ಭಾರತೀಯ ಸೇನೆಯ 45 ಬಲಿಷ್ಠ ಯುದ್ಧ ವಾಹನಗಳು

Posted By: Staff

ಭಾರತೀಯ ಸಶಸ್ತ್ರ ದಳದ ಅತಿ ದೊಡ್ಡ ವಿಭಾಗವಾಗಿರುವ ಭಾರತೀಯ ಭೂಸೇನೆಯು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತದೆ. ರಾಷ್ಟ್ರೀಯ ಭದ್ರತೆ, ಬಾಹ್ಯ ಆಕ್ರಮಣ ಮತ್ತು ಅಪಾಯಗಳಿಂದ ರಕ್ಷಣೆ ಮತ್ತು ತನ್ನ ಸರಹದ್ದಿನ ಒಳಗೆ ಶಾಂತಿ ಹೂಗೂ ಭದ್ರತೆಯನ್ನು ಕಾಪಾಡುವುದು ಇದರ ಪ್ರಾಥಮಿಕ ಗುರಿಯಾಗಿದೆ. ಪ್ರಕೃತಿ ವಿಕೋಪ ಎದುರಾದಲೂ ಇಡೀ ದೇಶವೇ ಭಾರತೀಯ ಸೇನೆಯ ಮೊರೆ ಹೋಗುತ್ತದೆ. ಭಾರತೀಯ ಸೇನೆಯ ಕಾರ್ಯ ನಿರ್ವಹಣಾ ಸಾಮರ್ಥ್ಯ ಮತ್ತು ಸಂವಹನ ಸುಧಾರಿಸಲು ಅನೇಕ ಆಧುನಿಕ ಮಿಲಿಟರಿ ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಲೇಖನದಲ್ಲಿ ಭಾರತೀಯ ಸೇನೆಯಿಂದ ಬಳಕೆಯಾಗುತ್ತಿರುವ ಶಕ್ತಿಶಾಲಿ ಮಿಲಿಟರಿ ವಾಹನಗಳ ಮೇಲೆ ಹದ್ದುನೋಟ ಬೀರಲಿದ್ದೇವೆ.

To Follow DriveSpark On Facebook, Click The Like Button
ಯುದ್ಧ ಟ್ಯಾಂಕರ್ - 01. ಅರ್ಜುನ್ ಎಂಬಿಟಿ

ಯುದ್ಧ ಟ್ಯಾಂಕರ್ - 01. ಅರ್ಜುನ್ ಎಂಬಿಟಿ

ಭಾರತೀಯ ಅತಿ ಮುಖ್ಯ ಯುದ್ಧ ಟ್ಯಾಂಕರ್ ಗಳಲ್ಲಿ ಒಂದಾಗಿರುವ ಅರ್ಜುನ್ ಎಂಬಿಟಿ ವಾಹನವನ್ನು ಯುದ್ಧ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಸಿಆರ್ ವಿಡಿಇ) ವಿನ್ಯಾಸಗೊಳಿಸಿದೆ. ನಾಲ್ಕು ಮಂದಿಗೆ ಕಾರ್ಯಾಚರಣೆ ನಡೆಸಬಹುದಾದ ಈ ಯುದ್ಧ ಟ್ಯಾಂಕರ್ ನಲ್ಲಿ 120 ಎಂಎಂ ಮೈನ್ ರೈಫಲ್ ಗನ್ ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

02. ಟಿ-90ಎಸ್ ಭೀಷ್ಮ ಮತ್ತು ಟಿ-90ಎಂ

02. ಟಿ-90ಎಸ್ ಭೀಷ್ಮ ಮತ್ತು ಟಿ-90ಎಂ

125 ಎಂಎಂ 2ಎ46 ಸ್ಮೂತ್ ಬೋರ್ ಟ್ಯಾಂಕ್ ಗನ್ ನಿಂದ ನಿಯಂತ್ರಿಸಲ್ಪಡುವ ಟಿ-90 ಯುದ್ಧ ಟ್ಯಾಂಕರ್ ಗಳು 700 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಬಲಿಷ್ಠವಾಗಿದೆ.

ಮೂಲ: ರಷ್ಯಾ

ಟಿ-72 ಅಜೇಯ

ಟಿ-72 ಅಜೇಯ

ಚೆನ್ನೈ ಹೊರವಲಯ ಆವಡಿಯ ಸೈನ್ಯ ನೆಲದಲ್ಲಿ ಸ್ಥಿತಗೊಂಡಿರುವ ಹೆವಿ ಎಂಜಿನಿಯರಿಂಗ್ ಘಟಕದಲ್ಲಿ ನಿರ್ಮಾಣಗೊಂಡಿರುವ ಬಹುತೇಕ ಟಿ-72 ಅಜೇಯ ಯುದ್ಧ ಟ್ಯಾಂಕರ್ ಗಳನ್ನು ಸುಧಾರಿತ ಯುದ್ದ ಟ್ಯಾಂಕರ್ ಗಳಾಗಿ ಮಾರ್ಪಾಡುಗೊಳಿಸಲಾಗಿತ್ತು. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಸ್ಪೋಟಕ ಶಸ್ತ್ರಾಸ್ತ್ರಗಳನ್ನು ಇದರಲ್ಲಿ ಬಳಕೆ ಮಾಡಿದೆ.

ಮೂಲ: ಸೋವಿಯತ್ ಒಕ್ಕೂಟ

ಕಾಲಾಳು ಪಡೆ ಯುದ್ಧ ವಾಹನ - 04. ಬಿಎಂಪಿ-2 ಶರತ್

ಕಾಲಾಳು ಪಡೆ ಯುದ್ಧ ವಾಹನ - 04. ಬಿಎಂಪಿ-2 ಶರತ್

ಮೇಡಕ್ ಓರ್ಡನನ್ಸ್ ಘಟಕದಲ್ಲಿ ನಿರ್ಮಿಸಿರುವ ಬಿಎಂಪಿ-2 ಶರತ್ ಕಾಲಾಳು ಪಡೆ ಯುದ್ಧ ವಾಹನ ಸದ್ಯಕ್ಕೆ 900ರಷ್ಟು ಯುನಿಟ್ ಗಳು ಸೇವೆಯಲ್ಲಿದೆ.

ಮೂಲ: ಸೋವಿಯತ್ ಒಕ್ಕೂಟ

ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕ - 05. ಬಿಟಿಆರ್-50

ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕ - 05. ಬಿಟಿಆರ್-50

ನೆಲ ಹಾಗೂ ಜಲದ ಮೇಲೂ ಸಂಚರಿಸುವ ಸಾಮರ್ಥ್ಯ ಹೊಂದಿರುವ ಬಿಟಿಆರ್-50 ಪ್ರಮುಖವಾಗಿಯೂ ಶಸ್ತ್ರಸಜ್ಜಿತ ಕಾಲಾಳು ಪಡೆಯ ವಾಹಕವಾಗಿ ಬಳಕೆ ಮಾಡಲಾಗುತ್ತದೆ.

ಮೂಲ: ಸೋವಿಯತ್ ಒಕ್ಕೂಟ

ಟ್ಯಾಂಕ್ ವಿಧ್ವಂಸಕ - 06. ನಮಿಕ

ಟ್ಯಾಂಕ್ ವಿಧ್ವಂಸಕ - 06. ನಮಿಕ

ನಾಗ್ ಮಿಸೈಲ್ ವಾಹಕ ಎಂದು ಅರಿಯಲ್ಪಡುವ ನಮಿಕ ಯುದ್ಧ ಟ್ಯಾಂಕರ್, ಮಾರಕ ವಿಧ್ವಂಸಕಕಾರಿಗಳಾದ 12 ಮಿಸೈಲ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುತ್ತದೆ. ಇವುಗಳ ಪೈಕಿ ಎಂಟು ಕ್ಷಿಪಣಿಗಳು ಏಕಕಾಲದಲ್ಲಿ ದಾಳಿಯಿಡಲು ಸಜ್ಜಾಗಿ ನಿಂತಿರುತ್ತದೆ.

ಮೂಲ: ಭಾರತ

ಬೇಹುಗಾರಿಕಾ ವಾಹನಗಳು - 07. ಸಿಎಂಟಿ

ಬೇಹುಗಾರಿಕಾ ವಾಹನಗಳು - 07. ಸಿಎಂಟಿ

ಯುದ್ಧ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಸ್ವಯಂ ಕಾರ್ಯಾಚರಣೆ ನಡೆಸುವಷ್ಟು ಸಾಮರ್ಥ್ಯವುಳ್ಳ ಕ್ಯಾರಿಯರ್ ಮೋರ್ಟರ್ ಟ್ರಾಕ್ಡ್ (ಸಿಎಂಟಿ) ಯುದ್ಧ ವಾಹನ ಇದಾಗಿದೆ. ಬೇಹುಗಾರಿಕಾ ನಡೆಸಲು ಶಕ್ತವಾಗಿರುವ ಈ ಯುದ್ಧ ವಾಹನದಲ್ಲಿ 108 ಫಿರಂಗಿ ಸುತ್ತುಗಳನ್ನು ಸಾಗಿಸಲಾಗುತ್ತದೆ.

ಮೂಲ: ಭಾರತ

08. ಟೊಪಾಸ್ 2-ಎ

08. ಟೊಪಾಸ್ 2-ಎ

ಮೂಲತ: ಉಭಯಚರ ಶಸ್ತ್ರಾಸ್ತ್ರ ವೈಯಕ್ತಿಕ ಸಿಬ್ಬಂದಿ ವಾಹಕವಾಗಿರುವ ಟೊಪಾಸ್ 2-ಎ ಯುದ್ಧ ವಾಹನವನ್ನು ತಾಂತ್ರಿಕ ಸಹಾಯಿ ವಾಹನವಾಗಿ ಪರಿವರ್ತಿಸಲಾಗಿತ್ತು.

ಮೂಲ: ಚೆಕೊಸ್ಲೊವೇಕಿಯಾ ಮತ್ತು ಪೊಲೆಂಡ್

09. ಡಿಆರ್ ಡಿಒ ಆರ್ಮರ್ಡ್ ಆಂಬ್ಯುಲೆನ್ಸ್

09. ಡಿಆರ್ ಡಿಒ ಆರ್ಮರ್ಡ್ ಆಂಬ್ಯುಲೆನ್ಸ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಪಡಿಸಿರುವ ಡಿಆರ್ ಡಿಒ ಆರ್ಮರ್ಡ್ ಆಂಬ್ಯುಲೆನ್ಸ್ ಗಳನ್ನು ಸೈನಿಕರ ವೈದ್ಯಕೀಯ ನೆರವಿಗಾಗಿ ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

10. ಎನ್‌ಬಿಸಿ ಬೇಹುಗಾರಿಕಾ ವಾಹನ

10. ಎನ್‌ಬಿಸಿ ಬೇಹುಗಾರಿಕಾ ವಾಹನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಎನ್‌ಬಿಸಿ ಬೇಹುಗಾರಿಕಾ ವಾಹನವನ್ನು ಪ್ರಮುಖವಾಗಿಯೂ, ಪರಮಾಣು, ಜೈವಿಕ ಹಾಗೂ ರಾಸಾಯನಿಕ ಕಶ್ಮಲೀಕರಣವನ್ನು ಪತ್ತೆ ಹಚ್ಚಲು ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

11. ಪಿಆರ್‌ಪಿ-3

11. ಪಿಆರ್‌ಪಿ-3

ಭಾರತೀಯ ಸೇನೆಯು ಪ್ರಮುಖವಾಗಿಯೂ ಫಿರಂಗಿ ವಾಹನಗಳನ್ನು ಪತ್ತೆ ಹಚ್ಚಲು ಪಿಆರ್‌ಪಿ-3 ಫಿರಂಗಿ ಬೇಹುಗಾರಿಕಾ ವಾಹನವನ್ನು ಬಳಕೆ ಮಾಡುತ್ತದೆ.

ಮೂಲ: ಸೋವಿಯತ್ ಒಕ್ಕೂಟ

ಸ್ಫೋಟಕ ಯುದ್ಧ ವಾಹನ - 12. ಕ್ಯಾಸ್ಪಿರ್

ಸ್ಫೋಟಕ ಯುದ್ಧ ವಾಹನ - 12. ಕ್ಯಾಸ್ಪಿರ್

ನೆಲ ಬಾಂಬ್ ದಾಳಿಯನ್ನು ತಡೆಯುವ ಸಾಮರ್ಥ್ಯ ಹೊಂದಿರುವ ಕ್ಯಾಸ್ಪಿರ್ ಕಾಲಾಳು ಪಡೆ ಯುದ್ಧ ವಾಹನವನ್ನು ಪ್ರಮುಖವಾಗಿಯೂ ಸೈನ್ಯ ದಳದ ಸಾರಿಗೆಗಾಗಿ ಬಳಕೆ ಮಾಡಲಾಗುತ್ತದೆ. ಸದ್ಯ ಭಾರತೀಯ ಸೇನೆಯಲ್ಲಿ 90ರಷ್ಟು ಕ್ಯಾಸ್ಪಿರ್ ಯುದ್ಧ ವಾಹನಗಳಿವೆ.

ಮೂಲ: ದಕ್ಷಿಣ ಆಫ್ರಿಕಾ

13. ಟರ್ಮರ್ ಎಎಫ್ ವಿ

13. ಟರ್ಮರ್ ಎಎಫ್ ವಿ

ಹಳೆಯ ಟಿ55 ಯುದ್ಧ ವಾಹನಗಳ ತಳಹದಿಯಲ್ಲಿ ನಿರ್ಮಿಸಲಾಗಿರುವ ಶಕ್ತಿಶಾಲಿ ಟರ್ಮರ್ ಎಎಫ್ ವಿ ಯುದ್ಧ ವಾಹನಗಳು ಮೈನ್ ಪ್ಲೌ ಮತ್ತು ಮೈನ್ ರೋಲರ್ ಗಳನ್ನು ಹೊಂದಿದೆ.

ಮೂಲ: ಭಾರತ

14. ಹೈಡ್ರೆಮಾ

14. ಹೈಡ್ರೆಮಾ

3.5 ಮೀಟರ್ ಅಗಲದ ವರೆಗೂ ಸಿಡಿಗುಂಡಿಗಳನ್ನು ತೆರವುಗೊಳಿಸುವಷ್ಟು ಶಕ್ತವಾಗಿರುವ ಹೈಡ್ರೆಮಾ ಭಾರತೀಯ ಸೇನೆಯ ಬಲವನ್ನು ಇಮ್ಮಡಿಗೊಳಿಸುತ್ತದೆ.

ಮೂಲ: ಡೆನ್ಮಾರ್ಕ್

15. ಆದಿತ್ಯ ಎಂವಿಪಿ

15. ಆದಿತ್ಯ ಎಂವಿಪಿ

ಭಯೋತ್ಪಾದನೆಯ ವಿರುದ್ಧ ಪ್ರತಿ ದಾಳಿಸುವ ವೇಳೆ ಸೇನೆಯ ಸೈನಿಕರಿಗೆ ಗರಿಷ್ಠ ಭದ್ರತೆಯನ್ನು ನೀಡುವಲ್ಲಿ ಆದಿತ್ಯ ಎಂವಿಪಿ ಯುದ್ಧ ವಾಹನವು ಹೆಸರು ಪಡೆದಿದೆ. ಇದನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಮೂಲ: ಭಾರತ

16. ಡಿಆರ್‌ಡಿಒ ದಕ್ಷ್

16. ಡಿಆರ್‌ಡಿಒ ದಕ್ಷ್

ಬ್ಯಾಟರಿ ಚಾಲಿತ ರಿಮೋಟ್ ನಿಯಂತ್ರಿತ ರೊಬೊಟ್ ವಾಹನವಾಗಿರುವ ಡಿಆರ್ ಡಿಒ ದಕ್ಷ್ ವಾಹನವನ್ನು ಪ್ರಮುಖವಾಗಿಯೂ ಬಾಂಬ್ ಪತ್ತೆ ಹಚ್ಚೆಲು ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

17. ಕಾರ್ತಿಕ್ ಎಬಿಎಲ್

17. ಕಾರ್ತಿಕ್ ಎಬಿಎಲ್

ಹೆವಿ ವೆಹಿಕಲ್ಸ್ ಘಟಕದಲ್ಲಿ ಯುದ್ಧ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಕಾರ್ತಿಕ್ ಎಬಿಎಲ್, ವಿಜಯಂತ ಚಾಸೀ ತಳಹದಿಯಲ್ಲಿ ನಿರ್ಮಾಣವಾಗಿದೆ.

ಮೂಲ: ಭಾರತ

18. ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ ಎಂಟಿ-55

18. ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ ಎಂಟಿ-55

ಆರ್ಮರ್ಡ್ ವೆಹಿಕಲ್ ಲಾಂಚ್ಡ್ ಬ್ರಿಡ್ಜ್ ಯುದ್ಧ ವಾಹನಗಳ ಶ್ರೇಣಿಗೆ ಸೇರಿದ ಬ್ರಿಡ್ಜ್ ಲೇಯಿಂಗ್ ಟ್ಯಾಂಕ್ ಎಂಟಿ-55 ವಾಹನವು ಒಂದು ಯುದ್ಧ ಸಹಾಯಿ ವಾಹನವಾಗಿದೆ.

ಮೂಲ: ಸೋವಿಯತ್ ಒಕ್ಕೂಟ

19. ಸರ್ವತ್ರ

19. ಸರ್ವತ್ರ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಸರ್ವತ್ರ ಯುದ್ಧ ವಾಹನವು 75 ಮೀಟರ್ ಗಳಷ್ಟು ಉದ್ದದ ಮಗದೊಂದು ಬ್ರಿಡ್ಜಿಂಗ್ ವ್ಯವಸ್ಥೆಯನ್ನು ಹೊಂದಿರುವ ಮೊಬೈಲ್ ವಾಹನವಾಗಿದೆ.

ಮೂಲ: ಭಾರತ

20. ಟಿ-72 ಬಿಎಲ್‌ಟಿ

20. ಟಿ-72 ಬಿಎಲ್‌ಟಿ

ಹೆವಿ ವೆಹಿಕಲ್ಸ್ ಘಟಕದಲ್ಲಿ ಯುದ್ಧ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿರುವ ಟಿ-72 ಬಿಎಲ್‌ಟಿ ಯುದ್ಧ ವಾಹನಗಳ 12 ರಷ್ಟು ಯುನಿಟ್ ಗಳು ಭಾರತೀಯ ಸೇನೆಯ ಬಳಿಯಿದೆ.

ಮೂಲ: ಭಾರತ

21. ಸೀಸ್

21. ಸೀಸ್

ಕಾಲುವೆ ಅಣೆಕಟ್ಟಿನ ದಾಳಿ ಸರಕರಣೆ (ಸೀಸ್), ಒಂದು ವಿಶಿಷ್ಟವಾದ ಬ್ರಿಡ್ಜಿಂಗ್ ವ್ಯವಸ್ಥೆಯನ್ನು ಹೊಂದಿರುವ ಯುದ್ಧ ವಾಹನವಾಗಿದ್ದು, ಭಾರತೀಯ ಸೇನೆಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಿಸಿದೆ. ಸದ್ಯ ಭಾರತೀಯ ಸೇನೆಯಲ್ಲಿ 6ರಷ್ಟು ಸೀಸ್ ಯುದ್ಧ ವಾಹನಗಳು ಸೇವೆಯಲ್ಲಿದೆ.

ಮೂಲ: ಭಾರತ

22. ಎಇಆರ್ ವಿ

22. ಎಇಆರ್ ವಿ

ನೀರಲ್ಲಿ ತಡೆ ಎದುರಾದಾಗ ಒಡೆದ ಸೇತುವೆಗಳಲ್ಲಿ ನಿರ್ಮಾಣ ಅನುಕೂಲ ಭೂಮಂಡಲದ ಮತ್ತು ನದಿ ಸಮೀಕ್ಷೆ ನಡೆಸಿ ಶಿಪ್ರ ವೇಳೆಯಲ್ಲಿ ಮರು ನಿರ್ಮಾಣ ಕಾಮಗಾರಿಗಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಕೇವಲ ನದಿ ಮಾತ್ರವಲ್ಲದೆ, ನೆಲದ ಮೇಲೂ ಇದರು ಅತ್ಯಂತ ಉಪಯುಕ್ತವೆನಿಸಿದೆ.

ಮೂಲ: ಭಾರತ

23. ಬಿಎಂಪಿ - 2 ಎಎಡಿ

23. ಬಿಎಂಪಿ - 2 ಎಎಡಿ

ಇಲ್ಲಿ ಎಎಡಿ ಎಂಬುದು ಶಸ್ತ್ರಸಜ್ಜಿತ ಉಭಯಪಡೆಗಳ ಸಹಕಾರದ ವಾಹನವಾಗಿದೆ. ಸ್ವಯಂ ಚೇತರಿಕೆಯ ಯುದ್ಧ ವಾಹನ ಇದಾಗಿದೆ.

ಮೂಲ: ಭಾರತ

24. ಎಫ್ ವಿ180 ಯುದ್ಧ ಎಂಜಿನಿಯರ್ ಟ್ರ್ಯಾಕ್ಟರ್

24. ಎಫ್ ವಿ180 ಯುದ್ಧ ಎಂಜಿನಿಯರ್ ಟ್ರ್ಯಾಕ್ಟರ್

ಕೊಂಚ ಹಗುರ ಭಾರದ ಉಭಯಚರ ಯುದ್ಧ ಸಹಾಯಿ ವಾಹನವಾಗಿರುವ ಇದನ್ನು ಪ್ರಮುಖವಾಗಿಯೂ ಒಡೆಯ ಸೇತುವೆ ಮರು ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ.

ಮೂಲ: ಬ್ರಿಟನ್

25. ಡಬ್ಲ್ಯುಝಡ್ ಟಿ-2

25. ಡಬ್ಲ್ಯುಝಡ್ ಟಿ-2

ಆರ್ಮರ್ಡ್ ಚೇತರಿಕಾ ವಾಹನವಾಗಿರುವ ಡಬ್ಲ್ಯುಝಡ್ ಟಿ-2, ಯುದ್ಧದ ವೇಳೆ ಕೇಡು ಸಂಭವಿಸಿದ ಇತರ ಟ್ಯಾಂಕರ್ ಗಳ ರಿಪೇರಿ ಕಾಮಗಾರಿಗಾಗಿ ಬಳಕೆ ಮಾಡಲಾಗುತ್ತದೆ.

ಮೂಲ: ಪೊಲೆಂಡ್

26. ಡಬ್ಲ್ಯುಝಡ್‌ಟಿ-3ಎಂ

26. ಡಬ್ಲ್ಯುಝಡ್‌ಟಿ-3ಎಂ

ಡಬ್ಲ್ಯುಟಿಝಡ್-2 ಮುಂದುವರಿಯದ ಆವೃತ್ತಿಯಾಗಿರುವ ಡಬ್ಲ್ಯುಝಡ್ ಟಿ-3ಎಂ ಸುಧಾರಿತ ಎಂಜಿನ್ ಬಳಕೆ ಮಾಡಲಾಗಿದೆ. ಭಾರತೀಯ ಸೇನೆಯಲ್ಲಿ 300ರಷ್ಟು ಇಂತಹ ವಾಹನಗಳಿವೆ.

ಮೂಲ: ಪೊಲೆಂಡ್

27. ವಿಟಿ-72ಬಿ ಎಆರ್‌ವಿ

27. ವಿಟಿ-72ಬಿ ಎಆರ್‌ವಿ

ಯುದ್ಧ ಭೂಮಿಯಲ್ಲಿ ಹಾನಿಗೀಡಾದ ಯುದ್ಧ ಟ್ಯಾಂಕರ್ ಗಳ ರಕ್ಷಣೆ ಹಾಗೂ ರಿಪೇರಿಗಾಗಿ ವಿಟಿ-72ಬಿ ಎಆರ್‌ವಿ ಸಹಾಯಿ ವಾಹನವನ್ನು ಬಳಕೆ ಮಾಡಲಾಗುತ್ತದೆ.

ಮೂಲ: ಸೋವಿಯತ್ ಒಕ್ಕೂಟ

 28. ಆರ್ಮರ್ಡ್ ವೆಹಿಕಲ್ ಟ್ರ್ಯಾಕ್ಡ್ ಲೈಟ್ ರಿಪೇರ್

28. ಆರ್ಮರ್ಡ್ ವೆಹಿಕಲ್ ಟ್ರ್ಯಾಕ್ಡ್ ಲೈಟ್ ರಿಪೇರ್

ಮೇಡಕ್ ಓರ್ಡನನ್ಸ್ ಘಟಕದಲ್ಲಿ ಬಿಎಂಪಿ-2 ತಳಹದಿಯಲ್ಲಿ ನಿರ್ಮಾಣವಾಗಿರುವ ಈ ವಾಹನವನ್ನು ಸಣ್ಣ ಪುಟ್ಟ ರಿಪೇರಿ ಕಾಮಗಾರಿಗಳಿಗಾಗಿ ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

29. ಮ್ಯಾಟ್ ಗ್ರೌಂಡ್ ಸರ್ಫೆಸಿಂಗ್ ಸಿಎಲ್-70

29. ಮ್ಯಾಟ್ ಗ್ರೌಂಡ್ ಸರ್ಫೆಸಿಂಗ್ ಸಿಎಲ್-70

ಮರಳು ಮತ್ತು ಜವುಗು ಭೂಪ್ರದೇಶದಲ್ಲಿ ಸಹಾಯಿ ವಾಹನವಾಗಿ ಮ್ಯಾಟ್ ಗ್ರೌಂಡ್ ಸರ್ಫೆಸಿಂಗ್ ಸಿಎಲ್-70 ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

30. ಯುಕ್ತಿರಾತ್ ಲೈಟ್ ರಿಕವರಿ ವೆಹಿಕಲ್

30. ಯುಕ್ತಿರಾತ್ ಲೈಟ್ ರಿಕವರಿ ವೆಹಿಕಲ್

ಮೆಡಕ್ ಓರ್ಡನನ್ಸ್ ಘಟಕದಲ್ಲಿ ನಿರ್ಮಾಣವಾಗಿರುವ ಯುಕ್ತಿರಾತ್ ಲೈಟ್ ರಿಕವರಿ ವೆಹಿಕಲ್ ಸಹ ಯುದ್ಧ ಸಹಾಯಿ ವಾಹನವಾಗಿ ಸೇವೆ ಸಲ್ಲಿಸುತ್ತಿದೆ.

ಮೂಲ: ಭಾರತ

ಇತರೆ ಯುದ್ಧ ವಾಹನಗಳು - 31. ಕೆಆರ್‌ಎಝಡ್- 6322

ಇತರೆ ಯುದ್ಧ ವಾಹನಗಳು - 31. ಕೆಆರ್‌ಎಝಡ್- 6322

ಉಕ್ರೇನ್ ನಿರ್ಮಿತ ಕೆಆರ್‌ಎಝಡ್- 6322 ಸಹ ಭಾರತೀಯ ಸೇನೆಯ ಬಳಕೆಯಲ್ಲಿದೆ.

ಮೂಲ: ಉಕ್ರೇನ್

32. ಮಿಟ್ಸುಬಿಸಿ ಪಜೆರೊ

32. ಮಿಟ್ಸುಬಿಸಿ ಪಜೆರೊ

ಜಪಾನ್ ಮೂಲದ ಮಿಟ್ಸುಬಿಸಿ ಪಜೆರೊ ವಾಹನವ್ನು ಭಾರತೀಯ ಸಶಸ್ತ್ರ ಪಡೆ ಬಳಕೆ ಮಾಡುತ್ತಿದೆ.

ಮೂಲ: ಜಪಾನ್

33. ಸಿಸು ನಸು

33. ಸಿಸು ನಸು

ಫಿನ್ ಲ್ಯಾಂಡ್ ನ ಸಿಸು ನಸು ಎಂಬ ಶಕ್ತಿಶಾಲಿ ಯುದ್ಧ ವಾಹನವು ಭಾರತದ ಪಾಲಾಗಿದೆ.

ಮೂಲ: ಫಿನ್ ಲ್ಯಾಂಡ್

34. ಹಿನೊ ಸೂಪರ್ ಡಾಲ್ಫಿನ್ ಎಫ್ ಝಡ್9ಜೆ

34. ಹಿನೊ ಸೂಪರ್ ಡಾಲ್ಫಿನ್ ಎಫ್ ಝಡ್9ಜೆ

ಇದು ಮಗದೊಂದು ಶಕ್ತಿಶಾಲಿ ಮಿಲಿಟರಿ ವಾಹನವಾಗಿದೆ.

ಮೂಲ: ಜಪಾನ್

35. ಮಹೀಂದ್ರ 550 ಡಿಎಕ್ಸ ಬಿ

35. ಮಹೀಂದ್ರ 550 ಡಿಎಕ್ಸ ಬಿ

ಭಾರತದ ಮೂಲದ ಮಹೀಂದ್ರ ಆಂಡ್ ಮಹೀಂದ್ರ ನಿರ್ಮಿಸಿರುವ ಪವರ್ ಫುಲ್ ಜೀಪ್ ಭಾರತೀಯ ಸೇನೆಯಲ್ಲಿದೆ.

ಮೂಲ: ಭಾರತ

36. ಸ್ವರಾಜ್ ಮಾಜ್ದಾ

36. ಸ್ವರಾಜ್ ಮಾಜ್ದಾ

ಸ್ವರಾಜ್ ಮಾಜ್ದಾ ಭಾರತೀಯ ಸೇನೆಯ ಬಳಕೆಯಲ್ಲಿರುವ ಹಳೆಯ ವಾಹನಗಳಲ್ಲಿ ಒಂದಾಗಿದೆ.

ಮೂಲ: ಭಾರತ

37. ಮಾರುತಿ ಜಿಪ್ಸಿ

37. ಮಾರುತಿ ಜಿಪ್ಸಿ

ಕಳೆದ ಹಲವಾರು ವರ್ಷಗಳಿಂದ ಭಾರತೀಯ ಸೈನ್ಯದ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಮಾರುತಿ ಜಿಪ್ಸಿ ವಾಹವನ್ನು ಬದಲಾಯಿಸುವ ಇರಾದೆಯನ್ನು ರಕ್ಷಣಾ ಇಲಾಖೆ ಹೊಂದಿದೆ.

ಮೂಲ: ಭಾರತ

38. ವಿಂಡಿ 505

38. ವಿಂಡಿ 505

ವಿಂಡಿ 505 ಮಗದೊಂದು ಮೇಡ್ ಇನ್ ಇಂಡಿಯಾ ಉತ್ಪನ್ನವಾಗಿದೆ.

ಮೂಲ: ಭಾರತ

39. ವಿಎಫ್ ಜೆ ಎಲ್ ಪಿಟಿಎ 713 ಟಿಸಿ

39. ವಿಎಫ್ ಜೆ ಎಲ್ ಪಿಟಿಎ 713 ಟಿಸಿ

ಶಕ್ತಿಶಾಲಿ ಮಿಲಿಟರಿ ಸೈನಿಕ ವಾಹಕದಲ್ಲಿ ವಿಎಫ್ ಜೆ ಎಲ್ ಪಿಟಿಎ 713 ಟಿಸಿ ಸೇರಿದೆ.

ಮೂಲ: ಭಾರತ

40. ಅಶೋಕ್ ಲೇಲ್ಯಾಂಡ್ ಟಾಪ್ಚಿ

40. ಅಶೋಕ್ ಲೇಲ್ಯಾಂಡ್ ಟಾಪ್ಚಿ

ಭಾರತೀಯ ಸೇನೆಗಾಗಿ ಅಶೋಕ್ ಲೇಲ್ಯಾಂಡ್ ಸಹ ತನ್ನ ಕೊಡುಗೆಯನ್ನು ಸಲ್ಲಿಸಿದೆ.

ಮೂಲ: ಭಾರತ

41. ವಿಎಫ್ ಜೆ ಸ್ಟಾಲಿನ್ ಎಂಕೆ III ಮತ್ತು IV

41. ವಿಎಫ್ ಜೆ ಸ್ಟಾಲಿನ್ ಎಂಕೆ III ಮತ್ತು IV

ವಿಎಫ್ ಜೆ ಸ್ಟಾಲಿನ್ ಎಂಕೆ III ಮತ್ತು IV ಮಗದೊಂದು ಸ್ವದೇಶಿ ಉತ್ಪನ್ನವಾಗಿದೆ.

ಮೂಲ: ಭಾರತ

42. ಅಶೋಕ್ ಲೇಲ್ಯಾಂಡ್ ಕ್ರಾಶ್ ಫೈರ್ ಟೆಂಡರ್

42. ಅಶೋಕ್ ಲೇಲ್ಯಾಂಡ್ ಕ್ರಾಶ್ ಫೈರ್ ಟೆಂಡರ್

ಅಗ್ನಿ ಶಾಮಕಕ್ಕಾಗಿ ಅಶೋಕ್ ಲೇಲ್ಯಾಂಡ್ ಕ್ರಾಶ್ ಫೈರ್ ಟೆಂಡರ್ ವಾಹನವನ್ನು ಬಳಕೆ ಮಾಡಲಾಗುತ್ತದೆ.

ಮೂಲ: ಭಾರತ

43. ಟಾಟಾ ಎಲ್‌ಪಿಟಿಎ 1615 ಟಿಸಿ

43. ಟಾಟಾ ಎಲ್‌ಪಿಟಿಎ 1615 ಟಿಸಿ

ದೇಶದ ಅತಿ ದೊಡ್ಡ ವಾಹನ ಸಂಸ್ಥೆ ಟಾಟಾ ಮೋಟಾರ್ಸ್ ಸಹ ಭಾರತೀಯ ಸೇನೆಗೆ ತನ್ನ ಕೊಡುಗೆಯನ್ನು ಸಲ್ಲಿಸಿದೆ.

ಮೂಲ: ಭಾರತ

44. ಟಾಟ್ರಾ 8X8 ಮೊಬೈಲ್ ನಿರ್ಮಲೀಕರಣ ವಾಹನ

44. ಟಾಟ್ರಾ 8X8 ಮೊಬೈಲ್ ನಿರ್ಮಲೀಕರಣ ವಾಹನ

ಚೆಕ್ ಗಣರಾಜ್ಯದಲ್ಲಿ ನಿರ್ಮಿತ ಟಾಟ್ರಾ ಟ್ರಕ್ ನಲ್ಲಿ ನಿರ್ಮಲೀಕರಣವನ್ನು ಜೋಡಣೆ ಮಾಡಲಾಗಿದೆ.

45. ಬಿಇಎಂಎಲ್ ಟಾಟ್ರಾ

45. ಬಿಇಎಂಎಲ್ ಟಾಟ್ರಾ

ಭಾರತೀಯ ಸೇನೆಗೆ ಬಲ ತುಂಬಿದ ಮಗದೊಂದು ಯುದ್ದ ವಾಹನ ಇದಾಗಿದೆ.

Read more on ಭಾರತ india
English summary
45 Vehicles Of The Indian Army
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark