ದಿನದ ಸಲಹೆ: ಡ್ರೈವಿಂಗ್ನಲ್ಲಿ ಯುವಕರ ತಪ್ಪುಗಳು
ಹೆಚ್ಚಾಗಿ ಯುವ ಚಾಲಕ/ಚಾಲಕಿಯರು ಸೀಟ್ ಬೆಲ್ಟ್ ಇತ್ಯಾದಿಗಳಿಂದ ದೂರುವಿರುವುದನ್ನು ಇಚ್ಚಿಸುತ್ತಾರೆ. ರಸ್ತೆ ಅಪಘಾತದ ಕುರಿತು ಯಾವುದೇ ಭಯವನ್ನೂ ಅವರು ಹೊಂದಿರುವುದಿಲ್ಲ. ಸಣ್ಣ ಬಳ್ಳಿಯಂತಿರುವ ಸೀಟ್ ಬೆಲ್ಟ್ ನಮಗೆ ರಕ್ಷಣೆ ನೀಡಬಲ್ಲದೇ ಎಂಬ ಉಡಾಫೆ ಇರುತ್ತದೆ. ಕಾರಿನಲ್ಲಿ ಎಷ್ಟೇ ಫೀಚರುಗಳಿರಲಿ, ಆದರೆ ಸೀಟ್ ಬೆಲ್ಟಿಗಿಂತ ಬೆಸ್ಟ್ ಫೀಚರು ಇನ್ನೊಂದಿಲ್ಲ ಎನ್ನುವುದು ನೆನಪಿರಲಿ. (ಸಾಕ್ಷಿ ಇಲ್ಲಿದೆ.. ಓದಿ)
ಡ್ರೈವಿಂಗ್ ಮಾಡುತ್ತಿರುವಾಗ ನಿದ್ದೆಯ ಮೂಡ್ ಇದ್ದರೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿ ವಿರಮಿಸಿಕೊಳ್ಳಿ. ಮುಖ್ಯವಾಗಿ ರಾತ್ರಿ ಪ್ರಯಾಣ ಮಾಡುತ್ತಿದ್ದರೆ ನಿದ್ದೆ ಮೂಡ್ ಕಡಿಮೆಮಾಡಿಕೊಳ್ಳಿ. ಮುಖಕ್ಕೆ ನೀರು ಹಾಕಿಕೊಳ್ಳುವುದು. ನಿದ್ದೆಯಲ್ಲಿ ಕಾರು ಓಡಿಸಬೇಡಿ. ನಿದ್ದೆ ಓಡಿಸಿದ ನಂತರ ಡ್ರೈವಿಂಗ್ ಮಾಡಿ. (ದಿನಕ್ಕೊಂದು ಸಲಹೆ)


Click it and Unblock the Notifications








