ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಜಾಲಿ ಎಲ್‌ಎಲ್‌ಬಿ, ಬರ್ಫಿ, ಪಿಕೆ, ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟ ಸೌರಭ್ ಶುಕ್ಲಾ ಅವರು ಹೊಸ ಕಾರನ್ನು ಖರೀದಿಸಿದ್ದಾರೆ. ಇದು ಐಷಾರಾಮಿ ಆಡಿ ಕ್ಯೂ2 (Audi Q2) ಎಸ್‍ಯುವಿಯಾಗಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ನಟ ಸೌರಭ್ ಶುಕ್ಲಾ ಅವರು ಹೊಸ ಆಡಿ ಕ್ಯೂ2 ಎಸ್‍ಯುವಿ ಕಾರು ವಿತರಣೆ ಪಡೆಯುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಚಿತ್ರಗಳಲ್ಲಿ, ನಾವು ಬಿಳಿ ಬಣ್ಣದ ಆಡಿ ಕ್ಯೂ2 ಎಸ್‍ಯುವಿಯನ್ನು ನೋಡಬಹುದು. ನಟ ಸೌರಭ್ ಶುಕ್ಲಾ ಅವರು ಹೊಸ ಆಡಿ ಕ್ಯೂ2 ಎಸ್‍ಯುವಿಯನ್ನು ಡೀಲರ್‌ಶಿಪ್‌ನಿಂದ ಸ್ವೀಕರಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸೌರಭ್ ಅವರು ಆಡಿ ಕ್ಯೂ2 ಎಸ್‍ಯುವಿಯ ಯಾವ ರೂಪಂತರವನ್ನು ಖರೀದಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಈ ಸೌರಭ್ ಮಹೀಂದ್ರಾ XUV500 ಎಸ್‍ಯುವಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ಸೌರಭ್ ಸೆಡಾನ್‌ಗಳಿಗಿಂತ ಎಸ್‌ಯುವಿಗಳಿಗೆ ಆದ್ಯತೆ ನೀಡುತ್ತಾರೆ ಎಂದು ಹೇಳಬಹುದು. ಕ್ಯೂ2 ಪ್ರಸ್ತುತ ಆಡಿಯ ಸಾಲಿನಲ್ಲಿ ಅತ್ಯಂತ ಕೈಗೆಟುಕುವ ವಾಹನವಾಗಿದೆ. ತನ್ನ ಪೋರ್ಟ್ಫೋಲಿಯೊದಲ್ಲಿ ಚಿಕ್ಕದಾದ ಎಸ್‍ಯುವಿಯಾಗಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಆಡಿ ಕ್ಯೂ2 ಎಸ್‍ಯುವಿಯ ಆರಂಬಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 34.99 ಲಕ್ಷವಾಗಿದೆ. ಐಷಾರಾಮಿ ವಾಹನವಾಗಿದ್ದರೂ, ಕ್ಯೂ2 ಅನ್ನು ವಿವಿಧ ರೀತಿಯ ಐದು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಹೊಸ ಕ್ಯೂ2 ಕಾರನ್ನು ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ಆಗಿದೆ. ನೀವು ಪನೋರಮಿಕ್ ಸನ್‌ರೂಫ್‌ನೊಂದಿಗೆ ಸ್ಟ್ಯಾಂಡರ್ಡ್ ರೂಪಾಂತರವನ್ನು ಸಹ ಪಡೆಯಬಹುದು.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಈ ಹೊಸ ಆಡಿ ಕ್ಯೂ2 ಎಸ್‍ಯುವಿಯಲ್ಲಿ ಟರ್ಬೋಚಾರ್ಜ್ ಮಾಡಲಾದ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡಲಾಗುತ್ತದೆ. ಈ ಎಂಜಿನ್ 190 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾಗುತ್ತದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಕ್ಯೂ2 ಮಾದರಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಪ್ಲ್ಯಾಟ್‌ಫ್ಲಾಮ್ ಅಡಿ ಅಭಿವೃದ್ದಿಗೊಂಡಿದ್ದು, ಕ್ಯೂ ಸರಣಿಯ ಆರನೇ ಕಾರು ಮಾದರಿ ಇದಾಗಿದೆ. ಈ ಕ್ಯೂ2 ಕಾರು ಮಾದರಿಯು ಸಂಪೂರ್ಣವಾಗಿ ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿದ್ದು, ಅಡ್ವಾನ್ಸ್ ಲೈನ್ ಮತ್ತು ಡಿಸೈನ್ ಲೈನ್ ಎರಡು ಮಾದರಿಗಳಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಅಡ್ವಾನ್ಸ್ ಲೈನ್‌ನಲ್ಲಿ ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1 ಮಾದರಿಗಳನ್ನು ಮಾರಾಟಗೊಳ್ಳಲಿದ್ದರೆ, ಡಿಸೈನ್ ಲೈನ್‌ನಲ್ಲಿ ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ. ಈ ಹೊಸ ಕ್ಯೂ2 ಎಸ್‍ಯುವಿ ಮಾದರಿಯು 4,191ಎಂಎಂ ಉದ್ದ, 1,794ಎಂಎಂ ಅಗಲ, 1,508ಎಂಎಂ ಎತ್ತರ ಮತ್ತು 2,601ಎಂಎಂ ವೀಲ್ಹ್‌ಬೆಸ್ ಅನ್ನು ಹೊಂದಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಈ ಕ್ಯೂ2 ಎಸ್‌ಯುವಿ ಮಾದರಿಯಲ್ಲಿ ನಾಲ್ಕು ವ್ಹೀಲ್ ಗಳಿಗೆ ಶಕ್ತಿ ಪೂರೈಸುವ ಕ್ವಾಟ್ರೊ ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದೆ. ಈ ಎಸ್‍ಯುವಿಯು ಕೇವಲ 6.5-ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವುದರ ಜೊತೆಗ ಪ್ರತಿ ಗಂಟೆಗೆ ಗರಿಷ್ಠ 228ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲ ಸಾಮರ್ಥ್ಯವಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಟೆಕ್ನಾಲಜಿ ವೆರಿಯೆಂಟ್‌ನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಡೈನಾಮಿಕ್ ಟರ್ನ್ ಇಂಡಿಕೇಟರ್, 17-ಇಂಚಿನ ಅಲಾಯ್ ವೀಲ್ಹ್, ವರ್ಚುವಲ್ ಕುಕ್‌ಪಿಟ್, ಅಗಲವಾದ ಟಚ್‌ಸ್ಕ್ರೀನ್, 'ಮೈಆಡಿ ಕನೆಕ್ಟ್' ಒಳಗೊಂಡ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋವನ್ನು ಒಳಗೊಂಡಿದೆ,

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಹಾಗೆಯೇ ಹೊಸ ಎಸ್‍ಯುವಿಯಲ್ಲಿ ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸ್ಪೋರ್ಟಿ ಫ್ಲ್ಯಾಟ್-ಬಾಟಮ್ ಸ್ಟ್ರೀರಿಂಗ್ ವೀಲ್ಹ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ಒಳಗೊಂಡಿವೆ. ಆಡಿ ಕ್ಯೂ2 ಎಸ್‍ಯುವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಎ, ವೊಲ್ವೊ ಎಕ್ಸ್‌ಸಿ40 ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಪೈಪೋಟಿ ನೀಡುತ್ತಿದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ಇನ್ನು ಆಡಿ ಇಂಡಿಯಾಕಂಪನಿಯು ಹೊಸ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. ಆಡಿ ಕಂಪನಿಯು ಇನ್ನು ಕೂಡ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯ ಅಧಿಕೃತ ಬಿಡುಗಡೆಯ ದಿನಾಂಕವನು ಬಹಿರಂಗಪಡಿಸಿಲ್ಲ. ಆಡಿ ಕ್ಯೂ7 ಫೇಸ್‌ಲಿಫ್ಟ್ ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ.

ದುಬಾರಿ ಬೆಲೆಯ Audi Q2 ಕಾರು ಖರೀದಿಸಿದ ಜನಪ್ರಿಯ ನಟ

ನವೀಕರಿಸಿದ ಎಸ್‍ಯುವಿಯಲ್ಲಿ 3.0-ಲೀಟರ್ , ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ, ಬ್ರ್ಯಾಂಡ್‌ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಮ್ ಸಹ ಈ ಎಸ್‍ಯುವಿಯಲ್ಲಿ ಹೊಂದಿರಲಿದೆ,.

Most Read Articles

Kannada
English summary
Actor saurabh shukla buys new audi q2 suv here are all the details
Story first published: Monday, January 3, 2022, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X