ವಾಹನ ಓವರ್ ಲೋಡ್ ಮಾಡಬೇಡಿ, ಮಾಡಿದರೆ..?

ಇಂದಿನ ಸಲಹೆ: ಯುವಕರು ತಮ್ಮ ಸಂಪೂರ್ಣ ಗ್ಯಾಂಗಿನೊಂದಿಗೆ ಕಾರು ಸವಾರಿ ಮಾಡುವುದು ಹೆಚ್ಚು. ಬಾರೋ ಮಚ್ಚ ಎನ್ನುತ್ತ ಎಕ್ಸ್ ಟ್ರಾ ಜನರನ್ನು ಕಾರಿನೊಳಗೆ ಹಾಕಿಕೊಳ್ಳುತ್ತಾರೆ. ಕಾರಿನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಜನರನ್ನು ತುಂಬಿಸಿಕೊಳ್ಳುವುದು ತಪ್ಪು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರಿದ್ದರೆ ಕಾರನ್ನು ಟರ್ನ್ ಮಾಡುವಾಗ, ಬ್ರೇಕ್ ಹಾಕುವಾಗ ಕಾರಿನ ಮೇಲೆ ನಿಯಂತ್ರಣ ತಪ್ಪುವ ಅಪಾಯವಿದೆ. ಕಾರು ಓವರ್ ಲೋಡ್ ಆಗಿದ್ದರೆ ಮೈಲೇಜ್ ಕೂಡ ಕಡಿಮೆಯಾಗುತ್ತದೆ.
ಭಾನುವಾರದ ಬೋನಸ್ ಸಲಹೆ: ವಾಹನ ಸವಾರಿ ಮಾಡುವಾಗ ದುಶ್ಚಟಗಳಿಂದ ದೂರವಿರಿ. ಸಿಗರೇಟ್ ಸೇವಿಸುತ್ತ, ಮದ್ಯಪಾನ ಮಾಡಿ ಡ್ರೈವಿಂಗ್ ಮಾಡುವುದು ಅಪಾಯಕಾರಿ. ಜಗತ್ತಿನಲ್ಲಿ ನಡೆಯುವ ಹೆಚ್ಚಿನ ಅಪಘಾತಗಳಿಗೆ ಕುಡಿತ ಪ್ರಮುಖ ಕಾರಣ. ಕುಡಿದು ಡ್ರೈವಿಂಗ್ ಮಾಡಿದವರಿಗೆ ಶಿಕ್ಷೆಯು ಜಾಸ್ತಿಯಾಗಿದೆ. (ಓದಿ: )
ದಿನಕ್ಕೊಂದು ಸಲಹೆ


Click it and Unblock the Notifications








