ನಿಮ್ಮ ಕಾರಿಗೆ ಬೇಕಾದ 11 ಅಗತ್ಯ ಆಕ್ಸೆಸರಿಗಳು

Written By:

ಕಾರು ಖರೀದಿಸಿದ ಮೇಲೂ ಖರ್ಚು ಮುಗಿಯುವುದಿಲ್ಲವೇ? ಹೌದು, ಕಾರನ್ನು ಕೊಂಡುಕೊಂಡ ಬಳಿಕ ಅತ್ಯುತ್ತಮ ಅತ್ಯುತ್ತಮ ಆಕ್ಸೆಸರಿಗಳ ಹುಡುಕಾಟದಲ್ಲಿ ತೊಡಗುತ್ತೇವೆ. ಇದರಿಂದಾಗಿಯೇ ಆಫ್ಟರ್ ಮಾರ್ಕೆಟ್ ಮಾರುಕಟ್ಟೆಯಲ್ಲೂ ಅತ್ಯುತ್ತಮ ಪೈಪೋಟಿ ಕಂಡುಬರುತ್ತಿದೆ.

ಈಗ ನಿಮ್ಮ ಕಾರಿಗೆ ಬೇಕಾಗಿರುವ 11 ಅಗತ್ಯ ಆಫ್ಟರ್ ಮಾರ್ಕೆಟ್ ಆಕ್ಸೆಸರಿಗಳ ಬಗ್ಗೆ ನಾವು ಹೇಳಿಕೊಡಲಿದ್ದೇವೆ. ಈ ಬಗ್ಗೆ ನೀವು ಕೂಡಾ ಚಿಂತನೆ ಮಾಡಬಹುದಾಗಿದೆ.

01. ಹೆಡ್ ಲೈಟ್

01. ಹೆಡ್ ಲೈಟ್

ರಾತ್ರಿ ಪಯಣದಲ್ಲಿ ಅತ್ಯುತ್ತಮ ಗೋಚರತೆಯನ್ನು ನೀಡಬಲ್ಲ ಹೆಡ್ ಲೈಟ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಪ್ಲೋಸರ್, ಪಿಲಿಪ್ಸ್, ಹೆಲ್ಲಾ, ಒಸ್ರಾಂಗಳಂತಹ ಬ್ರಾಂಡ್ ಗಳು ಹೆಡ್ ಲೈಟ್ ಗಳನ್ನು ವಿತರಿಸುತ್ತದೆ.

02. ಹಾರ್ನ್

02. ಹಾರ್ನ್

ನಿಮ್ಮ ಕಾರಲ್ಲಿರುವ ಹಾರ್ನ್ ಬಗ್ಗೆ ತೃಪ್ತಿ ನೀಡದಿದ್ದರೆ ಮಾರುಕಟ್ಟೆಯಲ್ಲಿ ದೊರೆಯುವ ಹಾರ್ನ್ ಗಳನ್ನು ಪರೀಕ್ಷಿಸಿ ನೋಡಬಹುದಾಗಿದೆ.

03. ಚಕ್ರಗಳು

03. ಚಕ್ರಗಳು

ಪೈರೆಲ್ಲಿ, ಬ್ರಿಡ್ಜ್ ಸ್ಟೋನ್, ಮಿಚೆಲಿನ್ ಹಾಗೂ ಕಾಂಟಿನೆಂಟಲ್ ಅತ್ಯುತ್ತಮ ಟೈರ್ ಬ್ರಾಂಡ್ ಗಳಿಗೆ ಕೆಲವು ಉದಾಹರಣೆಗಳಾಗಿವೆ. ಕೆಲವೊಂದು ವಾಹನ ತಯಾರಿಕ ಸಂಸ್ಧೆಗಳು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಸಾಮಾನ್ಯ ಗುಣಮಟ್ಟದ ಚಕ್ರಗಳನ್ನಷ್ಟೇ ಒದಗಿಸುತ್ತದೆ. ಇಂತಹ ಸಂದರ್ಭದಲ್ಲಿ ಆಫ್ಟರ್ ಮಾರುಕಟ್ಟೆ ಉತ್ಪನ್ನಗಳ ಪ್ರಯೋಗ ಮಾಡಬಹುದಾಗಿದೆ. ಆದರೆ ತಯಾರಕರು ಸೂಚಿಸಿದ ಗಾತ್ರದ ಚಕ್ರಗಳನ್ನು ಮಾತ್ರ ಖರೀದಿಸಲು ಪ್ರಯತ್ನಿಸಿ. ಇಲ್ಲವಾದ್ದಲ್ಲಿ ಒಟ್ಟಾರೆ ಇಂಧನ ಕ್ಷಮತೆಯ ಮೇಲೂ ಪರಿಣಾಮ ಬೀರಲಿದೆ.

04. ಮ್ಯೂಸಿಕ್ ಸಿಸ್ಟಂ

04. ಮ್ಯೂಸಿಕ್ ಸಿಸ್ಟಂ

ವಾಹನ ಚಾಲನೆ ವೇಳೆ ಹಾಡು ಕೇಳುವ ಅಭ್ಯಾಸವಿದೆಯೇ? ಹಾಗಿದ್ದರೆ ಖಂಡಿತವಾಗಿಯೂ ಅತ್ಯುತ್ತಮ ಮ್ಯೂಸಿಕ್ ಸಿಸ್ಟಂ ಲಗತ್ತಿಸಿಕೊಳ್ಳಿ.

05. ಪಾರ್ಕಿಂಗ್ ಸೆನ್ಸಾರ್ ಸಿಸ್ಟಂ

05. ಪಾರ್ಕಿಂಗ್ ಸೆನ್ಸಾರ್ ಸಿಸ್ಟಂ

ನಿಮ್ಮ ಕಾರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಇಲ್ಲವೇ? ಇದಕ್ಕೂ ಮಾರುಕಟ್ಟೆಯಲ್ಲಿ ಪರಿಹಾರವಿದೆ. ಇದು ಕಿಕ್ಕಿರಿದ ವಾಹನ ದಟ್ಟಣೆ ಪ್ರದೇಶದಲ್ಲಿ ಸುಲಭವಾಗಿ ಪಾರ್ಕಿಂಗ್ ಮಾಡಲು ಸಹಕಾರಿಯಾಗಲಿದೆ.

06. ಜಿಪಿಎಸ್

06. ಜಿಪಿಎಸ್

ಈಗಿನ ಪರಿಸ್ಥಿತಿಯಲ್ಲಿ ಕಾರಲ್ಲಿ ಜಿಪಿಎಸ್ ಅತಿ ಅಗತ್ಯವಾದ ಘಟಕವಾಗಿದೆ. ಇದನ್ಮೊಮ್ಮೆ ಕಾರಲ್ಲಿ ಆಳವಡಿಸಿದರೆ ನಿಮ್ಮ ಪ್ರತಿಯೊಂದು ಸವಾರಿಯಲ್ಲೂ ನೆರವಿಗೆ ಬರಲಿದೆ.

07. ಡೇ ಆ್ಯಂಡ್ ನೈಟ್ ಮಿರರ್

07. ಡೇ ಆ್ಯಂಡ್ ನೈಟ್ ಮಿರರ್

ಇದು ಕಾರಲ್ಲಿರಬೇಕಾದ ಮೂಲಭೂತ: ಫೀಚರ್ ಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಡೇ ಆ್ಯಂಡ್ ನೈಟ್ ಮಿರರ್ ಜೋಡಣೆ ಅತ್ಯುತ್ತಮ ಆಯ್ಕೆಯೆನಿಸಲಿದೆ.

08. ಅಗ್ನಿಶಾಮಕ ಯಂತ್ರ

08. ಅಗ್ನಿಶಾಮಕ ಯಂತ್ರ

ನಿಮ್ಮ ಕಾರಲ್ಲಿ ಅಗ್ನಿಶಾಮಕ ಉಪಕರಣವಿಲ್ಲವಾದ್ದಲ್ಲಿ ಅತಿ ಬೇಗನೇ ಇದನ್ನು ಕೊಳ್ಳುವುದು ಸೂಕ್ತ. ಹಾಗೊಂದು ವೇಳೆ ಎಲೆಕ್ಟ್ರಿಕ್ ಶಾರ್ಟ್ ನಿಂದಲೂ ಬೆಂಕಿ ತಗುಲಿದರೂ ಅದನ್ನು ಆರಿಸಲು ಅಗ್ನಿಶಾಮಕ ಯಂತ್ರ ಇದ್ದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದಾಗಿದೆ.

09. ರೈನ್ ವೈಸರ್

09. ರೈನ್ ವೈಸರ್

ನಿಮ್ಮದ್ದು ಬೇಸಿಕ್ ಕಾರು ಆಗಿದ್ದಲ್ಲಿ ರೈನ್ ವೈಸರ್ ಸೌಲಭ್ಯ ಇರಲಾರದು. ಹಾಗಾಗಿ ಮಳೆ ನೀರು ಒಳ ಪ್ರವೇಶಿಸುವುದನ್ನು ತಡೆಯಲು ಇದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

10. ಚಾರ್ಜಿಂಗ್ ಔಟ್ಲೆಟ್

10. ಚಾರ್ಜಿಂಗ್ ಔಟ್ಲೆಟ್

ಸ್ಮಾರ್ಟ್ ಫೋನ್ ಯುಗದಲ್ಲಿ ಫೋನ್ ಚಾರ್ಜಿಂಗ್ ಮಾಡುವುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ನಿಮ್ಮ ಸಂಚಾರದ ವೇಳೆಯಲ್ಲಿ ಮೊಬೈಲ್ ಚಾರ್ಜ್ ಮಾಡಿಸಲು ವ್ಯವಸ್ಥೆ ಕಲ್ಪಿಸಿಕೊಟ್ಟರೆ ಒಳ್ಳೆಯದಲ್ಲವೇ?

11. ಪ್ರಥಮ ಚಿಕಿತ್ಸಾ ಪೆಟ್ಟಿಗೆ

11. ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸಹ ನಿಮ್ಮ ಕಾರಲ್ಲಿರಬೇಕಾದ ಅಗತ್ಯ ವಸ್ತುವಾಗಿದೆ. ಏನೇ ತೊಂದರೆ ಸಂಭವಿಸಿದರೂ ಆಸ್ಪತ್ರೆಗೆ ತಲುಪುವ ಮುನ್ನ ಇದರ ಉಪಯೋಗ ಪಡೆಯಬಹುದು.

English summary
Aftermarket accessories for a car is a massive market. The competition is also immense, with accessory shops set up almost 10 metres apart at times.
Story first published: Monday, April 20, 2015, 9:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark