ಪತ್ನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಪತಿರಾಯ
ನಮ್ಮ ಪ್ರೀತಿ ಪಾತ್ರರು ಯಾವುದೇ ಉಡುಗೊರೆ ನೀಡಿದರೂ ಅದು ನಮ್ಮ ಹೃದಯಕ್ಕೆ ಹತ್ತಿರವಾಗಿರುತ್ತದೆ. ಅದು ದುಬಾರಿ ಬೆಲೆಯ ಉಡುಗೊರೆಯಾಗಿದ್ದಾರಂತೂ ಅದರಿಂದ ಉಂಟಾಗುವ ಸಂತೋಷವನ್ನು ಹೇಳಲಾಗದು. ಈಗ ಅಂತಹ ಸಂತೋಷವನ್ನು ಅನುಭವಿಸುತ್ತಿರುವವರ ಹೆಸರು ಆನ್ನಿ ಫಿಲಿಪ್.

ಆನ್ನಿ ಫಿಲಿಪ್ ಅವರಿಗೆ ಅವರ ಪತಿ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದ ಹಾಗೆ ಅವರ ಪತಿ ಅವರಿಗೆ ನೀಡಿರುವ ಕಾರು ರೋಲ್ಸ್ ರಾಯ್ಸ್ ಕಲಿನನ್. ರೋಲ್ಸ್ ರಾಯ್ಸ್ ಕಲಿನನ್ ಸೂಪರ್ ಐಷಾರಾಮಿ ಎಸ್‌ಯುವಿಯಾಗಿದೆ.

ಆನ್ನಿ ಫಿಲಿಪ್ ಹಾಗೂ ಅವರ ಪತಿ ಕೇರಳ ಮೂಲದವರು. ಸದ್ಯಕ್ಕೆ ಅವರು ಕೆನಡಾದ ವ್ಯಾಂಕೋವರ್‌ನಲ್ಲಿ ವಾಸಿಸುತ್ತಿದ್ದಾರೆ. ಆನ್ನಿ ಫಿಲಿಪ್ ಅವರಿಗೆ ಬಿಳಿ ಬಣ್ಣದ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಇಂಟಿರಿಯರ್ ಅನ್ನು ಕೆಂಪು ಲೆದರ್ ನಿಂದ ಕಸ್ಟಮೈಸ್ ಮಾಡಲಾಗಿದೆ. ಇದರಿಂದಾಗಿ ಈ ಕಾರು ಆಕರ್ಷಕವಾಗಿ ಕಾಣುತ್ತದೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆನ್ನಿ ಫಿಲಿಪ್‌ರವರಿಗೆ ಈ ಕಾರ್ ಅನ್ನು ಮದುವೆಯ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಡುಗೊರೆಯಾಗಿ ನೀಡಲಾಗಿದೆ. ಈ ಮೂಲಕ ಉತ್ತರ ಅಮೆರಿಕಾದಲ್ಲಿ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಆನ್ನಿ ಫಿಲಿಪ್ ಹಾಗೂ ಅವರ ಪತಿ ಕಳೆದ ಮಾರ್ಚ್ 30ರಂದು ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು. ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಆ ದಿನ ದಂಪತಿಗೆ ವಿತರಿಸಲಾಯಿತು. ಆನ್ನಿ ಫಿಲಿಪ್ ಹಾಗೂ ಅವರ ಪತಿ ಕಾರುಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಇದಕ್ಕೆ ಅವರ ಬಳಿಯಿರುವ ದುಬಾರಿ ಕಾರುಗಳೇ ಸಾಕ್ಷಿ.
MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ರೋಲ್ಸ್ ರಾಯ್ಸ್ ಕಲಿನನ್, ಆನ್ನಿ ಫಿಲಿಪ್ ಹಾಗೂ ಅವರ ಪತಿ ಹೊಂದುತ್ತಿರುವ ಮೊದಲ ಐಷಾರಾಮಿ ಕಾರ್ ಅಲ್ಲ. ಆದರೆ ಇದು ಅವರ ಮೊದಲ ರೋಲ್ಸ್ ರಾಯ್ಸ್ ಕಾರು. ಭಾರತ ಮತ್ತು ಕೆನಡಾದಲ್ಲಿ ಅವರು ಸಾಕಷ್ಟು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಅವರು ಈಗಾಗಲೇ ಸಾಕಷ್ಟು ಐಷಾರಾಮಿ ಅಂಶಗಳನ್ನು ಹೊಂದಿರುವ 2005ರ ಹಮ್ಮರ್ ಹೆಚ್ 2 ಕಾರ್ ಅನ್ನು ಹೊಂದಿದ್ದಾರೆ. ಇದರ ಜೊತೆಗೆ 2016ರ ಪೋರ್ಷೆ ಕೆಯನ್, 2019ರ ಲೆಕ್ಸಸ್ ಎನ್ಎಕ್ಸ್ (ಎಫ್-ಸ್ಪೋರ್ಟ್) ಕಾರುಗಳನ್ನು ಹೊಂದಿದ್ದಾರೆ.
MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಭಾರತದಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ 350 ಎಸ್‌ಯುವಿಯನ್ನು ಹೊಂದಿದ್ದಾರೆ. ಅವರು ಭಾರತಕ್ಕೆ ಬಂದಾಗಲೆಲ್ಲಾ ಈ ಕಾರನ್ನು ಬಳಸುತ್ತಾರೆ. ರೋಲ್ಸ್ ರಾಯ್ಸ್ ಕಲಿನನ್ ಕಾರಿನಲ್ಲಿ, 6.5-ಲೀಟರ್ ವಿ 12 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 560 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರೋಲ್ಸ್ ರಾಯ್ಸ್ ಕಲಿನನ್ ಕಾರಿನ ಬೆಲೆ ಭಾರತೀಯ ರೂಪಾಯಿಗಳಲ್ಲಿ ದೆಹಲಿಯ ಎಕ್ಸ್ ಶೋ ರೂಂ ದರದಂತೆ ರೂ.6.95 ಕೋಟಿಗಳಾಗುತ್ತದೆ. ರೋಲ್ಸ್ ರಾಯ್ಸ್ ಕಲಿನನ್ ಕಾರ್ ಅನ್ನು ವಿಶ್ವದ ಬಹುತೇಕ ಶತಕೋಟ್ಯಾಧಿಪತಿಗಳು ಹೊಂದಿದ್ದಾರೆ.
ಚಿತ್ರಕೃಪೆ: ರೋಶನ್ ಫಿಲಿಪ್


Click it and Unblock the Notifications








