ರಸ್ತೆ ನಿಯಮ ಉಲ್ಲಂಘಿಸಿ ಜಾಲಿ ರೈಡ್- ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ..!

Written By:

ಆ ಮಹಿಳೆಗೆ ಇದೀಗ ಬರೋಬ್ಬರಿ 79 ವಯಸ್ಸು. ಆದ್ರೆ ರಸ್ತೆ ನಿಯಮ ಉಲ್ಲಂಘನೆ ಮಾಡುವುದಲ್ಲಿ ಯುವಕರಿಗಿಂತ ಈ ಮಹಿಳೆ ಯಾವುದರಲ್ಲೂ ಕಮ್ಮಿ ಇಲ್ಲ. ಯಾಕೇಂದ್ರೆ ವರ್ಷದ ಹಿಂದೆ ಈಕೆ ಮಾಡಿದ ತಪ್ಪಿಗೆ ಇಂದು ಭಾರೀ ಪ್ರಮಾಣದ ದಂಡ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ರಸ್ತೆ ನಿಯಮ ಉಲ್ಲಂಘನೆ ಮಾಡಿ ಜಾಲಿ ರೈಡ್ ಮಾಡಿದ್ದ ಹಿನ್ನೆಲೆ 79 ವರ್ಷದ ಮಹಿಳೆಯೊರ್ವಳು ವರ್ಷದ ನಂತರ ಪೊಲೀಸರ ಕೈ ಸಿಕ್ಕಿಬಿದ್ದಿದ್ದು, ನಿಯಮ ಉಲ್ಲಂಘಿಸಿ ನಾಪತ್ತೆಯಾಗಿದ್ದ ಹಿನ್ನೆಲೆ ವೃದ್ಧ ಮಹಿಳೆಯ ವಿರುದ್ಧ ಕೋರ್ಟ್ ಭಾರೀ ಪ್ರಮಾಣದ ದಂಡ ವಿಧಿಸಿರುವ ಘಟನೆ ನಡೆದಿದೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ಅಂದಹಾಗೆ ಇದೆಲ್ಲಾ ನಡೆದಿದ್ದು ಬೆಲ್ಜಿಯಂನ ಆ್ಯಂಟ್‌ವರ್ಪನಲ್ಲಿ. ಮಧ್ಯೆ ರಾತ್ರಿ 1.30ರ ಸುಮಾರು ತನ್ನ ಸೂಪರ್ ಕಾರು ಪೋರ್ಷೆ ಬಾಕ್ಸ್‌ಸ್ಟರ್‌ ಜಿಟಿಎಸ್‌ನಲ್ಲಿ ಗಂಟೆಗೆ 236ಕಿಮಿ ವೇಗದಲ್ಲಿ ಚಾಲನೆ ಮಾಡಿದ್ದ 79 ವರ್ಷದ ಮಹಿಳೆ ಇದೀಗ ಸಿಕ್ಕಿಬಿದ್ದಿದ್ದಾಳೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ಟ್ರಾಫಿಕ್ ಪೊಲೀಸರ ಸ್ಪೀಡ್ ಟ್ರ್ಯಾಪ್‌ನಲ್ಲಿ ಸಿಕ್ಕಿಬಿದ್ದಿದ್ದು, ವರ್ಷದ ಹಿಂದೆ ಮಾಡಿದ್ದ ವೃದ್ಧ ಮಹಿಳೆಯ ತಪ್ಪು ಇಂದು ಬಯಲಾಗಿದೆ. ಈ ಹಿನ್ನೆಲೆ ಮಹಿಳೆಯನ್ನು ಕೋರ್ಟ್‌ಗೆ ಹಾಜರು ಮಾಡಲಾಗಿದ್ದು, ಮಹಿಳೆ ಮಾಡಿದ ತಪ್ಪಿಗೆ ಭಾರೀ ಪ್ರಮಾಣದ ಶಿಕ್ಷೆಯನ್ನು ಕೂಡಾ ಪ್ರಕಟ ಮಾಡಲಾಗಿದೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ಮೂರು ತಿಂಗಳು ಕಾಲ ವೃದ್ಧ ಮಹಿಳೆಗೆ ಕಾರು ಚಾಲನೆ ಮೇಲೆ ನಿರ್ಬಂಧ ಹೇರಿರುವ ಕೋರ್ಟ್, ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ 5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶ ನೀಡಿದೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ಇನ್ನು ಸೂಪರ್ ಕಾರು ಮಾದರಿಯಾಗಿರುವ ಪೋರ್ಷೆ ಬಾಕ್ಸ್‌ಸ್ಟರ್ ಜಿಟಿಎಸ್‌‌ ಗಂಟೆಗೆ 280ಕಿಮಿ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, 330ಬಿಎಚ್‌ಪಿ ಮತ್ತು 370ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ ನಾಲ್ಕು ಸೇಕೆಂಡುಗಳಲ್ಲಿ 100ಕಿಮಿ ವೇಗ ಪಡೆದುಕೊಳ್ಳುತ್ತದೆ.

ರಸ್ತೆ ನಿಯಮ ಉಲ್ಲಂಘನೆ-ವರ್ಷದ ನಂತರ ಸಿಕ್ಕಿಬಿದ್ದ 79 ವರ್ಷದ ವೃದ್ಧೆ.!

ಆದ್ರೆ ರಸ್ತೆ ನಿಯಮ ಉಲ್ಲಂಘಿಸಿ ಅತಿವೇಗವಾಗಿ ಕಾರು ಚಾಲನೆ ಮಾಡಿದ ಮಹಿಳೆಗೆ ಕೋರ್ಟ್ ಭಾರೀ ಪ್ರಮಾಣದ ದಂಡ ವಿಧಿಸಿದ್ದು, ನಮ್ಮಲ್ಲೂ ಇಂತಹ ಕಠಿಣ ಕಾನೂನು ಕ್ರಮಗಳು ಜಾರಿ ಬರುವುದು ಕೂಡಾ ಅವಶ್ಯವಿದೆ.

English summary
Read in Kannada about Speed trap Catches 79 Year Old Women.
Please Wait while comments are loading...

Latest Photos