ಸಲಹೆ: ಯುವಕರೇ ಡ್ರೈವಿಂಗ್ನಲ್ಲಿ ರಿಸ್ಕ್ ತಗೋಬ್ಯಾಡ್ರಿ

By * ಆಟೋ ಬಾಬಾ

ಆಟೋಬಾಬಾ ನೀಡುವ ಸಲಹೆಗಳು ಇಷ್ಟವಾಗಿದೆ ಮತ್ತು ವಾಹನ ಸವಾರಿಯಲ್ಲಿ ಸುರಕ್ಷತೆಯನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತಿವೆ ಎಂಬರ್ಥದ ಹಲವು ಪತ್ರಗಳು ನಮಗೆ ತಲುಪಿವೆ. ಕನ್ನಡ ಡ್ರೈವ್ ಸ್ಪಾರ್ಕ್ ನೀಡುವ ಸಲಹೆಗಳನ್ನು ನೀವು ಪಾಲಿಸಿ ಸುರಕ್ಷಿತವಾಗಿ ಸವಾರಿ ಮಾಡುತ್ತಿದ್ದೀರಿ ಎನ್ನುವುದು ಸಂತೋಷದ ಸುದ್ಧಿ.

ನಿನ್ನೆ ಆರಂಭಿಸಿದ ಮಾಲಿಕೆಯಲ್ಲಿ ಯುವಕರು ಡ್ರೈವಿಂಗ್ ನಲ್ಲಿ ಮಾಡೋ ತಪ್ಪುಗಳ ಕುರಿತು ಚರ್ಚಿಸುತ್ತಿದ್ದೇವು. ಸಿಡಿ ಡಿಸ್ಕ್ ಬದಲಾಯಿಸುತ್ತ, ಎಫ್ಎಂ ಸ್ಟೇಷನ್ ಬದಲಾಯಿಸುತ್ತ, ಮೊಬೈಲಿನಲ್ಲಿ ಮಾತನಾಡುತ್ತ, ಹಾಡು ಕೇಳುತ್ತ ಡ್ರೈವಿಂಗ್ ಮಾಡಬೇಡಿರೆಂದು ನಿನ್ನೆ ಹೇಳಿದ್ದೆ.

ಯುವಕರು ಮಾಡುವ ಇನ್ನೊಂದು ತಪ್ಪು ರಿಸ್ಕ್ ಗೆ ಸಂಬಂಧಿಸಿದ್ದು. ಜೀವನದಲ್ಲಿ ರಿಸ್ಕ್ ತಗೋಂಡ್ರೆನೆ ಏನಾದರೂ ಸಾಧಿಸೋಕೆ ಸಾಧ್ಯ ಅಂತ ನಂಗೂ ಗೊತ್ತಿದೆ. ನಾನೂ ಕೂಡ ಅಂತಹ ರಿಸ್ಕ್ ತೆಗೆದುಕೊಂಡಿದ್ದೇನೆ. ಆದ್ರೆ ಡ್ರೈವಿಂಗ್ ನಲ್ಲಿ ರಿಸ್ಕ್ ತಗೋಳ್ಳುವ ಯುವಕರ ಮನೋಭಾವವನ್ನು ನಾನು ವಿರೋಧಿಸುತ್ತೇನೆ.

ಇತ್ತೀಚೆಗೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಹೆಚ್ಚಾಗಿದೆ. ನೋ ವೇ ಎನ್ನುವ ಪ್ರದೇಶದಲ್ಲೂ ಡ್ರೈವಿಂಗ್ ಮಾಡುವರಿದ್ದಾರೆ. ನೈಸ್ ರಸ್ತೆಯಂತಹ ರಸ್ತೆ ಸಿಕ್ಕರೆ ಯಮವೇಗದಲ್ಲಿ ಡ್ರೈವಿಂಗ್ ಮಾಡುತ್ತಾರೆ. 4 ಗಂಟೆಯಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪಬೇಕು ಎನ್ನುವ ಉಮೇದು ಹೆಚ್ಚಾಗುತ್ತದೆ.

ಅಸಲಿಗೆ ಕಾನೂನು ಉಲ್ಲಂಘನೆಯನ್ನೇ ಯುವ ಚಾಲಕರು ರಿಸ್ಕ್ ಎಂದುಕೊಳ್ಳುತ್ತಾರೆ. ಹೀಗಾಗಿ ಸಿಗ್ನಲ್ ಉಲ್ಲಂಘಿಸಿ ಡ್ರೈವಿಂಗ್ ಮಾಡುತ್ತಾರೆ. ಇಷ್ಟು ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗಬೇಡಿ ಅಂದ್ರೂ ಅತಿವೇಗದಲ್ಲಿ ಹೋಗುತ್ತಾರೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಇತರ ವಯೋಮಾನದವರಿಗಿಂತ ಯುವಕರೇ ಅತ್ಯಂತ ಹೆಚ್ಚು ವೇಗವಾಗಿ ವಾಹನ ಓಡಿಸುತ್ತಾರೆ. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವರ ಸಂಖ್ಯೆಯಲ್ಲೂ ಯುವಕರೇ ಹೆಚ್ಚಿದ್ದಾರೆ. ಅಮೂಲ್ಯ ಜೀವನ ಉಳಿಸಿಕೊಳ್ಳಿ. ಡ್ರೈವಿಂಗ್ ನಲ್ಲಿ ರಿಸ್ಕ್ ತಗೋಬ್ರಾಡ್ರಿ ಅನ್ನೋದು ನನ್ನ ಬೇಡಿಕೆ. (ದಿನಕ್ಕೊಂದು ಸಲಹೆ)

More from DriveSpark

Article Published On: Friday, March 2, 2012, 10:36 [IST]
English summary
Young Drivers Mistakes. Teen drivers are at greater risk for accidents while driving. What general mistakes Young drivers Make. Read More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+