ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್

By Nagaraja

ಆರ್ಮರ್ಡ್ ಕಾರು - ಹೆಸರು ಕೇಳಿದಾಗಲೇ ಒಂಥರ ನಡುಕ ಸೃಷ್ಟಿಯಾಗುತ್ತದೆ. ಇದನ್ನು ಸುಲಭವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಲ್ಲಿ ಶಸ್ತ್ರಸಜ್ಜಿತ ಅಥವಾ ಸುಸಜ್ಜಿತ ಬುಲೆಟ್ ಪ್ರೂಫ್ ಕಾರೆಂದು ಬಣ್ಣಿಸಿಕೊಳ್ಳಬಹುದು. ಹಿಂದೆಲ್ಲ ರಾಷ್ಟ್ರಪತಿ, ಪ್ರಧಾನಿಯಂತಹ ಗಣ್ಯ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿದ್ದ ಇಂತಹ ಕಾರುಗಳು ಇದೀಗ ಉದ್ಯಮಿ, ಬಾಲಿವುಡ್ ತಾರೆಯರು ಹಾಗೂ ರಾಜಕಾರಣಿಗಳಂತಹ ವಿಐಪಿಗಳಿಗೂ ಶ್ರೀರಕ್ಷೆಯಾಗಿದೆ.

ಒಬಾಮ ಕಾರಿನಲ್ಲಿ ಒಂದು ಬ್ಯೂಟಿಫುಲ್ ರೈಡ್

ಇಂತಹ ಆರ್ಮರ್ಡ್ ಕಾರುಗಳ ತಯಾರಿಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ನೆಲ ಬಾಂಬ್ ಸ್ಫೋಟ, ಗ್ರೇನೆಡ್ ದಾಳಿ, ಉಗ್ರರ ದಾಳಿ ತಡೆಯಲು ಬುಲೆಟ್ ಫ್ರೂಫ್ ಜೊತೆಗೆ ಎಲ್ಲ ರೀತಿಯ ಹವಾಮಾನಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಇಲ್ಲಿ ವಿಶೇಷ ಸಂಗತಿಯೆಂದರೆ ಸುರಕ್ಷತೆಯ ದೃಷ್ಟಿಕೋನದಲ್ಲಿ ಆರ್ಮರ್ಡ್ ವಾಹನಗಳಲ್ಲಿ ಬಳಸಿಕೊಳ್ಳಲಾಗುತ್ತಿರುವ ಭದ್ರತಾ ವೈಶಿಷ್ಟ್ಯಗಳ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ.

ರಾಷ್ಟ್ರಪತಿ ಪ್ರಣಬ್ ಹಾಗೂ ವಿಶ್ವ ಪ್ರಥಮ ಪ್ರಜೆಗಳ ಕಾರು

ಸಾಮಾನ್ಯವಾಗಿ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಹಾಗೂ ಆಡಿಗಳಂತಹ ಸಂಸ್ಥೆಗಳು ಶಸ್ತ್ರಸಜ್ಜಿತ ಕಾರುಗಳನ್ನು ನಿರ್ಮಿಸುತ್ತದೆ. ಭಾರತದ ಪ್ರಧಾನಿ ಮನಮೋಹನ್ ಸಿಂಗ್, ಬಿಎಂಡಬ್ಲ್ಯು 7 ಸಿರೀಸ್ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಎಸ್ 600ಎಲ್ ಮಿಲಿಟರಿ ಕಾರನ್ನು ಹೊಂದಿದ್ದಾರೆ. ಅಂದ ಹಾಗೆ ಮುಂಬರುವ ಭಾರತ ಪ್ರಧಾನಿಯೂ ಇಂತಹುದೇ ಕಾರೊಂದನ್ನು ಗಿಟ್ಟಿಸಿಕೊಳ್ಳಲಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಸದ್ಯ ಈ ಲೇಖನದಲ್ಲಿ ಜಗತ್ತಿನ ಅತ್ಯಂತ ದುಬಾರಿ ಟಾಪ್ 10 ಆರ್ಮರ್ಡ್ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ವಿಶ್ವಪ್ರಸಿದ್ಧ ರಾಜಮನೆತನದ ಕಾರುಗಳು

ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್

ಮಿಲಿಟರಿ, ಗಣ್ಯ ವ್ಯಕ್ತಿಗಳಿಗಷ್ಟೇ ಸೀಮಿತವಾಗಿದ್ದ ಆರ್ಮರ್ಡ್ ವಾಹನಗಳನ್ನು ಇದೀಗ ಜಗತ್ತಿನ ಶ್ರೀಮಂತ ವ್ಯಕ್ತಿಗಳು ಸಹ ತಮ್ಮ ಭದ್ರತೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಜಗತ್ತಿನ ಅತ್ಯಂತ ದುಬಾರಿ ಆರ್ಮರ್ಡ್ ಕಾರುಗಳ ಮಾಹಿತಿಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

1. ಮರ್ಸಿಡಿಸ್ ಬೆಂಝ್ ಸಿ-ಗಾರ್ಡ್ 600

1. ಮರ್ಸಿಡಿಸ್ ಬೆಂಝ್ ಸಿ-ಗಾರ್ಡ್ 600

ಬೆಲೆ: 8.36 ಕೋಟಿ ರು. (1.4 ಮಿಲಿಯನ್ ಅಮೆರಿಕನ್ ಡಾಲರ್)

8.36 ಕೋಟಿ ರು.ಗಳಷ್ಟು ದುಬಾರಿಯಾಗಿರುವ ಬೆಂಝ್ ಸಿ ಗಾರ್ಡ್ 600 ಶಸ್ತ್ರಸಜ್ಜಿತ ಕಾರು, ಅತಿ ಸಮೀಪದ ಸ್ಫೋಟಕ ದಾಳಿ, ಗ್ರೇನೆಡ್ ಸ್ಪೋಟಗಳನ್ನು ತಡೆಯುವ ಶಕ್ತಿ ಹೊಂದಿದೆ.

ಮರ್ಸಿಡಿಸ್ ಬೆಂಝ್ ಸಿ-ಗಾರ್ಡ್ 600

ಮರ್ಸಿಡಿಸ್ ಬೆಂಝ್ ಸಿ-ಗಾರ್ಡ್ 600

ಇದು ಟ್ವಿನ್ ಟರ್ಬೊಚಾರ್ಜ್ಡ್ 5.5 ಲೀಟರ್ ವಿ12 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 517 ಅಶ್ವಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿರಲಿದೆ. ಹಾಗೆಯೇ ಕೇವಲ ನಾಲ್ಕು ಸೆಕೆಂಡುಗಳಲ್ಲಿ 60 ಮೈಲ್ ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

2. ಆಡಿ ಎ8 ಸೆಕ್ಯೂರಿಟಿ

2. ಆಡಿ ಎ8 ಸೆಕ್ಯೂರಿಟಿ

ಬೆಲೆ: 4.1 ಕೋಟಿ ರು.ಗಳಿಂದ 5.98 ಕೋಟಿ ರು.ಗಳ ವರೆಗೆ

ಸ್ಟೀಲ್, ಟೈಟಾನಿಯಂಗಳಂತಹ ಲೋಹಗಳಿಂದ ನಿರ್ಮಿತವಾಗಿರುವ ಆಡಿ ಎ8 ಸೆಕ್ಯೂರಿಟಿ, ಅತ್ಯಂತ ಶಕ್ತಿಶಾಲಿ ಮದ್ದುಗುಂಡುಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಸಂಸ್ಥೆಯು ಹೇಳುವಂತೆಯೇ ಬೆಂಕಿಯ ಸಹಿತ ರಾಸಾಯನಿಕ ದಾಳಿ ನಿಯಂತ್ರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಆಡಿ ಎ8 ಸೆಕ್ಯೂರಿಟಿ

ಆಡಿ ಎ8 ಸೆಕ್ಯೂರಿಟಿ

ಇದು ವಿ12 420ಬಿ ಅಶ್ವಶಕ್ತಿ ಉತ್ಪಾದಿಸುವ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಕೇವಲ ಐದು ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

3. ಬೆಂಟ್ಲಿ ಮುಲ್ಲಿನೆರ್ ಡಿವಿಷನ್

3. ಬೆಂಟ್ಲಿ ಮುಲ್ಲಿನೆರ್ ಡಿವಿಷನ್

ಬೆಲೆ: 2.39 ಕೋಟಿ ರು.

ಮಗದೊಂದು ಐಷಾರಾಮಿ ಆರ್ಮರ್ಡ್ ಕಾರಾಗಿರುವ ಬೆಂಟ್ಲಿಯ ಮುಲ್ಸಾನ್ ಮುಲ್ಲಿನೆರ್ ಡಿವಿಷನ್‌, ಗುಂಡು, ರಾಸಾಯನಿಕ ಹಾಗೂ ಬಾಂಬ್ ದಾಳಿಗಳಂತಹ ಶಕ್ತಿಶಾಲಿ ಆಕ್ರಮಣಗಳನ್ನು ಎದುರಿಸಲು ಶಕ್ತವಾಗಿದೆ.

ಬೆಂಟ್ಲಿ ಮುಲ್ಲಿನೆರ್ ಡಿವಿಷನ್

ಬೆಂಟ್ಲಿ ಮುಲ್ಲಿನೆರ್ ಡಿವಿಷನ್

ಐದು ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ. ವೇಗವರ್ಧಿಸಲು ಸಾಮರ್ಥ್ಯ ಹೊಂದಿರುವ ಬೆಂಟ್ಲಿ ಮುಲ್ಲೆನೆರ್ ಡಿವಿಷನ್, ಗಂಟೆಗೆ ಗರಿಷ್ಠ 184 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು ಟ್ವಿನ್ ಟರ್ಬೊಚಾರ್ಜ್ಡ್ 6.7 ಲೀಟರ್ ಪೆಟ್ರೋಲ್ (505 ಅಶ್ವಶಕ್ತಿ) ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ.

4. ಮೇಬ್ಯಾಕ್ 62ಎಸ್

4. ಮೇಬ್ಯಾಕ್ 62ಎಸ್

ಬೆಲೆ: 2.1 ಕೋಟಿ ರು.

ರಿಜಾಕ್‌ನ (Rijck) ಮೇಬ್ಯಾಕ್ 62ಎಸ್ ಆರ್ಮರ್ಡ್ ಕಾರು, 10 ಮೀಟರ್ ದೂರದ ವರೆಗಿನ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಸ್ವಿಡನ್‌ನ ಜನಪ್ರಿಯ ಆರ್ಮರ್ಡ್ ಸಂಸ್ಥೆಯಾಗಿರುವ ರಿಜಾಕ್, ನೈಜ ಮೇಬ್ಯಾಕ್ ಹೊರಮೈ ಹಾಗೂ ಒಳಮೈ ಅಂದತೆಯಲ್ಲಿ ಯಾವುದೇ ಬದಲಾವಣೆಯನ್ನುಂಟು ಮಾಡದೆ ಶಕ್ತಿಶಾಲಿ ಕಾರು ತಯಾರಿಸುವಲ್ಲಿ ಯಶಸ್ವಿಯಾಗಿದೆ.

ಮೇಬ್ಯಾಕ್ 62ಎಸ್

ಮೇಬ್ಯಾಕ್ 62ಎಸ್

ಎಎಂಜಿ ವಿ12 ಬೈಟರ್ಬೊ 5980ಸಿಸಿ (620 ಅಶ್ವಶಕ್ತಿ) ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಕೇವಲ ಐದು ಸೆಕಂಡುಗಳಲ್ಲಿ 0-60 ಮೈಲ್ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

5. ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ

5. ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ

ಬೆಲೆ: 2.09 ಕೋಟಿ ರು.

ಬಿಎಂಡಬ್ಲ್ಯು ಹೈ ಎಂಡ್ ಲಗ್ಷುರಿ ಬ್ರಾಂಡ್ ತನ್ನ ಶಕ್ತಿಯನ್ನು 7 ಸಿರೀಸ್ ಹೈ ಸೆಕ್ಯೂರಿಟಿ ಮುಖಾಂತರ ತೋರಿಸಿಕೊಟ್ಟಿದೆ. ಹೆಸರಲ್ಲೇ ಸೂಚಿಸಿರುವಂತೆಯೇ ಅತ್ಯಂತ ವೇಗದ ಗುಂಡಿನ ಹಾಗೂ ರಾಸಾಯನಿಕ ದಾಳಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇನ್ನು ವಿಶೇಷವೆಂದರೆ ಇದು ಗುಂಡು ಹೊಡೆದಾಗ ಸ್ವಯಂಚಾಲಿತವಾಗಿ ಮುಚ್ಚುಕೊಳ್ಳಬಹುದಾದ ತನ್ನದೇ ಆದ ವಿಶಿಷ್ಟ ಅನಿಲ ಟ್ಯಾಂಕ್ ಹೊಂದಿರುತ್ತದೆ.

ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ

ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ

ಅಂದ ಹಾಗೆ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ, ವಿ12 6 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ (535 ಅಶ್ವಶಕ್ತಿ) ನಿಯಂತ್ರಿಸಲ್ಪಡಲಿದೆ. ಹಾಗೆಯೇ ಕೇವಲ 6 ಸೆಕೆಂಡುಗಳಲ್ಲಿ ಗಂಟೆಗೆ 0-60 ಮೈಲ್ ವೇಗವರ್ಧಿಸಲಿದೆ.

6. ಪೋಪ್‌ಮೊಬೈಲ್

6. ಪೋಪ್‌ಮೊಬೈಲ್

ಬೆಲೆ: 1.8 ಕೋಟಿ ರು.

ಕ್ರೈಸ್ತ ಧರ್ಮ ಗುರು ಪೋಪ್ ರಕ್ಷಣೆಗಾಗಿ ವಿಶೇಷವಾಗಿ ಸಿದ್ಧಗೊಳಿಸಿರುವ ಪೋಪ್ ಮೊಬೈಲ್, ಎಲ್ಲ ರೀತಿಯ ರಾಸಾಯನಿಕ ಜತೆಗೆ ಜೈವಿಕ ಆಕ್ರಮಣಗಳನ್ನು ತಡೆಯುವ ಶಕ್ತಿ ಹೊಂದಿದೆ. ಇದನ್ನು ಜರ್ಮನಿಯ ಲಗ್ಷುರಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್ ನಿರ್ಮಿಸಿದೆ.

ಪೋಪ್‌ಮೊಬೈಲ್

ಪೋಪ್‌ಮೊಬೈಲ್

ಗಂಟೆಗೆ 70 ಮೈಲ್ ವೇಗವರ್ಧಿಸಲು ಸಾಮರ್ಥ್ಯ ಹೊಂದಿರುವ ಪೋಪ್ ಮೊಬೈಲ್‌ನಲ್ಲಿ ಮರ್ಸಿಡಿಸ್ ಬೆಂಝ್‌ನ ವಿ8 5 ಲೀಟರ್ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಅಲ್ಲದೆ ಕೇವಲ ಆರು ಸೆಕೆಂಡುಗಳಲ್ಲಿ 60 ಮೈಲ್ ವೇಗವರ್ಧಿಸಲಿದೆ.

7. ಕಾಂಕ್ವೆಸ್ಟ್ ನೈಟ್ ಎಕ್ಸ್‌ವಿ

7. ಕಾಂಕ್ವೆಸ್ಟ್ ನೈಟ್ ಎಕ್ಸ್‌ವಿ

ಬೆಲೆ: 1.85 ಕೋಟಿ ರು.

ಹಮ್ಮರ್ ಕಿಲ್ಲರ್ ಎಂದು ಹೆಸರಿಸಲ್ಪಟ್ಟಿರುವ ಕಾಂಕ್ವೆಸ್ಟ್ ನೈಟ್ ಎಕ್ಸ್‌ವಿ ನಿರ್ಮಾಣದಲ್ಲಿ ಸ್ಟೀಲ್, ಕೆಲ್ವಾರ್, ಫೈಬರ್‌ಗ್ಲಾಸ್ ಫೆಂಡರ್ ಮುಂತಾದವುಗಳನ್ನು ಬಳಕೆ ಮಾಡಲಾಗಿದೆ. ಇದರ 6060 ಅಲ್ಯೂಮಿನಿಯಂ ಚಕ್ರಗಳು ಅಷ್ಟು ಬೇಗ ಹಾನಿಗೊಳಗಾಗುವುದಿಲ್ಲ.

ಕಾಂಕ್ವೆಸ್ಟ್ ನೈಟ್ ಎಕ್ಸ್‌ವಿ

ಕಾಂಕ್ವೆಸ್ಟ್ ನೈಟ್ ಎಕ್ಸ್‌ವಿ

325 ಅಶ್ವಶಕ್ತಿ ಉತ್ಪಾದಿಸುವ ಜಿಎಂ ವಿ8 6 ಲೀಟರ್ ಪೆಟ್ರೋಲ್ ಅಥವಾ ಕಮ್ಮಿನ್ಸ್ ಐಎಸ್‌ಬಿ 6.7 ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇದು ಹೆಚ್ಚು ಭಾರವಿರುವ ಹೊರತಾಗಿಯೂ ಗಂಟೆಗೆ ಗರಿಷ್ಠ 153 ಮೈಲ್ ವೇಗದಲ್ಲಿ ಚಲಿಸಲಿದೆ.

8. ಕ್ಯಾಡಿಲ್ಯಾಕ್ ಒನ್

8. ಕ್ಯಾಡಿಲ್ಯಾಕ್ ಒನ್

ಬೆಲೆ: 1.79 ಕೋಟಿ ರು.

ಅಮೆರಿಕ ಅಧ್ಯಕ್ಷರ 'ಪ್ರೆಸಿಡೆಂಟ್ ಕಾರ್' ಎಂದೇ ಪ್ರಖ್ಯಾತಿ ಪಡೆದಿರುವ ಕ್ಯಾಡಿಲ್ಯಾಕ್ ಒನ್, ನೇರವಾದ ಪರಮಾಣು ದಾಳಿಗಳಿಂದ ಪಾರಾಗುವ ಸಾಮರ್ಥ್ಯ ಹೊಂದಿದೆ.

ಕ್ಯಾಡಿಲ್ಯಾಕ್ ಒನ್

ಕ್ಯಾಡಿಲ್ಯಾಕ್ ಒನ್

1.79 ಕೋಟಿ ರು. ಬೆಲೆ ಬಾಳುವ ಈ ಕಾರಿನಲ್ಲಿ ವಿ8 6.6 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಳವಡಿಸಲಾಗಿದ್ದು, 300 ಅಶ್ವಶಕ್ತಿ ಉತ್ಪಾದಿಸುತ್ತದೆ.

9. ಡಾರ್ಟ್ಜ್ ಕಾಂಬ್ಯಾಟ್ ಟಿ98 ಎಸ್‌ಯುವಿ

9. ಡಾರ್ಟ್ಜ್ ಕಾಂಬ್ಯಾಟ್ ಟಿ98 ಎಸ್‌ಯುವಿ

ಬೆಲೆ: 1.19 ಕೋಟಿ ರು.

ರಷ್ಯಾ ನಿರ್ಮಿತ ಡಾರ್ಟ್ಜ್ ಕಾಂಬ್ಯಾಟ್ ಟಿ98, ತಾಂತ್ರಿಕವಾಗಿ ಕ್ರೀಡಾ ಉತ್ಪಾದಕ ವಾಹನವಾಗಿದೆ. ಆದರೆ ಇದು ಯುದ್ಧ ಟ್ಯಾಂಕ್ ರೀತಿಯಲ್ಲಿ ಗೋಚರಿಸುತ್ತಿದೆ. ಇದರ ಭಾರದ ದೇಹ ವಿನ್ಯಾಸವು ಹಮ್ಮರ್ ಶೈಲಿಯನ್ನು ಹೋಲಿಕೆ ಹೊಂದಿದ್ದು, ಶಕ್ತಿಶಾಲಿ ರಾಕೆಟ್ ದಾಳಿಯನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದೆ.

ಡಾರ್ಟ್ಜ್ ಕಾಂಬ್ಯಾಟ್ ಟಿ98 ಎಸ್‌ಯುವಿ

ಡಾರ್ಟ್ಜ್ ಕಾಂಬ್ಯಾಟ್ ಟಿ98 ಎಸ್‌ಯುವಿ

8.1 ಲೀಟರ್ ವೋರ್ಟೆಕ್ ವಿ8 ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ದೈತ್ಯಕಾರಾದ ಬಂಡಿ, ಇಷ್ಟೊಂದು ಭಾರ ಹೊಂದಿರುವ ಹೊರತಾಗಿಯೂ ಗಂಟೆಗೆ 180 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

10. ಟಂಬ್ಲರ್

10. ಟಂಬ್ಲರ್

ಕಾರ್ಟೂನ್ ಜಗತ್ತಿನಿಂದಲೂ ಬುಲೆಟ್ ಪ್ರೂಫ್ ಕಾರುಗಳು ಸ್ಪೂರ್ತಿ ಪಡೆದಿದೆ ಅಂದರೆ ತಪ್ಪಾಗಲಾಗದು. ಬ್ಯಾಟ್ಮನ್ ಸರಣಿಯ ದಿ ನೈಟ್ ರೈಸಸ್‌ನಿಂದ ಸ್ಪೂರ್ತಿ ಪಡೆದಿರುವ ಟಂಬ್ಲರ್ ಆರ್ಮರ್ಡ್ ಕಾರು ನಿಜಕ್ಕೂ ಕಾರ್ಟೂನ್ ಪ್ರೇಮಿಗಳಿಗೆ ಉತ್ತೇಜನ ತುಂಬಲಿದೆ.

ಟಂಬ್ಲರ್

ಟಂಬ್ಲರ್

ಈ ಶಸ್ತ್ರಸಜ್ಜಿತ ಕಾರಿನಲ್ಲಿ ಜೆಟ್ ಎಂಜಿನ್‌ನಿಂದ ಸ್ಫೂರ್ತಿ ಪಡೆದ ಎಚ್‌ಎಂ 5 ಲೀಟರ್ ವಾಕ್ಸ್‌ಹಾಲ್ ಎಂಜಿನ್ ಆಳವಡಿಸಲಾಗಿದೆ.

ಗಣ್ಯರಿಗೆ ಶ್ರೀರಕ್ಷೆಯಾದ ಟಾಪ್ 10 ಆರ್ಮರ್ಡ್ ಕಾರ್ಸ್

ನಮ್ಮ ಈ ಲೇಖನ ನಿಮಗೆ ಇಷ್ಟವಾದ್ದಲ್ಲಿ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ...

Most Read Articles

Kannada
English summary
Be it Barack Obama or the Indian President, one of them dare not say they don't need protection! Have you ever wondered how a Head of State travels or what kind of security cars they move around in? Let's find out...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X