Just In
Don't Miss!
- News
Meghalaya Assembly Elections 2023: ಮೇಘಾಲಯದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!
- Technology
Valentines Day ಗಿಫ್ಟ್ ಸರ್ಚ್ ಮಾಡ್ತಾ ಇದ್ದೀರಾ?..ಇಲ್ಲಿವೆ ನೋಡಿ ಅತ್ಯುತ್ತಮ ಉಡುಗೊರೆ
- Finance
PM Pranam Scheme: ಏನಿದು ಪಿಎಂ ಪ್ರಣಾಮ ಯೋಜನೆ, ಇತರೆ ಮಾಹಿತಿ ಇಲ್ಲಿದೆ
- Sports
ಕೊಹ್ಲಿಯಂತೆ ಸಾಮರ್ಥ್ಯವಿರುವ ಆಟಗಾರ ಈತ: ಯುವ ಕ್ರಿಕೆಟಿಗನ ಬಗ್ಗೆ ಇರ್ಫಾನ್ ಪಠಾಣ್ ಮಾತು
- Movies
Kavya Shree Photoshoot : ಬಿಗ್ ಬಾಸ್ ಕಾವ್ರಶ್ರೀ ಹೊಸ ಫೋಟೊಶೂಟ್ ಗುಟ್ಟೇನು? ಸಿನಿಮಾ ಎಂಟ್ರಿ ಕೊಡ್ತಾರಾ?
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
68ರ ವಯಸ್ಸಿನಲ್ಲೂ ಬಾಡಿ ಟ್ರಾನ್ಸ್‌ಫಾರ್ಮ್ ಮಾಡಿಸಿದ ಟ್ರೈನರ್‌ಗೆ ಕಾರು ಗಿಫ್ಟ್ ನೀಡಿದ ನಟ ಕಮಲ್ ಹಾಸನ್
ವಿಕ್ರಮ್ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿರುವ ನಟ ಕಮಲ್ ಹಾಸನ್ ತಮ್ಮ ನಿರ್ದೇಶಕ ಲೋಕೇಶ್ ಕನಕರಾಜ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಹಾಗೆಯೇ ನಟ ಸೂರ್ಯ ಅವರಿಗೆ ರೋಲೆಕ್ಸ್ ವಾಚ್ ಮತ್ತು ಚಿತ್ರದ 13 ಸಹಾಯಕ ನಿರ್ದೇಶಕರಿಗೆ ಬೈಕ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು.

ಉಡುಗೊರೆ ನೀಡುವ ಅವರ ಅಭ್ಯಾಸವು ಹಾಗೆಯೇ ಮುಂದುವರೆದಿದ್ದು, ತಮ್ಮ ಮುಂದಿನ ಬಹುನಿರೀಕ್ಷಿತ ಸಿನಿಮಾವಾದ ಇಂಡಿಯನ್ 2 ಚಿತ್ರದ ಬಿಡುಗಡೆಗೂ ಮುನ್ನವೇ ಬಾಡಿ ಫಿಟ್‌ನೆಸ್ ಫಲಿತಾಂಶದಿಂದ ಉತ್ಸುಕರಾದ ಕಮಲ್ ಹಾಸನ್, ತಮ್ಮ ತರಬೇತುದಾರರಿಗೆ ಹೊಚ್ಚ ಹೊಸ ಕಾರನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಕಮಲ್ ಹಾಸನ್ ತಮ್ಮ ಫಿಟ್ನೆಸ್ ತರಬೇತುದಾರರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಫೋಟೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಮಲ್ ಹಾಸನ್ ಅವರು ತಮ್ಮ 68ನೇ ವಯಸ್ಸಿನಲ್ಲಿಯೂ ಅಭಿಮಾನಿಗಳನ್ನು ರಂಜಿಸಲು ಪ್ರತಿಯೊಂದು ಸಿನಿಮಾಗೆ ತಕ್ಕಂತೆ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಂಡು ಬಂದಿದ್ದಾರೆ.

ಈ ಹಿಂದೆ ಕಮಲ್ ಹಾಸನ್ ಅವರಿಗೆ ಪ್ರತ್ಯೇಕವಾಗಿ ಇಂಡಿಯನ್ 2 ಗಾಗಿ ವೈಯಕ್ತಿಕ ಫಿಟ್ನೆಸ್ ತರಬೇತುದಾರರನ್ನು ನೇಮಿಸಲಾಯಿತು. ಅವರ ವಿಶೇಷ ತರಬೇತುದಾರನ ಕೌಶಲ್ಯವು ಬಹುಮುಖ ನಟ ಕಮಲ್ ಹಾಸನ್ ಅವರಿಂದ ಕಾರನ್ನು ಗಳಿಸಿದೆ. ಈ ಮೂಲಕ ಕಮಲ್ ಹಾಸನ್ ಅವರು ತಮ್ಮ ಸಿನಿಮಾ ಆರ್ಟಿಸ್ಟ್‌ಗಳಿಗೆ ಮಾತ್ರವಲ್ಲ, ತಮಗೆ ಇಷ್ಟವಾದರೆ ಯಾರಿಗಾದ್ರು ಉಡುಗೊರೆ ನೀಡುತ್ತಾರೆ ಎಂಬುದು ತಿಳಿದುಬಂದಿದೆ.

ಉಡುಗೊರೆಯಾಗಿ ರೆನಾಲ್ಟ್ ಕ್ವಿಡ್
ನಟ ಕಮಲ್ ಹಾಸನ್ ತಮ್ಮ ಟ್ರೈನರ್‌ಗೆ ರೆನಾಲ್ಟ್ ಕ್ವಿಡ್ ನೀಡಿರುವುದಾಗಿ ತಿಳಿದುಬಂದಿದೆ. ಆದರೆ ಯಾವ ರೂಪಾಂತರ ನೀಡಿದ್ದಾರೆ ಎಂಬುದರ ಕುರಿತು ಮಾಹಿತಿ ಹೊರಬಂದಿಲ್ಲ. ಹೊಸ 2022ರ ರೆನಾಲ್ಟ್ ಕ್ವಿಡ್ ಟ್ಯಾಕೋಮೀಟರ್‌ನೊಂದಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಬ್ಲೂಟೂತ್‌ನೊಂದಿಗೆ ಸಿಂಗಲ್-ಡಿಐಎನ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ.

ಇದರೊಂದಿಗೆ ಈ ಕ್ವಿಡ್ ಕಾರಿನಲ್ಲಿ ಯುಎಸ್‌ಬಿ ಮತ್ತು ಆಕ್ಸ್ ಕನೆಕ್ಟಿವಿಟಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಂಜಿನ್ ಇಮೊಬಿಲೈಸರ್, ಡ್ರೈವರ್ ಸೈಡ್ ಏರ್‌ಬ್ಯಾಗ್, ಇಬಿಡಿ ಜೊತೆಗೆ ಎಬಿಎಸ್, ಡ್ರೈವರ್ ಮತ್ತು ಪ್ಯಾಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಇನ್ನಷ್ಟು ಫೀಚರ್ಗಳನ್ನು ಹೊಂದಿವೆ.

ವಿನ್ಯಾಸ
ಹೊಸ ರೆನಾಲ್ಟ್ ಕ್ವಿಡ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೊಸ ಕ್ವಿಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಕ್ಲಸ್ಟರ್, ಟಾಪ್-ಎಂಡ್ ರೂಪಾಂತರಗಳಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಿಕ್ ಆಗಿ ಹೋಂದಿಸಬಹುದಾದ ವಿಂಗ್ ಮಿರರ್‌ಗಳನ್ನು ಕೂಡ ಒಳಗೊಂಡಿದೆ.

ಈ ಹೊಸ ಕಾರಿನ ಆಕರ್ಷಕ ವಿನ್ಯಾಸ, ಹೆಚ್ಚು ಫೀಚರ್ ಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವುದರಿಂದ ಕ್ವಿಡ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಲು ಸಹಾಯ ಮಾಡಿದೆ. ಈ ರೆನಾಲ್ಟ್ ಕ್ವಿಡ್ ಕಾರಿನ ಮುಂಭಾಗದ ಗ್ರಿಲ್ ಇತರ ಅನೇಕ ಪ್ರೀಮಿಯಂ ಕಾರುಗಳಂತೆ ಕಾಣುತ್ತದೆ.

ಎಂಜಿನ್
ಹೊಸ 2022ರ ರೆನಾಲ್ಟ್ ಕ್ವಿಡ್ ಹ್ಯಾಚ್‌ಬ್ಯಾಕ್ ಹೊಸ RXL(O) ಎಂಬ ರೂಪಾಂತರವನ್ನು ಎರಡೂ ಎಂಜಿನ್ ಆಯ್ಕೆಗಳೊಂದಿಗೆ ನೀಡಿದೆ. ಇದರಲ್ಲಿ 800-ಸಿಸಿ ಎಂಜಿನ್ 54 ಬಿಹೆಚ್‍ಪಿ ಪವರ್ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರೊಂದಿಗೆ 1.0 ಲೀಟರ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. 68 ಬಿಹೆಚ್‍ಪಿ ಪವರ್ ಮತ್ತು 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಿದೆ.

ಇಂಡಿಯನ್ ಸಿನಿಮಾ ಕುರಿತು
ನಿರ್ದೇಶಕ ಶಂಕರ್ ಅವರು 1996 ರಲ್ಲಿ ಕಮಲ್ ಹಾಸನ್ ಅವರೊಂದಿಗೆ ಅತಿದೊಡ್ಡ ಬ್ಲಾಕ್‌ಬಸ್ಟರ್ ತಮಿಳು ಚಿತ್ರವಾದ ಇಂಡಿಯನ್ ಅನ್ನು ನೀಡಿದ್ದರು. ಈ ಇಬ್ಬರು 16 ವರ್ಷಗಳ ನಂತರ ಮತ್ತೊಮ್ಮೆ ಇಂಡಿಯನ್ 2 ಗಾಗಿ ಕೈಜೋಡಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಾಣದಲ್ಲಿ ಚಲನಚಿತ್ರವು ಭಾರತದಲ್ಲಿನ ಭ್ರಷ್ಟಾಚಾರದ ಕುರಿತು ಸಿನಿಮಾ ಮೂಡಿ ಬರಲಿದೆ.

ಇಂಡಿಯನ್ 2 ಚಿತ್ರದ ಶೂಟಿಂಗ್ ಈಗ ಚೆನ್ನೈ ಮತ್ತು ತಿರುಪತಿಯಲ್ಲಿ ನಡೆಯುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ವಿಕ್ರಮ್ ಸಿನಿಮಾ ದೊಡ್ಡ ಹಿಟ್ ಆದ ಬಳಿಕ ಕಮಲ್ ಹಾಸನ್ ಈ ಯೋಜನೆಯಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಕಮಲ್ ಹಾಸನ್ ತಮ್ಮ ಫಿಟ್ನೆಸ್ ತರಬೇತುದಾರರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ ಫೋಟೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕಮಲ್ ಹಾಸನ್ ಅವರು ತಮ್ಮ 68ನೇ ವಯಸ್ಸಿನಲ್ಲಿಯೂ ಅಭಿಮಾನಿಗಳನ್ನು ರಂಜಿಸಲು ಪ್ರತಿಯೊಂದು ಸಿನಿಮಾಗೆ ತಕ್ಕಂತೆ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಂಡು ಬಂದಿದ್ದಾರೆ.