೀಡಲಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಆಟೋ ಉದ್ಯಮವು ಇತ್ತೀಚಿನ ವರ್ಷಗಳಲ್ಲಿ ಸೆಮಿಕಂಡಕ್ಟರ್ ಕೊರತೆಯನ್ನು ತೀವ್ರವಾಗಿ ಎದುರಿಸಿತ್ತು. ಇದರಿಂದ ವಾಹನಗಳ ಉತ್ಪಾದನೆಯು ಕಡಿಮೆಯಾಗಿ ನಷ್ಟ ಅನುಭವಿಸಬೇಕಾಯಿತು. ಇದೀಗ ಉದ್ಯಮ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಬೆಳವಣಿಗೆ ಸಾಧಿಸಲಿದೆ. ಆದರೆ ವಾಹನ ಬಳೆಕದಾರರು ತಮ್ಮ ವಾಹನಗಳ ಭದ್ರತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಾಹನ ಮಾರಾಟದಷ್ಟೆ ಕಳ್ಳತನ ಪ್ರಕರಣಗಳನ್ನು ಕಾಣಬೇಕಾಗುತ್ತದೆ.