ಭಾರತೀಯ ರಸ್ತೆಗೆ ಸಂಬಂಧಪಟ್ಟ 10 ಅದ್ಭುತ ಸತ್ಯಗಳು!

By Nagaraja

ಭಾರತೀಯ ಕಳಪೆ ರಸ್ತೆಗಳ ಬಗ್ಗೆ ನಾವು ಸದಾ ಆರೋಪ ಮಾಡುತ್ತಲೇ ಬಂದಿದ್ದೇವೆ. ದೇಶದ ರಸ್ತೆಗಿಳಿಯುವ ಪ್ರತಿಯೊಬ್ಬ ಸವಾರ ಕೂಡಾ ಒಂದಲ್ಲ ಒಂದು ಒಂದಲ್ಲ ತೊಂದರೆಯನ್ನು ಎದುರಿಸುತ್ತಿದ್ದು, ಭ್ರಷ್ಟ ಅಧಿಕಾರಿಗಳಿಂದ ತುಂಬಿಕೊಂಡಿರುವ ನಮ್ಮ ದೇಶದ ಆಡಳಿತದ ಹಣೆಬರಹವೇ ಇಷ್ಟು ಎಂದು ಸಮಾಧಾನಪಟ್ಟುಕೊಳ್ಳುತ್ತೇವೆ.

ಇವನ್ನೂ ಓದಿ: ಜೀವಮಾನದಲ್ಲಿ ಸಂಚರಿಸಲೇಬೇಕಾದ ದೇಶದ 11 ಅದ್ಭುತ ರಸ್ತೆಗಳು

ಇದರಿಂದಾಗಿಯೇ ದೇಶದ ರಸ್ತೆಗಳು ಹೊಂದಿರುವ ಕೆಲವು ವಿಶಿಷ್ಟ ಗುಣಗಳನ್ನು ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಮರೆತು ಬಿಡುತ್ತೇವೆ. ನಿಮಗಿದು ಗೊತ್ತೇ? ಒಟ್ಟು 4,320,000 ಕೀ.ಮೀ. ಉದ್ದದ ರಸ್ತೆ ಜಾಲವನ್ನು ಹೊಂದಿರುವ ಭಾರತೀಯ ರಸ್ತೆಯು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ.

ಭಾರತೀಯ ರಸ್ತೆಗೆ ಸಂಬಂಧಪಟ್ಟ 10 ಅದ್ಭುತ ಸತ್ಯಗಳು!

ಹೀಗೆ ಇದನ್ನು ವಿಂಗಡಿಸಿದರೆ ದೇಶದ ರಸ್ತೆ ಜಾಲವು 1000 ಕೀ.ಮೀ. ಎಕ್ಸ್‌ಪ್ರೆಸ್‌ವೇ, 79,243 ಕೀ.ಮೀ. ರಾಷ್ಟ್ರೀಯ ಹೆದ್ದಾರಿ, 1,31,899 ಕೀ.ಮೀ. ರಾಜ್ಯ ಹೆದ್ದಾರಿಗಳನ್ನು ಹೊಂದಿದೆ. ಇಂದಿನ ಈ ಲೇಖನದಲ್ಲಿ ದೇಶದ ರಸ್ತೆಯ ಬಗೆಗಿನ 10 ಅದ್ಭುತ ಸತ್ಯಗಳ ಬಗ್ಗೆ ಪಟ್ಟಿ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಮುಂದಿನ ಸ್ಲೈಡ್‌ನತ್ತ ಮುಂದುವರಿಯಿರಿ...

01. ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ

01. ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ

ಭಾರತದ ರಾಷ್ಟ್ರೀಯ ಹೆದ್ದಾರಿಯು 79,243 ಕೀ.ಮೀ. ಉದ್ದದ ರಸ್ತೆ ಜಾಲವನ್ನು ಹೊಂದಿದೆ. ಇದರಲ್ಲಿ 1000 ಕೀ.ಮೀ. ನಿರ್ಬಂಧಿತ ಪ್ರವೇಶ ಹೆದ್ದಾರಿ ಕೂಡಾ ಸೇರಿದೆ. ವಾರಾಣಸಿಯಿಂದ ಕನ್ಯಾಕುಮಾರಿ ವರೆಗೆ ಹರಡಿರುವ ರಾಷ್ಟ್ರೀಯ ಹೆದ್ದಾರಿ 7, ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಒಟ್ಟು 4,752 ಕೀ.ಮೀ. ಉದ್ದದ ಹಾದಿಯನ್ನು ಹೊಂದಿದೆ.

ವರದಿಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿ 7, ಎನ್‌ಚ್ 44 ಜೊತೆಗೆ ವಿಲೀನವಾಗಲಿದ್ದು, ಇದರೊಂದಿಗೆ ಶ್ರೀನರಗರದಿಂದ ಕನ್ಯಾಕುಮಾರಿ ವರೆಗಿನ ರಸ್ತೆ ಅತ್ಯಂತ ಉದ್ದವೆನಿಸಲಿದೆ.

02. ದೇಶದ ಅತ್ಯುತ್ತಮ ಎಕ್ಸ್‌ಪ್ರೆಸ್‌ವೇ

02. ದೇಶದ ಅತ್ಯುತ್ತಮ ಎಕ್ಸ್‌ಪ್ರೆಸ್‌ವೇ

ಅಹಮದಾಬಾದ್‌ನಿಂದ ವಡೋದರಾ ವರೆಗಿನ ಹೆದ್ದಾರಿಯು ದೇಶದ ಅತ್ಯುತ್ತಮ ಎಕ್ಸ್‌ಪ್ರೆಸ್‌ವೇ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ನ್ಯಾಷನಲ್ ಎಕ್ಸ್‌ಪ್ರೆಸ್‌ವೇ 1 ಎಂದು ಹೆಸರಿಸಿಕೊಂಡಿದೆ. 95 ಕೀ.ಮೀ. ಉದ್ದದ ಈ ಹೆದ್ದಾರಿಯು ಅಹಮದಾಬಾದ್‌ನಿಂದ ವಡೋದರಾ ನಗರವನ್ನು ಸಂಪರ್ಕಿಸುತ್ತದೆ. ಇದನ್ನು 2004ರಲ್ಲಿ ಸ್ವರ್ಣ ಚತುಷ್ಪಥ ಯೋಜನೆಯಡಿಯಲ್ಲಿ ನಿರ್ಮಿಸಲಾಗಿತ್ತು.

03. ಅತಿ ಉದ್ದದ ಎಲಿವೇಟಡ್ ಫ್ರೀವೇ

03. ಅತಿ ಉದ್ದದ ಎಲಿವೇಟಡ್ ಫ್ರೀವೇ

ದೇಶದ ಅತಿ ಉದ್ದದ ಎಲಿವೇಟಡ್ ಫ್ರೀವೇ (ಮೇಲೆತ್ತಿದ) ಎಂಬ ಖ್ಯಾತಿಗೆ ಪೋರ್ಟ್ ಮಧುರವಯೆಲ್ ಎಲಿವೇಟಡ್ ಎಕ್ಸ್‌ಪ್ರೆಸ್‌ವೇ ಪಾತ್ರವಾಗಲಿದೆ. ಈಗ ನಿರ್ಮಾಣ ಹಂತದಲ್ಲಿರುವ ಇದು ಚೆನ್ನೈ ಹಾಗೂ ಮಧುರವಯೆಲ್ ಜಂಕ್ಷನ್ ಸಂಪರ್ಕಿಸುತ್ತದೆ.

04. ಅತಿ ಉದ್ದದ ಕ್ಲೋವರ್ ಲೀಫ್ ಇಂಟರ್ ಚೇಂಜ್

04. ಅತಿ ಉದ್ದದ ಕ್ಲೋವರ್ ಲೀಫ್ ಇಂಟರ್ ಚೇಂಜ್

ದೇಶದ ಅತಿ ದೊಡ್ಡ ಕ್ಲೋವರ್ ಲೀಫ್ ವಿನಿಮಯ ರಸ್ತೆ ವ್ಯವಸ್ಥೆಯು ಚೆನ್ನೈನ ಕತ್ತಿಪಾರಾ ಜಂಕ್ಷನ್‌ನಲ್ಲಿದೆ. ವಿಶೇಷವೆಂದರೆ ಇದು ಏಷ್ಯಾದಲ್ಲೇ ಅತಿ ದೊಡ್ಡ ಕ್ಲೋವರ್ ಲೀಫ್ ಫ್ಲೈಓವರ್ ಆಗಿದೆ.

05. ಅತಿ ದೊಡ್ಡ ನಗರ ಮೇಲ್ಸುತುವೆ (ಫ್ಲೈಓವರ್)

05. ಅತಿ ದೊಡ್ಡ ನಗರ ಮೇಲ್ಸುತುವೆ (ಫ್ಲೈಓವರ್)

ಬೆಂಗಳೂರಿನ ಹೆಬ್ಬಾಳದಲ್ಲಿರುವ 5.23 ಕೀ.ಮೀ. ಉದ್ದದ ಫ್ಲೈಓವರ್ ದೇಶದ ಅತಿ ದೊಡ್ಡ ನಗರ ಮೇಲ್ಸುತುವೆಯಾಗಿದೆ. ಇದು ಔಟರ್ ರಿಂಗ್ ರೋಡ್ ಹಾಗೂ ಬಳ್ಳಾರಿ ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ದೇಶದ ಎಂಜಿನಿಯರ್‌ಗಳ ಅತ್ಯಂತ ಅದ್ಭುತ ಸಾಧನೆಯೆಂದೇ ಪರಿಗಣಿಸಲ್ಪಟ್ಟಿದೆ.

06. ಉದ್ದದ ನದಿ ರಸ್ತೆ ಸೇತುವೆ

06. ಉದ್ದದ ನದಿ ರಸ್ತೆ ಸೇತುವೆ

ಬಿಹಾರದ ಗಂಗಾ ನದಿ ಮೇಲ್ಭಾಗದಲ್ಲಿ ಹಾದು ಹೋಗುತ್ತಿರುವ ಮಹಾತ್ಮ ಗಾಂಧಿ ಸೇತು ನದಿ ರಸ್ತೆ ಸೇತುವೆಯು ಪಾಟ್ನಾ ನಗರವನ್ನು ಸಂಪರ್ಕಿಸುತ್ತದೆ. ಈ 5.5 ಕೀ.ಮೀ. ಉದ್ದಕ್ಕೆ ಹರಡಿರುವ 4 ಲೇನ್ ರಸ್ತೆಯು ದೇಶದ ಅತಿ ದೊಡ್ಡ ನದಿ ರಸ್ತೆ ಸೇತುವೆಯಾಗಿದ್ದು, ವಿಶ್ವದ ಅತಿ ಉದ್ದದ ಸೇತುವೆಗಳಲ್ಲಿ ಒಂದಾಗಿದೆ.

07. ಉದ್ದದ ರಸ್ತೆ-ರೈಲು ಸೇತುವೆ

07. ಉದ್ದದ ರಸ್ತೆ-ರೈಲು ಸೇತುವೆ

ಗೋದಾವರಿ ನದಿ ಮೇಲ್ಬಾಗದಲ್ಲಿ ಹಾದು ಹೋಗುತ್ತಿರುವ ಗೋದಾವರಿ ಸೇತುವೆಯು (ಕೊವ್ವುರ್ ರಾಜಮುಂಡ್ರಿ ಬ್ರಿಡ್ಜ್) ಏಷ್ಯಾದ ಎರಡನೇ ಹಾಗೂ ದೇಶದ ಅತಿ ಉದ್ದದ ರಸ್ತೆ-ರೈಲು ಸೇತುವೆಯಾಗಿದೆ. 2.7 ಕೀ.ಮೀ. ಉದ್ದದ ಈ ಸೇತುವೆಯಲ್ಲಿ ಎರಡು ಲೇನ್‌ಗಳ ರಸ್ತೆ ಹಾಗೂ ಸಿಂಗಲ್ ರೈಲ್ವೇ ಜಾಲವನ್ನು ಹೊಂದಿದೆ.

08. ಅತಿ ದೊಡ್ಡ ಟೋಲ್ ಬೂತ್ (Toll Plaza)

08. ಅತಿ ದೊಡ್ಡ ಟೋಲ್ ಬೂತ್ (Toll Plaza)

32 ಲೇನ್ ಟೋಲ್ ಕಟ್ಟೆಗಳನ್ನು ಹೊಂದಿರುವ ದೆಹಲಿ-ಗುರ್ಗಾಂವ್ ಗಡಿಯಲ್ಲಿ ಸ್ಥಿತಗೊಂಡಿರುವ ಗುರ್ಗಾಂವ್ ಎಕ್ಸ್‌ಪ್ರೆಸ್‌ವೇ ಟೋಲ್ ಬೂತ್ ಭಾರತದಷ್ಟೇ ಅಲ್ಲ ಏಷ್ಯಾದಲ್ಲೇ ಅತಿ ದೊಡ್ಡ ಟೋಲ್ ಬೂತ್ ಆಗಿದೆ.

09. ಉದ್ದದ ಸಮುದ್ರ ಸೇತುವೆ

09. ಉದ್ದದ ಸಮುದ್ರ ಸೇತುವೆ

ಮುಂಬೈನಲ್ಲಿರುವ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಮಾರ್ಗವು ದೇಶದ ಅತಿ ದೊಡ್ಡ ಸಮುದ್ರ ಸೇತುವೆಯಾಗಿದೆ. ಇದು ಪಶ್ಚಿಮ ಎಕ್ಸ್‌ಪ್ರೇಯಲ್ಲಿ ಈ ಎರಡು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಅಲ್ಲದೆ ಒಟ್ಟು 22 ಕೀ.ಮೀ. ದೂರವನ್ನು ಹೊಂದಿದೆ.

10. ಉದ್ದವಾದ ರಸ್ತೆ ಸುರಂಗ ಮಾರ್ಗ

10. ಉದ್ದವಾದ ರಸ್ತೆ ಸುರಂಗ ಮಾರ್ಗ

ಜಮ್ಮ ಕಾಶ್ಮೀರದ ಉದಮ್‌ಪುರ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಚೆನಾನಿ ನಾಶ್ರಿ ಸುರಂಗ ಮಾರ್ಗವು ದೇಶದ ಅತಿ ಉದ್ದದ ರಸ್ತೆ ಸುರಂಗ ಮಾರ್ಗ ಖ್ಯಾತಿಗೆ ಪಾತ್ರವಾಗಲಿದೆ. ಇಲ್ಲಿ 9.2 ಕೀ.ಮೀ. ಉದ್ದದ ಸುರಂಗ ಮಾರ್ಗವನ್ನು ಕೊರೆಯಲಾಗುತ್ತಿದೆ.


Most Read Articles

Kannada
English summary
The Road network of India is second largest road network in The World with total length of around 4,320,000 Km. Here are compiled some interesting facts about Indian roads and bridges. Have a look
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X