ದ್ವಿಚಕ್ರವಾಹನ ಸವಾರಿಯಲ್ಲಿ ಮರೆಯಬಾರದ ವಿಷ್ಯಗಳು
ಕಾನೂನು ಪ್ರಕಾರ ಮಕ್ಕಳು ವಾಹನ ಸವಾರಿ ಮಾಡುವುದು ತಪ್ಪು. 18ನೇ ವರ್ಷವಾಗವರಿಗೆ ಡ್ರೈವಿಂಗ್ ಲೈಸನ್ಸ್ ಕೂಡ ದೊರಕುವುದಿಲ್ಲ. ಸೈಕಲ್ ನಲ್ಲಿ ನಾಲ್ಕು ಸಲ ಬಿದ್ದರೆನೆ ಸೈಕಲ್ ರೈಡಿಂಗ್ ಕಲಿಯಬಹುದು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮೋಟರ್ ವೆಹಿಕಲ್ ವಿಷ್ಯದಲ್ಲಿ ಈ ಸೂತ್ರ ತಪ್ಪು. ಕೆಲವೊಮ್ಮೆ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತವೆ. ಬದುಕಿನ ಮುಕ್ಕಾಲು ಭಾಗ ನೋಡಲು ಬಾಕಿಯಿರುವ ಮಕ್ಕಳು ಡ್ರೈವಿಂಗ್ ಹುಚ್ಚಿಗೆ ಬಿದ್ದು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ.
ಒಳ್ಳೆಯ ಡ್ರೈವರ್ ಆಗಲು ವಯಸ್ಸಿನ ಹಂಗಿಲ್ಲ. 30ರ ವರ್ಷದ ವ್ಯಕ್ತಿ ಕೂಡ ಬೈಕ್ ರೈಡಿಂಗ್ ನಲ್ಲಿ ತಪ್ಪು ಮಾಡುತ್ತಾನೆ. 60 ವಯಸ್ಸಿನವರು ಕೂಡ ಸ್ಕೂಟರ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಹಾಗಾದರೆ ಅತ್ಯುತ್ತಮ ಚಾಲಕನಾಗುವುದು ಹೇಗೆ? ಕನ್ನಡ ಡ್ರೈವ್ ಸ್ಪಾರ್ಕ್ ದಿನಕ್ಕೊಂದು ವಾಹನ ಸಲಹೆ ಮಾಲಿಕೆಯಲ್ಲಿ ಇಂದಿನಿಂದ ಅತ್ಯುತ್ತಮ ದ್ವಿಚಕ್ರ ವಾಹನ ರೈಡರ್ ಆಗಲು ಸಲಹೆಗಳು ಮೂಡಿಬರುತ್ತಿದೆ.
* ದ್ವಿಚಕ್ರ ವಾಹನ ಸವಾರಿಯಲ್ಲಿ ಹೆಚ್ಚು ಜನರು ಮರೆಯುವುದು ಟರ್ನ್ ಇಂಡಿಕೇಟರ್. ಇದು ಅತ್ಯಗತ್ಯವಾದ ಫೀಚರ್ ಆಗಿದ್ದು, ರಸ್ತೆಯಲ್ಲಿರುವ ಇತರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸ್ಪಷ್ಟ ಸಂದೇಶ ನೀಡುತ್ತದೆ. ಹೀಗಾಗಿ ಟರ್ನ್ ಇಂಡಿಕೇಟರ್ ಬಳಸಲು ಮರೆಯದಿರಿ. ನೀವು ನೇರ ರಸ್ತೆಯಲ್ಲಿ ಹೋಗುತ್ತಿದ್ದು, ಟರ್ನ್ ಇಂಡಿಕೇಟರ್ ಹಾಕದೇ ಗಾಡಿ ತಿರುಗಿಸಿದರೆ, ಇದರ ಅರಿವಿಲ್ಲದೆ ಹಿಂಭಾಗದಲ್ಲಿ ಬರುತ್ತಿರುವ ವಾಹನ ನಿಮ್ಮ ಬಂಡಿಗೆ ಡಿಕ್ಕಿ ಹೊಡೆಯಬಹುದು. ಸುರಕ್ಷಿತ ಸವಾರಿಗೆ ಮರೆಯದೆ ಟರ್ನ್ ಇಂಡಿಕೇಟರ್ ಬಳಸಿ.(ದಿನಕ್ಕೊಂದು ಸಲಹೆ)


Click it and Unblock the Notifications









