ತನ್ನ ಊರಿನವರಿಗಾಗಿ ಟಾಟಾ ನ್ಯಾನೋವನ್ನು ಹೆಲಿಕಾಪ್ಟರ್ ಮಾಡಿದ ಹಳ್ಳಿ ಯುವಕ

ಭಾರತೀಯರು ಇತರ ದೇಶೀಯರಿಗಿಂತ ತಮ್ಮ ಜಾಣ್ಮೆ ಮತ್ತು ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ನಿತ್ಯ ಭಾರತದಲ್ಲಿ ಯಾವಿದೋ ಒಂದು ಹೊಸ ಆವಿಷ್ಕಾರವನ್ನು ನೋಡುತ್ತಲೇ ಇರುತ್ತೇವೆ. ಇದೀಗ ಅಂತಹದೇ ಒಂದು ವಿಭಿನ್ನವಾದ ಹೆಲಿಕಾಪ್ಟರ್ ಅನ್ನು ನಿರ್ಮಿಸಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಸುದ್ದಿಯಾಗಿದ್ದಾರೆ.

ಉತ್ತರಪ್ರದೇಶದ ಅಜಂಗಢ್‌ನ ಸಂಶೋಧಕ ಸಲ್ಮಾನ್ ತಮ್ಮ ಚತುರ ಮನೋಭಾವವನ್ನು ಮೆಲುಕು ಹಾಕಿದ್ದಾರೆ. ತಮ್ಮ ಟಾಟಾ ನ್ಯಾನೋ ಕಾರನ್ನು ಹಾರುವ ಯಂತ್ರವನ್ನಾಗಿ ಪರಿವರ್ತಿಸಿದ್ದಾರೆ. ವೃತ್ತಿಯಲ್ಲಿ ಬಡಗಿಯಾಗಿರುವ ಈ ವ್ಯಕ್ತಿ ತನ್ನ ಸಣ್ಣ ನ್ಯಾನೋ ಕಾರನ್ನು ಹೆಲಿಕಾಪ್ಟರ್‌ನ ಪ್ರತಿರೂಪವಾಗಿ ಪರಿವರ್ತಿಸಲು 3 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಅವರ ಕನಸಿನ ಕಾರ್-ಕಮ್-ಹೆಲಿಕಾಪ್ಟರ್ ಅನ್ನು ನಿರ್ಮಿಸಲು ಅವರು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದ್ದಾರೆ. ಈಗ ಚಾಪರ್ ಈ ಪ್ರದೇಶದಲ್ಲಿ ಜನಪ್ರಿಯ ಸಾರಿಗೆ ವಿಧಾನವಾಗಿದೆ.

ಸುದ್ದಿ ಸಂಸ್ಥೆ ANI ಗೆ ನೀಡಿದ ಸಂದರ್ಶನದಲ್ಲಿ, ಸಲ್ಮಾನ್ ತನ್ನ ವ್ಯಾಪಕವಾದ ಕಾರ್ಯಾಚರಣೆಯ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದರು. "ನನ್ನ ಗ್ರಾಮ ಮತ್ತು ಜಿಲ್ಲೆಯನ್ನು ಜನಪ್ರಿಯಗೊಳಿಸಲು ಮಾತ್ರ ನಾನು ಇದನ್ನು ಮಾಡಿದ್ದೇನೆ. ಸರ್ಕಾರ ಮತ್ತು ದೊಡ್ಡ ಕಂಪನಿಗಳಿಂದ ಸಹಾಯ ಬಯಸುತ್ತಿದ್ದೇನೆ. ನಮ್ಮ ಕನಸುಗಳನ್ನು ಹಾರಲು ಬಿಡಿ. ಭವಿಷ್ಯದಲ್ಲಿ ನೀರು, ಭೂಮಿ ಮತ್ತು ಗಾಳಿಯಲ್ಲಿ ಚಲಿಸಬಲ್ಲ ಹೆಲಿಕಾಪ್ಟರ್ ಅನ್ನು ತಯಾರಿಸುವುದು ನನ್ನ ಕನಸು ಎಂದು ಬಡಗಿ ಸಲ್ಮಾನ್ ಸಂದರ್ಶನದಲ್ಲಿ ಹೇಳಿದರು.

ಸಲ್ಮಾನ್ ತನ್ನ ಟಾಟಾ ನ್ಯಾನೋವನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಲು ಬಯಸಿದ್ದು, ಏರೋಪ್ಲೇನ್‌ನಲ್ಲಿ ಹಾರಲು ಸಾಧ್ಯವಾಗದ ತನ್ನ ಹಳ್ಳಿಗರಿಗೆ ಹಾರುವ ಅನುಭವವನ್ನು ಒದಗಿಸುವ ಸಲುವಾಗಿ. ಸಲ್ಮಾನ್ ಅವರ ಕಾರ್-ಕಮ್-ಹೆಲಿಕಾಪ್ಟರ್ ವಾಸ್ತವವಾಗಿ ಹಾರುವುದಿಲ್ಲ, ಇದು ಸಾಮಾನ್ಯ ಕಾರಿನಂತೆ ರಸ್ತೆಯಲ್ಲಿ ಮಾತ್ರ ಕಾರ್ಯನಿರ್ವಹಿಸಬಲ್ಲದು ಎಂಬುದು ಉಲ್ಲೇಖನೀಯ. ತನ್ನ ಊರಿನವರಿಗೆ ಹೆಲಿಕಾಪ್ಟರ್‌ನಲ್ಲಿ ಕೂರುವ ಅನುಭವವಾದರು ಸಿಗಲಿ ಎಂಬುದು ಸಲ್ಮಾನ್ ಆಶಯ. ಸಲ್ಮಾನ್ ಅವರ ಕಾರ್ ಕಮ್ ಹೆಲಿಕಾಪ್ಟರ್ ಟ್ವಿಟ್ಟರ್ ನಲ್ಲಿ ಸದ್ಯ ವೈರಲ್ ಆಗಿದೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಹಾರುವ ಕಾರುಗಳು
ಪ್ರಪಂಚದಾದ್ಯಂತ ಅನೇಕ ಕಂಪನಿಗಳು ತಮ್ಮ ಹಾರುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರೇ, ಕೆಲವು ಕಂಪನಿಗಳು ಈ ಕಾರುಗಳ ತಂತ್ರಜ್ಞಾನವನ್ನು ಸುಧಾರಿಸುವಲ್ಲಿ ತೊಡಗಿವೆ. ಇಟಲಿಯ ಟಸ್ಕನಿ ಮೂಲದ ಸ್ಟಾರ್ಟ್‌ಅಪ್ ಕಂಪನಿಯಾದ ಜೆಟ್‌ಸನ್ ಕಳೆದ ವರ್ಷ ತನ್ನ ಫ್ಲೈಯಿಂಗ್ ಕಾರ್ ಜೆಟ್‌ಸನ್ ಒನ್ ಅನ್ನು ಬಿಡುಗಡೆ ಮಾಡಿದೆ. ಅದು ಈಗ ಈ ವರ್ಷಕ್ಕೆ ಸಂಪೂರ್ಣವಾಗಿ ಮಾರಾಟವಾಗಿದೆ. ಈ ಕಾರನ್ನು ಪ್ರಪಂಚದಾದ್ಯಂತ ಜನರು ಇಷ್ಟಪಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಜೆಟ್ಸನ್ ಒನ್ ಫ್ಲೈಯಿಂಗ್ ಕಾರ್ 1,500 ಅಡಿ ಎತ್ತರದಲ್ಲಿ ಹಾರಬಲ್ಲದು. ಈ ಹಾರುವ ಕಾರು ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 32 ಕಿ.ಮೀ ದೂರದವರೆಗೆ ಹಾರಾಟ ನಡೆಸಬಹುದಾಗಿದೆ.

ಇನ್ನು ಸ್ಲೋವಾಕಿಯಾದಲ್ಲಿ ನಿಜವಾದ ಹಾರುವ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಏರ್‌ಕಾರ್ ಎಂದು ಕರೆಯಲ್ಪಡುವ ಹೈಬ್ರಿಡ್ ಕಾರ್-ವಿಮಾನವನ್ನು ಸ್ಲೋವಾಕಿಯಾದ ನೈಟ್ರಾ ಮೂಲದ ಫ್ಲೈಯಿಂಗ್ ಕಾರ್ ಇನ್ವೆಂಟರ್ ಕ್ಲೈನ್ ವಿಷನ್ ಅಭಿವೃದ್ಧಿಪಡಿಸಿದ್ದಾರೆ. ಸ್ಲೋವಾಕ್ ಸಾರಿಗೆ ಪ್ರಾಧಿಕಾರದಿಂದ ಏರ್‌ಕಾರ್‌ಗೆ ವಾಯು ಯೋಗ್ಯತೆಯ ಪ್ರಮಾಣಪತ್ರವನ್ನು ಸಹ ನೀಡಲಾಗಿದೆ. AirCar BMW ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 160kmph ಗಿಂತ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 2,500 m ಗಿಂತ ಎತ್ತರದಲ್ಲಿ ಹಾರಬಲ್ಲದು.

ಭಾರತವೂ ಹಾರುವ ಕಾರನ್ನು ಸಿದ್ಧಪಡಿಸುತ್ತಿದೆ
ಭಾರತದಲ್ಲಿಯೂ ಅನೇಕ ಕಂಪನಿಗಳು ಹಾರುವ ಕಾರಿನ ಮಾದರಿಯಲ್ಲಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ 'ವಿನತಾ ಏರೋಮೊಬಿಲಿಟಿ' ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ತನ್ನ ಮೊದಲ ಹಾರುವ ಕಾರನ್ನು ಬಹಿರಂಗಪಡಿಸಿದೆ. ಈ ಹಾರುವ ಕಾರು ಇಂಧನ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸಬಲ್ಲದು. ಈ ಕಾರು ಲಂಬವಾದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಅನ್ನು ಮಾಡಬಹುದು, ಇದರಿಂದಾಗಿ ವಿಮಾನದಂತಹ ರನ್ವೇ ಅಗತ್ಯವಿಲ್ಲ. ಈ ಹಾರುವ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಹಾರಬಲ್ಲದು.

ಇಂಧನ ತುಂಬಿದ ನಂತರ, ಅದನ್ನು 60 ನಿಮಿಷಗಳ ಕಾಲ ಹಾರಿಸಬಹುದು. ಇದು 3,000 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ, ಈ ಹಾರುವ ಕಾರನ್ನು ಎರಡು ಜನರಿಗೆ ಹಿಡಿಯುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಹೊಸ ಮಾದರಿಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಕಂಪನಿಯು ಇನ್ನೂ ಮಾರಾಟವನ್ನು ಪ್ರಾರಂಭಿಸಿಲ್ಲ. ಒಂದು ವೇಳೆ ಭಾರತದಲ್ಲಿ ಇದು ಮಾರಾಟಕ್ಕೆ ಬಂದರೆ ದೇಶದ ಮೊದಲ ಹಾರುವ ಕಾರು ತಯಾರಕಾ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿದೆ.

Most Read Articles

Kannada
English summary
A village youth built a tata nano helicopter for his villagers
Story first published: Thursday, December 22, 2022, 11:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X