ವಿಶ್ವ ಪರಿಸರ ದಿನ: ವಾಯು ಮಾಲಿನ್ಯ ನಿಯಂತ್ರಣಕ್ಕೆ 11 ಅಮೂಲ್ಯ ಟಿಪ್ಸ್

Written By:

ಯುಕ್ತ ರಾಷ್ಟ್ರದ ಸಂಘದ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ಅಂಗವಾಗಿ ವರ್ಷಂಪ್ರತಿ ಜೂನ್ 05ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಮೂಲಕ ಸುಸ್ಥಿರ ನಾಳಿಗಾಗಿ ವಿಶ್ವದೆಲ್ಲೆಡೆ ಹಸಿರು ಕ್ರಾಂತಿಯನ್ನು ಪಸರಿಸುವ ಪ್ರಯತ್ನ ಮಾಡಲಾಗುತ್ತದೆ.

ಈಗ ಬಂದಿರುವ ಸಂಶೋಧನಾ ವರದಿಗಳ ಪ್ರಕಾರ ವಿಶ್ವದ 20 ಮಾಲಿನ್ಯ ನಗರಗಳಲ್ಲಿ 13ರಷ್ಟು ಭಾರತದಲ್ಲಿ ದಾಖಲಾಗಿರುವುದು ದುರದೃಷ್ಟಕರ ಸಂಗತಿ. ಪರಿಸರವನ್ನು ಮಾಲಿನ್ಯಗೊಳಿಸುವುದರಲ್ಲಿ ವಾಹನಗಳಿಂದ ಹೊರಸೂಸುವ ಕಾರ್ಬನ್ ಡೈ ಓಕ್ಸೈಡ್ ಹೊಗೆಯು ಅತ್ಯಂತ ಮಾರಕವೆನಿಸಿದೆ. ಇದು ಪರಿಸರವನ್ನು ಕಲುಷಿತಗೊಳಿಸುವುದಲ್ಲದೆ ಆರೋಗ್ಯಕ್ಕೂ ಕೆಟ್ಟ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ಸಾಂಪ್ರಾದಾಯಿಕ ಇಂಧನ ಚಾಲಿತ ವಾಹನಗಳ ಬದಲು ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಆಟೋ ಜಗತ್ತು ಕೈಜೋಡಿಸಿಕೊಂಡಿದ್ದರೂ ಅಷ್ಟು ಪರಿಣಾಮಕಾರಿಯೆನಿಸಿಲ್ಲ. ಈಗ ವಿಶ್ವ ಪರಿಸರ ದಿನಕ್ಕೆ ಕೊಡುಗೆಯಾಗಿ ವಾಯು ಮಾಲಿನ್ಯ ನಿಯಂತ್ರಣಕ್ಕೆ 11 ಅಮೂಲ್ಯ ಸಲಹೆಗಳನ್ನು ನಾವಿಲ್ಲಿ ಕೊಡಲಿದ್ದೇವೆ.

01. ದೈನಂದಿನ ಸಂಚಾರ

01. ದೈನಂದಿನ ಸಂಚಾರ

ನಿಮ್ಮ ದೈನಂದಿನ ಚಟುವಟಿಕೆಗಳಿಗಾಗಿ ತೆರಳುವಾಗ ಸಾಧ್ಯವಾದಷ್ಟು ಇಂಧನ ಚಾಲಿತ ವಾಹನಗಳ ಸಂಚಾರವನ್ನು ತಪ್ಪಿಸಿರಿ. ಉದಾಹರಣೆಗೆ ನಿಮ್ಮ ಆಫೀಸು ಕೆಲವೇ ಕೀ.ಮೀಗಳಷ್ಟು ಮಾತ್ರ ದೂರವಿದ್ದಲ್ಲಿ ವಾಕಿಂಗ್ ಕರಗತ ಮಾಡಿಕೊಳ್ಳಿ. ಇಲ್ಲದಿದ್ದಲ್ಲಿ ಸೈಕಲ್ ಬಳಕೆಯನ್ನು ಮಾಡಬಹುದು. ಇದರಿಂದ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

02 ಕಾರ್ ಪೂಲಿಂಗ್

02 ಕಾರ್ ಪೂಲಿಂಗ್

ಸರಿ, ನಿಮ್ಮ ಮನೆ ಕಚೇರಿಯಿಂದ 15 ಕೀ.ಮೀ. ಅಥವಾ ಅದಕ್ಕಿಂತಲೂ ಹೆಚ್ಚು ದೂರವಿದ್ದಲ್ಲಿ ಏನು ಮಾಡಬೇಕು? ಬಹುತೇಕ ಮಹಾನಗರಗಳಲ್ಲಿ ಕಾರ್ ಪೂಲಿಂಗ್ ವ್ಯವಸ್ಥೆಯಿದ್ದು, ನೀವಿದರಲ್ಲಿ ಸಂಚರಿಸುವ ಮೂಲಕ ಇಂಧನ ಜೊತೆಗೆ ನಿಮ್ಮ ಪಾಕೆಟ್ ಮನಿ ಉಳಿತಾಯ ಮಾಡಬಹುದಾಗಿದೆ. ಈ ಮೂಲಕ ಅಗಗತ್ಯ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದಾಗಿದೆ.

03. ಕಾರು ನಿರ್ವಹಣೆ

03. ಕಾರು ನಿರ್ವಹಣೆ

ನಿರಂತರ ಅಂತರಾಳದಲ್ಲಿ ಕಾರಿನ ನಿರ್ವಹಣೆ ಅತಿ ಅವಶ್ಯಕವಾದ ಘಟಕವಾಗಿದೆ. ನಿರಂತರ ಅಂತರಾಳದಲ್ಲಿ ಸರಿಯಾಗಿ ಸರ್ವೀಸ್ ಮಾಡಿಸಿದ ಕಾರುಗಳು ಕಡಿಮೆ ಹೊಗೆಯನ್ನು ಹೊರಸೂಸುತ್ತದೆ. ಇದು ನಿಮ್ಮ ಕಾರಿನ ಕ್ಷಮತೆಯನ್ನು ಶೇಕಡಾ 4ರಷ್ಟು ಹೆಚ್ಚಿಸಲಿದೆ. ಹಾಗೆಯೇ ಕೇಡು ಸಂಭವಿಸಿದ ಏರ್ ಫಿಲ್ಟರ್ ಬದಲಾಯಿಸುವ ಮೂಲಕ ಶೇಕಡಾ 10ರಷ್ಟು ಕಾರಿನ ಕ್ಷಮತೆ ವೃದ್ಧಿಸಬಹುದಾಗಿದೆ. ಇನ್ನೊಂದೆಡೆ ಕೆಟ್ಟು ಹೋದ ಆಕ್ಸಿಜನ್ ಸೆನ್ಸಾರ್‌ನಿಂದಾಗಿ ಕಾರಿನ ಮೈಲೇಜ್ ಶೇಕಡಾ 40ರಷ್ಟಕ್ಕೆ ಹಾನಿಯುಂಟಾಗಲಿದೆ.

04. ಚೈತನ್ಯ ಉಳಿತಾಯ

04. ಚೈತನ್ಯ ಉಳಿತಾಯ

ವಾಹನ ತಯಾರಕ ಸಂಸ್ಥೆ ಶಿಫಾರಸು ಮಾಡುವ ಮೋಟಾರು ಒಯಿಲ್ ಬಳಕೆ ಮಾಡುವುದರಿಂದ ಚೈತನ್ಯ ಉಳಿತಾಯವಾಗಲಿದ್ದು, ಅತ್ಯುತ್ತಮ ಇಂಧನ ಕ್ಷಮತೆ ಕಾಪಾಡಲು ನೆರವಾಗಲಿದೆ.

05. ಪ್ರವಾಸ ಯೋಜನೆ

05. ಪ್ರವಾಸ ಯೋಜನೆ

ಮುಂಚಿತವಾಗಿ ಪ್ರವಾಸ ಯೋಜನೆ ಮಾಡುವುದರಿಂದ ಎಲ್ಲಿಗೆ ತೆರಳಬೇಕೋ ಎಂಬುದರ ಬಗ್ಗೆ ಜ್ಞಾನ ಹೊಂದಲಿದ್ದು, ಇದರಿಂದ ಇಂಧನ ಉಳಿತಾಯದೊಂದಿಗೆ ವಾಯು ಮಾಲಿನ್ಯ ಕಡಿಮೆ ಮಾಡಲು ಸಹಕಾರಿಯಾಗಲಿದೆ.

06. ವಾಹನ ದಟ್ಟಣೆ

06. ವಾಹನ ದಟ್ಟಣೆ

ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅನಗತ್ಯ ಪಯಣವನ್ನು ತಪ್ಪಿಸಿ. ಇನ್ನು ಸರಿಯಾದ ರೀತಿಯಲ್ಲಿ ಪಾರ್ಕಿಂಗ್ ಮಾಡುವುದರಿಂದ ವಾಹನ ದಟ್ಟಣೆ ಕಡಿಮೆಯಾಗಲಿದ್ದು, ಇತರ ವಾಹನಗಳಿಗೂ ಅನುಕೂಲವಾಗಲಿದೆ.

07. ಚಕ್ರಗಳಿಗೆ ಸರಿಯಾಗಿ ಗಾಳಿ ತುಂಬಿಸಿ

07. ಚಕ್ರಗಳಿಗೆ ಸರಿಯಾಗಿ ಗಾಳಿ ತುಂಬಿಸಿ

ಚಕ್ರಗಳಿಗೆ ಸರಿಯಾದ ಪ್ರಮಾಣದಲ್ಲಿ ಗಾಳಿ ತುಂಬಿಸದಿದ್ದಲ್ಲಿ ರೊಲಿಂಗ್ ರೆಸಿಸ್ಟಂಟ್ ಪವರ್ ಜಾಸ್ತಿಯಾಗಲಿದ್ದು, ಪರಿಣಾಮ ಕಾರು ಮುಂದಕ್ಕೆ ಚಲಿಸಲು ಎಂಜಿನ್ ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದ ಹೆಚ್ಚು ಇಂಧನ ವ್ಯಯವಾಗಲಿದೆ. ಹಾಗಾಗಿ ಸರಿಯಾಗಿ ಗಾಳಿ ತುಂಬಿಸಿದ ಚಕ್ರಗಳು ಹೆಚ್ಚು ಸಮಯ ಬಾಳ್ವಿಕೆ ಬರಲಿದ್ದು, ಈ ಮೂಲಕ ಪರಿಸರ ಮೇಲಿನ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಹಣ ಉಳಿತಾಯ ಸಹ ಮಾಡಬಹುದು.

08. ಕಾರನ್ನು ಹಗುರವಾಗಿರಿಸಿ

08. ಕಾರನ್ನು ಹಗುರವಾಗಿರಿಸಿ

ನಿಮ್ಮ ಕಾರನ್ನು ಸಾಧ್ಯವಾದಷ್ಟು ಹಗುರವಾಡಲು ಪ್ರಯತ್ನಸಿ. ಅಂದರೆ ಕ್ಯಾಬಿನ್ ಅಥವಾ ಬೂಟ್ ಸ್ಪೇಸ್‌ನಿಂದ ಅನಗತ್ಯ ವಸ್ತುಗಳನ್ನು ಹೊರದಬ್ಬಿರಿ. ನೆನಪಿಡಿ, ಹಗುರ ಕಾರು, ಸುಲಭ ಚಾಲನೆಯ ಜೊತೆಗೆ ಹೆಚ್ಚು ಇಂಧನ ಕ್ಷಮತೆಗೆ ನೆರವಾಗಲಿದೆ.

09. ಹಳೆಯ ವಾಹನಗಳನ್ನು ಬದಿಗೆ ಸರಿಸಿ

09. ಹಳೆಯ ವಾಹನಗಳನ್ನು ಬದಿಗೆ ಸರಿಸಿ

ನಿಮ್ಮ ಬಳಿ ಹಳೆಯ ಅಥವಾ ಹೆಚ್ಚು ವಾಯು ಮಾಲಿನ್ಯ ತರುವಂತಹ ವಾಹನಗಳಿದ್ದರೆ ಅಂತಹ ವಾಹನಗಳ ಬಳಕೆಯನ್ನು ಸಾಧ್ಯವಾದಷ್ಟು ತಪ್ಪಿಸಿರಿ.

 10. ವಿದ್ಯುತ್ ಚಾಲಿತ ವಾಹನ

10. ವಿದ್ಯುತ್ ಚಾಲಿತ ವಾಹನ

ವಿದ್ಯುತ್ ಚಾಲಿತ ವಾಹನಗಳನ್ನು ಬಳಕೆ ಮಾಡುವುದರಿಂದ ವಾಯು ಮಾಲಿನ್ಯಕ್ಕೆ ನಿಮ್ಮೆಲ್ಲ ಸಮಸ್ಯೆಗಳು ನಿವಾರಣೆಯಾಗಲಿದೆ. ಈ ಮೂಲಕ ಸುಸ್ಥಿರ ನಾಳಿನ ಪರಿಸರಕ್ಕಾಗಿ ನಿಮ್ಮ ಕೊಡುಗೆಯನ್ನು ಸಲ್ಲಿಸಬಹುದಾಗಿದೆ.

11. ವಾಹನ ಮಾರ್ಪಾಡು

11. ವಾಹನ ಮಾರ್ಪಾಡು

ನಿಮ್ಮ ವಾಹನಗಳನ್ನು ಮಾರ್ಪಾಡುಗೊಳಿಸುವ ಗೋಜಿಗೆ ಹೋಗದಿರಿ. ಅಧ್ಯಯನ ವರದಿಯ ಪ್ರಕಾರ ಕಸ್ಟಮೈಸ್ಡ್ ವಾಹನಗಳು ಅತಿ ಹೆಚ್ಚು ಇಂಧನವನ್ನು ಪೋಲು ಮಾಡುತ್ತದೆ. ಈ ಮೂಲಕ ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.

English summary
World Environment Day Special: How to reduce Air pollution
Story first published: Friday, June 5, 2015, 12:37 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more